EEDS Software : EEDS ತಂತ್ರಾಂಶದಲ್ಲಿ ಶಿಕ್ಷಕರ/ಅಧಿಕಾರಿಗಳ/ಬೋಧಕೇತರ ನೌಕರರ ಸೇವಾ ವಿವರ ಗಣಕೀಕರಣ ಅಂತಿಮಗೊಳಿಸುವ ಬಗ್ಗೆ-2025

EEDS ತಂತ್ರಾಂಶದಲ್ಲಿ ಶಿಕ್ಷಕರ/ಅಧಿಕಾರಿಗಳ/ಬೋಧಕೇತರ ನೌಕರರ ಸೇವಾ ವಿವರಗಳನ್ನು ಗಣಕೀಕರಿಸಿ ಅಂತಿಮಗೊಳಿಸುವ ಬಗ್ಗೆ.

 

EEDS SOFTWARE : ವಿಷಯಕ್ಕೆ ಸಂಬಂದಿಸಿದಂತೆ ಈಗಾಗಲೇ ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಹಶಿಕ್ಷಕರ ಮತ್ತು ಮುಖ್ಯ ಶಿಕ್ಷಕರ ಹಾಗೂ ತತ್ಸಮಾನ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ, ಮಾಹಿತಿಯನ್ನು ಇಂದೀಕರಣಕ್ಕೆ ಸಂಬಂಧಿಸಿದಂತೆ, ಉಲ್ಲೇಖ-1ರಲ್ಲಿ ಕ್ರಸಂ 1 ರಿಂದ 19 ರವರೆಗಿನ ಅಂಶಗಳನ್ನು ಒಳಗೊಂಡಿರುವ ನಿಖರವಾದ ಸೇವಾ ವಿವರಗಳನ್ನು EEDS ತಂತ್ರಾಂಶದಲ್ಲಿ ಗಣಕೀಕರಣ ಮಾಡಿ ಅಂತಿಮಗೊಳಿಸುವ ಬಗ್ಗೆ ಆಯಾ ಬಟವಾಡ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

 

ಮುಂದುವರೆದು ಉಲ್ಲೇಖ-2ರಲ್ಲಿ ಜೂಮ್ ಸಭೆಯಲ್ಲಿ EEDS ತಂತ್ರಾಂಶದಲ್ಲಿ ಗಣಕೀಕರಣ ಮಾಡಿ ಅಂತಿಮಗೊಳಿಸುವ ಬಗ್ಗೆ ಸಭೆ ಕೈಗೊಂಡು ಸದರಿ ಪ್ರಕ್ರಿಯೆಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ನಿರ್ದೇಶಿಸಲಾಗಿದೆ. ಆದರೆ, ಇದುವರೆವಿಗೂ ಉಲ್ಲೇಖಿತ ಸುತ್ತೋಲೆಯಲ್ಲಿ ಸೂಚಿಸಿರುವ 19 ಅಂಶಗಳನ್ನು EEDS ತಂತ್ರಾಂಶದಲ್ಲಿ ಗಣಕೀಕರಣ ಮಾಡಿ ಅಂತಿಮಗೊಳಿಸಿಲ್ಲದಿರುವುದು ಕಂಡುಬಂದಿರುತ್ತದೆ.

 

ಈ ಸಂಬಂಧ ಉಲ್ಲೇಖಿತ ಪತ್ರಗಳ ಸೂಚನೆಗಳನ್ನಯ ಇಲಾಖೆಯ ಬಟವಾಡೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ/ಅಧಿಕಾರಿಗಳ/ಸಿಬ್ಬಂದಿ ವರ್ಗದವರ ಸೇವಾವಹಿಗಳನ್ನು ಪರಿಶೀಲಿಸಿ ನಿಖರ ಮಾಹಿತಿಯನ್ನು EEDS ತಂತ್ರಾಂಶದಲ್ಲಿ ದಿನಾಂಕ: 29/01/2025 ರೊಳಗೆ ಇಂದೀಕರಿಸಿ ಅಂತಿಮಗೊಳಿಸಿರುವ ಬಗ್ಗೆ ತಮ್ಮ ಲಾಗಿನ್ ನಲ್ಲಿ ಅಧಿಕಾರಿಗಳೇ ಖುದ್ದು ಪರಿಶೀಲಿಸಿ ಖಚಿತಪಡಿಸಲು ಮತ್ತೊಮ್ಮೆ ಸೂಚಿಸಿದೆ.

 

ಮುಂದುವರೆದು ಗಣಕೀಕರಣ ಪ್ರಕ್ರಿಯೆಗೆ ನಿಗದಿಪಡಿಸಿದ ಕಡೆಯ ದಿನಾಂಕದ ನಂತರ ಗಣಕೀಕರಿಸುವುದನ್ನು ಸ್ಥಗಿತಗೊಳಿಸಲಾಗುವುದು. ನಂತರ ಯಾವುದೇ ತಿದ್ದುಪಡಿಗಳಿಗೆ ಅವಕಾಶವಿರುವುದಿಲ್ಲ.

 

ನೌಕರರ ನಿಖರ ಮತ್ತು ಪ್ರಮಾಣಿಕೃತ ಅಗತ್ಯ ಸೇವಾ ವಿವರಗಳನ್ನು ಡಿ.ಡಿ.ಒ ಲಾಗಿನ್ ನಲ್ಲಿ ಮಾತ್ರ ಇಂದೀಕರಿಸಲು ಅವಕಾಶವಿರುವುದರಿಂದ ತಮ್ಮ ವ್ಯಾಪ್ತಿಯ ಡಿ.ಡಿ.ಒ ಗಳಿಗೆ ಸ್ಪಷ್ಟ ಮಾಹಿತಿ ನೀಡುವುದು ಒಂದು ವೇಳೆ ನಿಗದಿತ ಕಾಲ ಮಿತಿಯೊಳಗೆ ಇಂದೀಕರಿಸದೇ, ಸೇವಾವಿವರಗಳನ್ನು ತಪ್ಪಾಗಿ ನಮೂದಿಸಿ ಮುಂದಿನ ದಿನಗಳಲ್ಲಿ ವ್ಯತ್ಯಾಸಗಳಾಗಿ, ಬಾಧಿತರಿಂದ ದೂರುಗಳು ಈ ಕಛೇರಿಗೆ ಸ್ವೀಕೃತಗೊಂಡಲ್ಲಿ, ಸಂಬಂಧಿಸಿದ ಬಟವಾಡೆ ಅಧಿಕಾರಿಗಳನ್ನೇ ಹಾಗೂ ಕಛೇರಿ ಮುಖ್ಯಸ್ತರನ್ನೇ ಹೊಣೆಗಾರರನ್ನಾಗಿಸಲಾಗುವುದು. ಆದುದರಿಂದ ಸದರಿ ಗಣಕೀಕರಣ ಪ್ರಕ್ರಿಯೆಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲು ತಿಳಿಸಿದೆ.

 

 

 

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!