KREIS 1st PUC Admission 2026-27: ವಸತಿ ಶಾಲೆಗಳಲ್ಲಿ PUC ದಾಖಲಾತಿ ಪ್ರಕ್ರಿಯೆ ಆರಂಭ| ಅರ್ಜಿ ದಿನಾಂಕ, ವಿಧಾನ ಮತ್ತು ಅರ್ಹತೆ ಮಾಹಿತಿ

KREIS 1st PUC Admission 2026-27: ವಸತಿ ಶಾಲೆಗಳಲ್ಲಿ PUC ದಾಖಲಾತಿ ಪ್ರಕ್ರಿಯೆ ಆರಂಭ| ಅರ್ಜಿ ದಿನಾಂಕ, ವಿಧಾನ ಮತ್ತು ಅರ್ಹತೆ ಮಾಹಿತಿ

KREIS 1st PUC Admission 2026-27: ಕರ್ನಾಟಕ ವಸತಿ ಶಾಲೆಗಳಲ್ಲಿ ದಾಖಲಾತಿಗೆ ಆನ್‌ಲೈನ್ ಅರ್ಜಿ ಆರಂಭ. ಅರ್ಜಿ ವಿಧಾನ, ದಿನಾಂಕ ಮತ್ತು ಅರ್ಹತೆ ವಿವರಗಳು ಇಲ್ಲಿ ಲಭ್ಯ.

2026-27ನೇ ಶೈಕ್ಷಣಿಕ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಉನ್ನತೀಕರಿಸಲಾಗಿರುವ ವಸತಿ ಶಾಲಾ/ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿ.ಯು.ಸಿ. ಲಭ್ಯವಿರುವ ಸ್ಥಾನಗಳಿಗೆ ಮೀಸಲಾತಿಗೆ ಅನುಗುಣವಾಗಿ ನಿಯಮಾನಸಾರ ಪ್ರವೇಶಾತಿಗೆ ಕ್ರಮವಹಿಸಬೇಕಾಗಿರುತ್ತದೆ.(104 ವಸತಿ ಕಾಲೇಜುಗಳ ಪಟ್ಟಿ ಲಗತ್ತಿಸಲಾಗಿದೆ).

ಉಲ್ಲೇಖಿತ (1), (3) ಮತ್ತು (4) ರ ಸರ್ಕಾರದ ಆದೇಶಗಳನ್ವಯ ಜಿಲ್ಲಾ ಹಂತದಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ ವಸತಿ ಕಾಲೇಜುಗಳ ಪ್ರಥಮ ಪಿ.ಯು.ಸಿ. ದಾಖಲಾತಿಗಾಗಿ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಗಳನ್ನು ಆಹ್ವಾನಿಸಿ, ಸರ್ಕಾರದ ಆದೇಶಗಳನ್ವಯ ನಿಯಮಾನುಸಾರ ಕೆಳಕಂಡ ಸೂಚಿತ (Tentative) ವೇಳಾಪಟ್ಟಿಯಂತೆ ಅಗತ್ಯ ಕ್ರಮವಹಿಸಲು ಈ ಮೂಲಕ ಸೂಚಿಸಲಾಗಿದೆ.

ಕ್ರ.ಸಂ ಜಿಲ್ಲಾ ಹಂತದಲ್ಲಿ ಕೈಗೊಳ್ಳಬೇಕಾದ ಕಾರ್ಯದ ವಿವರ ದಿನಾಂಕ
1 ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ 23-04-2026
2 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ 29-04-2026
3 ಆನ್‌ಲೈನ್ ಮೂಲಕ ಬಂದ ಅರ್ಜಿಗಳ ಪರಿಶೀಲನೆ 30-04-2026
4 ಮೊದಲ ಹಂತದ ಆಯ್ಕೆ ಪಟ್ಟಿ ಪ್ರಕಟಣೆ 04-05-2026
5 ಮೊದಲ ಹಂತದ ಆಯ್ಕೆಪಟ್ಟಿಯ ಪ್ರಕಾರ ವಿದ್ಯಾರ್ಥಿಗಳ ಪ್ರವೇಶ 08-05-2026
6 ಎರಡನೇ ಹಂತದ ಖಾಲಿ ಸ್ಥಾನಗಳ ಪಟ್ಟಿ ಪ್ರಕಟಣೆ 12-05-2026
7 ಎರಡನೇ ಹಂತದ ಆಯ್ಕೆಪಟ್ಟಿಯ ಪ್ರಕಾರ ವಿದ್ಯಾರ್ಥಿಗಳ ಪ್ರವೇಶ 19-05-2026
8 ಮೂರನೇ ಹಂತದ ಆಯ್ಕೆ ಪಟ್ಟಿ ಪ್ರಕಟಣೆ 22-05-2026
9 ಮೂರನೇ ಹಂತದ ಆಯ್ಕೆಪಟ್ಟಿಯ ಪ್ರಕಾರ ವಿದ್ಯಾರ್ಥಿಗಳ ಪ್ರವೇಶ 27-05-2026
10 ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿ ಆರಂಭ 29-05-2026

