UPSC: Civil Service Examination notification released.
ಕೇಂದ್ರ ಲೋಕಸೇವಾ ಆಯೋಗವು (UPSC ) ಬಹು ನಿರೀಕ್ಷಿತ ಅಖಿಲ ಭಾರತ ನಾಗರಿಕ ಸೇವಾ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಐಎಎಸ್ ಒಳಗೊಂಡಂತೆ ನಾಗರಿಕ ಸೇವಾ ಹುದ್ದೆಗಳ ನೇಮಕಾತಿ ಪರೀಕ್ಷೆಗೆ 979 ಹಾಗೂ ಭಾರತೀಯ ಅರಣ್ಯ ಸೇವೆಗೆ 150 ಹುದ್ದೆಗಳನ್ನು ನಿಗದಿ ಮಾಡಲಾಗಿದ್ದು, ಒಟ್ಟು 1,129 ಸ್ಥಾನಗಳನ್ನು ಈ ಪರೀಕ್ಷೆಗಳ ಮೂಲಕ ಭರ್ತಿ ಮಾಡಿಕೊಳ್ಳಲಿದೆ.
UPSC ಯು ಕಮಿಷನ್/ ಕೇಂದ್ರ ಲೋಕ ಸೇವಾ ಆಯೋಗ. (ಯುಪಿಎಸ್‌ಸಿ) ಎಂದು ಕರೆಯಲ್ಪಡುವ ಭಾರತ ಸರ್ಕಾರದ ಉನ್ನತ ಕೇಂದ್ರ ನೇಮಕಾತಿ ಸಂಸ್ಥೆಯಾಗಿದ್ದು, ಗ್ರೂಪ್ ‘ಎ’ ಅಧಿಕಾರಿಗಳ ನೇಮಕಾತಿ ನೋಡಿಕೊಳ್ಳುತ್ತದೆ.
ಎಲ್ಲಾ ಕೇಂದ್ರ ಸಾರ್ವಜನಿಕ ವಲಯದ ಘಟಕಗಳು ಮತ್ತು ಕೇಂದ್ರ ಸ್ವಾಯತ್ತ ಸಂಸ್ಥೆಗಳು ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರದ ಸಂಸ್ಥೆಗಳ ಎಲ್ಲಾ ಗುಂಪು ‘ಎ’ ಹುದ್ದೆಗಳ ಪರೀಕ್ಷೆ, ನಾಮನಿರ್ದೇಶನ ಪ್ರಕ್ರಿಯೆಗಳ ಜವಾಬ್ದಾರಿ ವಹಿಸಿಕೊಂಡಿದೆ.
ವಿವಿಧ ಸರ್ಕಾರಿ ಏಜೆನ್ಸಿಗಳಿಗೆ ಸಿವಿಲ್ ಉದ್ಯೋಗಿಗಳನ್ನು ಆಯ್ಕೆ ಮಾಡಲು, ಶಾಸನಬದ್ಧ ಸರ್ಕಾರಿ ಸಂಸ್ಥೆಯಾದ ಯುಪಿಎಸ್‌ಸಿ ಪ್ರತಿ ವರ್ಷ ನಾಗರಿಕ ಸೇವೆಗಳ ಪರೀಕ್ಷೆಯನ್ನು ನಡೆಸುತ್ತದೆ.
ಯಾವ ಹುದ್ದೆಗಳಿಗೆ ನೇಮಕಾತಿ?
ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶ ಸೇವೆ, ಭಾರತೀಯ ಪೊಲೀಸ್ ಸೇವೆ, ಆಡಿಟ್ ಮತ್ತು ಅಕೌಂಟ್ಸ್ ಸೇವೆ. ಗ್ರೂಪ್ ಎ ಹುದ್ದೆಗಳು: ಸಿವಿಲ್ ಅಕೌಂಟ್ಸ್, ಕಾರ್ಪೋರೇಟ್ ಕಾನೂನು, ರಕ್ಷಣಾ ಅಕೌಂಟ್ಸ್, ಡಿಫೆನ್ಸ್ ಎಸ್ಟೇಟ್ಸ್, ಭಾರತೀಯ ಮಾಹಿತಿ ಸೇವೆ, ಅಂಚೆ ದೂರಸಂಪರ್ಕ, ಹಣಕಾಸು ಸೇವೆ, ರೈಲ್ವೆ ಮ್ಯಾನೇಜ್‌ಮೆಂಟ್, ರೈಲ್ವೆ ಸುರಕ್ಷತಾ ದಳ, ಭಾರತೀಯ ಕಂದಾಯ ಸೇವೆ ಹಾಗೂ ಇತರ ಗ್ರೂಪ್ ಬಿ ಸೇವೆಗಳು.
