Commerce Examination Result JANUARY-2025 Released
Commerce Examination Result JANUARY-2025 Released.
ಜನವರಿ-2025ರ ವಾಣಿಜ್ಯ ಪರೀಕ್ಷೆಯ ಬೆರಳಚ್ಚು ಹಾಗೂ ಶೀಘ್ರಲಿಪಿ ವಿಷಯಗಳ ಫಲಿತಾಂಶವನ್ನು ಮಂಡಲಿಯ ವೆಬ್ಸೈಟ್ ನಲ್ಲಿ https://kseab.karnataka.gov.in ದಿನಾಂಕ:20.03.2025 ರಂದು ಪ್ರಕಟಿಸಲಾಗಿದೆ. ಹಾಗೂ ಅದೇ ದಿನದಂದು ಸಂಬಂಧಿಸಿದ ಸಂಸ್ಥೆಗಳ ಲಾಗಿನ್‌ಗಳಲ್ಲಿ ಲಭ್ಯಮಾಡಲಾಗುವುದು. ಸದರಿ ಫಲಿತಾಂಶವನ್ನು ಎಲ್ಲಾ ವಾಣಿಜ್ಯ ಸಂಸ್ಥೆಗಳ ಮುಖ್ಯಸ್ಥರು ಫಲಿತಾಂಶ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಸಂಸ್ಥೆಯ ಸೂಚನಾ ಫಲಕದಲ್ಲಿ ಪ್ರಕಟಿಸುವುದು. ಫಲಿತಾಂಶದಲ್ಲಿ ತಿದ್ದುಪಡಿ ಇದ್ದಲ್ಲಿ ಫಲಿತಾಂಶ ಪ್ರಕಟಣೆಯಾದ 15 ದಿನಗಳೊಳಗೆ ನಿಯಮಾನುಸಾರ ಪ್ರಸ್ತಾವನೆ ಸಲ್ಲಿಸುವುದು. ಪ್ರಸ್ತಾವನೆಯನ್ನು ಪರಿಶೀಲಿಸಿ ನಿಯಮಾನುಸಾರ ಫಲಿತಾಂಶವನ್ನು ತಿದ್ದುಪಡಿ ಮಾಡಲು ಕ್ರಮವಹಿಸಲಾಗುವುದು.
ಫಲಿತಾಂಶವು ಪರೀಕ್ಷೆಯಲ್ಲಿ ಹಾಗೂ ಮೌಲ್ಯಮಾಪನದಲ್ಲಿ ವಂಚನೆ, ಅನುಚಿತ ವರ್ತನೆ, ನಕಲು ಮಾಡಿರುವುದು ಮೊದಲಾದವುಗಳಿಂದ ಪ್ರಭಾವಿತವಾಗಿದೆ ಎಂದು ಕಂಡುಬಂದಲ್ಲಿ ಅಂತಹ ಫಲಿತಾಂಶವನ್ನು ತಡೆಹಿಡಿಯಲಾಗುವುದು ಅಥವಾ ಫಲಿತಾಂಶ ಪ್ರಕಟವಾದ ನಂತರವೂ ನಿಯಮಾನುಸಾರ ತಡೆಹಿಡಿಯುವ, ರದ್ದುಪಡಿಸುವ, ಮಾರ್ಪಡಿಸಿ ಪ್ರಕಟಿಸುವ ಅಧಿಕಾರವನ್ನು ಮಂಡಲಿ ಹೊಂದಿರುತ್ತದೆ.
▪️ಫಲಿತಾಂಶಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮುಖ್ಯಸ್ಥರಿಗೆ ಸೂಚನೆಗಳು:
ಜನವರಿ-2025ರ ವಾಣಿಜ್ಯ ಪರೀಕ್ಷೆಯ ಬೆರಳಚ್ಚು ಹಾಗೂ ಶೀಘ್ರಲಿಪಿ ವಿಷಯಗಳ ಫಲಿತಾಂಶ ಪಟ್ಟಿಯನ್ನು ಮಂಡಲಿಯ ಜಾಲತಾಣದಲ್ಲಿ ಸಂಸ್ಥೆಯ ಲಾಗಿನ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ಕೆಳಕಂಡ ಅಂಶಗಳ ಆಧಾರದ ಮೇಲೆ ಆಯಾ ಸಂಸ್ಥೆಯ ಎಲ್ಲಾ ಅಭ್ಯರ್ಥಿಗಳ ಫಲಿತಾಂಶವನ್ನು ಕಡ್ಡಾಯವಾಗಿ ಸಂಬಂಧಿಸಿದ ಸಂಸ್ಥೆಯ ಮುಖ್ಯಸ್ಥರು ಪರಿಶೀಲಿಸಲು ತಿಳಿಸಿದೆ. ಹಾಗೂ ಯಾವುದೇ ಕಾರಣಕ್ಕೂ ಮಂಡಲಿಯಿಂದ ಫಲಿತಾಂಶ ಪಟ್ಟಿಯನ್ನು ಭೌತಿಕವಾಗಿ ಸಂಸ್ಥೆಗಳಿಗೆ ಕಳುಹಿಸಲಾಗುವುದಿಲ್ಲ.
