Important rules: ಜುಲೈ 1 ರಿಂದ ಜಾರಿಯಾಗಲಿರುವ ಪ್ರಮುಖ ನಿಯಮಗಳು.. ಇಲ್ಲಿದೆ ಮಾಹಿತಿ
Important rules: ಇಂದಿನಿಂದ ಏನೆಲ್ಲಾ ಬದಲಾವಣೆ? ರೈಲ್ವೆ ಬ್ಯಾಂಕಿಂಗ್‌ನಲ್ಲಿ ಹೊಸ ನಿಯಮ,ದೇಶದಲ್ಲಿ ರೈಲ್ವೆ ಮತ್ತು ಹಣಕಾಸು ನಿಯಮಗಳಲ್ಲಿ ಮಹತ್ವದ ಬದಲಾವಣೆಗಳು ಇಂದಿನಿಂದ(ಜು.1) ಹಂತ ಹಂತವಾಗಿ ಜಾರಿಯಾಗಲಿವೆ. ಏನೆಲ್ಲಾ ಬದಲಾವಣೆ ಆಗಲಿವೆ ಎಂಬುದರ ಮುಖ್ಯಾಂಶಗಳು ಇಲ್ಲಿವೆ.
ಮುನ್ನುಡಿ
ತಿಂಗಳ ಆರಂಭದ ಮೊದಲು, ಅಂದರೆ ಜುಲೈ 1, 2025 ರಿಂದ ಹೊಸ ನಿಯಮಗಳು ಬದಲಾಗುತ್ತವೆ. ಈ ಹೊಸ ನಿಯಮಗಳು ಸಾಮಾನ್ಯ ಜನರು, ವ್ಯಾಪಾರಸ್ಥರು ಮತ್ತು ಪ್ರಯಾಣಿಕರಿಗೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಜುಲೈ 1ರಿಂದ ಏನೆಲ್ಲಾ ಬದಲಾವಣೆಗಳಾಗಬಹುದು ಎ೦ಬುದರ ಕುರಿತು ಇಲ್ಲಿದೆ ಮಾಹಿತಿ.
ಪ್ಯಾನ್ ಕಾರ್ಡ್‌ಗೆ ಆಧಾರ್ ಕಡ್ಡಾಯ:
ಜುಲೈ 1ರಿಂದ ಬರುವ ಹೊಸ ನಿಯಮಗಳು ಪ್ಯಾನ್ ಸಂಬಂಧಿತ ಬದಲಾವಣೆಗಳನ್ನು ಸಹ ಒಳಗೊಂಡಿವೆ.
ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗುವುದು. ಈ ನಿಯಮವನ್ನು ಜುಲೈ 1 ರಿಂದ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಜಾರಿಗೆ ತರಲಿದೆ. ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ವಹಿವಾಟಿಗೆ ಸಂಬಂಧಿಸಿದ ಸಮಸ್ಯೆ ಉಂಟಾಗಬಹುದು.
ರೈಲ್ವೆ ಹೊಸ ನಿಯಮಗಳು
▪️ತತ್ಕಾಲ್ ಟಿಕೆಟ್ ಬುಕಿಂಗ್‌ಗೆ OTP ದೃಢೀಕರಣ ಅಗತ್ಯ.
▪️ವೇಟಿಂಗ್ ಲಿಸ್ಟ್ ಟಿಕೆಟ್ರೊಂದಿಗೆ ಪ್ರಯಾಣಿಸುವುದಕ್ಕೆ ದಂಡ
▪️ಎಸಿ ಕೋಚ್‌ನಲ್ಲಿ ಸಿಕ್ಕಿಬಿದ್ದರೆ ₹440 ದಂಡ + ಪೂರ್ಣ ಪ್ರಯಾಣ ದರ.
▪️ಸ್ವೀಪರ್ ಕೋಚ್‌ನಲ್ಲಿ ಸಿಕ್ಕಿಬಿದ್ದರೆ ₹250 ದ೦ಡ + ಪೂರ್ಣ ಪ್ರಯಾಣ ದರ.
▪️ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ, ಕನಿಷ್ಠ ₹250 ದಂಡ + ಪ್ರಯಾಣದ ದರ ಪಾವತಿಸಬೇಕು
ಟಿಕೆಟ್ ರದ್ಧತಿ & ಮರುಪಾವತಿ:
▪️ರೈಲು ಹೊರಡುವ 4 ಗಂಟೆಗಳ ಮೊದಲು ರದ್ದು ಮಾಡಿದರೆ 25% ಮಾತ್ರ ಕಡಿತ.
▪️ರೈಲು ರದ್ದಾದರೆ ಅಥವಾ 3 ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ ಮಾತ್ರ ತಕ್ಷಣ ಟಿಕೆಟ್ ಮರುಪಾವತಿ.
ಫೈಲಿಂಗ್ ನಿಯಮಗಳು:
▪️GSTR-1, GSTR-1A ಅಥವಾ IFF ನಿಂದ ಡೇಟಾ ಸ್ವಯಂ ಭರ್ತಿಯಾಗುತ್ತದೆ.
▪️ಸಂಪಾದಿಸಲು ಸಾಧ್ಯವಿಲ್ಲ, ಆದ್ದರಿ೦ದ ಎಚ್ಚರಿಕೆಯಿಂದ ಫೈಲ್ ಮಾಡಬೇಕು.
▪️ಸರಿಯಾದ ಸಮಯದಲ್ಲಿ ಫೈಲ್ ಮಾಡದಿದ್ದರೆ ದಂಡದ ಅಪಾಯ.
