Makkala grama sabhe:2025 ಮಕ್ಕಳ ಗ್ರಾಮ ಸಭೆ: ಮಕ್ಕಳ ಹಕ್ಕುಗಳ ರಕ್ಷಣೆ, ಭಾಗವಹಿಸುವಿಕೆಗೆ ಉತ್ತೇಜನ ಮಕ್ಕಳಸ್ನೇಹಿ ಗ್ರಾಪಂ ಅಭಿಯಾನಕ್ಕೆ ನಿರ್ದೇಶನ.

Makkala grama sabhe:2025 ಮಕ್ಕಳ ಗ್ರಾಮ ಸಭೆ: ಮಕ್ಕಳ ಹಕ್ಕುಗಳ ರಕ್ಷಣೆ, ಭಾಗವಹಿಸುವಿಕೆಗೆ ಉತ್ತೇಜನ ಮಕ್ಕಳಸ್ನೇಹಿ ಗ್ರಾಪಂ ಅಭಿಯಾನಕ್ಕೆ ನಿರ್ದೇಶನ.


Makkala grama sabhe:2025 ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳಭಾಗವಹಿಸುವಿಕೆಯ ಹಕ್ಕು ಹಿನ್ನೆಲೆಯಲ್ಲಿ ಇದೇ ತಿಂಗಳ 14ರಿಂದ 2026ರ ಜ.24ರವರೆಗೆ 10 ವಾರಗಳ ಕಾಲ ಮಕ್ಕಳಸ್ನೇಹಿ ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಒಂದು ದಿನ ವಿಶೇಷ ‘ಮಕ್ಕಳ ಗ್ರಾಮ ಸಭೆ’ ಆಯೋಜಿಸಲು ಪಂಚಾಯತ್‌ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತಾಲಯ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಎಲ್ಲ ಗ್ರಾಪಂ. ಗಳಿಗೂ ಸುತ್ತೋಲೆ ಹೊರಡಿಸಿದೆ. 2006ರಿಂದ ಪ್ರತಿ ವರ್ಷ ನವೆಂಬರ್‌ನಲ್ಲಿ ಮಕ್ಕಳ ಗ್ರಾಮ ಸಭೆ ನಡೆಸಿಕೊಂಡು ಬರಲಾಗುತ್ತಿದ್ದು, ಈ ಸಾಲಿನ ಚಟುವಟಿಕೆಗಳ ವಿವರಗಳನ್ನು ನೀಡಲಾಗಿದೆ.

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಮಕ್ಕಳಿಗೆ ಸಂಬಂ ಧಿಸಿದ ಸಮಗ್ರ ಅಭಿವೃದ್ಧಿ ಅಂಶಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮಕ್ಕಳಸ್ನೇಹಿ ಹಾಗೂ ಮಕ್ಕಳ ಸುರಕ್ಷಿತ ಪಂಚಾಯಿತಿಯನ್ನಾಗಿಸುವ ನಿಟ್ಟಿನಲ್ಲಿ ಇಲಾಖೆ 2020ರಿಂದ ಮಕ್ಕಳಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮಗಳಿಗಾಗಿ ವಿಸ್ತ್ರತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಪೂರ್ವ ತಯಾರಿ: ಹಿಂದಿನ ಸಾಲಿನ ಮಕ್ಕಳ ಗ್ರಾಮ ಸಭೆಯ ನಡಾವಳಿಗಳನ್ನು ಪರಾಮರ್ಶಿಸಿ, ಸದರಿ ಸಭೆಯಲ್ಲಿನ ನಿರ್ಣಯಗಳ ಅನುಷ್ಠಾನಕ್ಕೆ ಕೈಗೊಂಡ ಕ್ರಮಗಳ ವರದಿ ಸಿದ್ಧಪಡಿಸುವುದು. ಇದನ್ನು 2025-26ನೇ ಸಾಲಿನ ಸಭೆಯಲ್ಲಿ ಪ್ರಸ್ತುತಪಡಿಸುವುದು. ತಾಪಂ ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಸಭೆಯ ದಿನಾಂಕ ನಿಗದಿ ಮಾಡುವುದು. ಪಂಚಾಯ್ತಿ ಮಟ್ಟದ, ಮಕ್ಕಳಿಗೆ ಸಂಬಂಧಿಸಿದ ಸಮಿತಿಗಳಾದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಬಾಲ ವಿಕಾಸ ಸಮಿತಿ, ಮಕ್ಕಳ ರಕ್ಷಣೆಯ ಕಾವಲು ಸಮಿತಿ, ಶಿಕ್ಷಣ ಕಾರ್ಯಪಡೆ ಮೊದಲಾದವುಗಳ ಸದಸ್ಯರೊಂದಿಗೆ ಪೂರ್ವ ಸಿದ್ಧತಾ ಸಭೆ ನಡೆಸಲು ಸೂಚಿಸಲಾಗಿದೆ. ಪಂಚಾಯ್ತಿ ಮಟ್ಟದ ಗ್ರಾಮ -ಸಭೆಗೂ ಮುನ್ನ ಜನವಸತಿ ಪ್ರದೇಶ, ವಾರ್ಡ್‌ಗಳು ಹಾಗೂ ಗ್ರಾಮ ಮಟ್ಟದಲ್ಲೂ ಸಭೆಗಳನ್ನು ನಡೆಸುವಂತೆ ತಿಳಿಸಲಾಗಿದೆ.

