SSLC Mid-Term Exam 2026-27: SSLC ಅರ್ಧ ವಾರ್ಷಿಕ ವೇಳಾಪಟ್ಟಿ ಪ್ರಕಟ

Table of Contents

SSLC Mid-Term Exam 2026-27: SSLC ಅರ್ಧ ವಾರ್ಷಿಕ ವೇಳಾಪಟ್ಟಿ ಪ್ರಕಟ

SSLC Mid-Term Exam 2026-27: ಕರ್ನಾಟಕ 10ನೇ ತರಗತಿ [SSLC Mid-Term Exam 2026-27] ವೇಳಾಪಟ್ಟಿ ಪ್ರಕಟವಾಗಿದೆ. ಪರೀಕ್ಷೆಯ ದಿನಾಂಕ, ಸಮಯ ಹಾಗೂ ವಿಷಯವಾರು ಪರೀಕ್ಷಾ ವೇಳಾಪಟ್ಟಿಯ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪರಿಶೀಲಿಸಿ.

2026-27ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಅರ್ಧ ವಾರ್ಷಿಕ ಪರೀಕ್ಷೆಯನ್ನು ಸೆಪ್ಟೆಂಬರ್ 23, 2026ರಿಂದ ಸೆಪ್ಟೆಂಬರ್ 30, 2026ರವರೆಗೆ ನಡೆಸಲು ಸೂಚಿಸಲಾಗಿದೆ.

ಶೈಕ್ಷಣಿಕ ಮಾರ್ಗಸೂಚಿಯಂತೆ ಪರೀಕ್ಷೆಯನ್ನು ರಾಜ್ಯದ ಎಲ್ಲಾ ಸಂಬಂಧಿತ ಪ್ರೌಢಶಾಲೆಗಳಲ್ಲಿ ನಡೆಸಲಾಗುತ್ತದೆ. ಅರ್ಧ ವಾರ್ಷಿಕ ಪರೀಕ್ಷೆಗೆ ಅಗತ್ಯವಿರುವ ಪ್ರಶ್ನೆಪತ್ರಿಕೆಗಳನ್ನು ಮಂಡಲಿಯಿಂದ ಸಿದ್ಧಪಡಿಸಲಾಗಿದ್ದು, ಆಯುಕ್ತರ ಕಚೇರಿಯ ಮೇಲ್ವಿಚಾರಣೆಯಲ್ಲಿ ಪರೀಕ್ಷೆಯ ದಿನದ ಪ್ರಶ್ನೆಪತ್ರಿಕೆಗಳನ್ನು ಸಂಬಂಧಿಸಿದ ಪ್ರೌಢಶಾಲೆಗಳ ಶಾಲಾ ಲಾಗಿನ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ.

ಮುಖ್ಯ ಶಿಕ್ಷಕರು ತಮ್ಮ ಶಾಲಾ ಲಾಗಿನ್ ಮೂಲಕ ಪ್ರಶ್ನೆಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿಕೊಂಡು, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮುದ್ರಿಸಿ, ಗೌಪ್ಯತೆಯನ್ನು ಕಾಪಾಡಿಕೊಂಡು ಪರೀಕ್ಷೆ ನಡೆಸಬೇಕು.

▪️ಅರ್ಧ ವಾರ್ಷಿಕ ಪರೀಕ್ಷೆ 2026-27ರ ದಿನಾಂಕ

ವಿವರ ಮಾಹಿತಿ ಪರೀಕ್ಷೆ ಅರ್ಧ ವಾರ್ಷಿಕ ತರಗತಿ 10ನೇ ತರಗತಿ ಶೈಕ್ಷಣಿಕ ವರ್ಷ 2026-27 ಪರೀಕ್ಷೆಯ ಅವಧಿ 23/09/2026 ರಿಂದ 30/09/2026 ಪರೀಕ್ಷೆ ಆರಂಭ ಬೆಳಿಗ್ಗೆ 10:30 ಶಾಲೆ ಆರಂಭ ಬೆಳಿಗ್ಗೆ 9:15

ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡುವ ಸಮಯ

ಪರೀಕ್ಷೆಯ ದಿನದ ಸಂಬಂಧಿತ ವಿಷಯದ ಪ್ರಶ್ನೆಪತ್ರಿಕೆಯನ್ನು ಬೆಳಿಗ್ಗೆ 9:30ಕ್ಕೆ ಮುಖ್ಯ ಶಿಕ್ಷಕರ ಶಾಲಾ ಲಾಗಿನ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ.