 

ಕೇಂದ್ರ ಕಛೇರಿಯಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸುವ ಸಂಬಂಧ Online ಮೂಲಕ ಅರ್ಜಿಯನ್ನು ಸಂಸ್ಥೆಯ ಅಧಿಕೃತ ವೆಬ್ ಸೈನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಆಯಾ ಆಯಾ ವಸ ವಸತಿ ಕಾಲೇಜು ಮತ್ತು ಜಿಲ್ಲಾ ಹಂತದಲ್ಲಿ ಸೂಕ್ತ ಪ್ರಚಾರ ವ್ಯವಸ್ಥೆ ಹಾಗೂ ಪತ್ರಿಕಾ ಪ್ರಕಟಣೆ ನೀಡಿ ಮೇಲೆ ತಿಳಿಸಲಾದ ವೇಳಾ ಪಟ್ಟಿಯನ್ವಯ ಎಲ್ಲಾ ಅಗತ್ಯ ಕ್ರಮವಹಿಸುವಂತೆ ಈ ಮೂಲಕ ತಿಳಿಸಿದೆ.

 

ಉಲ್ಲೇಖ(1), (3) ಮತ್ತು (4) ರ ಸರ್ಕಾರದ ಆದೇಶಗಳ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮದನ್ವಯ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ವಸತಿ ಶಾಲೆ/ಕಾಲೇಜುಗಳ ಪ್ರಥಮ ಪಿಯುಸಿ ದಾಖಲಾತಿ ಸಂಬಂಧವಾಗಿ ಪ್ರವೇಶಾತಿ ಪ್ರಕ್ರಿಯೆಯನ್ನು ಹಾಲಿ ಚಾಲ್ತಿಯಲ್ಲಿರುವ ಮೀಸಲಾತಿಯನ್ವಯ ಹಾಗೂ ನಿಯಮಾನುಸಾರ ಉಲ್ಲೇಖ(1)ರ ಸರ್ಕಾರದ ನಿರ್ದೇಶನದಂತೆ, ಆಯಾ ವಸತಿ ಕಾಲೇಜುಗಳ ಪ್ರಾಂಶುಪಾಲರು ಮತ್ತು ಅವರ ತಂಡವು ದಾಖಲಾತಿ ಪ್ರಕ್ರಿಯೆಯನ್ನು ಆಯಾ ಜಿಲ್ಲಾ ಹಂತದಲ್ಲಿ ಅಗತ್ಯ ಕ್ರಮವಹಿಸಲು ಸೂಚಿಸಿದೆ.

 

ಮುಂದುವರೆದು, ಉಲ್ಲೇಖ(2) ರ ಸರ್ಕಾರದ ಪತ್ರದಲ್ಲಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ, ವಸತಿ ಶಾಲೆಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿರುವ ಎಲ್ಲಾ ಸೀಟುಗಳಿಗೆ ಈ ವರ್ಷದ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಉಪ ವರ್ಗೀಕರಣವಿಲ್ಲದೆ ಒಟ್ಟಾರೆಯಾಗಿ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಆದ್ದರಿಂದ 2026-27ನೇ ಶೈಕ್ಷಣಿಕ ಸಾಲಿಗೆ ವಸತಿ ಕಾಲೇಜುಗಳ ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆಯಲ್ಲಿ (3) ಮತ್ತು (4) ರ ಸರ್ಕಾರದ ಆದೇಶಗಳನ್ವಯ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮದನ್ವಯ ಸೀಟುಗಳನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಈ ಕೆಳಕಂಡ ಸೂಚನೆಗಳನ್ನು ಅನುಸರಿಸಿ ಸೀಟು ಹಂಚಿಕೆಯನ್ನು ಮಾಡುವಂತೆ ಸೂಚಿಸಿದೆ.

 

1. ವಸತಿ ಶಾಲೆ/ಕಾಲೇಜುಗಳಲ್ಲಿ ಲಭ್ಯವಿರುವ ಶೇ.100 ರಷ್ಟು ಸ್ಥಾನಗಳಲ್ಲಿ ಆಯಾ ಜಿಲ್ಲೆ ಸ್ಥಳೀಯ (Local) ಅಭ್ಯರ್ಥಿಗಳಿಗೆ ವರ್ಗವಾರು ಶೇ.75 ರಷ್ಟು ಹಾಗೂ ಇತರೆ ಜಿಲ್ಲೆಗಳ (Non Local) ಅಭ್ಯರ್ಥಿಗಳಿಗೆ ಶೇ.25 ರಷ್ಟು ಸ್ಥಾನಗಳನ್ನು ವರ್ಗಾವಾರು ಮೀಸಲಿಟ್ಟು ಸೀಟು ಹಂಚಿಕೆ ಮಾಡುವುದು.

