Lokayukta Clerk Cum Typist Recruitment 2026: ಕರ್ನಾಟಕ ಲೋಕಾಯುಕ್ತದಲ್ಲಿ 25 ಹುದ್ದೆಗಳ ನೇಮಕಾತಿ – ಆಗಸ್ಟ್ 17ರವರೆಗೆ ಅರ್ಜಿ
Lokayukta Clerk Cum Typist Recruitment 2026: ಕರ್ನಾಟಕ ಲೋಕಾಯುಕ್ತದಲ್ಲಿ ಕ್ಲರ್ಕ್ ಕಂ ಟೈಪಿಸ್ಟ್ ಸೇರಿದಂತೆ 25 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು 17 ಆಗಸ್ಟ್ 2026ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ.
ಕರ್ನಾಟಕ ಲೋಕಾಯುಕ್ತದಲ್ಲಿ 25 ಗ್ರೂಪ್ ‘ಸಿ’ ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ಕರ್ನಾಟಕ ಲೋಕಾಯುಕ್ತ ಕ್ಲರ್ಕ್ ಕಂ ಟೈಪಿಸ್ಟ್ ನೇಮಕಾತಿ 2026: 25 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಗ್ರೂಪ್ ‘ಸಿ’ ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟು 25 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.
ಹುದ್ದೆಗಳ ವಿವರ
- ಸಂಸ್ಥೆ: ಕರ್ನಾಟಕ ಲೋಕಾಯುಕ್ತ
- ಹುದ್ದೆಯ ಹೆಸರು: ಕ್ಲರ್ಕ್ ಕಂ ಟೈಪಿಸ್ಟ್ (Group C)
- ಒಟ್ಟು ಹುದ್ದೆಗಳು: 25
- ಅರ್ಜಿ ವಿಧಾನ: ಆನ್ಲೈನ್
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
- ಪಿಯುಸಿ (PUC) ಉತ್ತೀರ್ಣರಾಗಿರಬೇಕು.
- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಅಥವಾ ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿಯ Commercial Practice ಕೋರ್ಸ್ನ ಬೆರಳಚ್ಚು ವಿಷಯದಲ್ಲಿ ತೇರ್ಗಡೆಯಾಗಿರಬೇಕು.
ವಯೋಮಿತಿ
- ಗರಿಷ್ಠ ವಯಸ್ಸು: 40 ವರ್ಷ
- ಪ್ರವರ್ಗ 2A, 2B, 3A ಮತ್ತು 3B ಅಭ್ಯರ್ಥಿಗಳಿಗೆ: 3 ವರ್ಷ ವಯೋಮಿತಿ ಸಡಿಲಿಕೆ
- ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಅಭ್ಯರ್ಥಿಗಳಿಗೆ: 5 ವರ್ಷ ವಯೋಮಿತಿ ಸಡಿಲಿಕೆ
ಅರ್ಜಿ ಶುಲ್ಕ
- ಪ್ರವರ್ಗ 2A, 2B, 3A, 3B ಹಾಗೂ ನಿವೃತ್ತ ಸೇನಾ ಅಭ್ಯರ್ಥಿಗಳು: ₹250
- SC / ST ಹಾಗೂ ವಿಕಲಚೇತನ ಅಭ್ಯರ್ಥಿಗಳು: ಶುಲ್ಕ ವಿನಾಯಿತಿ
ಆಯ್ಕೆ ವಿಧಾನ
ಅಭ್ಯರ್ಥಿಗಳ ಆಯ್ಕೆಯನ್ನು ಕಂಪ್ಯೂಟರ್ ಆಧಾರಿತ ಸ್ಪರ್ಧಾತ್ಮಕ ಪರೀಕ್ಷೆ (CBT) ಮೂಲಕ ನಡೆಸಲಾಗುತ್ತದೆ.