ಮುಖ್ಯ ಶಿಕ್ಷಕರು ತಮ್ಮ ಸ್ವಂತ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿ ಪ್ರಶ್ನೆಪತ್ರಿಕೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

ಶಾಲಾ ಲಾಗಿನ್ ಮತ್ತು OTP ಅನ್ನು ಯಾವುದೇ ಶಿಕ್ಷಕ, ನೋಡಲ್ ಶಿಕ್ಷಕ ಅಥವಾ ಇತರ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬಾರದು.

▪️ಅರ್ಧ ವಾರ್ಷಿಕ ಪರೀಕ್ಷೆಯ ಪ್ರಮುಖ Time Line

ದಿನಾಂಕ ವಾರ ವಿಷಯ ಸಮಯ
23/09/2026 ಬುಧವಾರ ಪ್ರಥಮ ಭಾಷೆ 10:30–1:45
24/09/2026 ಗುರುವಾರ ವಿಜ್ಞಾನ 10:30–1:45
25/09/2026 ಶುಕ್ರವಾರ ತೃತೀಯ ಭಾಷೆ 10:30–1:30
26/09/2026 ಶನಿವಾರ ಸಮಾಜ ವಿಜ್ಞಾನ 10:30–1:45
28/09/2026 ಸೋಮವಾರ ಗಣಿತ 10:30–1:45
29/09/2026 ಮಂಗಳವಾರ ದ್ವಿತೀಯ ಭಾಷೆ 10:30–1:30
30/09/2026 ಬುಧವಾರ ದೈಹಿಕ/ವೃತ್ತಿ/ಮೌಲ್ಯ ಶಿಕ್ಷಣ 10:30–1:45

 

▪️ಶಾಲಾ ಮುಖ್ಯ ಶಿಕ್ಷಕರ ಪ್ರಮುಖ ಜವಾಬ್ದಾರಿಗಳು

10ನೇ ತರಗತಿ ವಿದ್ಯಾರ್ಥಿಗಳಿಗೆ ಅರ್ಧ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯ ಕುರಿತು ಮುಂಚಿತವಾಗಿ ಮಾಹಿತಿ ನೀಡಬೇಕು.

ಪರೀಕ್ಷೆಯ ಆರು ವಿಷಯಗಳ ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳು ಬೆಳಿಗ್ಗೆ 9:15ಕ್ಕೆ ಶಾಲೆಗೆ ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕು.

ಮುಖ್ಯ ಶಿಕ್ಷಕರು:

