Study Abroad: ಭಾರತೀಯ ವಿದ್ಯಾರ್ಥಿಗಳಿಗಾಗಿ ಕಾಮನ್‌ವೆಲ್ತ್ ಸ್ಕಾಲರ್ಷಿಪ್
Study Abroad: ಭಾರತೀಯ ವಿದ್ಯಾರ್ಥಿಗಳಿಗಾಗಿ ಕಾಮನ್‌ವೆಲ್ತ್ ಸ್ಕಾಲರ್ಷಿಪ್: ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಒಂದೊಳ್ಳೆ ಕೆಲಸ ಗಿಟ್ಟಿಸಿಕೊಂಡು ಕೈತುಂಬಾ ಸಂಬಳ ಪಡೆದು ಜೀವನದಲ್ಲಿ ಹಾಯಾಗಿ ಇರಬೇಕು ಅನ್ನೋದು ಅಸಂಖ್ಯಾತ ಯುವಕರ. `ಕನಸಾಗಿರುತ್ತದೆ. ಭಾರತೀಯ ವಿದ್ಯಾರ್ಥಿಗಳಂತೂ ಇಂತಹ ಕನಸು ಕಂಡು ಅದನ್ನು ಮುಂದುವರಿಸುವತ್ತ ಹೆಜ್ಜೆ ಹಾಕುತ್ತಾರೆ. ಈಗಂತೂ ಹೆಚ್ಚಿನ ಕುಟುಂಬಗಳು ತಮ್ಮ ಮಕ್ಕಳನ್ನು ವಿದೇಶಕ್ಕೆ ಶಿಕ್ಷಣಕ್ಕಾಗಿ ಕಳುಹಿಸಲು ಹಾತೊರೆಯುತ್ತಾರೆ. ಇತ್ತೀಚಿನ ಅಧ್ಯಯನದ ಪ್ರಕಾರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಭಾರತೀಯರ ಸಂಖ್ಯೆ ಹೆಚ್ಚುತ್ತಿದ್ದು, ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಮತ್ತು ವಿವಿಧ ಆಂತರಿಕ ಶಿಕ್ಷಣ ಸಂಸ್ಥೆಗಳು ದೃಢಪಡಿಸಿದ ಅಂಕಿ-ಅಂಶಗಳ ಪ್ರಕಾರ, 2025ರಲ್ಲಿ ವಿದೇಶಗಳಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 1.8 ಮಿಲಿಯನ್ ತಲುಪಿದೆ.
ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವುದು ಮುಖ್ಯವಲ್ಲ, ಆದರೆ ನಾವು ಸರಿಯಾದ ಶೈಕ್ಷಣಿಕ ಸಂಸ್ಥೆ, ದೇಶವನ್ನು ಆಯ್ಕೆ ಮಾಡಿದ್ದೀವೋ ಇಲ್ಲವೋ ಅನ್ನೋದರ ಬಗ್ಗೆ ತಿಳಿದುಕೊಳ್ಳೋದು ಕೂಡ ತುಂಬಾ ಮುಖ್ಯವಾಗುತ್ತದೆ. ನಮ್ಮ ಕನಸು, ಯೋಜನೆಗಳು, ಗುರಿ, ಮಹತ್ವಾಕಾಂಕ್ಷೆಗಳ ಸಾಕಾರಕ್ಕೆ ಆ ದೇಶ ನಿಮಗೆ ಏನು ಭರವಸೆ ನೀಡುತ್ತದೆ ಅನ್ನುವುದನ್ನು ಕೂಡ ಖಾತ್ರಿಪಡಿಸಿಕೊಳ್ಳಬೇಕಾಗುತ್ತದೆ. ಭಾರತೀಯ ವಿದ್ಯಾರ್ಥಿಗಳಲ್ಲಿ ಬ್ರಿಟನ್ ಬಹಳ ಜನಪ್ರಿಯ ವಿದೇಶ ಅಧ್ಯಯನ ತಾಣವಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅದು ವಿಶ್ವದ ಉನ್ನತ ವಿಶ್ವವಿದ್ಯಾಲಯಗಳನ್ನು ಹೊಂದಿದೆ.
