Revised pay scale of retired state employees: ರಾಜ್ಯದ ನಿವೃತ್ತ ನೌಕರರ ಪರಿಷ್ಕೃತ ವೇತನ ಶ್ರೇಣಿಯ ಬಗ್ಗೆ-2025

Revised pay scale of retired state employees: ರಾಜ್ಯದ ನಿವೃತ್ತ ನೌಕರರ ಪರಿಷ್ಕೃತ ವೇತನ ಶ್ರೇಣಿಯ ಬಗ್ಗೆ.

Revised pay scale of retired state employees: ರಾಜ್ಯದ ನಿವೃತ್ತ ನೌಕರರ ಪರಿಷ್ಕೃತ ವೇತನ ಶ್ರೇಣಿಯ ಬಗ್ಗೆ.

ಪ್ರಶ್ನೆ: ಅ. ಸರ್ಕಾರವು 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಸರ್ಕಾರಿ ನೌಕರರಿಗೆ ಶ್ರೇಣಿಗಳನ್ನು ಪರಿಷ್ಕೃತ ವೇತನ ದಿನಾಂಕ:01.07.2022 ರಿಂದ ದಿನಾಂಕ:01.07.2022 ರಿಂದ ಜಾರಿಗೊಳಿಸಿ, ಆರ್ಥಿಕ ಸೌಲಭ್ಯವನ್ನು ದಿನಾಂಕ:01.08.2024 ರಿಂದ ಅನ್ವಯಿಸುವಂತೆ ಆದೇಶ ಹೊರಡಿಸಲಾಗಿದ್ದು,ದಿನಾಂಕ:01.07.2022 ರಿಂದ ದಿನಾಂಕ: 31.07.2024 ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ 7ನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿಯ ಸೌಲಭ್ಯಗಳಾದ ಡಿ.ಸಿ.ಆ‌ರ್.ಜಿ., ಕಮ್ಯುಟೇಶನ್ ಹಾಗೂ ಗಳಿಕೆ ರಜೆ ನಗದೀಕರಣಗಳನ್ನು ನೀಡದೆ ಹಳೆಯ ವೇತನ ಶ್ರೇಣಿಯಲ್ಲಿ ನೀಡಿರುವುದರಿಂದ “ವ್ಯತ್ಯಾಸದ ಮೊತ್ತವನ್ನು ನೀಡುವಂತೆ ನಿವೃತ್ತರಾದ ನೌಕರರ ವೇದಿಕೆ, ನಿವೃತ್ತ ನೌಕರರ ಸಂಘ ಮತ್ತು ಸರ್ಕಾರಿ ನೌಕರರ ಸಂಘದ ಮೂಲಕ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿರುವುದು ಹಾಗೂ ಹೋರಾಟ ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;

ಆ. ಈ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಹಳೆಯ 6ನೇ ವೇತನ ಆಯೋಗದ ವೇತನ ಶ್ರೇಣಿಯಲ್ಲಿ ಹಾಗೂ ದಿನಾಂಕ:01.08.2024 ರಿಂದ ನಿವೃತ್ತರಾದ ನೌಕರರಿಗೆ ಹೊಸ 7ನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ನಂತರದ ಸೌಲಭ್ಯಗಳಾದ ಉಪಲಬ್ದಗಳನ್ನು ನೀಡುತ್ತಿರುವುದರಿಂದ ನಿವೃತ್ತ ನೌಕರರಲ್ಲಿ ತಾರತಮ್ಯ ಮಾಡಿದಂತಾಗುವುದಿಲ್ಲವೆ;

ಇ.7ನೇ ವೇತನ ಆಯೋಗದಲ್ಲಿ 25 ತಿಂಗಳು ತಡವಾಗಿ ಸರ್ಕಾರವು ಆರ್ಥಿಕ ಸೌಲಭ್ಯ ರಿಂದ ದಿನಾಂಕ:31.07.20240 ಅವಧಿಯಲ್ಲಿ ನಿವೃತ್ತರಾದ ಸರ್ಕಾರಿ ನೌಕರರನ್ನು (ಪಿಂಚಣಿದಾರರು) ಆರ್ಥಿಕ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಿರುವುದು ಸರಿಯೇ;

ಉತ್ತರ: ಸರ್ಕಾರದ ಈ ನಿರ್ಧಾರವು ನೌಕರರಿಗೆ ಲಾಭದಾಯಕವಾಗಿರುತ್ತದೆ. ಮತ್ತು ಈ ಅವಧಿಯಲ್ಲಿನ ನಿವೃತ್ತ ನೌಕರರ ಮತ್ತು ದಿನಾಂಕ:01.08.2024ರ ನಂತರ ನಿವೃತ್ತರಾದ ನೌಕರರ ಪಿಂಚಣಿ ನಿಗದಿಯಲ್ಲಿ ಯಾವುದೇ ಅಸಮಾನತೆ ಉಂಟಾಗಿರುವುದಿಲ್ಲ.