ಪ್ರಮುಖ ದಿನಾಂಕ
ವಿವರ ದಿನಾಂಕ ಅರ್ಜಿ ಸಲ್ಲಿಕೆ ಆರಂಭ ಅಧಿಸೂಚನೆಯಂತೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ17-08-2026
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಕರ್ನಾಟಕ ಲೋಕಾಯುಕ್ತದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಉತ್ತಮ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ಲೈನ್ ಅರ್ಜಿ ಸಲ್ಲಿಸಲು: https://lokayukta.karnataka.gov.in
ಪ್ರಮುಖ ಅಂಶಗಳು
- ✅ ಒಟ್ಟು 25 ಗ್ರೂಪ್ ‘ಸಿ’ ಹುದ್ದೆಗಳು
- ✅ ಹುದ್ದೆ: ಕ್ಲರ್ಕ್ ಕಂ ಟೈಪಿಸ್ಟ್
- ✅ ವಿದ್ಯಾರ್ಹತೆ: PUC + ಬೆರಳಚ್ಚು ಅರ್ಹತೆ
- ✅ ಆಯ್ಕೆ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ
- ✅ ಕೊನೆಯ ದಿನಾಂಕ: 17 ಆಗಸ್ಟ್ 2026
ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಬೇಡಿ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.
ಅಭ್ಯರ್ಥಿಗಳಿಗೆ ಸಾಮಾನ್ಯ ಸೂಚನೆಗಳು
1. ಅಭ್ಯರ್ಥಿಯು ಅರ್ಜಿಯನ್ನು ಭರ್ತಿ ಮಾಡಿ ಆನ್ ಲೈನ್ ನಲ್ಲಿ ಸಲ್ಲಿಸುವ ಪೂರ್ವದಲ್ಲಿ ಎಲ್ಲಾ ಸೂಚನೆಗಳನ್ನು ಓದಿಕೊಂಡಲ್ಲಿ ತಪ್ಪುಗಳಾಗುವುದನ್ನು /ಅರ್ಜಿಯು ತಿರಸ್ಕೃತವಾಗುವುದನ್ನು ತಪ್ಪಿಸಬಹುದಾಗಿದೆ.
2. ಅರ್ಜಿಯಲ್ಲಿ ಸಂಪರ್ಕದ ಉದ್ದೇಶಕ್ಕೆ ಸಂಬಂಧಿಸಿದಂತೆ ಕೊಟ್ಟಿರುವ ಸೂಕ್ತ ಕಾಲಂಗಳನ್ನು ತುಂಬುವಾಗ ಸಂವಹನಕ್ಕಾಗಿ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ಸರಿಯಾಗಿ ನಮೂದಿಸತಕ್ಕದ್ದು. ಸರಿಯಾದ ಮಾಹಿತಿ ಒದಗಿಸದೇ ಮೊಬೈಲ್ಗೆ ಎಸ್. ಎಂ. ಎಸ್. ಅಥವಾ ಇ-ಮೇಲ್ ಸಂದೇಶವು ಬಾರದಿದ್ದಲ್ಲಿ ಪ್ರಾಧಿಕಾರವು ಹೊಣೆಯಾಗುವುದಿಲ್ಲ.