  • ಪ್ರಶ್ನೆಪತ್ರಿಕೆಯನ್ನು ಸ್ವತಃ ಶಾಲಾ ಲಾಗಿನ್ ಮೂಲಕ ಡೌನ್‌ಲೋಡ್ ಮಾಡಬೇಕು.
  • OTP ಪಡೆಯಲು ತಮ್ಮ ಸ್ವಂತ ಮೊಬೈಲ್ ಸಂಖ್ಯೆಯನ್ನು ಮಾತ್ರ ಬಳಸಬೇಕು.
  • ಶಾಲಾ ಲಾಗಿನ್ ಮತ್ತು OTPಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.
  • ಪ್ರಶ್ನೆಪತ್ರಿಕೆಗಳನ್ನು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮಾತ್ರ ಮುದ್ರಿಸಬೇಕು.
  • ಪ್ರಶ್ನೆಪತ್ರಿಕೆ ಮುದ್ರಣದ ಗೌಪ್ಯತೆಯನ್ನು ಕಾಪಾಡಬೇಕು.
  • ಪ್ರಶ್ನೆಪತ್ರಿಕೆ ಮುದ್ರಿಸುವ ಸಂದರ್ಭದಲ್ಲಿ ಪೆನ್‌ಡ್ರೈವ್, ಹಾರ್ಡ್ ಡಿಸ್ಕ್, ಮೊಬೈಲ್ ಫೋನ್ ಮುಂತಾದವುಗಳನ್ನು ಬಳಸಬಾರದು.
  • ಪ್ರಶ್ನೆಪತ್ರಿಕೆ ಮುದ್ರಣ ಮುಗಿಯುವವರೆಗೆ ಬೇರೆ ಯಾವುದೇ ಮುದ್ರಣ ಕಾರ್ಯ ಕೈಗೊಳ್ಳಬಾರದು.
  • ಖಾಸಗಿ ವ್ಯಕ್ತಿಗಳಿಗೆ ಮುದ್ರಣ ಸ್ಥಳಕ್ಕೆ ಪ್ರವೇಶ ನೀಡಬಾರದು.
  • ಮುದ್ರಣ ಪೂರ್ಣಗೊಂಡ ನಂತರ ಗಣಕಯಂತ್ರ ಮತ್ತು ಪ್ರಿಂಟರ್‌ನಲ್ಲಿ ಪ್ರಶ್ನೆಪತ್ರಿಕೆಯ ಯಾವುದೇ ಮಾಹಿತಿ ಉಳಿದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
  • ಪ್ರಶ್ನೆಪತ್ರಿಕೆಗಳನ್ನು ಯಾವುದೇ ವಿದ್ಯುನ್ಮಾನ ವಿಧಾನದಲ್ಲಿ ವರ್ಗಾವಣೆ ಮಾಡಬಾರದು.

▪️ಒಂದೇ IP ವಿಳಾಸದಿಂದ ಪ್ರಶ್ನೆಪತ್ರಿಕೆ ಡೌನ್‌ಲೋಡ್

ಪ್ರಶ್ನೆಪತ್ರಿಕೆಗಳನ್ನು ಒಂದೇ IP ವಿಳಾಸದಲ್ಲಿ ಒಂದೇ ಗಣಕಯಂತ್ರದ ಮೂಲಕ ಡೌನ್‌ಲೋಡ್ ಮಾಡುವುದು ಕಡ್ಡಾಯವಾಗಿದೆ.

ಕೇಂದ್ರ ಕಚೇರಿಯಿಂದ IP ವಿಳಾಸವನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಒಂದಕ್ಕಿಂತ ಹೆಚ್ಚು IP ವಿಳಾಸಗಳಲ್ಲಿ ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡಿರುವುದು ಕಂಡುಬಂದರೆ ಸಂಬಂಧಿಸಿದ ಮುಖ್ಯ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ.

▪️ಪ್ರಶ್ನೆಪತ್ರಿಕೆಗಳ ಮುದ್ರಣ, ಪ್ಯಾಕಿಂಗ್ ಮತ್ತು ಭದ್ರತೆ

ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಿದ ನಂತರ ನೋಡಲ್ ಶಿಕ್ಷಕರ ಸಮ್ಮುಖದಲ್ಲಿ ಕೊಠಡಿವಾರು ಬೇಡಿಕೆ ಪಟ್ಟಿಯಂತೆ ಪ್ಯಾಕಿಂಗ್ ಮಾಡಬೇಕು.

ಪ್ಯಾಕೆಟ್‌ಗಳನ್ನು ಬದಲಾಯಿಸಲಾಗದ ಸೀಲ್ ಬಳಸಿ ಸೀಲ್ ಮಾಡಿ ಸುರಕ್ಷಿತವಾಗಿ ಸಂರಕ್ಷಿಸಬೇಕು.

ಪರೀಕ್ಷೆಯ ಸಮಯ ಆರಂಭವಾಗುವವರೆಗೆ ಯಾವುದೇ ಕಾರಣಕ್ಕೂ ಸೀಲ್ ಮಾಡಲಾದ ಪ್ರಶ್ನೆಪತ್ರಿಕೆ ಪ್ಯಾಕೆಟ್ ತೆರೆಯಬಾರದು.

ನಂತರ ಸೀಲ್ ಮಾಡಲಾದ ಪ್ಯಾಕೆಟ್‌ಗಳನ್ನು ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಿಗೆ ಹಸ್ತಾಂತರಿಸಿ ಸ್ವೀಕೃತಿ ಪಡೆಯಬೇಕು.

