PSI Exam Model essay-2026: ಭಾರತದ ಆಂತರಿಕ ಭದ್ರತೆಯ ಸವಾಲುಗಳು
PSI Exam Model essay-2026: ಒಂದು ದೇಶದ ಅಭಿವೃದ್ಧಿಗೆ, ದೇಶದ ಸಮೃದ್ಧಿಗೆ, ಶಾಂತಿಯುತ ವಾತಾವರಣವು ಅತಿ ಮುಖ್ಯ ಆದರೆ ಭಾರತದಂತಹ ವಿಶಾಲ ವಿಭಿನ್ನತೆಯ ದೇಶದಲ್ಲಿ ಅನೇಕ ರೀತಿಯ ವಿಭಜನೆಗಳು ನಿರಂತರವಾಗಿ ಆಂತರಿಕ ಅಶಾಂತಿಯನ್ನು ಸೃಷ್ಟಿಸುತ್ತಲೇ ಬಂದಿವೆ. ಹಿಂದೆ ಭಾರತ ಎದುರಿಸಿದಂತಹ, ಪ್ರಸ್ತುತದಲ್ಲಿಯೂ ಎದುರಿಸುತ್ತಿರುವಂತಹ ಪ್ರಮುಖ ಗಂಭೀರ ಸಮಸ್ಯೆಗಳಲ್ಲಿ ಆಂತರಿಕ ಭದ್ರತೆಯು ಒಂದಾಗಿದೆ. ಏಕೆಂದರೆ ‘ಹೊರಗಿನ ಶತ್ರುಗಳನ್ನು ಯುದ್ಧಮಾಡಿ ಗೆಲ್ಲಬಹುದು, ಆದರೆ ದೇಶದೊಳಗಿನ ಶತ್ರುಗಳನ್ನು ಗೆಲ್ಲುವುದು ಅಷ್ಟೊಂದು ಸುಲಭವಲ್ಲ’. ಇದಕ್ಕೆ ಕೆಲವೊಮ್ಮೆ ದಂಡೋಪಾಯವನ್ನು ಹಾಗೂ ಕೆಲವೊಮ್ಮೆ ಶಾಂತಿಯ ಮಂತ್ರವನ್ನು ಪಾಲಿಸಬೇಕಾಗುತ್ತದೆ. ಸ್ವಾತಂತ್ರ್ಯದಿಂದ ಹಿಡಿದು ಇಲ್ಲಿಯವರೆಗೂ ಭಾರತವನ್ನೂ ಕಾಡುತ್ತಿರುವ ಪ್ರಮುಖ ಆಂತರಿಕ ಸಮಸ್ಯೆಗಳನ್ನು ಹಾಗೂ ಅವುಗಳ ಪರಿಹಾರಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಈ ಪ್ರಬಂಧದಲ್ಲಿ ಚರ್ಚಿಸೋಣ.
ದೇಶ ಎದುರಿಸುತ್ತಿರುವ ಪ್ರಮುಖ ಆಂತರಿಕ ಸಮಸ್ಯೆಗಳು :
▪️ನಕ್ಸಲಿಸಂ :-
ನಕ್ಸಲಿಸಂ ಪ್ರಥಮ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಹುಟ್ಟಿಕೊಂಡಿತು. ಪ್ರಮುಖವಾಗಿ ಬುಡಕಟ್ಟು ಪ್ರದೇಶದಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಅಭಿವೃದ್ಧಿಯಲ್ಲಿನ ಅಸಮಾನತೆ, ಸ್ಥಳೀಯ ಜನರ ಶೋಷಣೆ, 1991ರ ನೀತಿಗಳು ನಕ್ಸಲಿಸಂ ಹುಟ್ಟಿ ಕೊಳ್ಳಲು ಪ್ರಮುಖ ಕಾರಣಗಳಾಗಿವೆ. ಆಂಧ್ರಪ್ರದೇಶ, ಛತ್ತೀಸಗಡ, ಕರ್ನಾಟಕ, ಮಹಾರಾಷ್ಟ್ರ, ಬಂಗಾಳ, ಮಧ್ಯಪ್ರದೇಶಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ. ನಕ್ಸಲರು ತಮ್ಮ ಉದ್ದೇಶ ಸಾಧನೆಗಾಗಿ ನಿರಂತರವಾಗಿ ಆಯುಧವನ್ನು ಹಿಡಿದು ರಕ್ತಪಾತ ಮಾಡುತ್ತಿದ್ದಾರೆ.
▪️ಮೂಲಭೂತವಾದ :-
ತಮ್ಮದೇ ಸಿದ್ದಾಂತಗಳು ಶ್ರೇಷ್ಠ ಇತರ ಎಲ್ಲ ಸಿದ್ದಾಂತಗಳು ಅಲ್ಪವಾದವು ಆದ್ದರಿಂದ ನಮ್ಮ ತತ್ವಗಳೇ ಎಲ್ಲಡೆ ಪ್ರಸಾರಗೊಳ್ಳಬೇಕು ಎಂಬ ಕಟ್ಟರ ವಾದವೇ ಮೂಲಭೂತವಾದಿತ್ವಕ್ಕೆ ಪ್ರಮುಖ ಕಾರಣವಾಗಿದೆ. ಇದಕ್ಕಾಗಿ ಜನರನ್ನು ಹತ್ಯೆಗೈಯು ವುದು, ಅವರ ಮೇಲೆ ದಬ್ಬಾಳಿಕೆ ನಡೆಸುವುದು, ಸರ್ವೇಸಾಮಾನ್ಯವಾಗಿದೆ. ಮೂಲಭೂತವಾದಿತ್ವ ದೇಶದ ಐಕ್ಯತೆಗೆ, ಶಾಂತಿಗೆ, ಭದ್ರತೆಗೆ ಬಹುದೊಡ್ಡ ಅಡ್ಡಿಯಾಗಿದೆ.