ಭಾರತೀಯ ಅರಣ್ಯ ಸೇವೆಯ 150 ಹುದ್ದೆಗಳು:
ಭಾರತೀಯ ಅರಣ್ಯ ಸೇವೆಯ 150 ಹುದ್ದೆಗಳಿಗೂ ಅಧಿಸೂಚನೆ ಹೊರಡಿಸಲಾಗಿದ್ದು, ಇದಕ್ಕೆ ನಾಗರಿಕ ಸೇವಾ ಪರೀಕ್ಷೆಯ (ಸಿಎಸ್‌ಇ) ಪೂರ್ವಭಾವಿ ಪರೀಕ್ಷೆಯೇ ಅಧಾರವಾಗಿರುತ್ತದೆ. ಆದರೆ, ಈ ಹುದ್ದೆಗಳನ್ನು ಬಯಸುವವರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕಿರುತ್ತದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದವರ ಪೈಕಿ ಆಯ್ದವರನ್ನು ಮುಖ್ಯ ಪರೀಕ್ಷೆಗೆ ಪರಿಗಣಿಸಲಾಗುತ್ತದೆ. ನಾಗರಿಕ ಸೇವಾ ಹುದ್ದೆಯ ಮುಖ್ಯ ಪರೀಕ್ಷೆಗಿಂತ ಕೊಂಚ ಭಿನ್ನವಾಗಿದ್ದು, ಇಲ್ಲಿ ಎರಡು ಐಚ್ಛಿಕ ವಿಷಯಗಳಿಗೆ ಪರೀಕ್ಷೆ ಬರೆಯಬೇಕಿರುತ್ತದೆ.
ಪ್ರಸ್ತುತ ಐಎಎಸ್ (ಭಾರತೀಯ ಆಡಳಿತ ಸೇವೆ), ಐಪಿಎಸ್ (ಭಾರತೀಯ ಪೊಲೀಸ್ ಸೇವೆ), ಐಎಫ್‌ಎಸ್ (ಭಾರತೀಯ ವಿದೇಶಾಂಗ ಸೇವೆ), ಐಆರ್‌ಎಸ್ (ಭಾರತೀಯ ಕಂದಾಯ ಸೇವೆಗಳು) ಮತ್ತು ಇತರ ಅಖಿಲ ಭಾರತ ಗ್ರೂಪ್ ಎ ಮತ್ತು ಬಿ ಸೇವೆಗಳಿಗೆ ಪ್ರಿಲಿಮ್ಸ್ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ್ದು, ಅರ್ಜಿ ಸಲ್ಲಿಕೆಗೆ ಫೆ.11 ಕೊನೇ ದಿನವಾಗಿದೆ.
ಇದರಲ್ಲಿ 38 ಹುದ್ದೆಗಳು ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ದೇಶಾದ್ಯಂತ ಬೆಂಗಳೂರು ಸೇರಿದಂತೆ 80 ಸ್ಥಳಗಳಲ್ಲಿ ಪ್ರಿಲಿಮ್ಸ್ ಪರೀಕ್ಷೆ ನಡೆಸಲಾಗುವುದು. ವಿವರವಾದ ಅಧಿಸೂಚನೆಗೆ upsconline.nic.in ನೋಡಿ.
UPSC ಅರ್ಹತಾ ಮಾನದಂಡಗಳು:
ವಿವಿಧ ಯುಪಿಎಸ್‌ಸಿ ಪರೀಕ್ಷೆಗಳಿಗೆ ಅರ್ಹತೆಯ ಮಾನದಂಡಗಳು ಅಗತ್ಯವಿರುವ ಶೈಕ್ಷಣಿಕ ಅರ್ಹತೆಗಳ ವಿಷಯದಲ್ಲಿ ಭಿನ್ನವಾಗಿರುತ್ತವೆ. ಆದಾಗ್ಯೂ, ಮೂಲಭೂತ ಅವಶ್ಯಕತೆಗಳೆಂದರೆ ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿರಬೇಕು ಮತ್ತು ಯಾವುದೇ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ:
ವಯಸ್ಸಿನ ಮಿತಿ ಕೂಡ ಒಂದು ಮಾನದಂಡವಾಗಿದೆ. ಕನಿಷ್ಠ 21 ವರ್ಷ ನಿಗದಿಯಾಗಿದ್ದು, . ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 32 ವರ್ಷ, ಒಬಿಸಿಗೆ 35, ಎಸ್‌ಸಿ/ಎಸ್‌ಟಿಗೆ 37 ಹಾಗೂ ಅಂಧ ಅಥವಾ ಮೂಳೆಚಿಕಿತ್ಸೆ ಪಡೆದವರಿಗೆ 42 ವರ್ಷಗಳ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ:
ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಮೂರು ಹಂತಗಳನ್ನು ತೆರವುಗೊಳಿಸಬೇಕು ಅಭ್ಯರ್ಥಿಗಳು ಮೊದಲು ಪೂರ್ವಭಾವಿ ಪರೀಕ್ಷೆ ( ಪ್ರಿಲಿಮ್ಸ್ ) ನಂತರ ಮುಖ್ಯ ಪರೀಕ್ಷೆ ( ಮೆನ್ಸ್ ) ಮತ್ತು ತದನಂತರ ಸಂದರ್ಶನ ಸುತ್ತಿಗೆ ಹಾಜರಾಗಬೇಕಿರುತ್ತದೆ.
