PE Teacher: ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಿ ಮುಖ್ಯ ಶಿಕ್ಷಕರಾಗಿ ಮುಂಬಡ್ತಿ ನೀಡುವ ಬಗ್ಗೆ.
PE Teacher:
ಪ್ರಶ್ನೆ: ಅ )ಪ್ರೋ. ಎಲ್. ಆರ್. ವೈದ್ಯನಾಥನ್ . ವರದಿಯನ್ನು ಸರ್ಕಾರ ಒಪ್ಪಿ ಕ್ಯಾಬಿನೆಟ್ ಅನುಮೋದನೆ నిద్రి ಗೆಜೆಟ್‌ನಲ್ಲಿ ಪ್ರಕಟಿಸಿದ್ದರೂ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಿ ಮುಖ್ಯ ಶಿಕ್ಷಕರಾಗಿ ನೀಡುವ ಪ್ರಕ್ರಿಯೆ ಸುಮಾರು 17 ವರ್ಷಗಳಿಂದ ವಿಳಂಬವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?
ಆ) ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರು (ದೈಹಿಕ ಶಿಕ್ಷಣ) ಎಂದು ಇಲಾಖೆ ಪರಿಗಣಿಸಿದರು ಇಲ್ಲಿಯ ತನಕ ಮುಖ್ಯ ಶಿಕ್ಷಕರಾಗಿ ಮುಂಬಡಿ ನೀಡುವ ಅನುಷ್ಠಾನ ಆದೇಶ ಮಾಡದೆ ವಿಳಂಬ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ,
ಉತ್ತರ: ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳು ಬೇರೆ ಬೇರೆ ಆಗಿರುತ್ತದೆ.
ಶಾಲಾ ಶಿಕ್ಷಣ ಇಲಾಖೆಯ ಪ್ರಸ್ತುತ ಜಾರಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳಂತೆ ಗ್ರೂಪ್ ಬಿ ಮುಖ್ಯ ಶಿಕ್ಷಕರು /ಉಪಪ್ರಾಂಶುಪಾಲರು ವೃಂದದ ಹುದ್ದೆಗೆ ಬಡ್ತಿಗೆ, ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು ವೃಂದವು ಪೋಷಕ ವೃಂದವಾಗಿರುತ್ತದೆ. ಮುಖ್ಯ ಶಿಕ್ಷಕರ ವೃಂದಕ್ಕೆ ವೃಂದ ಮತ್ತು ನೇಮಕಾತಿ ನಿಯಮದಂತೆ ನಿಗದಿಪಡಿಸಿರುವ ವಿದ್ಯಾರ್ಹತೆ ಎಂದರ ಪದವಿ ಜೊತೆಗೆ ಶೈಕ್ಷಣಿಕ ಆಡಳಿತಕ್ಕೆ ಅಗತ್ಯ ಇರುವ B.ED ಪದವಿ ನಿಗದಿಪಡಿಸಲಾಗಿದೆ. ದೈಹಿಕ ಶಿಕ್ಷಣ ಶಿಕ್ಷಕರು B.ED ಪದವಿಯನ್ನು ಹೊಂದಿರುವುದಿಲ್ಲ
ಮುಖ್ಯ ಶಿಕ್ಷಕರು ಭೋದನೆಯಲ್ಲಿ ಪ್ರಾವೀಣ್ಯತೆ ಹಾಗೂ ಅನುಭವನ್ನು ಹೊಂದಿರುತ್ತಾರೆ. ಸಹ ಶಿಕ್ಷಕರ ಅನುಪಸ್ಥಿತಿಯಲ್ಲಿ ಸದರಿ ವಿಷಯ ಭೋದನೆಯನ್ನು ಮಾಡುತ್ತಾರೆ. ಆದರೆ ದೈಹಿಕ ಶಿಕ್ಷಕರಿಗೆ ವಿಷಯ ಭೋದನೆ ತರಬೇತಿ ಆಗಿಲ್ಲದ ಇರುವುದರಿಂದ ಸಹ ಶಿಕ್ಷಕರ ಅನುಪಸ್ಥಿತಿಯಲ್ಲಿ ವಿಷಯ ಭೋದನೆಯನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ.
ಮುಖ್ಯ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು /ಹಿರಿಯ ಉಪನ್ಯಾಸಕರು / ನಿರ್ದೇಶಕರು ಮಧ್ಯಾಹ್ನ ಯೋಜನೆ ಹಾಗೂ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಹುದ್ದೆಗಳಿಗೆ ಭರ್ತಿ ಹೊಂದಲು ಅವಕಾಶವಿರುತ್ತದೆ. ಈ ಎಲ್ಲ ಹುದ್ದೆಗಳು ಶೈಕ್ಷಣಿಕವಾಗಿ ಶಾಲೆಗಳಲ್ಲಿ ವಿಷಯ ಭೋದನೆ ಅನುಭವನ್ನು ಹಾಗೂ ಶೈಕ್ಷಣಿಕ ಮಾರ್ಗದರ್ಶನ ನೀಡುವ ಅನುಭವನ್ನು ಅಪೇಕ್ಷಿಸುತ್ತದೆ. ಆದರೆ ದೈಹಿಕ ಶಿಕ್ಷಣ ಶಿಕ್ಷಕರಿಗೆ ವಿಷಯ ಭೋದನೆಯ ತರಬೇತಿ ಇರುವುದಿಲ್ಲ, ಬದಲಾಗಿ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಾತ್ರ ತರಬೇತಿಯನ್ನು ಪಡೆದಿರುತ್ತಾರೆ.