▪️ವಾಣಿಜ್ಯ ಸಂಸ್ಥೆಗಳಿಂದ ಪರೀಕ್ಷಾ ಮಂಡಲಿಗೆ ಪತ್ರ ವ್ಯವಹರಿಸುವ ಪ್ರತಿಯೊಂದು ಪತ್ರದ ಮುಖಪುಟದಲ್ಲಿ ತಮ್ಮ ಸಂಸ್ಥೆಗೆ ನೀಡಿರುವ ಸಂಸ್ಥೆಯ ಸಂಕೇತ, ದೂರವಾಣಿ ಸಂಖ್ಯೆ ಮತ್ತು E-Mail ID ಯನ್ನು ತಪ್ಪದೇ ನಮೂದಿಸುವುದು.
▪️ಜನವರಿ-2025ರ ವಾಣಿಜ್ಯ ಪರೀಕ್ಷೆಯ ಬೆರಳಚ್ಚು ಹಾಗೂ ಶೀಘ್ರಲಿಪಿ ವಿಷಯಗಳಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳ ಫಲಿತಾಂಶ ಪ್ರಕಟವಾಗಿರುವ ಬಗ್ಗೆ ಪರಿಶೀಲಿಸಿಕೊಳ್ಳುವುದು.
▪️ ಒಂದುವೇಳೆ ಯಾವುದಾದರೂ ಅಭ್ಯರ್ಥಿಗಳ ಫಲಿತಾಂಶ ಪ್ರಕಟವಾಗದಿದ್ದಲ್ಲಿ, ಫಲಿತಾಂಶ ತಡೆಹಿಡಿದಿದ್ದಲ್ಲಿ ಫಲಿತಾಂಶ ಪ್ರಕಟಿಸಿದ 15 ದಿನಗಳೊಳಗಾಗಿ ಸಕಾರಣಗಳೊಂದಿಗೆ ಮಂಡಲಿಗೆ ಮಾಹಿತಿ ಸಲ್ಲಿಸಿ ಫಲಿತಾಂಶ ಪಡೆದುಕೊಳ್ಳಲು ತಿಳಿಸಿದೆ.
▪️Auto-fetch ಅಭ್ಯರ್ಥಿಗಳ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ ಇತ್ಯಾದಿ ತಿದ್ದುಪಡಿಗಳಿದ್ದಲ್ಲಿ ಅಂಕಪಟ್ಟಿ ಮುದ್ರಣಕ್ಕೆ ಮೊದಲು ಪೂರಕ ದೃಢೀಕೃತ ದಾಖಲೆಗಳೊಂದಿಗೆ (ಕಡ್ಡಾಯವಾಗಿ ಎಸ್.ಎಸ್.ಎಲ್.ಸಿ ದೃಢೀಕೃತ ಅಂಕಪಟ್ಟಿ) ಸಂಬಂಧಿಸಿದ ಸಂಸ್ಥೆಯ ಮುಖ್ಯಸ್ಥರು ರೂ. 200/- ದಂಡಶುಲ್ಕವನ್ನು ಮಂಡಲಿಗೆ ಪಾವತಿಸಲಾಗಿರುವ NEFT Challan ಮೂಲ ಪ್ರತಿಯೊಂದಿಗೆ ಪ್ರಸ್ತಾವನೆಯನ್ನು ದಿನಾಂಕ:05.04.2025 ರೊಳಗಾಗಿ ಸಲ್ಲಿಸತಕ್ಕದ್ದು.
▪️ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಮಾಹಿತಿ Auto-fetch ಆಗದೆ ನೇರವಾಗಿ ಮಾಹಿತಿಗಳನ್ನು ತುಂಬಿರುವ ಅಭ್ಯರ್ಥಿಗಳ ಫಲಿತಾಂಶ ಪಟ್ಟಿಯಲ್ಲಿ ತಿದ್ದುಪಡಿಗಳಿದ್ದಲ್ಲಿ ರೂ.200/- ದಂಡಶುಲ್ಕದೊಂದಿಗೆ ಅಗತ್ಯ ಪೂರಕ ದಾಖಲೆಗಳನ್ನು ದೃಢೀಕರಿಸಿ ಮಂಡಲಿಗೆ ದಿನಾಂಕ:05.04.2025ರೊಳಗಾಗಿ ಸಲ್ಲಿಸಲು ತಿಳಿಸಿದೆ.