▪️ನೋಡಲ್ ಶಿಕ್ಷಕರ ಜವಾಬ್ದಾರಿ

ಪ್ರಶ್ನೆಪತ್ರಿಕೆ ಮುದ್ರಣ, ಪ್ಯಾಕಿಂಗ್ ಮತ್ತು ವಿತರಣೆಯಲ್ಲಿ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡಲು ಶಾಲೆಯ ಒಬ್ಬ ಶಿಕ್ಷಕರನ್ನು ನೋಡಲ್ ಶಿಕ್ಷಕರಾಗಿ ನಿಯೋಜಿಸಬಹುದು.

ನೋಡಲ್ ಶಿಕ್ಷಕರು:

  • ಪ್ರಶ್ನೆಪತ್ರಿಕೆ ಮುದ್ರಣ ಮತ್ತು ಪ್ಯಾಕಿಂಗ್‌ನಲ್ಲಿ ಸಹಾಯ ಮಾಡಬೇಕು.
  • ಗೌಪ್ಯತೆಯನ್ನು ಕಾಪಾಡಬೇಕು.
  • ಮುದ್ರಣ, ಪ್ಯಾಕಿಂಗ್ ಮತ್ತು ವಿತರಣೆಯ ಸಂದರ್ಭದಲ್ಲಿ ಮೊಬೈಲ್ ಬಳಸಬಾರದು.

ಶಾಲಾ ಲಾಗಿನ್ ಮತ್ತು OTPಯ ಸಂಪೂರ್ಣ ನಿಯಂತ್ರಣ ಮುಖ್ಯ ಶಿಕ್ಷಕರ ಬಳಿಯೇ ಇರಬೇಕು.

▪️ಮೊಬೈಲ್ ಫೋನ್ ಬಳಕೆಗೆ ನಿರ್ಬಂಧ

ವಿದ್ಯಾರ್ಥಿಗಳು ಹಾಗೂ ಸಹ ಶಿಕ್ಷಕರು ಪರೀಕ್ಷಾ ದಿನದಂದು ಮೊಬೈಲ್ ಫೋನ್ ತರದಂತೆ ಸೂಚಿಸಬೇಕು.

ಮೊಬೈಲ್ ತಂದಿದ್ದರೆ ಪರೀಕ್ಷೆ ಆರಂಭಕ್ಕೂ ಮುನ್ನ ಪಡೆದುಕೊಂಡು, ಪರೀಕ್ಷೆ ಮುಗಿಯುವವರೆಗೆ ಶಾಲೆಯಲ್ಲಿ ನೇಮಿಸಲಾದ ಮೊಬೈಲ್ ಸ್ವಾಧೀನಾಧಿಕಾರಿ ಶಿಕ್ಷಕರ ಸುಪರ್ದಿಯಲ್ಲಿ ಇರಿಸಬೇಕು.

▪️ಉತ್ತರ ಪತ್ರಿಕೆಗಳ ಮೌಲ್ಯಮಾಪನ

SA-1 ಪರೀಕ್ಷೆ ಪೂರ್ಣಗೊಂಡ ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಶಾಲಾ ಹಂತದಲ್ಲಿಯೇ ನಡೆಸಬೇಕು.

ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿ

ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರೊಂದಿಗೆ ಸಭೆ ನಡೆಸಿ, SA-1 ಪರೀಕ್ಷೆಯನ್ನು ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP)ದಂತೆ ನಡೆಸುವ ಕುರಿತು ಅಗತ್ಯ ಸೂಚನೆಗಳನ್ನು ನೀಡಬೇಕು.

ಪರೀಕ್ಷೆಯಲ್ಲಿ ಯಾವುದೇ ರೀತಿಯ:

  • ಪ್ರಶ್ನೆಪತ್ರಿಕೆ ಸೋರಿಕೆ
  • ಪರೀಕ್ಷಾ ಅವ್ಯವಹಾರ
  • ನಕಲು
  • ಅನಧಿಕೃತ ಮೊಬೈಲ್ ಬಳಕೆ
  • ಪ್ರಶ್ನೆಪತ್ರಿಕೆ ಹಂಚಿಕೆ

ಮುಂತಾದ ಘಟನೆಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.

