Sarvottam Seva Award-2024 ಮತ್ತು 2025: ಸರ್ವೋತ್ತಮ ಸೇವಾ ಪ್ರಶಸ್ತಿ ಅರ್ಜಿ ಆಹ್ವಾನ,ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ

Sarvottam Seva Award-2024 ಮತ್ತು 2025 ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

Sarvottam Seva Award-2024 ಮತ್ತು 2025

2024 ಮತ್ತು 2025ನೇ ಸಾಲಿನ 2 ವರ್ಷಗಳ ರಾಜ್ಯ ಹಾಗೂ ಜಿಲ್ಲಾ ಮಟ್ಟದ “ಸರ್ವೋತ್ತಮ ಸೇವಾ ಪ್ರಶಸ್ತಿ” ಪಡೆಯಲು ತಮ್ಮ ನಾಮನಿರ್ದೇಶನಗಳನ್ನು ದಿನಾಂಕ: 14-04-2025 ರೊಳಗಾಗಿ ಈ ಕೆಳಗಿನ ಲಿಂಕ್ ಬಳಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

 

2024 ಮತ್ತು 2025ನೇ ಸಾಲಿನ ರಾಜ್ಯ ಸರ್ಕಾರದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಉಲ್ಲೇಖಿತ ಸುತ್ತೋಲೆಯಲ್ಲಿ ನಾಮ ನಿರ್ದೇಶನಗಳನ್ನು ದಿನಾಂಕ: 28-04-2025 ರೊಳಗಾಗಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಮುಂದುವರೆದು, ಸದರಿ ಸುತ್ತೋಲೆಯನ್ನು ಭಾಗಶ: ಪರಿಷ್ಕರಿಸಲು ತೀರ್ಮಾನಿಸಿ ಈ ಕೆಳಕಂಡಂತೆ ಕ್ರಮವಹಿಸುವಂತೆ ತಿಳಿಸಲಾಗಿದೆ.

1. 2024ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಸಲು 2023ನೇ ಕ್ಯಾಲೆಂಡರ್ ವರ್ಷದಲ್ಲಿ ಮಾಡಿರುವ ಉಪ ಕ್ರಮ / ಸಾಧನೆಯನ್ನು ಪರಿಗಣಿಸಲಾಗುವುದು. ಹಾಗೆಯೇ, 2025ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಸಲು 2024ನೇ ಕ್ಯಾಲೆಂಡರ್ ವರ್ಷದಲ್ಲಿ ಮಾಡಿರುವ ಉಪ ಕ್ರಮ /ಸಾಧನೆಯನ್ನು ಪರಿಗಣಿಸಲಾಗುವುದು.

2. 2024 ಹಾಗೂ 2025ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆನ್‌ಲೈನ್‌ನಲ್ಲಿ ನಾಮ ನಿರ್ದೇಶನವನ್ನು ಸಲ್ಲಿಸಲು ದಿನಾಂಕ: 14-04-2025 ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದೆ. ನಂತರ ಯಾವುದೇ ಕಾರಣಕ್ಕೂ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ.

3. 2023ನೇ ಸಾಲಿನಲ್ಲಿ ಯಾವ ಜಿಲ್ಲೆಗಳು ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಲ್ಲವೋ ಅವರೂ ಸಹ ಪ್ರಕ್ರಿಯೆಯನ್ನು ದಿನಾಂಕ: 16-04-2025 ರೊಳಗೆ ಪೂರ್ಣಗೊಳಿಸುವುದು ಮತ್ತು ಆಯ್ಕೆ ಪೂರ್ಣಗೊಂಡ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವುದು.

4. 2024 ಹಾಗೂ 2025ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯ ಆಯ್ಕೆಯನ್ನು ಪೂರ್ಣಗೊಳಿಸಿ, ಪೂರ್ಣಗೊಂಡ ಎರಡು ವರ್ಷಗಳ ಆಯ್ಕೆ ಪಟ್ಟಿಯನ್ನು ದಿನಾಂಕ: 16-04-2025ರೊಳಗೆ ಸರ್ಕಾರಕ್ಕೆ ಸಲ್ಲಿಸುವುದು.