ಎಟಿಎಂ & ಡೆಬಿಟ್ ಕಾರ್ಡ್ ಶುಲ್ಕಗಳು:
▪️ಮೆಟ್ರೋ ನಗರಗಳಲ್ಲಿ ತಿಂಗಳಿಗೆ 3 ಉಚಿತ ವಹಿವಾಟುಗಳು (ಹಣ ತೆಗೆಯುವಿಕೆ ಅಥವಾ ಬ್ಯಾಲೆನ್ಸ್ ಪರಿಶೀಲನೆ).
▪️ಮೆಟ್ರೋ ಅಲ್ಲದ ನಗರಗಳಲ್ಲಿ ತಿಂಗಳಿಗೆ 5 ಉಚಿತ ವಹಿವಾಟುಗಳು.
▪️ಇದರ ನಂತರ ಪ್ರತಿ ವಹಿವಾಟಿಗೆ ₹23 + ಜಿಎಸ್ಟಿ ಶುಲ್ಕ ವಿಧಿಸಲಾಗುತ್ತದೆ.
▪️ಈ ಶುಲ್ಕವು ಹಣಕಾಸು (ಹಿಂಪಡೆಯುವಿಕೆ) & ಹಣಕಾಸೇತರ (ಮಿನಿ ಸ್ಟೇಟ್ಮೆಂಟ್, ಬ್ಯಾಲೆನ್ಸ್ ಚೆಕ್) ಎರಡಕ್ಕೂ ಅನ್ವಯ.
10 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಬ್ಯಾಂಕ್ ಖಾತೆ & ಡೆಬಿಟ್ ಕಾರ್ಡ್:
▪️10 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳು ಸ್ವತಂತ್ರವಾಗಿ ಉಳಿತಾಯ & ಠೇವಣಿ ಖಾತೆ ತೆರೆಯಬಹುದು.
▪️ಬ್ಯಾಂಕುಗಳು ಇಂತಹ ಮಕ್ಕಳಿಗೆ ಡೆಬಿಟ್ ಕಾರ್ಡ್, ಚೆಕ್ ಬುಕ್ & ನೆಟ್ ಬ್ಯಾಂಕಿಂಗ್ ಸೌಲಭ್ಯ ನೀಡುತ್ತವೆ.
▪️ಆದರೆ, ಖಾತೆಯಲ್ಲಿ ಓವಡ್ರಾಫ್ಟ್ ಅನುಮತಿಯಿರುವುದಿಲ್ಲ & ಯಾವಾಗಲೂ ಕ್ರೆಡಿಟ್ ಬ್ಯಾಲೆನ್ಸ್ ಇರಬೇಕು.
▪️18 ವರ್ಷ ಪೂರ್ಣಗೊಂಡ ನಂತರ, ಹೊಸ ಸಹಿ & ನವೀಕರಣ ಅಗತ್ಯ.
ಕೆವೈಸಿ ನವೀಕರಣದ ಹೊಸ ವ್ಯವಸ್ಥೆ:
▪️ವೀಡಿಯೋ ಕೆವೈಸಿ ಮೂಲಕ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನವೀಕರಿಸಬಹುದು.
▪️ವ್ಯಾಪಾರ ವರದಿಗಾರರ (BC) ಮೂಲಕ ನಿಷ್ಕ್ರಿಯ ಖಾತೆಗಳನ್ನು ಮತ್ತೆ ಸಕ್ರಿಯಗೊಳಿಸಬಹುದು.
▪️ಕಡಿಮೆ- ಅಪಾಯದ ಗ್ರಾಹಕರು ಜೂನ್ 30, 2026 ರವರೆಗೆ ವಹಿವಾಟು ಮಾಡಬಹುದು.
HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಮಗಳು:
HDFC ಕ್ರೆಡಿಟ್ ಕಾರ್ಡ್ ಹೊಂದಿರುವವರು ಪ್ರತಿ ತಿಂಗಳು ಗೇಮಿಂಗ್ ಅಪ್ಲಿಕೇಶನ್ ಗಳಲ್ಲಿ ರೂ 10,000 ವರೆಗೆ ಖರ್ಚು ಮಾಡಿದರೆ, ಅದಕ್ಕೆ ಪ್ರತ್ಯೇಕ ಶೇ.1 ರಷ್ಟು ಶುಲ್ಕ ವಿಧಿಸಲಾಗುತ್ತದೆ. ಅದೇ ರೀತಿ, ಪೇಟಿಎಂ, ಫ್ರೀಚಾರ್ಜ್ ಇತ್ಯಾದಿ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿಗಳಿಗೆ ಶೇ.1 ರಷ್ಟು ಶುಲ್ಕ ವಿಧಿಸಲಾಗುತ್ತದೆ.
ಪ್ರಯಾಣ ದರ ಏರಿಕೆ:
ಜುಲೈ 1ರಿಂದ ಜಾರಿಗೆ ಬರುವಂತೆ ಎಸಿ & ಎಸಿಯೇತರ ಎಕ್ಸ್‌ಪ್ರೆಸ್ & ಎರಡನೇ ದರ್ಜೆಯ ಬೋಗಿಗಳ ಟಿಕೆಟ್ ದರಗಳಲ್ಲಿ ಹೆಚ್ಚಳವಾಗಲಿದೆ. ಪ್ರತಿ ಕಿ.ಮೀ.ಗೆ 1 ಪೈಸೆಯ ಕನಿಷ್ಠ ಹೆಚ್ಚಳವಾಗುವ ಸಾಧ್ಯತೆಯಿದೆ. ಆದರೆ ಎಸಿ ವರ್ಗದ ಟಿಕೆಟ್‌ಗಳಿಗೆ ಪ್ರತಿ ಕಿ.ಮೀ.ಗೆ 2 ಪೈಸೆ ಹೆಚ್ಚಳವನ್ನು ಪ್ರಸ್ತಾಪಿಸಲಾಗಿದೆ.