3. ಅಭ್ಯರ್ಥಿಯು ಪದವಿ ಪೂರ್ವ ಶಿಕ್ಷಣ ಪರೀಕ್ಷೆ ಉತ್ತೀರ್ಣ ಅಥವಾ ತತ್ಸಮಾನ, ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಉತ್ತೀರ್ಣ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
4. ಅಭ್ಯರ್ಥಿಯು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಹಿಯನ್ನು ಪ್ರತ್ಯೇಕವಾಗಿ ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡುವುದು., ಅಭ್ಯರ್ಥಿಯು ಆತನ/ಆಕೆಯ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಬಿಳಿಯ ಹಿನ್ನೆಲೆ ಹೊಂದಿರುವ ಭಾವಚಿತ್ರವನ್ನು (ಭಾವಚಿತ್ರ 5 ಸೆಂಟಿ ಮೀಟರ್ ಉದ್ದ ಮತ್ತು 3.6 ಸೆಂಟಿ ಮೀಟರ್ ಅಗಲದೊಂದಿಗೆ ಗರಿಷ್ಠ 50 ಕೆ.ಬಿ. ಅಳತೆಯ ಜೆಪಿಜಿ ನಮೂನೆಯಲ್ಲಿರತಕ್ಕದ್ದು,) ಮತ್ತು ಸಹಿಯನ್ನು ಬಿಳಿ ಹಾಳೆಯಲ್ಲಿ ಕಪ್ಪು ಬಾಲ್ ಪಾಯಿಂಟ್ ಪೆನ್ನಿನಿಂದ (2.5 ಸೆಂಟಿಮೀಟರ್ ಅಗಲ ಮತ್ತು 7.5 ಸೆಂಟಿ ಮೀಟರ್ ಉದ್ದದೊಂದಿಗೆ ಗರಿಷ್ಠ 50 ಕೆ.ಬಿ. ಅಳತೆಯ ಜೆಪಿಜಿ ನಮೂನೆಯಲ್ಲಿರತಕ್ಕದ್ದು) ಮಾಡಿ ಪ್ರತ್ಯೇಕವಾಗಿ ಅಪ್ ಲೋಡ್ ಮಾಡತಕ್ಕದ್ದು.
5. ಅಭ್ಯರ್ಥಿಯು ತಮ್ಮ ಮಾಹಿತಿಗಾಗಿ ಭರ್ತಿಮಾಡಿ ಸಲ್ಲಿಸಿದ ಅರ್ಜಿ ಮತ್ತು ಶುಲ್ಕ ಪಾವತಿಸಿದ ರಸೀದಿ ಒಂದು ಪ್ರತಿಯನ್ನು ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಳ್ಳುವ ವರೆಗೆ ಕಡ್ಡಾಯವಾಗಿ ತಮ್ಮೊಂದಿಗೆ ಇಟ್ಟುಕೊಳ್ಳತಕ್ಕದ್ದು.
6. ಅರ್ಜಿ ಸಲ್ಲಿಸುವಾಗ ಕೊನೆ ಕ್ಷಣದಲ್ಲಿ ಒತ್ತಡವನ್ನು ತಪ್ಪಿಸಲು, ಅಭ್ಯರ್ಥಿಗಳು ಸಾಕಷ್ಟು ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಸೂಕ್ತ. ವೆಬ್ ಸೈಟ್ ದಿನಾಂಕ: 17-08-2026 ರ ರಾತ್ರಿ 11:59 ಘಂಟೆಯೊಳಗೆ ಸಲ್ಲಿಸಿದ ಅರ್ಜಿಗಳನಷ್ಟೇ ಅಂಗೀಕರಿಸುತ್ತದೆ.
ಕೊನೆ ದಿನಾಂಕ:
ನೋಂದಾಯಿಸುವ/ ಆನ್ ಲೈನ್ ನಲ್ಲಿ ಅರ್ಜಿಯನ್ನು ದಿನಾಂಕ: 17-08-2026 ರ ರಾತ್ರಿ 11:59 ಘಂಟೆಯೊಳಗೆ ಸಲ್ಲಿಸತಕ್ಕದ್ದು, ಆನ್ ಲೈನ್ ನಲ್ಲಿ ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್ /ಕ್ರೆಡಿಟ್/ಡೆಬಿಟ್/ ಯುಪಿಐ ಮುಖಾಂತರ ದಿನಾಂಕ: 18-08-2026- ರೊಳಗೆ ಪಾವತಿಸತಕ್ಕದ್ದು. ಚಲನ್ ಮುಖಾಂತರ, ಮನಿ ಆರ್ಡರ್ ಮುಖಾಂತರ, ಪೊಸ್ಟಲ್ ಆರ್ಡರ್ ಮುಖಾಂತರ ಪಾವತಿಸುವ ಶುಲ್ಕವನ್ನು ಅಂಗೀಕರಿಸುವುದಿಲ್ಲ.