5. 2024 ಹಾಗೂ 2025ನೇ ಸಾಲಿನ ಎರಡು ವರ್ಷಗಳಿಗೆ ಪ್ರತಿ ವರ್ಷಕ್ಕೆ ತಲಾ ಇಬ್ಬರಂತೆ ಒಟ್ಟು 4 ಜನ ಅರ್ಹ ಅಧಿಕಾರಿ / ನೌಕರರನ್ನು ಸರ್ವೋತ್ತಮ ಸೇವಾ ಪ್ರಶಸ್ತಿಗೆ ಪರಿಗಣಿಸಲು ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ನಾಮ ನಿರ್ದೇಶನಗಳನ್ನು ಸೂಕ್ತ ಶಿಫಾರಸ್ಸಿನೊಂದಿಗೆ ದಿನಾಂಕ: 16-04-2025 ರೊಳಗೆ ಸರ್ಕಾರಕ್ಕೆ ವಿಳಂಬವಿಲ್ಲದೇ ನಿಗದಿತ ನಮೂನೆಯಲ್ಲಿ ಕಡ್ಡಾಯವಾಗಿ ಸಲ್ಲಿಸುವುದು.

6. ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲಾಖಾ ಹಂತ / ನಿರ್ದೇಶಕರ ಹಂತ ಮತ್ತು ಸಚಿವಾಲಯ ಹಂತದ ಅರ್ಹ ಅಧಿಕಾರಿ / ನೌಕರರು ಸಹ ಆನ್‌ಲೈನ್ ಮೂಲಕ ರಾಜ್ಯ ಮಟ್ಟದ ಪ್ರಶಸ್ತಿಗೆ ದಿನಾಂಕ:14-04-2025 ರೊಳಗೆ ನಾಮ ನಿರ್ದೇಶನಗಳನ್ನು ಸಲ್ಲಿಸಬಹುದು.

7. ಸರ್ವೋತ್ತಮ ಸೇವಾ ಪುಶಸ್ತಿಗೆ ನಾಮ ನಿರ್ದೇಶನವನ್ನು ಆನ್‌ಲೈನ್ ಮೂಲಕ ಸಲ್ಲಿಸುವ ಬಗ್ಗೆ ತಮ್ಮ ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳುವುದು.

8. ಮೇಲ್ಕಂಡ ಆಯ್ಕೆ ಪ್ರಕ್ರಿಯೆಯನ್ನು ಈ ಹಿಂದಿನ ಸುತ್ತೋಲೆಯಲ್ಲಿ ತಿಳಿಸಿರುವಂತೆ ಜಿಲ್ಲಾವಾರು ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಅನುಮೋದನೆಯೊಂದಿಗೆ ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ ಸುಧಾರಣೆ)ಗೆ ಸಲ್ಲಿಸುವುದು.

9. ಸರ್ಕಾರದ ಆದೇಶ ಸಂ: ಸಿಆಸುಇ (ಆಸು) 11 ಇಆಸು 2022, ದಿನಾಂಕ: 19-03-2022ರ ಮಾರ್ಗಸೂಚಿಗಳನ್ನು ಅನುಸರಿಸತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

 

ಪ್ರಮುಖ ಸೂಚನೆಗಳು :

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ಜಾಲತಾಣ : https://sarvothamaawards.karnataka.gov.in

▪️ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕನ್ನಡ ಹಾಗೂ ಇಂಗ್ಲೀಷ್ ಭಾಷೆಯನ್ನು ಬಳಸಬಹುದಾಗಿದ್ದು, ಕನ್ನಡದಲ್ಲಿ ಸಲ್ಲಿಸಲು ನುಡಿ 6.0 ಆವೃತ್ತಿಯನ್ನು ಮಾತ್ರ ಬಳಸುವುದು.

▪️2024 ಹಾಗೂ 2025ನೇ ಸಾಲಿನ ಪ್ರಶಸ್ತಿಗಳಿಗಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸತಕ್ಕದ್ದು.

▪️ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿಗಳಿಗಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸತಕ್ಕದ್ದು.

▪️ಈ ಸಂಬಂಧ ಸರ್ಕಾರಿ ಆದೇಶ/ ಸುತ್ತೋಲೆ ಪಡೆಯಲು https://dparar.karnataka.gov.in ಗೆ ಭೇಟಿ ನೀಡಿ.

▪️ತಾಂತ್ರಿಕ ಅಡಚಣೆ ಉಂಟಾದಲ್ಲಿ Help Desk – ದೂರವಾಣಿ ಸಂಖ್ಯೆ: 080-22230060

 

CLICK HERE TO DOWNLOAD CIRCULAR 
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!