ಈ. ದಿನಾಂಕ:01.07.2022 ರಿಂದ 31.07.2024 ರ ಅವಧಿಯಲ್ಲಿ ನಿವೃತ್ತರಾದ ನೌಕರರ ಸಂಖ್ಯೆ ಎಷ್ಟು, ಸದರಿ ನೌಕರರಿಗೆ 7ನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿಯಂತೆ DCRG ಕಮ್ಯುಟೇಶನ್ ಹಾಗೂ ಗಳಿಕೆ ರಜೆ ನಗದೀಕರಣದ “ವ್ಯತ್ಯಾಸದ ಮೊತ್ತ” ನೀಡಲು ಸರ್ಕಾರಕ್ಕೆ ಎಷ್ಟು ಮೊತ್ತ ಬೇಕಾಗಬಹುದು (ಎ, ಬಿ, ಸಿ, ಡಿ., ಗ್ರೂಪ್ ವಾರು ವಿವರಗಳನ್ನು ನೀಡುವುದು)

ಉತ್ತರ: 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರದ ರಾಜಸ್ಥ ನೀತಿಯನ್ನು ಗಮನದಲ್ಲಿರಿಸಿ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಪಿಂಚಣಿಗಳನ್ನು ದಿನಾಂಕ:01.07.2022 ರಿಂದ ಅನ್ವಯಿಸುವಂತೆ ಪರಿಷ್ಕರಿಸಿ ದಿನಾಂಕ: 01.08.2024 ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲಾಗಿರುತ್ತದೆ. ಇದು ಸರ್ಕಾರದ ನೀತಿ ನಿರ್ಣಯವಾಗಿರುತ್ತದೆ.

ಈ ಮೇಲಿನ ನಿರ್ಧಾರದಂತೆ ಅಂದರೆ, 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸುಗಳನ್ನು ದಿನಾಂಕ:01.08.2024 ರಿಂದ ಅನುಷ್ಠಾನಗೊಳಿಸಿರುವುದರಿಂದ, ದಿನಾಂಕ: 01.07.2022 ರಿಂದ ದಿನಾಂಕ:31.07.2024 ರ ಅವಧಿಯಲ್ಲಿನ ನಿವೃತ್ತರಾದ ನೌಕರರ ಪ್ರಕರಣಗಳಲ್ಲಿ ನೌಕರರ ನಿವೃತ್ತಿ ಸಮಯದಲ್ಲಿ, ನಿಯಮಾನುಸಾರ ಲಭ್ಯವಿರುವ DCRG, ಪರಿವರ್ತಿತ ಪಿಂಚಣಿ, ಗಳಿಕೆ ರಜೆ ನಗದೀಕರಣ ಸೌಲಭ್ಯಗಳನ್ನು, ಅವರು ಪಡೆಯುತ್ತಿರುವ 2018ರ ಪರಿಷ್ಕೃತ ವೇತನ ಶ್ರೇಣಿಯಲ್ಲಿನ ಮೂಲ ವೇತನವನ್ನು ಆಧಾರವಾಗಿರಿಸಿ ಪಾವತಿ ಮಾಡತಕ್ಕದ್ದಾಗಿರುತ್ತದೆ. ಆದಾಗ್ಯೂ, ದಿನಾಂಕ:01.07.2022 ರಿಂದ ದಿನಾಂಕ:31.07.20240 ಅವಧಿಯಲ್ಲಿ ನಿವೃತ್ತರಾದ ನೌಕರರ ಪ್ರಕರಣಗಳಲ್ಲಿ, ಅವರ ಪಿಂಚಣಿಯನ್ನು 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಕಾಲ್ಪನಿಕವಾಗಿ ನಿಗದಿಪಡಿಸಲಾದ ಮೂಲ ವೇತನವನ್ನು ಆಧಾರವಾಗಿರಿಸಿ ಹೆಚ್ಚಿನ ಪಿಂಚಣಿಯನ್ನು ದಿನಾಂಕ: 01.08.2024 ಪಾವತಿಸಲು ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ.


ದಿನಾಂಕ:01.07.2022 ರಿಂದ 31.07.2024 ರ ಅವಧಿಯಲ್ಲಿ ನಿವೃತ್ತರಾದ ನೌಕರರ ಸಂಖ್ಯೆ ಈ ಕೆಳಕಂಡಂತಿರುತ್ತದೆ.



ದಿನಾಂಕ:01.07.2022 ರಿಂದ 31.07.2024 ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ 7ನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿಯಂತೆ 2.4.5.2 ಕಮ್ಯುಟೇಶನ್ ಹಾಗೂ ಗಳಿಕೆ ರಜೆ ನಗಧೀಕರಣ ಸೌಲಭ್ಯಗಳನ್ನು ನೀಡಲು ಸರ್ಕಾರಕ್ಕೆ ತಗಲುವ ವ್ಯತ್ಯಾಸದ ಮೊತ್ತ ಈ ಕೆಳಕಂಡಂತಿರುತ್ತದೆ.



ಪ್ರಶ್ನೆ: ಈ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಸದರಿ ವ್ಯತ್ಯಾಸದ ಮೊತ್ತವನ್ನು ಯಾವ ಕಾಲಮಿತಿಯೊಳಗೆ ನೀಡಲಾಗುವುದು?


CLICK HERE TO DOWNLOAD

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

2 thoughts on “Revised pay scale of retired state employees: ರಾಜ್ಯದ ನಿವೃತ್ತ ನೌಕರರ ಪರಿಷ್ಕೃತ ವೇತನ ಶ್ರೇಣಿಯ ಬಗ್ಗೆ-2025”

Leave a Comment

You cannot copy content of this page

error: Content is protected !!