ಪೂರ್ವಭಾವಿ ಪರೀಕ್ಷೆ:
UPSC ಪೂರ್ವಭಾವಿ ಪರೀಕ್ಷೆಯ ತಲಾ ಎರಡು, ಎರಡು ಗಂಟೆಗಳಂತೆ ಒಟ್ಟು ನಾಲ್ಕು ಗಂಟೆಗಳ ಆಬ್ಜೆಕ್ಟಿವ್ ಟೈಪ್ ( ಬಹು ಆಯ್ಕೆ ಮಾದರಿನಲ್ಲಿ ಇರುತ್ತದೆ)
ಎರಡನೇ ಪತ್ರಿಕೆಯು ಸಿಎಸ್‌ಎಟಿ ( ಸಿವಿಲ್ ಸರ್ವಿಸ್ ಆಪ್ಟಿಟ್ಯೂಡ್ ಟೆಸ್ಟ್) ಅರ್ಹತೆಯನ್ನು ಹೊಂದಿದೆ ಮತ್ತು ಉತ್ತೀರ್ಣರಾಗಲು 33 ಪ್ರತಿಶತ ಅಂಕಗಳ ಅಗತ್ಯವಿದೆ. ಮತ್ತೊಂದಡೆಗೆ ಮೊದಲ ಪತ್ರಿಕೆಯ ಆಧಾರದ ಮೇಲೆ ಕಟ್ ಆಫ್ ಅಂಕಗಳನ್ನು ಸಿದ್ಧಪಡಿಸಲಾಗುತ್ತದೆ ಮತ್ತು ಅದರ ಪ್ರಕಾರ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ.
ಇದು ಇಂಗ್ಲೀಷ್ ಭಾಷೆ, ಸಂಖ್ಯಾತ್ಮಕ ಯೋಗ್ಯತೆ, ಸಾಮಾನ್ಯ ಅರಿವು, ತಾರ್ಕಿಕತೆ ಇತ್ಯಾದಿಗಳನ್ನು ಒಳಗೊಂಡಂತೆ ವಿವಿಧ ವಿಷಯಗಳಿಂದ ಬಹು ಆಯ್ಕೆಯ ಪ್ರಶ್ನೆಗಳೊಂದಿಗೆ ಎರಡು ನೂರು ಅಂಕಗಳ ಎರಡು ಪತ್ರಿಕೆಗಳನ್ನು ಒಳಗೊಂಡಿದೆ.
ಮುಖ್ಯ ಪರೀಕ್ಷೆ :
ಪೂರ್ವಭಾವಿ ಸುತ್ತಿನಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳನ್ನು ಮುಖ್ಯ ಪರಿಕ್ಷೆಗೆ ಆಹ್ವಾನಿಸಲಾಗುವುದು. ಇದು ಭಾಷೆ, ಪ್ರಬಂಧ, ಬರವಣಿಗೆ ಮತ್ತು ಸಾಮಾನ್ಯ ಅಧ್ಯಯನಗಳ ಮೇಲೆ ಆರು ಪ್ರತ್ಯೇಕ ಕಡ್ಡಾಯ ಪತ್ರಿಕೆಗಳನ್ನು ಒಳಗೊಂಡಿದೆ.