▪️ಭಯೋತ್ಪಾದನೆ :-
ನಿರ್ದಿಷ್ಟ ಉದ್ದೇಶ ಸಾಧನೆಗಾಗಿ ಜನರಲ್ಲಿ ಭಯ ಹುಟ್ಟಿಸುವುದು ಭಯೋತ್ಪಾದನೆ ಯಾಗಿದೆ. ಭಾರತದಲ್ಲಿ ಬಹುತೇಕ ಎಲ್ಲ ರಾಜ್ಯಗಳು ಇದರಿಂದ ನಿರಂತರವಾಗಿ ನಷ್ಟವನ್ನು ಅನುಭವಿಸಿವೆ. ಸಮಾಜದ ಅಂತಃಶಕ್ತಿಯನ್ನು ಕೆಡೆಸುವ ಹಾಗೂ ಐಕ್ಯತೆಯನ್ನು ಒಡೆಯುವ ಅತಿ ದೊಡ್ಡ ಮಾರ್ಗ ವೆಂದರೆ ಭಯೋತ್ಪಾದನೆಯಾಗಿದೆ. ಅದರಲ್ಲಿಯೂ ಧಾರ್ಮಿಕ ಭಯೋತ್ಪಾದನೆಯು ಇಂದು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವಲ್ಲಿ ನಿರತವಾಗಿದೆ. ಭಯೋತ್ಪಾದನೆ ಕೂಡ ದೇಶದ ಆಂತರಿಕ ಭದ್ರತೆಗೆ ಅತಿದೊಡ್ಡ ಸವಾಲಾಗಿದೆ.
▪️ಒಳ ನುಸುಳುವಿಕೆ :-
ಭಾರತ ಒಂದು ಅಭಿವೃದ್ಧಿಶೀಲ ರಾಷ್ಟ್ರ. ಇಲ್ಲಿನ ಜನಸಂಖ್ಯೆಯೂ ಈಗಾಗಲೇ 130 ಕೋಟಿಯನ್ನು ದಾಟಿದೆ. ಇಂತಹ ಸನ್ನಿವೇಶದಲ್ಲಿ ನಿರಂತರವಾಗಿ ಭಾರತಕ್ಕೆ ಬೇರೊಂದು ರಾಷ್ಟ್ರದ ಜನರೂ ಒಳನುಸುಳಿ ಬರುತ್ತಿದ್ದಾರೆ. ಈ ಒಳನುಸುಳು ವಿಕೆಯು ಕೆಲವೊಮ್ಮೆ ನಮ್ಮ ರಾಜ್ಯದ ಮೂಲ ಜನ ಸಂಖ್ಯೆಯನ್ನೇ ಅಲ್ಪಸಂಖ್ಯಾತರನ್ನಾಗಿ ಮಾಡುತ್ತಿದೆ.
ಇದಕ್ಕೆ ಉದಾಹರಣೆಯೆಂದರೆ ಅಸ್ಸಾಂ ರಾಜ್ಯ. ಒಳ ನುಸುಳುವಿಕೆಯಿಂದಾಗಿಯೇ ಇಂದು ಅಸ್ಸಾಂನಲ್ಲಿ ಅತೀವವಾದ ಅಶಾಂತಿ ಸಂಘರ್ಷ ಉಂಟಾಗುತ್ತಿದೆ.
▪️ಕಾಶ್ಮೀರ ಸಮಸ್ಯೆ :-
ದೇಶದ ಆಂತರಿಕ ಸಮಸ್ಯೆಗಳಲ್ಲಿ ಕಾಶ್ಮೀರದ್ದೇ ಅತಿ ದೊಡ್ಡ ಸಮಸ್ಯೆ. ಈ ಸಮಸ್ಯೆಯು ಸ್ವಾತಂತ್ರ್ಯಾ ನಂತರದಲ್ಲಿ ಭಾರತವನ್ನು ಅತೀವವಾಗಿ ಕಾಡುತ್ತಿದೆ. ನಮ್ಮ ರಾಜಕೀಯ ವ್ಯವಸ್ಥೆಯ ಜಡತೆ ಯಿಂದಾಗಿ ಈ ಸಮಸ್ಯೆಯು ಮತ್ತಷ್ಟು ಜಟೀಲ ಗೊಂಡಿದೆ. ರಕ್ತಪಾತ, ಸಂಘರ್ಷ, ಆಸ್ತಿನಾಶ, ಸೈನಿಕರ ಸಾವು ಇತ್ಯಾದಿಗಳೆಲ್ಲವೂ ಕಾಶ್ಮೀರದಲ್ಲಿನ ದಿನನಿತ್ಯದ ಘಟನೆಗಳಾಗಿವೆ. ಕಾಶ್ಮೀರಕ್ಕಾಗಿ ಕೇಂದ್ರ ಸರ್ಕಾರ ಮಾಡಿದ ವೆಚ್ಚಕ್ಕೆ ಲೆಕ್ಕವಿಲ್ಲವಾಗಿದೆ. ಆದಾಗ್ಯೂ ಕೂಡ ಅಲ್ಲಿ ಶಾಶ್ವತ ಶಾಂತಿಯೆಂಬುದು ಕಂಡು ಬಂದಿಲ್ಲ.