▪️ಪ್ರಕಟಿಸಿದ ಫಲಿತಾಂಶ ತಾತ್ಕಾಲಿಕವಾಗಿದ್ದು, ಅಭ್ಯರ್ಥಿಗೆ ಮಂಡಲಿಯಿಂದ ನೀಡುವ ಅಂಕಪಟ್ಟಿಯು ಆಯಾ ಅಭ್ಯರ್ಥಿಯ ನೈಜ ಫಲಿತಾಂಶವನ್ನು ತಿಳಿಸುತ್ತದೆ. ಅಂದರೆ ಅಂಕಪಟ್ಟಿಯಲ್ಲಿ ನೀಡಿದ ದತ್ತಾಂಶಗಳೇ ಅಂತಿಮ ಎಂದು ಭಾವಿಸತಕ್ಕದ್ದು.
▪️ತಮ್ಮ ಸಂಸ್ಥೆಗೆ ಸಂಬಂಧಿಸದೇ ಇರುವ ಅಭ್ಯರ್ಥಿಗಳ ಫಲಿತಾಂಶ ಪಟ್ಟಿ ತಮ್ಮ ಸಂಸ್ಥೆಯ ಲಾಗಿನ್ನಲ್ಲಿ ಪ್ರಕಟವಾಗಿದ್ದು ಕಂಡು ಬಂದಲ್ಲಿ, 080-23310075/76 ದೂರವಾಣಿ ಮೂಲಕ ಮಂಡಲಿಗೆ ತಿಳಿಸುವುದು.
ಜನವರಿ-2025ರ ವಾಣಿಜ್ಯ ಪರೀಕ್ಷೆಯ ಬೆರಳಚ್ಚು ಹಾಗೂ ಶೀಘ್ರಲಿಪಿ ವಿಷಯಗಳ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು, ಮರುಎಣಿಕೆಗಾಗಿ ಹಾಗೂ ಮರುಮೌಲ್ಯಮಾಪನಕ್ಕಾಗಿ ನಿಗದಿತ ಅರ್ಜಿ ಸಲ್ಲಿಸುವ ವೇಳಾಪಟ್ಟಿ ಈ ಕೆಳಕಂಡಂತಿದೆ.

ಸ್ಕ್ಯಾನ್ ಪ್ರತಿ, ಮರುಎಣಿಕೆ, ಮತ್ತು ಮರುಮೌಲ್ಯಮಾಪನಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸಂಬಂಧ ಪ್ಲೋಚಾರ್ಟ್:
https://kseab.karnataka.gov.in Click on ONLINE SERVICES Click on Other
exams Click on Photocopy, Retotaling, Revaluation Scanned Copy Click on Home Button -Click on Application form for View Select Subjects for
Click on Online Application for particular Exam→Scanned Copy Enter Exam Registration Number→Enter Student Postal→Address→Enter Mobile Number Enter e-mail ID→submitt→Challan Number will be displayed (Note down Challan number for future reference)→Click on Make payment (Credit card →Debit card→ Net Banking) Select Online Payment pay Fee through Online →SUBMIT→Print Acknowledgement
NOTE:1
1. Candidate can know the status of Photocopy Application by clicking on ‘Click here to know status for Scanned copy’
2. Candidate can change their registered Mobile number by using ‘Change Mobile Number’ option.
NOTE:2. (RE TOTALING OF MARKS)
1. Candidate can apply for Re-totaling of marks, after getting Photocopy of Answer Script by clicking ‘Application for Re-totaling’ in the Home page.
2. Candidate can know the status of Re-totaling of marks of answer scripts by Clicking on ‘Click here to know status of Re-totaling of marks of answer scripts.
NOTE:3 (RE VALUATION OF ANSWER SCRIPTS)
1. Candidate can apply for Revaluation after getting Photocopy of Answer Scripts by clicking Application for Revaluation of answer Scripts’ in the Home page.
2. Candidate can know the status of Revaluation of answer scripts by clicking on ‘Click here to know status of Revaluation of answer scripts.
ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಈ ಸುತ್ತೋಲೆಯ ಸ್ಕ್ಯಾನ್ ಪ್ರತಿಯನ್ನು ಮತ್ತು ಪರೀಕ್ಷಾ ಫಲಿತಾಂಶ ಪಟ್ಟಿಯನ್ನು ಸಕಾಲದಲ್ಲಿ ಸಂಬಂಧಿಸಿದ ವಾಣಿಜ್ಯ ಸಂಸ್ಥೆಗಳ ಸೂಚನಾ ಫಲಕದಲ್ಲಿ ಪ್ರಕಟಿಸಲು ಸೂಚಿಸಿದೆ.