Government Employees: ಸರ್ಕಾರಿ ನೌಕರರಿಗೆ ಅಪಘಾತ ವಿಮೆ ಬಗ್ಗೆ ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ-2025

Government Employees: ಸರ್ಕಾರಿ ನೌಕರರಿಗೆ ಅಪಘಾತ ವಿಮೆ ಬಗ್ಗೆ ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ

Government Employees: ಸರ್ಕಾರಿ ನೌಕರರಿಗೆ ಅಪಘಾತ ವಿಮೆ

ಪ್ರಶ್ನೆ:01:

ಅ) ರಾಜ್ಯದ ಸರ್ಕಾರಿ ನೌಕರರಿಗೆ ರೂ.1.00 ಕೋಟಿಗಳ ಅಪಘಾತ ವಿಮೆಯನ್ನು ಮಾಡಲು ಸರ್ಕಾರ ಯೋಚಿಸಿದೆಯೇ; ಹಾಗಿದ್ದಲ್ಲಿ, ಎಂದಿನಿಂದ ಜಾರಿಗೆ ತರಲಾಗುವುದು;

ಉತ್ತರ: ರಾಜ್ಯ ಸರ್ಕಾರಿ ನೌಕರರ ಸಾಮಾಜಿಕ ಭದ್ರತೆಯು ಸರ್ಕಾರದ ಪ್ರಮುಖ ವಿಷಯವಾಗಿರುವುದರಿಂದ ಸಾಮಾಜಿಕ ಭದ್ರತೆ ಇದ್ದಲ್ಲಿ, ನೌಕರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ, ಕಾರ್ಯನಿರ್ವಹಿಸುತ್ತಾರೆ. ಈಗಾಗಲೇ ಜಾರಿಯಲ್ಲಿರುವ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಸುಗಮಗೊಳಿಸಲು. ಈ ಕೆಳಕಂಡ ಅಂಶಗಳನ್ನು ಒಳಗೊಂಡ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯು ದಿನಾಂಕ: 30.01.2025 ರಂದು ಈ ಕೆಳಗಿನಂತೆ ಆದೇಶಿಸಿದೆ.

1) ವಿವಿಧ ಬ್ಯಾಂಕುಗಳು ಒದಗಿಸುವ “ಸಂಬಳ ಪ್ಯಾಕೇಜ್‌ಗಳ ಅಡಿಯಲ್ಲಿ ಎಲ್ಲಾ ನೌಕರರು (ಖಾಯಂ/ಗುತ್ತಿಗೆ/ಹೊರಗುತ್ತಿಗೆ ಇತ್ಯಾದಿ) ಖಾತೆಗಳನ್ನು ತೆರೆಯಲು/ಆಯ್ಕೆ ಮಾಡಿಕೊಳ್ಳಲು ಕಡ್ಡಾಯಗೊಳಿಸುವುದು.

2) ಬ್ಯಾಂಕ್‌ಗಳು/ಅಂಚೆ ಕಚೇರಿಗಳು ನೀಡುವ PMJJBY ಮತ್ತು PMSBY ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ವಿಮಾ ರಕ್ಷಣೆಯನ್ನು ಪಡೆಯಲು ಉದ್ಯೋಗಿಗಳನ್ನು ಪ್ರೋತ್ಸಾಹಿಸುವುದು.

3) ಬ್ಯಾಂಕ್‌ಗಳು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಲು ಉದ್ಯೋಗಿಗಳನ್ನು ಪ್ರೋತ್ಸಾಹಿಸುವುದು.