7. ಅರ್ಹ ಅಭ್ಯರ್ಥಿಗಳಿಗೆ ಮಾಹಿತಿಯನ್ನು ಎಸ್.ಎಂ.ಎಸ್ ಮತ್ತು ಇ-ಮೇಲ್ ಮೂಲಕ ಸಂದೇಶಗಳನ್ನು ಕಳುಹಿಸಲಾಗುತ್ತದೆ. ಬೆರಳಚ್ಚು ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಈ ಸಂಸ್ಥೆಯ ಸೂಚನಾ ಫಲಕದಲ್ಲಿ ಮತ್ತು ಕರ್ನಾಟಕ ಲೋಕಾಯುಕ್ತ ವೆಬ್ ಸೈಟ್ನಲ್ಲಿ URL link https://lokayukta.karnataka.gov.in/ ಸೂಚಿಸಲಾಗುತ್ತದೆ.
8. ಬೆರಳಚ್ಚು ಪರೀಕ್ಷೆಗಳಿಗೆ ಕರೆ ಪಡೆದಿರುವ ಅರ್ಹ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು..
9. ಅಭ್ಯರ್ಥಿಗಳು ಕೆಳಕಂಡ ದಾಖಲೆ/ಪ್ರಮಾಣ ಪತ್ರಗಳನ್ನು ಸೂಕ್ತ ಪ್ರಾಧಿಕಾರದಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗಾಗಿ ಅಥವಾ ಅಭ್ಯರ್ಥಿಯು ಅರ್ಜಿ ಸಲ್ಲಿಸುವ ದಿನಾಂಕದೊಳಗಾಗಿ ಪಡೆದಿಟ್ಟುಕೊಂಡಿರಬೇಕು ಹಾಗೂ ಚಾಲ್ತಿಯಲ್ಲಿರಬೇಕು. ಸದರಿ ದಾಖಲೆಗಳನ್ನು ಬೆರಳಚ್ಚು ಪರೀಕ್ಷೆಗೆ ಹಾಜರಾದಾಗ ಪರಿಶೀಲನೆಗಾಗಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ನಂತರ ಪಡೆದ ಪ್ರಮಾಣ ಪತ್ರಗಳನ್ನು ಅಂಗೀಕರಿಸಲಾಗುವುದಿಲ್ಲ.
ಎ) ಆನ್ ಲೈನ್ ಸಲ್ಲಿಸಿದ ಅರ್ಜಿ ಪ್ರತಿ .
ಬಿ) ಶುಲ್ಕ ಪಾವತಿಸಿದ ರಸೀದಿ ಪ್ರತಿ .
ಸಿ) ಜನ್ಮ ದಿನಾಂಕ ನಮೂದಾಗಿರುವ ಎಸ್.ಎಸ್.ಎಲ್.ಸಿ/ತತ್ಸಮಾನ ಪ್ರಮಾಣ ಪತ್ರ .
ಡಿ) 10+2/ ಪಿಯುಸಿ / ತತ್ಸಮಾನ ಅಂಕಪಟ್ಟಿ.
ಇ) ಕನ್ನಡ ಮತ್ತು ಆಂಗ್ಲ ಬೆರಳಚ್ಚು ಕಿರಿಯ ದರ್ಜೆ ಅಂಕಪಟ್ಟಿ .
ಎಫ್) 371J ಹೈದರಾಬಾದ್-ಕರ್ನಾಟಕ ಸ್ಥಳೀಯ ವೃಂದದ ಪ್ರಮಾಣ ಪತ್ರ .
ಜಿ) ಅಭ್ಯರ್ಥಿಯು ಅಂತಿಮ ಪಟ್ಟಿಗೆ ಆಯ್ಕೆಗೊಂಡಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯಿಂದ ನಿರಾಕ್ಷೇ ಪಣ ಪ್ರಮಾಣ ಪತ್ರ ಪಡೆದು ಸಲ್ಲಿಸತಕ್ಕದ್ದು. .