ಇದೀಗ ಬ್ರಿಟನ್‌ನಲ್ಲಿ ಅಧ್ಯಯನ ಮಾಡುವ ಕನಸು ಕಾಣುವ ವಿದ್ಯಾರ್ಥಿಗಳಿಗೆ ಒಂದು ಸಿಹಿ ಸುದ್ದಿ. ನೀವೂ ಕೂಡ ಬ್ರಿಟನ್‌ನಲ್ಲಿ ಉಚಿತವಾಗಿ ಅಧ್ಯಯನ ಮಾಡುವ ಅವಕಾಶವನ್ನು ಪಡೆಯಬಹುದು. ವಾಸ್ತವವಾಗಿ, ಕಾಮನ್‌ವೆಲ್ತ್ ವಿದ್ಯಾರ್ಥಿವೇತನ ಆಯೋಗ (CSC) ‘ಕಾಮನ್‌ವೆಲ್ತ್ ಹಂಚಿಕೆಯ ವಿದ್ಯಾರ್ಥಿವೇತನ’ ಕೋರ್ಸ್‌ಗಾಗಿ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಈ ವಿದ್ಯಾರ್ಥಿವೇತನದ ಮೂಲಕ, ಅಭಿವೃದ್ಧಿಶೀಲ ರಾಷ್ಟ್ರಗಳ ವಿದ್ಯಾರ್ಥಿಗಳು ಬ್ರಿಟನ್‌ಗೆ ಹೋಗಿ ಸ್ನಾತಕೋತ್ತರ ಪದಪಿಯನ್ನು ಗಳಿಸಬಹುದು. ಈ ಉಪಕ್ರಮವು ಕಾಮನ್‌ವೆಲ್ತ್‌ನಲ್ಲಿ ಅಂತಾರಾಷ್ಟ್ರೀಯ ಅಭಿವೃದ್ಧಿ ಮತ್ತು ಶೈಕ್ಷಣಿಕ ಸಮಾನತೆಗೆ ಬ್ರಿಟಿಷ್ ಸರ್ಕಾರದ ಬದ್ಧತೆಯ ಭಾಗವಾಗಿದೆ.
‘ಕಾಮನ್‌ವೆಲ್ತ್ ಹಂಚಿಕೆಯ ವಿದ್ಯಾರ್ಥಿವೇತನ’ ಕಾಮನ್‌ವೆಲ್ತ್ ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್ ಯೋಜನೆ (CSFP) ಅಡಿಯಲ್ಲಿ CSC ನೀಡುವ ಮೂರು ಮಾಸ್ಟರ್ ಮಟ್ಟದ ಯೋಜನೆಗಳಲ್ಲಿ ಒಂದಾಗಿದೆ. ಅಭಿವೃದ್ಧಿ ಹೊಂದಿದ ಮತ್ತು ಮಧ್ಯಮ ಆದಾಯದ ದೇಶಗಳ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು ಈ ವಿದ್ಯಾರ್ಥಿವೇತನದ ಉದ್ದೇಶವಾಗಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಮಲೇಷ್ಯಾ, ಮಾಲ್ಮೀನ್ಸ್, ಶ್ರೀಲಂಕಾ, ನೈಜೀರಿಯಾ, ನಮೀಬಿಯಾ, ತಾಂಜಾನಿಯಾ, ಕೀನ್ಯಾ, ಜಮೈಕಾ, ಗಯಾನಾ, ಘಾನಾ, ಫಿಜಿ, ಬೆಲೀಜ್, ಸಮೋವಾ . ಮುಂತಾದ ದೇಶಗಳನ್ನು ಒಳಗೊಂಡಂತೆ 44 ದೇಶಗಳ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ * ಅರ್ಹರಾಗಿರುತ್ತಾರೆ.
ವಿದ್ಯಾರ್ಥಿವೇತನಕ್ಕೆ ಯಾರು ಅರ್ಹರು?
44 ಕಾಮನ್‌ವೆಲ್ತ್ ದೇಶಗಳಿಂದ ಬರುವ ವಿದ್ಯಾರ್ಥಿಗಳನ್ನು ಮಾತ್ರ ‘ಕಾಮನ್‌ವೆಲ್ತ್ ಹಂಚಿಕೆಯ ವಿದ್ಯಾರ್ಥಿವೇತನ’ಕ್ಕೆ ಅರ್ಹರೆಂದು ಪರಿಗಣಿಸಲಾಗುತ್ತದೆ.