▪️ಸೈಬರ್ ಅಪರಾಧ ಮತ್ತು ದತ್ತಾಂಶ ಕಳ್ಳತನ :
ಡಿಜಿಟಲ್ ಜಗತ್ತಿನ ಇನ್ನೊಂದು ಪ್ರಮುಖ ಕೊಡುಗೆಯೆ ಈ ಸೈಬರ್ ಕ್ರೈಂ ಮತ್ತು ದತ್ತಾಂಶ ಕಳ್ಳತನ. ಒಂದು ಸಮಾಜದ ಅಂತಃಶಕ್ತಿಯನ್ನು ಇದು ಹಾಳುಗೆಡುವುವಷ್ಟು ಸೈಬರ್ ಅಪರಾಧ ಬೆಳೆಯುತ್ತಿದೆ. ಕೇವಲ ಒಂದು ಫೇಸ್‌ಬುಕ್ ಮೆಸೆಜ್‌ನಿಂದಾಗಿ ಇಡೀ ಜಿಲ್ಲೆಯೇ ಹೊತ್ತಿ ಉರಿಯುವಂತಹ ಮಟ್ಟಕ್ಕೆ ಇಂದು ತಲುಪಿದೆ ಎಂದರೆ ಅದರ ಪರಿಣಾಮವನ್ನು ಊಹಿಸ ಬಹುದು. ದೇಶದ ಜನರ ಅತ್ಯಮೂಲ್ಯ ಮಾಹಿತಿ ಯನ್ನು ಕದಿಯುವುದು, ಅದನ್ನು ಶಾಂತಿ ಕದಡಲು ಹಾಗೂ ದೇಶದ ಐಕ್ಯತೆ ಹಾಳುಮಾಡಲು ಬಳಸು ವುದು ಈ ಎಲ್ಲವೂ ಕೂಡ ಇಂದು ಭಾರತದಲ್ಲಿ ಕಂಡುಬರುತ್ತಿವೆ. ಇವೆಲ್ಲವೂ ಕೂಡ ಒಂದು ರೀತಿಯಲ್ಲಿ ದೇಶದ ಸಮಗ್ರತೆ ಮತ್ತು ಭದ್ರತೆಗೆ ಅಡ್ಡಿಯಾಗಿವೆ.
▪️ಜಾತಿವಾದ :-
ಆಧುನಿಕ ಭಾರತದಲ್ಲಿ ಶಿಕ್ಷಣ ಬೆಳೆದಂತೆ ಜಾತಿ ವ್ಯವಸ್ಥೆ ಕಡಿಮೆ ಆಗುವ ಬದಲಾಗಿ ಅದು ಮತ್ತಷ್ಟು ಬಲಿಷ್ಠವಾಗಿ ಬೆಳೆಯುತ್ತಿದೆ. ಕೆಲವೊಮ್ಮೆ ಇದು ತೀವ್ರವಾದ ಸಂಘರ್ಷಕ್ಕೆ ಕಾರಣವಾಗಿ ದೇಶದ ಶಾಂತಿಗೆ ಭಂಗ ತರುವಷ್ಟು ಬೆಳೆದು ನಿಂತಿದೆ. ಇತ್ತೀಚಿನ ರಾಜಸ್ತಾನದ ಜಾಟ್ ಸಮುದಾಯದ ಹೋರಾಟ ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆ ಎಂದು ಹೇಳಬಹುದು.
▪️ಭಾಷಾವಾದ :-
ಭಾಷಾವಾದವೂ ಸ್ವಾತಂತ್ರ್ಯಾ ನಂತರದಲ್ಲಿ ಹುಟ್ಟಿಕೊಂಡಿತ್ತು. ಅದರಲ್ಲಿಯೂ ಮುಖ್ಯವಾಗಿ ದೇಶದಲ್ಲಿ ಭಾಷಾವಾರು ರಾಜ್ಯಗಳ ರಚನೆಗೆ ಅವಕಾಶ ಕೊಟ್ಟ ನಂತರದಲ್ಲಿ ಈ ಸಮಸ್ಯೆ ಮತ್ತಷ್ಟು ತೀವ್ರ ಗೊಂಡಿತ್ತು. ರಾಜ್ಯ-ರಾಜ್ಯಗಳ ಮಧ್ಯ, ರಾಜ್ಯ-ಕೇಂದ್ರದ ಮಧ್ಯ ಸಂಘರ್ಷಕ್ಕೆ ಎಡೆ ಮಾಡಿಕೊಡು ವಷ್ಟು ಈ ಭಾಷಾವಾದವೂ ಬೆಳೆದು ನಿಂತಿದೆ. ಕೆಲವೊಮ್ಮೆ ಇದು ಭಾಷಾ ಆಧಾರದ ಮೇಲೆಯೇ ಪ್ರತ್ಯೇಕ ದೇಶ ಬೇಕು ಎನ್ನುವಷ್ಟು ಬೆಳೆದು ನಿಂತ ಉದಾಹರಣೆ ಕೂಡ ಕಂಡು ಬರುತ್ತವೆ.
▪️ಈಶಾನ್ಯ ರಾಜ್ಯಗಳ ಸಮಸ್ಯೆ :-
ಭಾರತ ಒಂದು ವಿಶಿಷ್ಟ ಹಾಗೂ ವಿಭಿನ್ನ ದೇಶ, ರಾಜ್ಯದಿಂದ ರಾಜ್ಯಕ್ಕೆ, ಪ್ರದೇಶ ದಿಂದ ಪ್ರದೇಶಕ್ಕೆ ಇಲ್ಲಿನ ಸಂಸ್ಕೃತಿ, ಜೀವನ ವಿಧಾನ ವಿಭಿನ್ನವಾಗಿದೆ. ಅದರಲ್ಲಿಯೂ ಮುಖ್ಯವಾಗಿ ಸಪ್ತ ಸೋದರಿಯರ ನೆಲೆಬೀಡಾದ ಈಶಾನ್ಯ ರಾಜ್ಯ ಗಳಂತೂ ಒಂದು ನಿಗೂಢ ಪ್ರದೇಶಗಳೇ ಸರಿ. ಅಲ್ಲಿನ ಸಂಸ್ಕೃತಿ ಹಾಗೂ ಆಚರಣೆಯಿಂದಾಗಿ ಅದು ಯಾವಾಗಲೂ ಒಂದು ರೀತಿಯಲ್ಲಿ ಭಾರತದಿಂದ ಸ್ವಲ್ಪ ಅಂತರ ಕಾಯ್ದುಕೊಂಡು ತನ್ನ ಪ್ರತ್ಯೇಕತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದು ಕೆಲವೊಮ್ಮೆ ಅತೀವ ಸಂಘರ್ಷಕ್ಕೆ ಎಡೆಮಾಡಿ ಕೊಟ್ಟಿದೆ. ನಾಗಾ ಸಮಸ್ಯೆ. ಅಸ್ಸಾಂ ಸಮಸ್ಯೆ, ಅರುಣಾಚಲ ಮತ್ತು ಮೀಜೊರಾಂ ಪ್ರದೇಶದಲ್ಲಿ ಪ್ರತ್ಯೇಕತೆಯ ಕೂಗು ನಿರಂತರವಾಗಿ ಕಂಡುಬರುತ್ತಿದೆ.
