Mid-day meal Scheme: ಶಾಲಾ ಮಕ್ಕಳ ಮಧ್ಯಾಹ್ನ ಬಿಸಿಯೂಟಕ್ಕೆ ಬಲ, PM ಪೋಷಣ್ ದರ ಪರಿಷ್ಕರಣೆ-2024

Mid day meal Scheme, ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಮತ್ತಷ್ಟು ಬಲ.ಕೇಂದ್ರದಿಂದ ವಸ್ತುಗಳ ಖರೀದಿ ಹೆಚ್ಚಳ

Mid day meal scheme: ಕೇಂದ್ರ ಸರ್ಕಾರವು ಪಿಎಂ ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಗೆ ಬಳಕೆಯಾಗುವ ‘ವಸ್ತುಗಳ ಖರೀದಿ ವೆಚ್ಚ’ವನ್ನು ಹೆಚ್ಚಿಸಿದ್ದು, ಈ ಮೂಲಕ ಕೇಂದ್ರೀಯ ಪ್ರಾಯೋಜಿತ ಯೋಜನೆಯ ಅನುದಾನವನ್ನು ಏರಿಕೆ ಮಾಡಿದೆ.ಊಟ ತಯಾರಿಸಲು ಮುಖ್ಯವಾಗಿ ಬೇಕಾಗುವ ಬೇಳೆ, ತರಕಾರಿ, ಎಣ್ಣೆ, ಮಸಾಲೆ ಹಾಗೂ ಇತರ ಪದಾರ್ಥಗಳು, ಇಂಧನ ನಿಗದಿಪಡಿಸಿದ್ದ ದರಗಳಲ್ಲಿ ಹೆಚ್ಚಳ ಮಾಡಿದೆ.

ದೇಶದ 10.24 ಲಕ್ಷ ಶಾಲೆಗಳಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ಒಟ್ಟು 11.70 ಕೋಟಿ ಮಕ್ಕಳಿಗೆ ಊಟ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ.

ಬೆಲೆ ನಿಗದಿ ಹೇಗೆ?:

ಊಟ ತಯಾರಿಸಲು ಬೇಕಾಗುವ ವಸ್ತುಗಳ ಬೆಲೆಯನ್ನು ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿ ನಿಗದಿ ಮಾಡಲಾಗುತ್ತದೆ. ಇದಕ್ಕಾಗಿ ದೇಶದ 20 ರಾಜ್ಯಗಳ 600ಕ್ಕೂ ಅಧಿಕ ಹಳ್ಳಿಗಳಲ್ಲಿ ಈ ವಸ್ತುಗಳಿಗಿರುವ ದರಗಳನ್ನು ಸಮೀಕ್ಷೆ ಮಾಡಿ ಕಾರ್ಮಿಕ ಇಲಾಖೆಯು ಗ್ರಾಹಕ ಸೂಚ್ಯಂಕದನ್ವಯ ಬೆಲೆ ಪಟ್ಟಿಯನ್ನು ಸಿದ್ಧಪಡಿಸುತ್ತದೆ.

ಕಾರ್ಮಿಕ ಇಲಾಖೆ ನೀಡಿದ ಹಣದುಬ್ಬರ ಸೂಚ್ಯಂಕ ಆಧರಿಸಿ ಕೇಂದ್ರ ಶಿಕ್ಷಣ ಇಲಾಖೆಯು ದರಗಳನ್ನು ಶೆ.13.70ರಷ್ಟು ಹೆಚ್ಚಳ ಮಾಡಿದೆ.

2023-24 ರಿಂದ ಈ ಬೆಲೆಯಲ್ಲಿ ಏರಿಕೆ ಮಾಡಿರಲಿಲ್ಲ. ಹೀಗಾಗಿ 2022- 23ನೇ ಸಾಲಿಗೆ ಹಣದುಬ್ಬರವು 6.45 ಆಗಿತ್ತು. ಮತ್ತು 2023-24ನೇ ಸಾಲಿಗೆ 6.74 ಆಗಿದೆ. ಈ ಹೆಚ್ಚಳದಿಂದಾಗಿ ಕೇಂದ್ರ ಸರ್ಕಾರವು 425.62 ಕೋಟಿ ರೂ.ಗಳ ಹೆಚ್ಚುವರಿ ಹೊರೆಯನ್ನು ಭರಿಸಲಿದೆ.

ಯಾರಿಗೆ, ಎಷ್ಟು ಹೆಚ್ಚು?