ಪ್ರತಿಯೊಂದು ಪತ್ರಿಕೆಗೂ ಮೂರು ಗಂಟೆಗಳನ್ನು ನೀಡಲಾಗಿರುತ್ತದೆ. ಅಂತಿಮವಾಗಿ ಐಚ್ಚಿಕ ಪತ್ರಿಕೆ ಇರಲಿದೆ ಇಲ್ಲಿ ಎರಡು ಪರೀಕ್ಷೆಗಳಿರುತ್ತವೆ ಮತ್ತು ವಿಷಯವನ್ನು ಅಭ್ಯರ್ಥಿಗಳೇ ಆಯ್ಕೆ ಮಾಡಿಕೊಳ್ಳಬಹುದು.
ಸಂದರ್ಶನ:
ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ ಇದು ವ್ಯಕ್ತಿತ್ವ ಪರೀಕ್ಷೆಯಾಗಿದ್ದು ಅಭ್ಯರ್ಥಿಗಳ ಮುಖ್ಯಘಟ್ಟವಾಗಿದೆ.
ಎಷ್ಟು ಬಾರಿ ಪರೀಕ್ಷೆ ಬರೆಯಬಹುದು?
ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಅನುಸಾರ 6 ಬಾರಿ ಪರೀಕ್ಷೆ ಬರೆಯಲು ಅವಕಾಶ ಇರುತ್ತದೆ. ಒಬಿಸಿ, ಪಿಡಬ್ಲ್ಯುಡಿ ಅಭ್ಯರ್ಥಿಗಳು 9 ಬಾರಿ ಪರೀಕ್ಷೆಗೆ ಹಾಜರಾಗಬಹುದಾಗಿದೆ. ಎಸ್‌ಸಿ, ಎಸ್ಟಿ ಅಭ್ಯರ್ಥಿಗಳಿಗೆ ಯಾವುದೇ ಮಿತಿ ಇರುವುದಿಲ್ಲ.
ಸಾಮಾನ್ಯ ವರ್ಗ, ಒಬಿಸಿ/ ಇಡಬ್ಲ್ಯುಎಸ್ ಅಭ್ಯರ್ಥಿಗಳು ಫೆ.10ರ ಒಳಗಾಗಿ 100ರೂ. ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು. ಇತರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
ಕನ್ನಡದಲ್ಲಿ ಪರೀಕ್ಷೆ ಇದೆಯೇ?
ಐಎಎಸ್ ಪ್ರಿಲಿಮ್ಸ್, ಮೇನ್ಸ್ ಎರಡು ಪರೀಕ್ಷೆ ಕನ್ನಡದಲ್ಲಿ ಬರೆಯಬಹುದೇ? ಎಂಬುದು ಸಾಕಷ್ಟು ಅಭ್ಯರ್ಥಿಗಳ ಪ್ರಶ್ನೆಯಾಗಿರುತ್ತದೆ. ಪ್ರಿಲಿಮ್ಸ್ (ಪೂರ್ವಭಾವಿ ಪರೀಕ್ಷೆ) ಅನ್ನು ಕನ್ನಡದಲ್ಲಿ ಬರೆಯಲು ಅವಕಾಶ ಇರುವುದಿಲ್ಲ. ಇಂಗ್ಲಿಷ್ ಮತ್ತು ಹಿಂದಿ ಮಾತ್ರ. ಆದರೆ ಮುಖ್ಯ ಪರೀಕ್ಷೆ (ಮೇನ್ಸ್) ಅನ್ನು ಕನ್ನಡದಲ್ಲಿ ಬರೆಯಲು ಅವಕಾಶ ಇರುತ್ತದೆ.
ಭಾರತದ ಹಲವು ಭಾಷೆಗಳಲ್ಲಿ ಕನ್ನಡ ಸಹ ಒಂದು ಎಂದು ಯುಪಿಎಸ್‌ಸಿ ಕನ್ನಡದಲ್ಲೇ ಪರೀಕ್ಷೆ ಬರೆಯಲು ಅನುಮತಿ ನೀಡಿದೆ. ಆದರೂ ಮೇನ್ಸ್ ಪ್ರಶ್ನೆ ಪತ್ರಿಕೆಗಳು ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಪ್ರಿಂಟ್ ಆಗಿರುತ್ತದೆ. ಐಚ್ಛಿಕ ವಿಷಯ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ಬರೆಯಲು ಆಯ್ಕೆ ಮಾಡಿಕೊಂಡಲ್ಲಿ, ಜೆನರಲ್ ಸ್ಟಡೀಸ್ ಪೇಪರ್ ಪರೀಕ್ಷೆಯನ್ನು ಸಹ ಕನ್ನಡದಲ್ಲೇ ಬರೆಯಬೇಕು. ಆದರೆ ಒಂದು ಇಂಗ್ಲಿಷ್ ಅರ್ಹತಾ ಪರೀಕ್ಷೆ ಪೇಪರ್ ಇರುತ್ತದೆ. ಇದರಲ್ಲಿ ಕನಿಷ್ಠ ಪಾಸಿಂಗ್ ಅಂಕಗಳನ್ನು ಗಳಿಸಬೇಕಾಗಿರುತ್ತದೆ. ಹಾಗೆಯೇ ಸಂದರ್ಶನವನ್ನೂ ಕನ್ನಡದಲ್ಲಿ ಎದುರಿಸಬಹುದಾಗಿದೆ.