▪️ಪ್ರಾದೇಶಿಕವಾದ :-
ದೇಶಕ್ಕಿಂತ ನಮ್ಮ ರಾಜ್ಯವೇ ಶ್ರೇಷ್ಠ ಎಂಬ ಪ್ರತ್ಯೇಕತೆಯ ಕೂಗು ಕೆಲವೊಮ್ಮೆ ದೇಶದ ಎಲ್ಲ ಮೂಲಗಳಿಂದಲೂ ಕೇಳಿ ಬರುತ್ತದೆ. ಪ್ರತ್ಯೇಕ ದ್ರಾವಿಡ ನಾಡು, ಪ್ರತ್ಯೇಕ ಬೋಡೋಲ್ಯಾಂಡ್, ಗುರ್ಖಾನಾಡು ಎಂಬ ಪ್ರತ್ಯೇಕತೆಯ ಬೇಡಿಕೆಗಳು ಎಲ್ಲೆಡೆಯು ಸಾಮಾನ್ಯವಾಗಿವೆ.
ಆಂತರಿಕ ಭದ್ರತಾ ಸಮಸ್ಯೆಗಳು ಹುಟ್ಟಿಕೊಳ್ಳಲು ಪ್ರಮುಖ ಕಾರಣಗಳು :
▪️1947ರಲ್ಲಿ ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ನಂತರದಲ್ಲಿ ಕಾಶ್ಮೀರ ಸಮಸ್ಯೆ ಹುಟ್ಟಿಕೊಂಡಿತು. ಅದರಲ್ಲಿಯೂ ಈ ದೇಶದ ರಾಜಕೀಯ ನಾಯಕರ ಸ್ವಾರ್ಥ ವಯಕ್ತಿಕ ಆಸಕ್ತಿ ಹಾಗೂ ಧೃಡ ನಿರ್ಧಾರದ ಕೊರತೆಯಿಂದ ಕಾಶ್ಮೀರ ಸಮಸ್ಯೆ ಇಂದು ಅತ್ಯಂತ ತೀವ್ರವಾಗಿ ಕಾಡುತ್ತಿದೆ.
▪️1956ರಲ್ಲಿ ಭಾಷಾ ಆಧಾರದ ಮೇಲೆ ರಾಜ್ಯಗಳನ್ನು ವಿಭಜಿಸಿದ್ದರಿಂದ ಕೆಲವೊಂದು ಪ್ರದೇಶದಲ್ಲಿ ಭಾಷಾಭಿ ಮಾನ ಹೆಚ್ಚಾಗಿ ಬೆಳೆದು ಅದು ದೇಶಕ್ಕೆ ಮಾರಕ ಎನ್ನುವಷ್ಟು ಹಬ್ಬಿದೆ.
▪️1971ರಲ್ಲಿನ ಬಾಂಗ್ಲಾ ಯುದ್ಧದಿಂದಾಗಿ ಭಾರತಕ್ಕೆ ಕೋಟ್ಯಂತರ ಜನರು ವಲಸೆ ಬಂದರು. ಇದರಿಂದಾಗಿ ಭಾರತದಲ್ಲಿ ವಲಸಿಗರ ಸಮಸ್ಯೆಯೂ ತೀವ್ರವಾಗಿ ಕಾಡುತ್ತಿದೆ. ಈ ವಲಸಿಗರು ಕೆಲವೊಮ್ಮೆ ನಮ್ಮ ದೇಶ ದಲ್ಲಿದ್ದು ಕೂಡ ದೇಶದ ಅಸ್ತಿತ್ವಕ್ಕೆ ಗಂಡಾಂತರ ಒಡ್ಡುವ ಕೆಲಸಕ್ಕೆ ಕೈಹಾಕುತ್ತಿದ್ದಾರೆ.
▪️1984ರಲ್ಲಿ ನಡೆದ ಆಪರೇಶ್ನ್ ಬ್ಲೂ ಸ್ಟಾರ್ ಸಮಸ್ಯೆ ಯಿಂದಾಗಿ ಪಂಜಾಬ್‌ನಲ್ಲಿ ಪ್ರತ್ಯೇಕತಾವಾದ ಅತೀವ ವಾಗಿ ಬೆಳೆಯಿತು.
1991ರಲ್ಲಿ ಜಾರಿಗೆ ತಂದಂತಹ ‘ನೂತನ ಆರ್ಥಿಕ ನೀತಿ’ಯು ದೇಶದ ಬುಡಕಟ್ಟು ಜನರ ಹಾಗೂ ಹಿಂದುಳಿದ ಪ್ರದೇಶಗಳಲ್ಲಿನ ಭೂಮಿಯನ್ನು ವಶ ಪಡಿಸಿಕೊಳ್ಳಲು ಪರೋಕ್ಷವಾಗಿ ಅನುವೂ ಮಾಡಿ ಕೊಟ್ಟಿತು. ಇದರಿಂದ ಭಾರತದಲ್ಲಿ ನಕ್ಸಲವಾದ ಅತೀವ ವಾಗಿ ಬೆಳೆಯಿತು.