ಅಂಗನವಾಡಿ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ನೀಡಲಾಗುವ ಆಹಾರದ ತಯಾರಿಕೆಯ ವಸ್ತುಗಳ ವೆಚ್ಚವನ್ನು 5.45 ರೂ.ಗಳಿಂದ 6.19 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಹಿರಿಯ ಪ್ರಾಥಮಿಕ ಶಾಲಾ ಹಂತಕ್ಕೆ 8.17ರೂ. ಗಳಿಂದ 9.29ರೂ. ಗೆ ಏರಿಸಲಾಗಿದೆ. ಈ ಬೆಲೆ ಏರಿಕೆಯು ಡಿ.1ರಿಂದಲೇ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಬೆಲೆಯು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯಿಸಲಿದೆ. ಆದರೆ, ರಾಜ್ಯಗಳು ಇದರ ಹೊರತಾಗಿಯೂ ಹೆಚ್ಚುವರಿ ಮೊತ್ತವನ್ನು ಭರಿಸಲು ಅವಕಾಶವಿದೆ. ಮಕ್ಕಳಿಗೆ ಪೌಷ್ಟಿಕಾಂಶಭರಿತ ಊಟವನ್ನು ನೀಡಲು ಈಗಾಗಲೇ ಹಲವು ರಾಜ್ಯಗಳು ಇಂಥ ಕ್ರಮಗಳನ್ನು ಕೈಗೊಂಡಿವೆ.

  • 11.70 ಕೋಟಿ ಮಕ್ಕಳು ಫಲಾನುಭವಿಗಳು.
  • 10.24 ಲಕ್ಷ ಶಾಲೆಗಳಲ್ಲಿ ಯೋಜನೆ.
  • 11.54 ರೂ ಅಂಗನವಾಡಿ ಮಕ್ಕಳ ಒಂದು ಹೊತ್ತಿನ ಊಟಕ್ಕೆ ವೆಚ್ಚ.
  • 16.74 ರೂ. ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಊಟಕ್ಕೆ ವೆಚ್ಚ.
  • 9000 ಕೋಟಿ ರೂ. ಬಿಸಿಯೂಟಕ್ಕೆ ಖರ್ಚಾಗುವ ಆಹಾರ ಧಾನ್ಯದ ವೆಚ್ಚ.

ಆಹಾರ ಧಾನ್ಯಗಳ ಪೂರೈಕೆ.

ಊಟ ತಯಾರಿಕೆಗೆ ಬೇಕಾಗುವ ವೆಚ್ಚವನ್ನು ನೀಡುವ ಜತೆಗೆ, ಕೇಂದ್ರ ಸರ್ಕಾರವು ಈ ಯೋಜನೆಗೆ 26 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಪೂರೈಸುತ್ತದೆ. ವಿವಿಧ ಸಬ್ಸಿಡಿ ಸೇರಿದಂತೆ ಇದರ ಸಂಪೂರ್ಣ ವೆಚ್ಚವನ್ನು ಕೇಂದ್ರವೇ ಭರಿಸುತ್ತದೆ. ಇದರ ವೆಚ್ಚವೇ ಅಂದಾಜು 9,000 ಕೋಟಿ ರೂ. ಆಗಿದ್ದು ಭಾರತೀಯ ಆಹಾರ ನಿಗಮದಿಂದ ಶಾಲೆವರೆಗೆ ಸಾಗಿಸಲು ತಗಲುವ ವೆಚ್ಚವನ್ನು ಕೂಡ ಕೇಂದ್ರವೇ ಭರಿಸುತ್ತದೆ. ಆಹಾರ ಧಾನ್ಯಗಳ ವೆಚ್ಚವು ಸೇರಿ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲಾ ಮಕ್ಕಳ ಒಂದು ಹೊತ್ತಿನ ಊಟಕ್ಕೆ 11.54 ರೂ.ಗಳಾದರೆ, ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಊಟಕ್ಕೆ 16.74 ರೂ. ವೆಚ್ಚ ಮಾಡಿದಂತಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಾಜ್ಯದಲ್ಲಿ 10ನೇ ತರಗತಿಗೂ ವಿಸ್ತರಣೆ:

ಕೇಂದ್ರ ಸರ್ಕಾರವು 1ರಿಂದ 8ನೇ ತರಗತಿ ಮಕ್ಕಳಿಗೆ ಮಾತ್ರವೇ ಈ ಯೋಜನೆಯನ್ನು ಜಾರಿಗೊಳಿಸಿದ್ದು, ರಾಜ್ಯ ಸರ್ಕಾರವು ಇದನ್ನು 10ನೇ ತರಗತಿ ಮಕ್ಕಳಿಗೂ ವಿಸ್ತರಣೆ ಮಾಡಿದೆ. ರಾಜ್ಯದಲ್ಲಿ 48,465 ಸರ್ಕಾರಿ ಶಾಲೆಗಳು, 6,842 ಅನುದಾನಿತ ಸೇರಿ ಒಟ್ಟು 55,307 ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಯಲ್ಲಿದೆ.

ಇದನ್ನೂ ನೋಡಿ..UPSC: Civil Services (Main) Examination, 2024 Released.

ಒಟ್ಟು 55 ಲಕ್ಷಕ್ಕೂ ಅಧಿಕ ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

2 thoughts on “Mid-day meal Scheme: ಶಾಲಾ ಮಕ್ಕಳ ಮಧ್ಯಾಹ್ನ ಬಿಸಿಯೂಟಕ್ಕೆ ಬಲ, PM ಪೋಷಣ್ ದರ ಪರಿಷ್ಕರಣೆ-2024”

Leave a Comment