ಮಕ್ಕಳ ದನಿ ಪಟ್ಟಿಗೆ:

ಮಕ್ಕಳು ಮತ್ತು ಮಕ್ಕಳ ಪರವಾಗಿ ಆಸಕ್ತರು, ಹಿತೈಷಿಗಳು ಮಕ್ಕಳ ಸಮಸ್ಯೆ/ಬೇಡಿಕೆ / ಪ್ರಶ್ನೆಗಳನ್ನು ಬರೆದು ಹಾಕಲು ಮಕ್ಕಳ ದನಿ ಪಟ್ಟಿಗೆಯನ್ನು ಆಕರ್ಷಕವಾಗಿ ತಯಾರಿಸುವುದು. ಸಹಾಯವಾಣಿ ಸಂಖ್ಯೆ 1098/112 ಎಂದು ಸ್ಪಷ್ಟವಾಗಿ ಬರೆಯತಕ್ಕದ್ದು. ಪೆಟ್ಟಿಗೆಯ ಉದ್ದೇಶ ಹಾಗೂ ಕೋರಿಕೆ ಪತ್ರದ ವಿವರಗಳನ್ನು ಬರೆಯಬೇಕೆಂದು ತಿಳಿಸಲಾಗಿದೆ. ಈ ಪೆಟ್ಟಿಗೆಯನ್ನು ಪ್ರತಿ ಗ್ರಾಮ/ ವಾರ್ಡ್‌ನಲ್ಲಿ ಮಕ್ಕಳಿಗೆ ಅನುಕೂಲವಾಗುವ ಸ್ಥಳಗಳಲ್ಲಿ ಇರಿಸುವುದು. ಮಕ್ಕಳ ಸಭೆಗೂ ಮೂರು ದಿನ ಮುಂಚೆ ಇದನ್ನು ತೆರೆದು ಗ್ರಾಮ ಸಭೆಯಲ್ಲಿ ಮಂಡಿಸುವಂತೆ ತಿಳಿಸಲಾಗಿದೆ. ಮಕ್ಕಳ ಕೋರಿಕೆ ಪತ್ರಗಳನ್ನು ಸಾಮಾಜಿಕ ಜಾಲತಾಣ, ವಾಟ್ಸ್ಆ್ಯಪ್ ಮೂಲಕ ಗ್ರಾಮ ಪಂಚಾಯಿತಿಯ ಹೆಚ್ಚಿನ ಜನಕ್ಕೆ ತಲುಪವಂತೆ ಮಾಡುವುದು. ಮಕ್ಕಳ ‘ಬಾಲ ಮಿತ್ರ’ ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ, ಶಿಕ್ಷಕ/ಶಿಕ್ಷಕಿಯರಿಗೆ ನೇರವಾಗಿ ಸಲ್ಲಿಸಲು ಅವಕಾಶ ನೀಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಯಾವಾಗ?