▪️ಪ್ರಾದೇಶಿಕ ಪಕ್ಷಗಳ ಸ್ವಾರ್ಥದಿಂದಾಗಿ ರಾಷ್ಟ್ರಕ್ಕಿಂತ ರಾಜ್ಯವೇ ಮುಖ್ಯ ಎನ್ನುವಷ್ಟರ ಮಟ್ಟಿಗಿನ ಮನೋಭಾವ ಜನರಲ್ಲಿ ಬೆಳೆದು ಬಂದದ್ದು ಪ್ರಾದೇಶಿಕತಾವಾದ ಬೆಳೆದು ಬರಲು ಪ್ರಮುಖ ಕಾರಣವಾಗಿದೆ.
▪️ಭಾರತ ಅಭಿವೃದ್ಧಿ ಹೊಂದುತ್ತಿರುವಂತೆ ಇಲ್ಲಿನ ಆಂತರಿಕ ಸ್ಥಿತಿಗತಿಯನ್ನು ಯನ್ನು ಹಾಳುಗೆಡವಲು ಕೆಲ ವೊಂದು ಬಾಹ್ಯ ರಾಷ್ಟ್ರಗಳು ಬಾಹ್ಯ ರಾಷ್ಟ್ರಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ಇದು ಕೂಡ ಅಂತರಿಕ ಭದ್ರತೆಗೆ ಧಕ್ಕೆ ತರುವಂತಹ ಸನ್ನಿವೇಶಗಳು ನಿರ್ಮಾಣವಾಗಲೂ ಕಾರಣವಾಗಿದೆ.
ಭಾರತವೂ ತನ್ನ ಸುತ್ತಲೂ ಕೆಲವೊಂದು ಅಪನಂಬಿಕೆಯ ಮಿತ್ರ ರಾಷ್ಟ್ರಗಳನ್ನು ಹೊಂದಿದೆ. ಅದರಲ್ಲಿಯೂ ಮುಖ್ಯವಾಗಿ ಚೀನಾ ಮತ್ತು ಪಾಕಿಸ್ತಾನ ಗಳು ಭಾರತದ ಆಂತರಿಕ ಸುರಕ್ಷತೆಗೆ ಧಕ್ಕೆ ತರುವಂತಹ ಚಟುವಟಿಕೆಗಳಿಗೆ ನಿರಂತರವಾಗಿ ಸಹಾಯ ಮತ್ತು ಸಹಕಾರ ನೀಡುತ್ತಿವೆ. ಕೆಲವೊಮ್ಮೆ ಇವೇ ರಾಷ್ಟ್ರಗಳು ಖುದ್ದಾಗಿ ಸಶಸ್ತ್ರ ಹೋರಾಟಕ್ಕೆ ಆಯುಧಗಳನ್ನು ನೀಡಿದ ಉದಾಹರಣೆಗಳು ಸಹ ಇವೆ.
▪️ಇಂಟರ್‌ನೆಟ್ ಬಳಕೆ ಹೆಚ್ಚಾದಂತೆ ಅದರೊಂದಿಗೆ ಸೈಬರ್ ಅಪರಾಧ ಮತ್ತು ದತ್ತಾಂಶ ಕಳ್ಳತನ ತೀವ್ರ ವಾಗಿ ಬೆಳೆಯುತ್ತಿದೆ.
▪️ಭಾರತದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಮ್ಯುನಿಷ್ಟ ನೇತೃತ್ವದಲ್ಲಿ ನಡೆಯುತ್ತಿರುವ ಚಳುವಳಿಯು ಪ್ರಮುಖ ರಾಜ್ಯಗಳಲ್ಲಿ ನೆಲೆಕಂಡುಕೊಂಡಿದೆ. ಕಮ್ಯುನಿಷ್ಟರು ನಿರಂತರವಾಗಿ ಸಶಸ್ತ್ರ ಹೋರಾಟದಲ್ಲಿ ತೊಡಗಿ ಕೊಂಡಿದ್ದಾರೆ. ಕಮ್ಯುನಿಸ್ಟ್ ಸಿದ್ಧಾಂತವು ಕೂಡ ದೇಶದ ಆಂತರಿಕ ಭದ್ರತೆಗೆ ಸವಾಲಾಗಿದೆ.
▪️ದೇಶದ ಬುಡಕಟ್ಟು ಪ್ರದೇಶದಲ್ಲಿ ನಡೆಯುತ್ತಿರುವ ದಬ್ಬಾಳಿಕೆಗಳು ಅಲ್ಲಿನ ಜನರಿಗೆ ಸಶಸ್ತ್ರ ಹೋರಾಟ ಕೈಗೊಳ್ಳುವಂತೆ ಮಾಡಿದೆ. ತಮ್ಮ ಸಂಸ್ಕೃತಿ, ಆಚಾರ ವನ್ನು ಉಳಿಸಿಕೊಳ್ಳಲು ಬುಡಕಟ್ಟು ಜನರು ಅನಿವಾರ್ಯ ವಾಗಿ ಸಶಾಸ್ತ್ರ ಹಿಡಿದು ಯುದ್ಧಕ್ಕೆ ನಿಂತಿದ್ದಾರೆ.