ಗಮನಿಸಬೇಕಾದ ಮುಖ್ಯ ಅಂಶಗಳು:
ಅರ್ಜಿ ಸಲ್ಲಿಕೆ ಆರಂಭಕ್ಕೆ ಅನ್ವಯಿಸಿದಂತೆ 10 ದಿನಗಳಿಗಿಂತ ಹಳೆಯ ಪೋಟೋ ಅಪ್‌ಲೋಡ್ ಮಾಡುವಂತಿಲ್ಲ
ಹೆಸರು, ಫೋಟೋ ತೆಗೆದ ದಿನವನ್ನು ಫೋಟೋ ಮೇಲೆ ನಮೂದಿಸಿ
ಫೋಟೋದ 3/4 ಭಾಗವು ಅಭ್ಯರ್ಥಿಯ ಮುಖವನ್ನು ಆವರಿಸಿಕೊಂಡಿರಬೇಕು
ಗಡ್ಡ, ಮೀಸೆ, ಕನ್ನಡಕಧಾರಿಯಾಗಿ ಫೋಟೋ ತೆಗೆದಿದ್ದರೆ ಅದೇ ಸ್ವರೂಪದಲ್ಲೇ ಪರೀಕ್ಷೆಗೆ ಹಾಜರಾಗಬೇಕು
30 ನಿಮಿಷ ಮುಂಚಿತವಾಗಿ ಪರೀಕ್ಷೆ ಕೇಂದ್ರದಲ್ಲಿ ಹಾಜರಿರಬೇಕು. ತಡವಾದರೆ ಪ್ರವೇಶವಿಲ್ಲ.
ಆಕ್ಷೇಪಣೆ ಸಲ್ಲಿಕೆ:
ಪರೀಕ್ಷೆ ಮುಗಿದ ಮರುದಿನದಿಂದ ನಂತರದ ಏಳು ದಿನಗಳವರೆಗೆ ಪ್ರಶ್ನೆಪತ್ರಿಕೆಗೆ ಸಂಬಂಧಿಸಿದ ಆಕ್ಷೇಪಣೆ ಗಳಿದ್ದಲ್ಲಿ ನಿಗದಿತ ಪೋರ್ಟಲ್ ಮೂಲಕವೇ ಸಲ್ಲಿಸತಕ್ಕದ್ದು. ಪರೀಕ್ಷೆ ನಿಗದಿಯಾದ ಒಂದು ವಾರಕ್ಕೆ ಮುಂಚಿತವಾಗಿ ಪ್ರವೇಶಪತ್ರಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
ಒಂದು ಬಾರಿಯ ನೋಂದಣಿಗೆ (ಒಟಿಆರ್) ಕೊನೆ ದಿನಾಂಕ:18.02.2025
ಅರ್ಜಿ ಸಲ್ಲಿಸಲು ಕೊನೇ ದಿನ: 11.02.2025
ಅರ್ಜಿ ತಿದ್ದುಪಡಿಗೆ ಅವಕಾಶ: ಫೆ.12 ರಿಂದ 18ರವರೆಗೆ
ಪರೀಕ್ಷೆ ನಡೆಯುವ ದಿನ :25-05-2025
ಅರ್ಜಿ ಶುಲ್ಕ: ₹ 100
ರಾಜ್ಯದಲ್ಲಿ ಪರೀಕ್ಷಾ ಕೇಂದ್ರ:
ಬೆಂಗಳೂರು, ಧಾರವಾಡ ಮತ್ತು ಮೈಸೂರು
ಅಭ್ಯರ್ಥಿಗಳಿಗೆ ಸಹಾಯವಾಣಿ:
011-23385271
011-23381125
011-23098543
ಪ್ರಮುಖ ಲಿಂಕ್ ಈ ಕೆಳಗೆ ನೀಡಲಾಗಿದೆ.
CSE NOTIFICATION- CLICK HERE
IFS NOTIFICATION – CLICK HERE
Online Application – CLICK HERE