ಹೆಚ್ ) ಅಭ್ಯರ್ಥಿಯು ಜಾತಿ ಪ್ರಮಾಣ ಪತ್ರ ಎಸ್.ಸಿ/ಎಸ್.ಟಿ/ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ/ ಪ್ರವರ್ಗ-3ಬಿ ಗಳ ಅಡಿಯಲ್ಲಿ ಮೀಸಲಾತಿ ಕೋರಿದ್ದಲ್ಲಿ ನಿಗಧಿತ ನಮೂನೆಯಲ್ಲಿ ಸೂಕ್ತ ಪ್ರಾಧಿಕಾರದಿಂದ ಪ್ರಮಾಣ ಪತ್ರ ಪಡೆದಿಟ್ಟುಕೊಂಡಿರತಕ್ಕದ್ದು. .
ಐ) ಮಿಲಿಟರಿ ಸೇವೆಯಿಂದ ಬಿಡುಗಡೆ ಹೊಂದಿದ ಪ್ರಮಾಣ ಪತ್ರ (ಮಾಜಿ ಸೈನಿಕ) (ಒಂದು ವೇಳೆ ಮೀಸಲಾತಿ ಕೋರಿದ್ದಲ್ಲಿ ) .
ಜೆ) ಗ್ರಾಮೀಣ ಪ್ರಮಾಣ ಪತ್ರ –ನಿಗದಿತ ನಮೂನೆಯಲ್ಲಿ (ಒಂದು ವೇಳೆ ಮೀಸಲಾತಿ ಕೋರಿದ್ದಲ್ಲಿ ) .
ಕೆ) ಕನ್ನಡ ಮಾಧ್ಯಮ ಪ್ರಮಾಣ ಪತ್ರ –ನಿಗದಿತ ನಮೂನೆಯಲ್ಲಿ (ಒಂದು ವೇಳೆ ಮೀಸಲಾತಿ ಕೋರಿದ್ದಲ್ಲಿ ) (ಹುದ್ದೆಯು ಅಧಿಸೂಚನೆಗೊಂಡಿದ್ದಲ್ಲಿ ಮಾತ್ರ) .
ಎಲ್) ಅಂಗವಿಕಲ ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರಿಗಳಿಂದ ಪಡೆದಿರುವ ವೈದ್ಯಕೀಯ ಪ್ರಮಾಣ ಪತ್ರ (ಒಂದು ವೇಳೆ ಮೀಸಲಾತಿ ಕೋರಿದ್ದಲ್ಲಿ ).
ಎಮ್) ಸಕ್ಷಮ ಪ್ರಾಧಿಕಾರವು ವಿತರಿಸಿರುವ ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ (ಹುದ್ದೆಯು ಅಧಿಸೂಚನೆಗೊಂಡಿದ್ದಲ್ಲಿ ಮಾತ್ರ) .