2026ರ (ಸೆಪ್ಟೆಂಬರ್/ ಅಕ್ಟೋಬರ್) ಶೈಕ್ಷಣಿಕ ವರ್ಷದಿಂದ ಯುಕೆಯಲ್ಲಿ ತಮ್ಮ ಅಧ್ಯಯನವನ್ನು ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುತ್ತಾರೆ. ಪ್ರಾರಂಭಿಸಲಿರುವ
ಅರ್ಜಿದಾರರು ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಅವರು ಯಾವುದೇ ಸಮಾನ ಪದವಿಯನ್ನು ಹೊಂದಿದ್ದರೆ, ಅವರನ್ನು ಸಹ ಅರ್ಹರೆಂದು ಪರಿಗಣಿಸಲಾಗುತ್ತದೆ.
ಈ ವಿದ್ಯಾರ್ಥಿವೇತನವಿಲ್ಲದೆ ಯುಕೆಯಲ್ಲಿ ಯೋಜನೆ (CSFP) ಅಡಿಯಲ್ಲಿ CSC ನೀಡುವ ಮೂರು ಮಾಸ್ಟರ್ ಮಟ್ಟದ ಯೋಜನೆಗಳಲ್ಲಿ ಒಂದಾಗಿದೆ. ಅಭಿವೃದ್ಧಿ ಹೊಂದಿದ ಮತ್ತು ಮಧ್ಯಮ ಆದಾಯದ ದೇಶಗಳ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದು ಈ ವಿದ್ಯಾರ್ಥಿವೇತನದ ಉದ್ದೇಶವಾಗಿದೆ. ಭಾರತ, ಪಾಕಿಸ್ತಾನ, ಅಧ್ಯಯನ ಮಾಡಲು ಸಾಧ್ಯವಾಗುವುದಿಲ್ಲ.
ಅರ್ಜಿದಾರರು ಹೆಚ್ಚಿನ ಆದಾಯದ ದೇಶದಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಅಧ್ಯಯನ ಮಾಡಿರಬಾರದು ಅಥವಾ ಕೆಲಸ ಮಾಡಿರಬಾರದು.
ಅರ್ಜಿ ಸಲ್ಲಿಸುವ ಸಮಯದಲ್ಲಿ, ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಿರ್ದಿಷ್ಟ ನಮೂನೆಯಲ್ಲಿ ಸಲ್ಲಿಸಬೇಕು.
ಲಂಡನ್ ಮಹಾನಗರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡವವರಿಗೆ ತಿಂಗಳಿಗೆ 1,452 ಪೌಂಡ್ (2.1,72,873) ಅಥವಾ ತಿಂಗಳಿಗೆ 1,781 ಫೌಂಡ್ ಅಂದರೆ 2,12,043 ಭಾರತೀಯ ರೂಪಾಯಿ ಪಡೆಯುವರು.
ಬಾಂಗ್ಲಾದೇಶ, ಮಲೇಷ್ಯಾ, ಮಾಲೀಮ್ಸ್, ಶ್ರೀಲಂಕಾ, ನೈಜೀರಿಯಾ, ನಮೀಬಿಯಾ, ತಾಂಜಾನಿಯಾ, ಕೀನ್ಯಾ, ಜಮೈಕಾ, ಗಯಾನಾ, ಘಾನಾ, ಫಿಜಿ, ಬೆಲೀಜ್, ಸಮೋವಾ ಮುಂತಾದ ದೇಶಗಳನ್ನು ಒಳಗೊಂಡಂತೆ 44 ದೇಶಗಳ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುತ್ತಾರೆ.
ವಿದ್ಯಾರ್ಥಿವೇತನದಲ್ಲಿ ಏನು ಒಳಗೊಂಡಿದೆ?