ದೈಹಿಕ ಶಿಕ್ಷಕರ ಜೇಷ್ಠತಾ ಪಟ್ಟಿಯನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತಿದ್ದು, ಇವರ ಪ್ರಾವೀಣ್ಯತ ಹಾಗೂ ಅನುಭವ ಆಧಾರದ ಮೇಲೆ ತಾಲ್ಲೂಕು ದೈಹಿಕ ಶಿಕ್ಷಣ ಪರಿವಿಕ್ಷಕರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ, ಸಹಾಯಕ ನಿರ್ದೇಶಕರು, (ದೈಹಿಕ ಶಿಕ್ಷಣ),ಸಹ ನಿರ್ದೇಶಕರು (ದೈಹಿಕ ಶಿಕ್ಷಣ) ಹುದ್ದೆಗಳಿಗೆ ಮುಂಬಡಿಗ ಅವಕಾಶ ಕಲ್ಪಿಸಲಾಗಿದೆ.
ಮೇಲಿನ ಅಂಶಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಮುಖ್ಯ ಶಿಕ್ಷಕ ಹುದ್ದೆಗೆ ಮುಂಬಡ್ತಿ ನೀಡಲು ಸಾಧ್ಯವಿರುವುದಿಲ್ಲ
ಪ್ರಶ್ನೆ : ದೈಹಿಕ ಶಿಕ್ಷಣ ಶಿಕ್ಷಕರನ್ನು ಮುಖ್ಯ ಶಿಕ್ಷಕರಾಗಿ ಮುಂಬಡ್ತಿ ನೀಡುವಂತೆ ಅನುಷ್ಠಾನ ಆದೇಶವನ್ನು ನಿಯಮಾನುಸಾರ ಅಗತ್ಯ للمرة ಕೈಗೊಳ್ಳುವಂತೆ ಸರ್ಕಾರದಿಂದ ವತ್ರದ ಮೂಲಕ ಇಲಾಖೆಗೆ ಸುಮಾರು 3 ಬಾರಿ ನಿರ್ದೇಶನ ನೀಡಿದರೂ ಅನುಷ್ಠಾನಗೊಳಿಸದ ವಿಳಂಬ ಧೋರಣೆ ಮಾಡುತ್ತಿರುವುದರ ಬಗ್ಗೆ ಸರ್ಕಾರ ಕೈಗೊಂಡ ಕ್ರಮವೇನು;
ಉತ್ತರ: ವೃಂದ ಮತ್ತು ನೇಮಕಾತಿ ನಿಯಮಗಳು ಮೇಲಿನಂತ ಇರುವುದರಿಂದ ಯಾವುದೇ ವಿಳಂಬ ಧೋರಣೆ ಅನುಸರಿಸಲಾಗಿಲ್ಲ.
ಪ್ರಶ್ನೆ: ಸದರಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇಲ್ಲಿಯ ತನಕ ನಡೆದ ಸಭೆಗಳು, ಸಭಾ ನಡಾವಳಿಗಳು ಮತ್ತು ಸೂಕ್ತ ಆದೇಶದೊಂದಿಗೆ ಪೂರ್ಣ ಮಾಹಿತಿ ನೀಡುವುದು ಹಾಗೂ ಯಾವ ಕಾಲಾವಧಿಯಲ್ಲಿ ಅನುಷ್ಠಾನ ಆದೇಶ ಮಾಡಲಾಗುವುದು?
ಉತ್ತರ: ಶೈಕ್ಷಣಿಕ ಆಡಳಿತದ ಹಿತದೃಷ್ಟಿಯಿಂದ ಪ್ರಸ್ತುತ ವಂದ ಮತ್ತು ನೇಮಕಾತಿ ನಿಯಮದಂತೆ ಪದವಿ ಹಾಗೂ ಶಿಕ್ಷಣದಲ್ಲಿ ಪದವಿ ವಿದ್ಯಾರ್ಹತೆ ಪೋಷಕ ವೃಂದ ಎಂಬುದಾಗಿ ಗುರುತಿಸಿರುವ ವೃಂದದಿಂದ ಮುಖ್ಯಶಿಕ್ಷಕರ ವೃಂದಕ್ಕೆ ಬಡ್ತಿಗಳನ್ನು ಪರಿಗಣಿಸಲಾಗುತ್ತಿದೆ.