Regarding submission of information regarding reimbursement of medical expenses for the year 2023-24.
Medical Reimbursement: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ತು ವಲಯಗಳಲ್ಲಿ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ 2023-24 ನೇ ಸಾಲಿನ ವೈದ್ಯಕೀಯ ವೆಚ್ಚ ಮರುಪಾವತಿಗೆ ಸಂಬಂಧಿಸಿದಂತೆ ಉಲ್ಲೇಖ 2 ರ ಪತ್ರಗಳಲ್ಲಿ ಸರಿಯಾದ ಬೇಡಿಕೆ ಮಾಹಿತಿಯೊಂದಿಗೆ ಪರಿಷ್ಕೃತ ನಮೂನೆ 1 ಮತ್ತು 2 ನ್ನು ಸಲ್ಲಿಸಲು ತಿಳಿಸಲಾಗಿತ್ತು.
ಈವರೆವಿಗೂ ಮೂರು ಬಾರಿ ತಿಳಿಸಲಾಗಿದ್ದರೂ ಸಹ ಇದುವರೆವಿಗೂ ಸರಿಯಾದ ಮಾಹಿತಿಯನ್ನು ಪರಿಷ್ಕೃತ ನಮೂನೆ 1 ಮತ್ತು 2 ರಲ್ಲಿ ಸಲ್ಲಿಸದೇ ಇರುವುದರಿಂದ 2023-24 ನೇ ಸಾಲಿನ ವೈದ್ಯಕೀಯ ವೆಚ್ಚ ಮರುಪಾವತಿಗೆ ಸಂಬಂಧಿಸಿದಂತೆ ಅನುದಾನದ ಬೇಡಿಕೆ ಮೊತ್ತದ ಕ್ರೋಢೀಕೃತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲು ವಿಳಂಬವಾಗುತ್ತಿದೆ. ಉಲ್ಲೇಖ 4 ರಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ) ಬೆಂಗಳೂರು ಇವರು ವೈದ್ಯಕೀಯ ವೆಚ್ಚ ಮರುಪಾವತಿಗೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಗಳಿಂದ ಅಂದಾಜು ವೆಚ್ಚದ ಕ್ರೋಢೀಕೃತ ಮಾಹಿತಿಯನ್ನು ಪಡೆದು ಸರ್ಕಾರಕ್ಕೆ ಸಲ್ಲಿಸಿ ವೈದ್ಯಕೀಯ ವೆಚ್ಚ ಮರುಪಾವತಿಗೆ ಅನುದಾನವನ್ನು ಬಿಡಿಗಡೆ ಮಾಡಿಸಿಕೊಡಲು ಮನವಿ ಸಲ್ಲಿಸಿರುತ್ತಾರೆ.
ಆದ್ದರಿಂದ ಸದರಿ ಮಾಹಿತಿಯನ್ನು ಹಿಂದಿನ ಪತ್ರಗಳಲ್ಲಿ ನೀಡಿರುವ ಸೂಚನೆಯಂತೆ, ವಿಳಂಬಕ್ಕೆ ಅವಕಾಶವಿಲ್ಲದಂತೆ ಸಂಬಂಧಿಸಿದ ಡಿ ಡಿ ಒ ಗಳು ಹಾಗೂ ಮೇಲು ಸಹಿ ಪ್ರಾಧಿಕಾರ, ಸ್ಪಷ್ಟಿಕರಣಗಳೊಂದಿಗೆ ಕ್ರೂಢೀಕೃತ ಪರಿಷ್ಕೃತ ಪ್ರಸ್ತಾವನೆಯನ್ನು ದಿನಾಂಕ:10.02.2025 ರ ಒಳಗಾಗಿ ಸಲ್ಲಿಸಲು ಕೋರಿದೆ. ಸದರಿ ನಿರ್ದಿಷ್ಟ ದಿನಾಂಕದೊಳಗಾಗಿ ಸರಿಯಾದ ಪರಿಷ್ಕೃತ ಮಾಹಿತಿಯನ್ನು ಸಲ್ಲಿಸದೇ ಇದ್ದಲ್ಲಿ ಅಂಥಹ ವಿಭಾಗದ /ಜಿಲ್ಲೆಗಳಿಗೆ ವೈದ್ಯಕೀಯ ವೆಚ್ಚ ಮರುಪಾವತಿಗೆ ಹೆಚ್ಚುವರಿ ಅನುದಾನದ ಬೇಡಿಕೆ ಅಗತ್ಯವಿರುವುದಿಲ್ಲ ಎಂದು ಪರಿಗಣಿಸಿ ಸ್ವೀಕೃತವಾದ ಪ್ರಸ್ಥಾವನೆಯನ್ನು ಮಾತ್ರ ಇದಕ್ಕೆ ಸಂಬಂಧಿಸಿದ ಕಛೇರಿ ಮುಖ್ಯಸ್ಥರುಗಳ ಜವಾಬ್ದಾರಿ ಮೇರೆಗೆ ಸರ್ಕಾರಕ್ಕೆ ಪ್ರಸ್ಥಾಪಿಸಲಾಗುವುದು. ಎಂದು ತಿಳಿಸಲಾಗಿದೆ.
ಇದನ್ನೂ ನೋಡಿ…..ಎಲ್ಲ ವಿಶೇಷಚೇತನರಿಗೆ ಲಿಪಿಕಾರರ ನೆರವು:ಸುಪ್ರೀಂ ಕೋರ್ಟ್ ಮಹತ್ವದ ಆದೇಶ