▪️ಡಯಟ್ ಪ್ರಾಂಶುಪಾಲರ ಜವಾಬ್ದಾರಿ

ರಾಜ್ಯದ ಎಲ್ಲಾ DIET ಪ್ರಾಂಶುಪಾಲರುಗಳು ಪರೀಕ್ಷಾ ದಿನಗಳಲ್ಲಿ ತಮ್ಮ ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಿಗೆ ಹಿರಿಯ/ಕಿರಿಯ ಉಪನ್ಯಾಸಕರನ್ನು ಭೇಟಿ ನೀಡುವಂತೆ ಮಾಡಿ ಪರೀಕ್ಷಾ ಕಾರ್ಯದ ಮೇಲ್ವಿಚಾರಣೆ ಮಾಡಬೇಕು.

ಯಾವುದೇ ಲೋಪ ಕಂಡುಬಂದಲ್ಲಿ ಸಂಬಂಧಿಸಿದ ಉಪನಿರ್ದೇಶಕರು (ಆಡಳಿತ) ಅವರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಬೇಕು.

▪️ಪರೀಕ್ಷಾ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳು

ಆಯುಕ್ತಾಲಯದ ಹಂತದಲ್ಲಿ ಪರೀಕ್ಷಾ ಮೇಲ್ವಿಚಾರಣೆಗೆ ನಿರ್ದೇಶಕರು (ಪ್ರೌಢ ಶಿಕ್ಷಣ), ಆಯುಕ್ತರ ಕಚೇರಿ, ನೃಪತುಂಗ ರಸ್ತೆ, ಬೆಂಗಳೂರು ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.

ಧಾರವಾಡ ಮತ್ತು ಕಲಬುರಗಿ ಅಪರ ಆಯುಕ್ತರ ಕಚೇರಿ ವ್ಯಾಪ್ತಿಯ ವಿಭಾಗಗಳಿಗೆ ಸಂಬಂಧಿಸಿದಂತೆ ಆಯಾ ಆಯುಕ್ತಾಲಯದ ನಿರ್ದೇಶಕರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ.

ಆಯಾ ವಿಭಾಗದ ವಿಭಾಗೀಯ ಸಹ ನಿರ್ದೇಶಕರು ವಿಭಾಗೀಯ ಹಂತದಲ್ಲಿ ಪರೀಕ್ಷೆಯ ಮೇಲುಸ್ತುವಾರಿ ಜವಾಬ್ದಾರಿ ವಹಿಸಲಿದ್ದಾರೆ.

▪️ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅವ್ಯವಹಾರಕ್ಕೆ ಕಠಿಣ ಕ್ರಮ

ಪರೀಕ್ಷಾ ಕೇಂದ್ರದಿಂದ ಪ್ರಶ್ನೆಪತ್ರಿಕೆ ಸೋರಿಕೆ ಮಾಡುವುದು, ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪ್ರಶ್ನೆಪತ್ರಿಕೆಯ ಫೋಟೋ ತೆಗೆದು ಸಾಮಾಜಿಕ ಜಾಲತಾಣ ಅಥವಾ WhatsApp ಮೂಲಕ ಹಂಚುವುದು, ಪರೀಕ್ಷಾ ಕೇಂದ್ರಗಳಲ್ಲಿ ಚೀಟಿ ಸರಬರಾಜು ಮಾಡುವುದು ಸೇರಿದಂತೆ ಯಾವುದೇ ಪರೀಕ್ಷಾ ಅವ್ಯವಹಾರ ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಸೂಚನೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023, ಮಾಹಿತಿ ತಂತ್ರಜ್ಞಾನ ಕಾಯ್ದೆ 2000, ಮಂಡಳಿ ಕಾಯ್ದೆ 1966 ಹಾಗೂ ಸಂಬಂಧಿತ ಕರ್ನಾಟಕ ಶಿಕ್ಷಣ ಕಾಯ್ದೆ/ನಿಯಮಗಳು ಮತ್ತು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು ಸೇರಿದಂತೆ ಉಲ್ಲೇಖಿಸಿರುವ ಕಾನೂನು ಮತ್ತು ಸರ್ಕಾರಿ ಆದೇಶಗಳನ್ವಯ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ.