▪️ಭಾರತದಲ್ಲಿನ ದೋಷಪೂರಿತ ನ್ಯಾಯಾಂಗ ವ್ಯವಸ್ಥೆಯೂ ಕೂಡ ಕೆಲವೊಮ್ಮೆ ಪರೋಕ್ಷವಾಗಿ ಈ ಕ್ರಿಯೆಗಳಿಗೆ ಸಹಾಯ ಮಾಡುವಂತಿವೆ. ಪರಿಣಾಮ ಕಾರಿಯಾದ ಕಾನೂನು ಇಲ್ಲದಿರುವುದು ಹಾಗೂ ವಿಳಂಬ ನ್ಯಾಯವೂ ಕೂಡ ಪ್ರತ್ಯೇಕತಾವಾದಿಗಳಿಗೆ ವರದಾನವಾಗಿವೆ. ಇದರಿಂದ ದೇಶದ ಸುರಕ್ಷತೆಯು ಇಂದು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ.
ರಾಜಕೀಯ ಸಿದ್ಧಾಂತಗಳು, ಭಾರತದ ಶಿಕ್ಷಣ ವ್ಯವಸ್ಥೆಯ ವಿಫಲತೆ, ಅತಿ ಉದ್ದವಾದ ಗಡಿ ಪ್ರದೇಶಗಳು, ರಾಜ್ಯ ದಿಂದ ರಾಜ್ಯಕ್ಕೆ ಇರುವ ಅಸಮಾನತೆ, ಪ್ರಾದೇಶಿಕ ಹಿಂದುಳಿದಿರುವಿಕೆಯಂತಹ ಪ್ರಮುಖ ಕಾರಣಗಳು ದೇಶದ ಆಂತರಿಕ ಭದ್ರತೆಯ ಸಮಸ್ಯೆಗಳಿಗೆ ಕಾರಣ ಗಳಾಗಿವೆ. ಅದರಲ್ಲಿಯೂ ಮುಖ್ಯವಾಗಿ ಈ ಪ್ರಾದೇಶಿಕ ಅಸಮಾನತೆಯು ಇಂದು ದೇಶವನ್ನು ವಿಭಜನೆಯ ಹಂತಕ್ಕೆ ‘ ತೆಗೆದುಕೊಂಡು ಹೋಗುವಷ್ಟು ಮುಂದು ವರಿದಿದೆ. ರಾಜ್ಯದಿಂದ ರಾಜ್ಯಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ ಇರುವ ಅಸಮಾನತೆಯು ದೇಶದಲ್ಲಿ ಅಶಾಂತಿ ಹೆಚ್ಚಾಗಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಪರಿಹಾರ ಮಾರ್ಗಗಳು :
ರಾಜಕೀಯ ಮಾರ್ಗ :
ದೇಶದ ಕೆಲವೊಂದು ಪ್ರದೇಶ ಗಳಲ್ಲಿನ ಸಂಘರ್ಷವನ್ನು ರಾಜಕೀಯ ಮಾರ್ಗದ ಮೂಲಕ ನಿವಾರಿಸಬಹುದಾಗಿದೆ. ಉದಾ: ಈಶಾನ್ಯ ರಾಜ್ಯಗಳಲ್ಲಿನ ಪ್ರತ್ಯೇಕತೆಯ ಹೋರಾಟ. ಅಲ್ಲಿನ ಮುಖಂಡರೊಂದಿಗೆ ಕೇಂದ್ರ ಸರ್ಕಾರ ಚರ್ಚಿಸಿ. ಭಾರತದ ಸಂವಿಧಾನದ ಚೌಕ್ಕಟ್ಟಿನೊಳಗೆ ಏನು ಸಾಧ್ಯವೋ ಆ ಎಲ್ಲ ಸೌಲಭ್ಯಗಳನ್ನು ಅವುಗಳಿಗೆ ಒದಗಿಸಿಕೊಡುವುದು ಉತ್ತಮ. ಒಂದು ವೇಳೆ ಅಲ್ಲಿ ಪ್ರತ್ಯೇಕ ರಾಜ್ಯ ರಚನೆ ಆಗಿ ಶಾಂತಿ ನೆಲೆಸುವಂತಿದ್ದರೆ ಅದರಿಂದ ಹೆಚ್ಚಿನ ನಷ್ಟವೇನು ಆಗುವುದಿಲ್ಲ. ಇದಕ್ಕಾಗಿ
ರಾಜಕೀಯ ಇಚ್ಛಾಶಕ್ತಿ ಮುಖ್ಯ.
ಸಮಾನತೆ ಒದಗಿಸುವುದು :
ದೇಶದಲ್ಲಿನ ಪ್ರಾದೇಶಿಕ ಅಸಮಾನತೆ ನಿವಾರಿಸುವ ಕೆಲಸವಾಗಬೇಕು. ಏಕೆಂದರೆ “ಅಸಮಾನತೆಯು ಅವಕಾಶಗಳನ್ನು ನಿರಾಕರಿ ಸುತ್ತದೆ, ಅವಕಾಶಗಳ ನಿರಾಕರಣೆಯು ಹೋರಾಟದ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ”. ಇದರಿಂದ ಜನರಲ್ಲಿ ಒಂದು ರೀತಿಯ ಹತಾಶೆಯ ಮನೋಭಾವ ಬೆಳೆಯುತ್ತದೆ. ಇದು ಮುಂದೆ ಹೋರಾಟಕ್ಕೆ ಅವಕಾಶ ಮಾಡಿಕೊಡುತ್ತದೆ.ಆದ್ದರಿಂದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಎಲ್ಲ ಪ್ರದೇಶಗಳ ಸಮಗ್ರ ಅಭಿವೃದ್ಧಿ ಆಗಬೇಕು.