ನ.14ರಿಂದ ಜ.26ರವರೆಗೆ

ಬಾಲ ಮಿತ್ರ:

ಗ್ರಾಮ ಪಂಚಾಯ್ತಿ ಶಿಕ್ಷಣ ಕಾರ್ಯಪಡೆಯಲ್ಲಿ ಇರುವ ಒಬ್ಬ ಸದಸ್ಯ ನನ್ನು ಪಂಚಾಯ್ತಿ ‘ಬಾಲ ಮಿತ್ರ’ ಘೋಷಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕಾರ್ಯಕ್ರಮಗಳು:

ಮಕ್ಕಳಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನದ ಅಂಗವಾಗಿ ಕೈಗೊಳ್ಳಬೇಕಾದ ಚಟುವಟಿಕೆಗಳು.

▪️ಮಕ್ಕಳ ಜನನ ನೋಂದಣಿ ಹಾಗೂ ಜನನ ಪ್ರಮಾಣಪತ್ರ ವಿತರಣೆ
▪️ಪೌಷ್ಠಿಕ ಆಹಾರ ಕುರಿತು ಮಾರ್ಗದರ್ಶನ ಮತ್ತು ಜಾಗೃತಿ
▪️ಮಕ್ಕಳಿಗೆ ಚುಚ್ಚುಮದ್ದು ಪ್ರಾಮುಖ್ಯತೆ
▪️ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು
▪️ಕ್ರೀಡೆ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳು
▪️ಜಾಗೃತಿ ಕಾರ್ಯಕ್ರಮಗಳು
▪️ಮಕ್ಕಳ ಹಕ್ಕುಗಳ ರಕ್ಷಣೆಯ ಫೇಸ್‌ಬುಕ್ ಪೇಜ್ ರಚಿಸುವುದು

ಗುರಿ, ಆದ್ಯತೆಗಳು:

▪️ಶೇ.100 ಜನನ ಪ್ರಮಾಣಪತ್ರ ವಿತರಣೆ
▪️ಶೇ.100 ಮಕ್ಕಳಿಗೆ ಚುಚ್ಚುಮದ್ದು
▪️1 ಅಂಗನವಾಡಿಗಳಲ್ಲಿ 3-6 2 8.100 ಮಕ್ಕಳ ದಾಖಲಾತಿ
▪️ಶಾಲೆಗಳಲ್ಲಿ 6ರಿಂದ 14 ವರ್ಷದ ಮಕ್ಕಳ ಶೇ.100 ದಾಖಲಾತಿ
▪️ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಅಂಗನವಾಡಿ ಸೇವೆಗಳ ಪೂರೈಕೆ
▪️ಮಕ್ಕಳು ಹಾಗೂ ಕಿಶೋರಾವಸ್ಥೆಯ ಕಾರ್ಮಿಕತೆಯಿಂದ ಮುಕ್ತಿ
▪️ಶೂನ್ಯ ಬಾಲ್ಯ ವಿವಾಹ ಪ್ರಕರಣಗಳು
▪️ಯುವಕ/ಯುವತಿಯರಿಗೆ ಕೌಶಲ ತರಬೇತಿ
▪️ವಲಸೆ ಕಾರ್ಮಿಕರ ಮಾಹಿತಿ ಮತ್ತು ಟ್ರ್ಯಾಕಿಂಗ್

ಅಜೆಂಡಾ:

ಮಕ್ಕಳಿಗೆ ಸಂಬಂಧಿಸಿದ ವಿಷಯಗಳ ಹೊರತು ಬೇರೆ ವಿಷಯಗಳ ಚರ್ಚೆ ಆಗದಂತೆ ನೋಡಿಕೊಳ್ಳುವುದು ಮತ್ತು ಮಕ್ಕಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹೆಚ್ಚಿನ ಸಮಯಾವಕಾಶ ನೀಡತಕ್ಕದ್ದು. ಸಭೆಯ ಮಾದರಿ ಕಾರ್ಯಸೂಚಿ ಹೇಗಿರಬೇಕು ಎಂಬುದಕ್ಕೂ ಸುತ್ತೋಲೆಯಲ್ಲಿ ವಿವರಣೆ ನೀಡಲಾಗಿದೆ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!