ಅನುದಾನಿತ ಶಾಲೆಗಳಿಗೆ

ಗೌಪ್ಯತೆ ಕಾಪಾಡದಿದ್ದಲ್ಲಿ ಅಥವಾ ಪ್ರಶ್ನೆಪತ್ರಿಕೆ ಬಹಿರಂಗವಾಗಲು ಕಾರಣವಾದಲ್ಲಿ ಸಂಬಂಧಿಸಿದ ಶಾಲೆಯ ಮಾನ್ಯತೆ ಹಿಂಪಡೆಯುವ ಹಾಗೂ ಅನುದಾನ ಹಿಂಪಡೆಯುವ ಕುರಿತು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ.

ಅನುದಾನ ರಹಿತ ಶಾಲೆಗಳಿಗೆ

ಗೌಪ್ಯತೆ ಕಾಪಾಡದಿದ್ದಲ್ಲಿ ಅಥವಾ ಪ್ರಶ್ನೆಪತ್ರಿಕೆ ಬಹಿರಂಗವಾಗಲು ಕಾರಣವಾದಲ್ಲಿ ಸಂಬಂಧಿಸಿದ ಶಾಲೆಯ ಮಾನ್ಯತೆಯನ್ನು ಶಾಶ್ವತವಾಗಿ ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚಿಸಲಾಗಿದೆ.

▪️ಮುಖ್ಯವಾಗಿ ಗಮನಿಸಬೇಕಾದ ಅಂಶಗಳು

  • ಅರ್ಧ ವಾರ್ಷಿಕ ಪರೀಕ್ಷೆ – 23/09/2026 ರಿಂದ 30/09/2026
  • 10ನೇ ತರಗತಿ ಶಾಲೆ ಆರಂಭ – ಬೆಳಿಗ್ಗೆ 9:15
  • ಪ್ರಶ್ನೆಪತ್ರಿಕೆ ಡೌನ್‌ಲೋಡ್ – ಬೆಳಿಗ್ಗೆ 9:30
  • ಪ್ರಶ್ನೆಪತ್ರಿಕೆ ಮುದ್ರಣ – 9:45 ರಿಂದ 10:00
  • ಪ್ರಶ್ನೆಪತ್ರಿಕೆ ಪ್ಯಾಕೆಟ್ ವಿತರಣೆ – ಬೆಳಿಗ್ಗೆ 10:15
  • ಪರೀಕ್ಷೆ ಆರಂಭ – ಬೆಳಿಗ್ಗೆ 10:30

ಪ್ರಶ್ನೆಪತ್ರಿಕೆಯ ಗೌಪ್ಯತೆ, ಶಾಲಾ ಲಾಗಿನ್ ಮತ್ತು OTP ಭದ್ರತೆ ಹಾಗೂ ಪರೀಕ್ಷಾ ನಿಯಮಗಳ ಪಾಲನೆಗೆ ಮುಖ್ಯ ಶಿಕ್ಷಕರು, ನೋಡಲ್ ಶಿಕ್ಷಕರು ಮತ್ತು ಪರೀಕ್ಷಾ ಸಿಬ್ಬಂದಿ ವಿಶೇಷ ಗಮನ ನೀಡಬೇಕಾಗಿದೆ.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗಮನಿಸಿ

10ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯ ವೇಳಾಪಟ್ಟಿಯನ್ನು ಮುಂಚಿತವಾಗಿ ತಿಳಿದುಕೊಂಡು ಪ್ರತಿದಿನ ಬೆಳಿಗ್ಗೆ 9:15ಕ್ಕೆ ಶಾಲೆಗೆ ಹಾಜರಾಗಬೇಕು. ಪರೀಕ್ಷಾ ದಿನಗಳಲ್ಲಿ ಮೊಬೈಲ್ ಫೋನ್ ತರದಿರುವುದು ಸೇರಿದಂತೆ ಶಾಲಾ ಮುಖ್ಯ ಶಿಕ್ಷಕರು ನೀಡುವ ಎಲ್ಲಾ ಪರೀಕ್ಷಾ ಸೂಚನೆಗಳನ್ನು ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

SSLC Mid-Term Exam

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!