ಭಾರತೀಯ ಸ್ಟೇಟ್ ಬ್ಯಾಂಕ್ ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್ ನಲ್ಲಿ ರೂ. 10 ಸಾವಿರಕ್ಕಿಂತ ಮೇಲ್ಪಟ್ಟು ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ನೌಕರರಿಗೆ ರೂ. 1.00 ಕೋಟಿ ವೈಯಕ್ತಿಕ ಅಪಘಾತ ವಿಮೆಯನ್ನು ನೀಡುತ್ತದೆ ಹಾಗೂ ರೂ. 1.60 ಕೋಟಿ ವರೆಗೆ ವಿಮಾನ ಅಪಘಾತ ವಿಮೆ ರಕ್ಷಣೆಯನ್ನು ಪೂರಕ ಕೊಡುಗೆಯಾಗಿ ನೀಡುತ್ತದೆ.

ಅದೇ ರೀತಿ ಕೆನರಾ ಬ್ಯಾಂಕ್, ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ಪ್ಯಾಕೇಜ್ ನಲ್ಲಿ ರೂ. 50 ಸಾವಿರದ ವರೆಗೆ ನಿವ್ವಳ ಸಂಬಳ ಪಡೆಯುತ್ತಿರುವ ಅಧಿಕಾರಿ/ನೌಕರರಿಗೆ ರೂ. 50 ಲಕ್ಷಗಳ ವೈಯಕ್ತಿಕ ಅಪಘಾತ ವಿಮೆ ರಕ್ಷಣೆಯನ್ನು ಪೂರಕ ಕೊಡುಗೆಯಾಗಿ ನೀಡುತ್ತದೆ.

ಪ್ರಶ್ನೆ :02

ಆ) ಈ ಅಪಘಾತ ವಿಮೆ ಯೋಜನೆಯು ನಿಗಮ ಮಂಡಳಿಯ ನೌಕರರಿಗೂ ಅನ್ವಯವಾಗುವುದೆ;

ಉತ್ತರ: ವಿವಿಧ ಬ್ಯಾಂಕುಗಳು ತಮ್ಮ ಸಂಬಳ ಪ್ಯಾಕೇಜ್ ಗಳಲ್ಲಿ ಪೂರಕ ಕೊಡುಗೆಯಾಗಿ ನೀಡುತ್ತಿರುವ ವೈಯಕ್ತಿಕ ಅವಘಾತ ವಿಮೆ ರಕ್ಷಣೆ ಯೋಜನೆಗಳು ನಿಗಮ ಮಂಡಳಿಯ ನೌಕರರಿಗೂ ಅನ್ವಯವಾಗುತ್ತದೆ.

ಪ್ರಶ್ನೆ :03

ಇ) ಈ ಯೋಜನೆಯು ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗೂ ಅನ್ವಯವಾಗುತ್ತದೆಯೇ; ವಿಮೆ ಯೋಜನೆಗೆ ಇರುವ ನಿಯಮಗಳೇನು? (ವಿವರ ನೀಡುವುದು)

ಉತ್ತರ: ವಿವಿಧ ಬ್ಯಾಂಕುಗಳು ತಮ್ಮ ಸಂಬಳ ಪ್ಯಾಕೇಜ್ ಗಳಲ್ಲಿ ಪೂರಕ ಕೊಡುಗೆಯಾಗಿ ನೀಡುತ್ತಿರುವ ವೈಯಕ್ತಿಕ ಅಪಘಾತ ವಿಮೆ ರಕ್ಷಣೆ ಯೋಜನೆಗಳು ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳಿಗೂ ಅನ್ವಯವಾಗುತ್ತದೆ.

ವಿಮೆ ಯೋಜನೆಗೆ ಇರುವ ನಿಯಮಗಳು ಬ್ಯಾಂಕಿನಿಂದ ಬ್ಯಾಂಕಿಗೆ ಭಿನ್ನವಾಗಿರುತ್ತವೆ. ಸದರಿ ವಿಮೆ ಯೋಜನೆಯ ನಿಯಮಗಳನ್ನು ಅಧಿಕಾರಿ/ನೌಕರರು ಸಂಬಂಧಪಟ್ಟ ಬ್ಯಾಂಕಿನಿಂದ ಪಡೆಯಬಹುದಾಗಿದೆ.

 

CLICK HERE TO DOWNLOAD

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!