 

2. 2026-27ನೇ ಶೈಕ್ಷಣಿಕ ಸಾಲಿಗೆ ಶೇ.50 ರಷ್ಟು ಸ್ಥಾನಗಳನ್ನು KREIS ವಿದ್ಯಾರ್ಥಿಗಳಿಗೆ ಮೀಸಲಿರಿಸಲು ಹಾಗೂ ಉಳಿದ ಶೇ.50% ಸ್ಥಾನಗಳನ್ನು KREIS ವಸತಿ ಶಾಲೆಗಳು, ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳನ್ನು ಒಟ್ಟಾರೆಯಾಗಿ ಪರಿಗಣಿಸಿ, ಪ್ರವೇಶಾವಕಾಶವನ್ನು ಮೆರಿಟ್ ಕಮ್ ಮೀಸಲಾತಿ ಮತ್ತು ವಿದ್ಯಾರ್ಥಿಗಳ ಆಧ್ಯತೆ ಆಧಾರದ ಮೇಲೆ ದಾಖಲಾತಿ ನೀಡುವುದು.

 

3. KREIS ಅಧೀನದಲ್ಲಿರುವ ವಸತಿ ಕಾಲೇಜುಗಳ ಪ್ರಥಮ ಪಿಯುಸಿ ದಾಖಲಾತಿಗೆ ಸಂಬಂಧಿಸಿದಂತೆ, ಅರ್ಹ ಅಭ್ಯರ್ಥಿಗಳು/ಪೋಷಕರು ಅರ್ಜಿಯನ್ನು ಕೇವಲ ಆನ್‌ಲೈನ್ ಮೂಲಕ KREIS ಸಂಸ್ಥೆಯ ವೆಬ್ ವಿಳಾಸ : https://kreis.karnataka.gov.in ರಲ್ಲಿ ನಿಗದಿತ ಅವಧಿಯೊಳಗಾಗಿ ಸಲ್ಲಿಸಬೇಕು ಎಂದು ಪತ್ರಿಕಾ ಪ್ರಕಟಣೆ ಹೊರಡಿಸುವುದು.

4. ಅಭ್ಯರ್ಥಿಗಳು/ಪೋಷಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವುದನ್ನು ಮಾತ್ರ ಪರಿಗಣಿಸುವುದು ಹಾಗೂ ಪೋಷಕರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿರುವ ಬಗ್ಗೆ ಅನ್‌ಲೈನ್ ಅರ್ಜಿ ಸಲ್ಲಿಸಿರುವುದನ್ನು ಡೌನ್‌ಲೋಡ್ ಮಾಡಿ ತಮ್ಮ ಬಳಿ ಇರಿಸಿಕೊಳ್ಳುವುದು ಕಡ್ಡಾಯ.

5. ಸೀಟು ಹಂಚಿಕೆಯ ನಂತರ ದಾಖಲಾತಿ ಸಂದರ್ಭದಲ್ಲಿ ಈ ಕೆಳಕಂಡ ಮೂಲ ದಾಖಲೆಗಳನ್ನು ಪಡೆದು ಕಡತ ನಿರ್ವಹಣೆ ಮಾಡುವುದು.

ಕ್ರ.ಸಂ ಅಗತ್ಯ ದಾಖಲೆಗಳು
1 ಮೀಸಲಾತಿಗೆ ಸಂಬಂಧಿಸಿದ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಮೂಲ ಪ್ರತಿ
2 ಆಧಾರ ಕಾರ್ಡ್ ನಕಲು ಪ್ರತಿ ಹಾಗೂ ಗ್ರಾಮೀಣ/ನಗರ ಪ್ರದೇಶದ ಶಾಲೆಯಿಂದ ಪಡೆಯಲಾದ ವ್ಯಾಸಂಗ ಪ್ರಮಾಣ ಪತ್ರದ ದೃಢೀಕೃತ ಪ್ರತಿ
3 ಎಸ್.ಎಸ್.ಎಲ್.ಸಿ ಅಂಕಪಟ್ಟಿ ಮೂಲ ಪ್ರತಿ
4 ಇತರೆ ಅಗತ್ಯ ದಾಖಲೆಗಳು
5 ವಿಶೇಷ ವರ್ಗದವರಿಗೆ ಸಂಬಂಧಿಸಿದ ದೃಢೀಕೃತ ದಾಖಲೆಗಳು

 

5. 2026-27ನೇ ಸಾಲಿನ ಆಯವ್ಯಯ ಘೋಷಣೆ ಕಂಡಿಕೆ (184) ರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣಕ್ಕೆ ಅನುವು ಮಾಡಿಕೊಡಲು ಒಟ್ಟು 31 ವಸತಿ ಶಾಲೆಗಳನ್ನು ಉನ್ನತೀಕರಿಸಲಾಗುವುದು ಎಂದು ಘೋಷಿಷಲಾಗಿದೆ.