ವಿದ್ಯಾರ್ಥಿವೇತನ ಪಡೆಯುವ ವಿದ್ಯಾರ್ಥಿಗಳಿಗೆ ಬ್ರಿಟನ್‌ನಲ್ಲಿ ಒಂದು ವರ್ಷದ ಮಾಸ್ಟರ್ ಕೋರ್ಸ್ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಬೋಧನಾ ಶುಲ್ಕವನ್ನು ವಿದ್ಯಾರ್ಥಿವೇತನದ ಮೊತ್ತದಿಂದ ಪಾವತಿಸಲಾಗುತ್ತದೆ. ಅವರಿಗೆ ಬ್ರಿಟನ್‌ಗೆ ಹೋಗಲು ಮತ್ತು ಬರಲು ವಿಮಾನ ಟಿಕೆಟ್‌ಗಳು ಸಿಗುತ್ತವೆ ಮತ್ತು ಅಲ್ಲಿಗೆ ತಲುಪಿದ ನಂತರ ಅವರಿಗೆ ಆಹಾರ ಮತ್ತು ವಸತಿ ಭತ್ಯೆಯನ್ನು ಸಹ ನೀಡಲಾಗುತ್ತದೆ.
ಅರ್ಜಿದಾರರು ಮೊದಲು ತಮ್ಮ ಆಯ್ಕೆಯ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಅಲ್ಲಿಂದ ಅರ್ಜಿಯು CSC ತಲುಪುತ್ತದೆ. ನಂತರ ಯಾರಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ ಎಂಬುದನ್ನು ಅದು ನಿರ್ಧರಿಸುತ್ತದೆ.
2026-27 ಶೈಕ್ಷಣಿಕ ವರ್ಷದ ಕಾಮನ್‌ವೆಲ್ತ್ `ಸ್ನಾತಕೋತ್ತರ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳು 02 ಸೆಪ್ಟೆಂಬರ್ 2026 ರಿಂದ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ, ಕಾಮನ್‌ವೆಲ್ತ್ ಸ್ಕಾಲರ್‌ಶಿಪ್ ವೆಬ್‌ಸೈಟ್ ಪರಿಶೀಲಿಸಬಹುದು. ಭಾರತೀಯ ಅರ್ಜಿದಾರರು ಶಿಕ್ಷಣ ಸಚಿವಾಲಯದ SAKSHAT ಪೋರ್ಟಲ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.
ವೆಬ್ಸೈಟ್: https://cscuk.fcdo.gov.uk/scholarships/commonwealth-masters-scholarships/
ವಿಶೇಷ ಸೌಲಭ್ಯ ಘೋಷಿಸಿದ ಬ್ರಿಟಿಷ್ ಏರ್‌ವೇಸ್:
ಲಂಡನ್: ಬ್ರಿಟನ್‌ನಲ್ಲಿ ಅಧ್ಯಯನ ಮಾಡಲು ಹೋಗುವ ಭಾರತೀಯ ವಿದ್ಯಾರ್ಥಿಗಳಿಗೆ ಮತ್ತೊಂದು ಸಿಹಿ ಸುದ್ದಿ. ಅವರು ಬ್ರಿಟಿಷ್ ಏರ್‌ವೇಸ್ ವಿಮಾನದ ಮೂಲಕ ಬ್ರಿಟನ್‌ಗೆ ಹೋಗುತ್ತಿದ್ದರೆ, ವಿಮಾನಯಾನ ಸಂಸ್ಥೆಗಳು ಅವರಿಗೆ ವಿಶೇಷ ಉಡುಗೊರೆಯನ್ನು ನೀಡಲಿವೆ. ಬ್ರಿಟಿಷ್ ಏರ್‌ವೇಸ್ ಐದು ಭಾರತೀಯ ನಗರಗಳಿಂದ ಲಂಡನ್ನ ಹೀಥೋ ವಿಮಾನ ನಿಲ್ದಾಣಕ್ಕೆ ಹೋಗುವ ಭಾರತೀಯ ವಿದ್ಯಾರ್ಥಿಗಳಿಗಾಗಿ ‘ಸ್ಟುಡೆಂಟ್ಸ್ ಟ್ರಾವೆಲ್ ಅಸಿಸ್ಟನ್ಸ್’ ಅನ್ನು ಪ್ರಾರಂಭಿಸಿದೆ. ಅಕ್ಟೋಬರ್ 2025ರ ಅಂತ್ಯದವರೆಗೆ ಭಾರತೀಯ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆಯಬಹುದು, ಬ್ರಿಟಿಷ್ ಏರ್‌ವೇಸ್‌ನಲ್ಲಿ ಪ್ರಯಾಣಿಸುವ ಜನರು ಮಾತ್ರ ಈ ಪ್ರಯೋಜನ ಪಡೆಯುತ್ತಾರೆ.