▪️ಭದ್ರತಾ ವ್ಯವಸ್ಥೆಯ ಸುಧಾರಣೆ :
ದೇಶದ ಆಂತರಿಕ ಸುರಕ್ಷತೆ ಜವಾಬ್ದಾರಿ ಹೊತ್ತಿರುವ ಪೊಲೀಸರಿಗೆ ಹಾಗೂ ಅರೆಪಡೆ ಸೈನಿಕರಿಗೆ ಸೂಕ್ತವಾದ ತರಬೇತಿ ಬಂದಾಗ ಈ ಅಂತರಿಕ ಅಶಾಂತ ಉಂಟು ಮಾಡುವ ಸಮಸ್ಯೆಗಳಿಗೆ ಸ್ವಲ್ಪ ಮಟ್ಟಿಗಾದರೂ ಪರಿಹಾರದೊರೆಯುತ್ತದೆ.
▪️ಸೈಬರ್ ಸಾಕ್ಷರತೆ :
ಪರಿಣಾಮಕಾರಿಯಾದ ಸೈಬರ್ ಸುರಕ್ಷತಾ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಈಗಿರುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಬೇಕು. ಜೊತೆಗೆ ಸೈಬರ್ ಸಾಕ್ಷರತೆಯನ್ನು ದೇಶಾದ್ಯಂತ ಹೆಚ್ಚಿಸಬೇಕು.
▪️ಗಡಿ ನಿರ್ವಹಣೆ :
ಪರಿಣಾಮಕಾರಿಯಾದ ಗಡಿ ನಿರ್ವಹಣಾ ವ್ಯವಸ್ಥೆ ಜಾರಿಗೆ ಬರಬೇಕು. ಕಾನೂನು ಬಾಹಿರವಾಗಿರುವ ಒಳನುಸುಳುವಿಕೆಯನ್ನು ತಡೆದು ಅವರಿಗೆ ಶಿಕ್ಷೆ ವಿಧಿಸಬೇಕು. ಎನ್‌ಆರ್‌ಸಿಯಂತಹ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಕಾನೂನು ಬಾಹಿರವಾಗಿ ನೆಲೆಸಿರುವ ವಿದೇಶಿಯರನ್ನು ವಾಪಸ್ ಕಳುಹಿಸಬೇಕು.
▪️ಮಾತುಕತೆ :
ದೇಶದ ಆಂತರಿಕ ವ್ಯವಸ್ಥೆಯನ್ನು ಸರಿ ಪಡಿಸಲು ಸಶಸ್ತ್ರ ಹೋರಾಟ ಕೈಗೊಳ್ಳುವುದು ಹಾಗೂ ಅದನ್ನು ಹಿಂಸೆಯ ಮೂಲಕ ಸರಿಪಡಿಸುವುದು ಸಾಧ್ಯವಿಲ್ಲ. ಇದಕ್ಕೆ ಬದಲಾಗಿ ಮಾತುಕತೆಯನ್ನು ಪರ್ಯಾಯವಾಗಿ ಬಳಸಬೇಕು. ಮಾತುಕತೆಯ ಮೂಲಕ ಎಂತಹ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ. ಸಂವಿಧಾನಿಕ ಚೌಕಟ್ಟಿನಲ್ಲಿ ಸಾಧ್ಯ ವಾದ ಎಲ್ಲ ಕಾರ್ಯಗಳನ್ನು ಕೈಗೊಳ್ಳಬೇಕು. ಇದರಿಂದ ಶಾಶ್ವತವಾದ ಪರಿಹಾರ ದೊರೆಯುತ್ತದೆ. ಕೆಲವೊಂದು ನಿರ್ದಿಷ್ಟ ಸಮಸ್ಯೆಗಳಿಗೆ ಮಾತುಕತೆಯೂ ಪರಿಣಾಮಕಾರಿಯಾದ ಪರಿಹಾರವನ್ನು ಒದಗಿಸುತ್ತದೆ. ಸಂವಿಧಾನಿಕ ಮಾರ್ಗ : ರಾಜಕೀಯ ನಾಯಕರು ತಮ್ಮ ಸ್ವಾರ್ಥ ಹಿತಾಸಕ್ತಿಗಳನ್ನು ಬದಿಗಿಟ್ಟು ದೇಶದ ಅಖಂಡತೆಯ ದೃಷ್ಟಿಯಿಂದ ಉತ್ತಮ ನಿರ್ಣಯ ಕೈಗೊಳ್ಳಬೇಕು. ಯಾರು ದೇಶಕ್ಕಾಗಿ ಯೋಚಿಸು ವರೋ ಅವರನ್ನು ದೇಶ ಆದರಿಸುತ್ತದೆ. ಆದ್ದರಿಂದ ಕೊರತೆಗಳು ಏನೇ ಇರಲಿ ಅವುಗಳಿಗೆ ಹಿಂಸೆಯ ಮೂಲಕ ಉತ್ತರ ಪಡೆಯಬಾರದು. ಶಾಂತಿ, ಅಹಿಂಸೆ, ಸಂವಿಧಾನಿಕ ಮಾರ್ಗಗಳನ್ನು ಬಳಸಬೇಕು. ಇದರಿಂದ ಸಮಸ್ಯೆಗಳಿಗೆ ಪರಿಹಾರವೂ ದೊರೆಯುತ್ತದೆ ಹಾಗೆ ದೇಶವೂ ಸಹ ಶಾಂತಿಯಿಂದ ಇರುತ್ತದೆ.
▪️ಪ್ರತ್ಯೇಕ ಕಾನೂನು :
ಮೂಲಭೂತವಾದಿತನ ಹಾಗೂ ಕಮ್ಯುನಿಸಂ ಹರಡುವವರ ವಿರುದ್ಧ, ದೇಶದ ಐಕ್ಯತೆಗೆ ಅಡ್ಡಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಬಲವಾದ ಕಾನೂನು ರೂಪಿಸಬೇಕು. ಈಗಿರುವ ಕಾನೂನು ಹಾಗೂ ನ್ಯಾಯಾದಾನ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕಾಗಿದೆ. ದೇಶದ ಆಂತರಿಕ ಸ್ಥಿತಿಯು ಉತ್ತಮವಾಗಿರಲು ಬಲವಾದ ಕಾನೂನು ಹಾಗೂ ಪರಿಣಾಮಕಾರಿಯಾದ ನ್ಯಾಯಾಂಗ ವ್ಯವಸ್ಥೆ ಇರಬೇಕಾದದ್ದು ಅತಿ ಅವಶ್ಯಕ.
