UPSC CDS ಫಲಿತಾಂಶ ಪ್ರಕಟ: 535 ಅಭ್ಯರ್ಥಿಗಳು ಆಯ್ಕೆ
UPSC CDS ಫಲಿತಾಂಶ ಪ್ರಕಟ: ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸಿದ ಪರೀಕ್ಷೆ ಮತ್ತು ರಕ್ಷಣಾ ಸಚಿವಾಲಯ ನಡೆಸಿದ ಸಂದರ್ಶನದ ಅಧಾರದ ಮೇಲೆ ಕಂಬೈನ್ಸ್ ಡಿಫೆನ್ಸ್ ಸರ್ವೀಸ್ (ಸಿಡಿಎಸ್) ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಯುಪಿಎಸ್ಸಿ ಬಿಡುಗಡೆ ಮಾಡಿದೆ.
ಇದರಲ್ಲಿ ಒಟ್ಟು 535 ಅಭ್ಯರ್ಥಿಗಳು ವಿವಿಧ ತರಬೇತಿಗೆ ಶಿಫಾರಸುಗೊಂಡಿದ್ದಾರೆ. ಇವರಲ್ಲಿ 473 ಪುರುಷರು ಹಾಗೂ 62 ಮಹಿಳೆಯರು ಸೇರಿದ್ದಾರೆ. ಇಂಡಿಯನ್ ಮಿಲಿಟರಿ ಅಕಾಡೆಮಿ, ಇಂಡಿಯನ್ ನೇವಲ್ ಅಕಾಡೆಮಿ, ಏರ್ಪೋರ್ಸ್ ಅಕಾಡೆಮಿ ಕೋರ್ಸ್ ಗಳಿಗೆ ಅಭ್ಯರ್ಥಿಗಳನ್ನು ಶಿಫಾರಸು ಮಾಡಲಾಗಿದೆ.
ಇದರ ಜತೆಗೆ, ಈ ಪಟ್ಟಿಯಲ್ಲಿ ಚೆನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯ ಶಾರ್ಟ್ ಸರ್ವೀಸ್ ಕಮಿಷನ್ ಕೋರ್ಸ್ಗಳಿಗೆ ಅರ್ಹತೆಯನ್ನು ಪಡೆದವರ ಪಟ್ಟಿಯನ್ನು ನೀಡಲಾಗಿದೆ. ವೈದ್ಯಕೀಯ ಪರೀಕ್ಷೆಯ ಫಲಿತಾಂಶವನ್ನು ಅಂತಿಮ ಮೆರಿಟ್ ಪರಿಗಣಿಸಲಾಗಿಲ್ಲ.

ಈ ಪಟ್ಟಿಯ ತಾತ್ಕಾಲಿಕವಾಗಿದೆ. ಫಲಿತಾಂಶದ ಲಿಂಕ್:
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ಗೆ ಸೇರಿ.