‘ಸ್ಟುಡೆಂಟ್ಸ್ ಟ್ರಾವೆಲ್ ಅಸಿಸ್ಟನ್ಸ್’ನ ಮೂಲಕ ಭಾರತೀಯ ವಿದ್ಯಾರ್ಥಿಗಳ ಪ್ರಯಾಣ ಅನುಭವವನ್ನು ಸುಲಭ ಮತ್ತು ಆರಾಮದಾಯಕವಾಗಿಸಲಾಗುವುದು ಎಂದು ಬ್ರಿಟಿಷ್ ಏರ್‌ವೇಸ್ ಹೇಳಿದೆ. ವಿಮಾನಯಾನ ಸಂಸ್ಥೆಯು ಇದೇ ಮೊದಲ ಬಾರಿಗೆ ಇಂತಹ ಸೌಲಭ್ಯವನ್ನು ಒದಗಿಸುತ್ತಿದೆ. ಭಾರತೀಯರಲ್ಲಿ ಉನ್ನತ ಶಿಕ್ಷಣಕ್ಕಾಗಿ ಬ್ರಿಟನ್ ಜನಪ್ರಿಯ ತಾಣವಾಗಿದೆ. ವಿದ್ಯಾರ್ಥಿಗಳು ಸಾಮಾನ್ಯವಾಗಿ ಲಂಡನ್ ಹೀಥೋ ವಿಮಾನ ನಿಲ್ದಾಣಕ್ಕೆ ಟಿಕೆಟ್‌ಗಳನ್ನು ತೆಗೆದುಕೊಳ್ಳುತ್ತಾರೆ. ಇದು ಬ್ರಿಟಿಷ್ ರಾಜಧಾನಿಯಲ್ಲಿರುವ ವಿಮಾನ ನಿಲ್ದಾಣವಾಗಿದೆ. ಈ ಸೌಲಭ್ಯವು ಬ್ರಿಟಿಷ್ ಏರ್‌ವೇಸ್‌ನಲ್ಲಿ ಹಾರಾಟ ನಡೆಸುತ್ತಿರುವ ಮತ್ತು ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಿಂದ ವಿಮಾನಗಳನ್ನು ತೆಗೆದುಕೊಂಡಿರುವ ಭಾರತೀಯ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಿರುತ್ತದೆ. ಬ್ರಿಟಿಷ್ ಏರ್‌ವೇಸ್ ಈ ಐದು ನಗರಗಳಿಂದ ಪ್ರತಿ ವಾರ 56 ವಿಮಾನಗಳನ್ನು ನಿರ್ವಹಿಸುತ್ತಿದೆ.
ಬ್ರಿಟನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಪೋಸ್ಟ್-ಸ್ಟಡಿ ವರ್ಕ್ ವೀಸಾವನ್ನು ಸಹ ಪಡೆಯುತ್ತಾರೆ. ಅದರ ಮೂಲಕ ಅವರು 18 ತಿಂಗಳವರೆಗೆ ದೇಶದಲ್ಲಿ ಕೆಲಸ ಮಾಡಬಹುದು. ಇದನ್ನು ಗಮನದಲ್ಲಿಟ್ಟುಕೊಂಡು, ಬ್ರಿಟಿಷ್ ಏರ್‌ವೇಸ್ ಭಾರತೀಯ ವಿದ್ಯಾರ್ಥಿಗಳಿಗೆ ಈ ವಿಶೇಷ ಸೌಲಭ್ಯವನ್ನು ಒದಗಿಸಲು ಪ್ರಾರಂಭಿಸಿದೆ.
2 thoughts on “Study Abroad: ಭಾರತೀಯ ವಿದ್ಯಾರ್ಥಿಗಳಿಗಾಗಿ ಕಾಮನ್‌ವೆಲ್ತ್ ಸ್ಕಾಲರ್ಷಿಪ್-2025”