▪️ತ್ರಿಭಾಷಾ ಸೂತ್ರ ಜಾರಿ :
ದೇಶದಲ್ಲಿನ ಎಲ್ಲ ಜನರನ್ನು ಸಮಾನವಾಗಿ ಕಾಣಬೇಕು. ಎಲ್ಲರಲ್ಲೂ ಒಂದೇ ಭಾವನೆ ಬರುವಂತಾಗಲು ದೇಶಾದ್ಯಂತ ತ್ರಿಭಾಷಾ ಸೂತ್ರವನ್ನು ಜಾರಿಗೆ ತರಬೇಕು. ಏಕೆಂದರೆ ಭಾಷೆ ಜನರನ್ನೂ ಬೆಸೆಯುತ್ತದೆ ಹಾಗೇ ಬೇರ್ಪಡಿಸುತ್ತದೆ. ಸ್ಥಳೀಯ ಭಾಷೆ ಇರಲಿ ಅದರೊಂದಿಗೆ ರಾಷ್ಟ್ರೀಯ ಭಾಷೆಗೂ ಪ್ರಮುಖ ಸ್ಥಾನ ಇರಲಿ. ಚಿಕ್ಕ ಮಕ್ಕಳಲ್ಲಿ ಐಕ್ಯತೆ ಮೂಡಿಸುವ ಶೈಕ್ಷಣಿಕ ಚಟುವಟಿಕೆಗೆ ಅವಕಾಶ ನೀಡಬೇಕು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲರೂ ಒಟ್ಟಾಗಿ ದೇಶದ ಐಕ್ಯತೆಗೆ ಹಾಗೂ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು. ಇಡೀ ದೇಶದ ಶಾಂತಿ ಸುವ್ಯವಸ್ಥೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂಬುದನ್ನು ಮರೆಯಬಾರದು.
ಭಾರತವೆಂದರೆ ಹಾಗೆ, ಅದೊಂದು ಹೊಸ ಪ್ರಪಂಚ. ವೈರುಧ್ಯದ ವೈಶಿಷ್ಟ್ಯವಾದ ಪ್ರಪಂಚ. ಪ್ರಪಂಚಕ್ಕೆ ಭಾರತವೆಂದರೆ ಅದೊಂದು ನಿಗೂಢ ಜಗತ್ತು. ಅಲ್ಲಿ ಏನು, ಹೇಗೆ, ಯಾವಾಗ ಘಟಿಸುವುದೋ ತಿಳಿಯುವುದಿಲ್ಲ. ಜಗತ್ತಿನ ಎಲ್ಲ ನಾಗರಿಕತೆಗಳು ತರಗೆಲೆಗಳಂತೆ ಉರುಳು ತ್ತಿದ್ದಾಗ ಭಾರತದ ನಾಗರಿಕತೆ ಉತ್ತುಂಗದಲ್ಲಿತ್ತು. ಇಡೀ ಪ್ರಪಂಚವೇ ಭಾರತದೊಳಗೆ ಬಂದರೂ ಕೂಡ ಅವೆಲ್ಲವನ್ನು ಭಾರತ ತನ್ನೊಳಗೆ ಒಂದಾಗಿಸಿ ಅರಗಿಸಿಕೊಂಡು ಅಲ್ಲಿಂದಲೇ ಶಕ್ತಿ ಪಡೆದು ಮತ್ತೆ ಮೈದೊಳೆದು ಬರುತ್ತದೆ. ಇದೇ ಭಾರತದ ವೈಶಿಷ್ಟ್ಯ! ಜಾತಿ, ಮತ, ಪಂಗಡ, ಹಿರಿದು, ಕಿರಿದು, ಲಿಂಗ-ಬಣ್ಣಗಳ ಬಂಧನವನ್ನು ದಾಟಿ ಎಲ್ಲರನ್ನು ತನ್ನೊಡಲೊಳಗೆ ಸಾಕಿ ಸಲುಹುತ್ತಿರುವ ಏಕೈಕ ರಾಷ್ಟ್ರವೆಂದರೆ ಅದು ಭಾರತ ಮಾತ್ರವೇ!!! ಇಂತಹ ರಾಷ್ಟ್ರದ ಐಕ್ಯತೆಯನ್ನು ಕಾಪಾಡಿಕೊಂಡು ಹೋಗುವುದು. ಶಾಂತಿಯ ತತ್ವವನ್ನು ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ. ಏಕೆಂದರೆ ಜಗತ್ತಿನಲ್ಲಿ ಭಾರತದಂತಹ ಶ್ರೇಷ್ಠ ರಾಷ್ಟ್ರ ಮತ್ತೊಂದಿಲ್ಲ. ಹಾಗಾಗಿ ಭಾರತದ ಶಾಂತಿ ಸುರಕ್ಷತೆಯ ರಕ್ಷಣೆ ಹಾಗೂ ಅದರ ಆಂತರಿಕ ಸವಾಲುಗಳನ್ನು ಎದುರಿಸಿ ನಿಲ್ಲಬೇಕಾದದ್ದು ಅವಶ್ಯಕ. ಇದಕ್ಕಾಗಿ ಭಾರತದ ಪ್ರತಿಯೊಬ್ಬ ಪ್ರಜೆಯು ಒಂದಾಗಿ ದೇಶ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಬೇಕು.

ಕೃಪೆ: ಅಂತರ್ಜಾಲ