 

6. ಆಯವ್ಯಯ ಘೋಷಣೆಯನ್ವಯ, ರಾಜ್ಯದಲ್ಲಿ ಎಸ್.ಎಸ್ಎಲ್.ಸಿ ಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೊಂದಿರುವಂತಹ 31 ವಸತಿ ಶಾಲೆಗಳನ್ನು ಆಯ್ಕೆ ಮಾಡಿ, ಪದವಿ ಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಲು ಸರ್ಕಾರದಿಂದ ಅನುಮೋದನೆ ಪಡೆಯಲು ಕ್ರಮವಹಿಸಲಾಗುತ್ತಿರುವ ಹಿನ್ನಲೆಯಲ್ಲಿ ಉನ್ನತೀಕರಿಸಲಾಗುತ್ತಿರುವ 31 ವಸತಿ ಶಾಲೆಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ ಪ್ರಥಮ ಪಿಯುಸಿ ದಾಖಲಾತಿಗೆ ಪ್ರಕ್ರಿಯೆಗೆ ಕ್ರಮವಹಿಸಿ, ವಿಜ್ಞಾನ ವಿಷಯಗಳಲ್ಲಿ ನಿಯಮಾನಸಾರ ದಾಖಲಾತಿಗೆ ಅಗತ್ಯ ಕ್ರಮವಹಿಸಲು ಸೂಚಿಸಿದೆ.

 

7. 2026-27ನೇ ಆಯವ್ಯಯ ಘೋಷಣೆಯನ್ನು “ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಯ ಎರಡು, ಪರಿಶಿಷ್ಟ ಪಂಗಡದ ಒಂದು ಮತ್ತು ಹಿಂದುಳಿದ ವರ್ಗಗಳ ಒಂದು ಸೇರಿದಂತೆ ಒಟ್ಟು ನಾಲ್ಕು ಕೈಸ್ ವಸತಿ ಶಾಲೆಗಳನ್ನು K-CET/JEE/NEET ಪರೀಕ್ಷೆಗಳಿಗೆ ಗುಣಮಟ್ಟದ ತರಬೆತಿ ನೀಡಲು Center of Excellence ಗಳನ್ನಾಗಿ ಉನ್ನತೀಕರಿಸಲಾಗುದು. ಈ ವಸತಿ ಶಾಲೆಗಳಿಗೆ ಪ್ರತ್ಯೇಕವಾದ ಪ್ರವೇಶ ಪರೀಕ್ಷೆಯ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು” ಎಂದು ಘೋಷಿಸಲಾಗಿದೆ.

 

8. ಆಯವ್ಯಯ ಘೋಷಣೆಯನ್ವಯ ನಾಲ್ಕು KREIS ವಸತಿ ಶಾಲೆಗಳನ್ನು K-CET/JEE/NEET ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡುವ ಉದ್ದೇಶದಿಂದ Center of Excellence ಗಳ ಆಯ್ಕೆ ಮತ್ತು ಪ್ರಾರಂಭದ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

 

ವಿ.ಸೂ.

1) KREIS ಅಧೀನದಲ್ಲಿರುವ ವಸತಿ ಕಾಲೇಜುಗಳ ಪ್ರಥಮ ಪಿಯುಸಿ ದಾಖಲಾತಿಗೆ ಸಂಬಂಧಿಸಿದಂತೆ, ಅರ್ಹ ಅಭ್ಯರ್ಥಿಗಳು/ಪೋಷಕರು ಅರ್ಜಿಯನ್ನು ಕೇವಲ ಆನ್‌ಲೈನ್ ಮೂಲಕ KREIS ಸಂಸ್ಥೆಯ ವೆಬ್ಸೈಟ್‌ನಲ್ಲಿ ನಿಗದಿತ ಅವಧಿಯೊಳಗೆ ಸಲ್ಲಿಸಬೇಕು.

2) ದಾಖಲಾತಿ ನಿಯಮಗಳು ಸರ್ಕಾರದ ನಿಯಮಗಳು, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶನಗಳು ಹಾಗೂ ಕ್ರೈಸ್ ನಿರ್ದೇಶನ/ಆದೇಶಗಳಿಗೆ ಅನುಗುಣವಾಗಿ ಬದಲಾವಣೆಗೆ ಒಳಪಟ್ಟಿರುತ್ತವೆ.

ಮೇಲ್ಕಂಡ ಸೂಚನೆಗಳಂತೆ ಅಗತ್ಯ ಕ್ರಮಗಳನ್ನು ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಸಂಘಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ.

 

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!