10. ಮೇಲ್ಕಂಡ ಹುದ್ದೆಗಳಿಗೆ ಸಂಬಂಧಿಸಿದಂತೆ, ಆನ್ ಲೈನ್ ಅರ್ಜಿಯನ್ನು ಸಲ್ಲಿಸುವಾಗ ಅಭ್ಯರ್ಥಿಯು ಮೇಲೆ ಸೂಚಿಸಲಾದಂತಹ ತನ್ನ ವಿದ್ಯಾರ್ಹತೆ ಹಾಗೂ ಇತರೆ ಮಾನದಂಡಗಳನ್ನು ಪೂರ್ಣ ಗೊಳಿಸಲಾಗಿದೆಯೆಂದು ಹಾಗೂ ತಾನು ಒದಗಿಸಿರುವ ಎಲ್ಲಾ ವಿವರಗಳು ಎಲ್ಲಾ ಆಯಾಮಗಳಲ್ಲಿಯೂ ಸರಿಯಾಗಿವೆ ಎಂದು ಖಚಿತ ಪಡಿಸತಕ್ಕದು. ನೇಮಕಾತಿಯು ಯಾವುದೇ ಹಂತದಲ್ಲಿ ಅಭ್ಯರ್ಥಿಯು ವಿದ್ಯಾರ್ಹತೆಯ ಮಾನದಂಡಗಳನ್ನು ಪೂರ್ಣಗೊಳಿಸಿಲ್ಲವೆಂದು ಅಥವಾ ಆತ/ಆಕೆ ಯಾವುದೇ ಪ್ರಮುಖ ವಾಸ್ತವಾಂಶಗಳನ್ನು ಮರೆಮಾಚಿರುತ್ತಾನೆ/ಳೆಂದು, ತಿರುಚಿರುತ್ತಾನೆ/ಳೆಂದು, ಮೊಟುಕುಗೊಳಿಸಿರುತ್ತಾನೆ/ಳೆಂದು ಕಂಡು ಬಂದ ಸಂದರ್ಭದಲ್ಲಿ ಆತನ/ಆಕೆಯ ಅಭ್ಯರ್ಥಿಕೆಯನ್ನು ರದ್ದುಗೊಳಿಸಲಾಗುವುದು. ಈ ಯಾವುದೇ ನ್ಯೂನತೆಗಳು ನೇಮಕಾತಿಯ ನಂತರ ಕಂಡುಬಂದರೂ ಸಹ ಮತ್ತು ತಪ್ಪಾದ, ಅಪೂರ್ಣವಾದ ಅಥವಾ ಸರಿಯಿಲ್ಲದ ಮಾಹಿತಿಯನ್ನು ಒದಗಿಸುವುದು ಅನರ್ಹತೆಗೆ ಕಾರಣವಾಗುವುದು ಮಾತ್ರವಷ್ಟೆ ಅಲ್ಲದೇ, ಅಂತಹ ಮಾಹಿತಿಯನ್ನು ಒದಗಿಸಿದ್ದಕ್ಕಾಗಿ ಕ್ರಿಮಿನಲ್ ಮೊಕದ್ದಮೆಗೆ ಹೊಣೆಗಾರನಾಗುತ್ತಾನೆ/ಳೆ.
11. ಅಭ್ಯರ್ಥಿಗಳು ಆನ್ ಲೈನ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ಮೂಲ / ದೃಢೀಕೃತ ದಾಖಲೆಗಳನ್ನು ಅಪ್ ಲೋಡ್ ಮಾಡುವ ಅಗತ್ಯ ಇರುವುದಿಲ್ಲ.
12. ಪರಿಶೀಲನಾ ಅವಧಿಯಲ್ಲಿ ಅಭ್ಯರ್ಥಿಯು ಎಲ್ಲಾ ಮೂಲ ದಾಖಲೆಗಳನ್ನು ಅವುಗಳ ಪ್ರತಿಯೊಂದಿಗೆ ಹಾಜರುಪಡಿಸತಕ್ಕದ್ದು.
13. ಯಾವುದೇ ಅಭ್ಯರ್ಥಿಗಳು ಅಭ್ಯರ್ಥಿಕೆ ಸಂದರ್ಭದಲ್ಲಿ ಸಿಬ್ಬಂದಿ ಅಥವಾ ಸಿಬ್ಬಂದಿಯೇತರ ಮೂಲಗಳ ಮೂಲಕ ಯಾವುದೇ ರೀತಿಯ ಬಾಹ್ಯ ಬೆಂಬಲ ಪಡೆಯುವ ಪ್ರಯತ್ನ ಮಾಡಿದ್ದಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು/ಅಭ್ಯರ್ಥಿಕೆಯನ್ನು ಅನರ್ಹಗೊಳಿಸಲಾಗುವುದು. ಎಂದು ಸೂಚನೆ ನೀಡಲಾಗಿದೆ.
