Samagra Shikshana Karnataka: ವೇತನ, ಹಬ್ಬದ ಮುಂಗಡ, ರಜೆ ನಗದೀಕರಣಕ್ಕೆ ₹1421.79 ಲಕ್ಷ ಬಿಡುಗಡೆ
Samagra Shikshana Karnataka: 2025-26ನೇ ಸಾಲಿಗೆ ಸಮಗ್ರ ಶಿಕ್ಷಣ ಕರ್ನಾಟಕ ರಡಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಡಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ ಶಿಕ್ಷಕರ ವೇತನಕ್ಕೆ ಕೊರತೆಯಾಗುವ ಅನುದಾನವನ್ನು ಒದಗಿಸುವ ಕುರಿತು.
ಮೇಲೆ ಓದಲಾದ ಕ್ರಮ ಸಂಖ್ಯೆ (1)ರಲ್ಲಿ 2025-26ನೇ ಸಾಲಿಗೆ ಸಮಗ್ರ ಶಿಕ್ಷಣ ಕರ್ನಾಟಕ ರಡಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಡಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ ಶಿಕ್ಷಕರ ವೇತನ, ಹಬ್ಬದ ಮುಂಗಡ, ಗಳಿಕೆ ರಜೆ ನಗದೀಕರಣ ಹಾಗೂ ಬಡ್ತಿಯ ವ್ಯತ್ಯಾಸದ ಮೊತ್ತಕ್ಕೆ ಲೆಕ್ಕ ಶೀರ್ಷಿಕೆ:2202-00-101-0-19 & 2202-00-102-0-200 ರಡಿಯಲ್ಲಿ ಕೊರತೆಯಾಗುವ ₹1904.62 (ಒಂದು ಸಾವಿರದ ಒಂಬೈನೂರ ನಾಲ್ಕು ಲಕ್ಷದ ಅರವತ್ತೆರಡು ಸಾವಿರ ಮಾತ್ರ) ಗಳ ಅನುದಾನವನ್ನು ಒದಗಿಸುವಂತೆ ಕೋರಿರುವರು.
ಮೇಲೆ ಓದಲಾದ ಕ್ರಮ ಸಂಖ್ಯೆ (2) ರಲ್ಲಿ 2025-26 ನೇ ಸಾಲಿಗೆ ಸಮಗ್ರ ಶಿಕ್ಷಣ ಕರ್ನಾಟಕ ರಡಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ / ಶಿಕ್ಷಕರ ವೇತನ, ಹಬ್ಬದ ಮುಂಗಡ, ಗಳಿಕೆ ರಜೆ ನಗದೀಕರಣ ಹಾಗೂ ಬಡ್ತಿಯ ವ್ಯತ್ಯಾಸದ ಮೊತ್ತಕ್ಕಾಗಿ ಲೆಕ್ಕ ಶೀರ್ಷಿಕೆ: 2202-01-197-1-02-401 ಅಡಿಯಲ್ಲಿ ಬೆಂಗಳೂರು ನಗರಕ್ಕೆ ₹262.09 ಲಕ್ಷಗಳು
414- ವಿಜಯಪುರ ಅಡಿಯಲ್ಲಿ ರೂ.339.63 ಲಕ್ಷಗಳು, 416-ಉತ್ತರ ಕನ್ನಡ ಅಡಿಯಲ್ಲಿ ರೂ.160.00 ಲಕ್ಷಗಳು, 420-ರಾಯಚೂರು ಅಡಿಯಲ್ಲಿ ರೂ.89.60 ಲಕ್ಷಗಳು, 451-ದಾವಣಗೆರೆ ಅಡಿಯಲ್ಲಿ ರೂ.170.00 ಲಕ್ಷಗಳು, 457-ಉಡುಪಿ ಅಡಿಯಲ್ಲಿ ರೂ.19.70 ಲಕ್ಷಗಳು, 463 ಹಾವೇರಿ ಅಡಿಯಲ್ಲಿ ರೂ.333.00 ಲಕ್ಷಗಳು ಹಾಗೂ ಲೆಕ್ಕ ಶೀರ್ಷಿಕೆ 2202-02-196-1-03-403 ಅಡಿಯಲ್ಲಿ ಚಿತ್ರದುರ್ಗಕ್ಕೆ ರೂ.4.00 ಲಕ್ಷಗಳು,
405-ಶಿವಮೊಗ್ಗ, ಅಡಿಯಲ್ಲಿ ರೂ.5.26 ಲಕ್ಷಗಳು, 406 ತುಮಕೂರು ಅಡಿಯಲ್ಲಿ ರೂ.5.50 ಲಕ್ಷಗಳು, 451-ದಾವಣಗೆರೆ ಅಡಿಯಲ್ಲಿ ರೂ.295 ಲಕ್ಷಗಳು, 457-ಉಡುಪಿ ಅಡಿಯಲ್ಲಿ ರೂ.3.50 ಲಕ್ಷಗಳು, 461-ಬಾಗಲಕೋಟೆ ಅಡಿಯಲ್ಲಿ ರೂ.24.40 ಲಕ್ಷಗಳು, 462-ಗದಗ ಅಡಿಯಲ್ಲಿ ರೂ.2.16 ಲಕ್ಷಗಳು ಒಟ್ಟು ರೂ. 1421.79 ಲಕ್ಷಗಳು ಕೊರತೆಯಾಗಿರುತ್ತದೆ. ಆದ್ದರಿಂದ ಲೆಕ್ಕ ಶೀರ್ಷಿಕೆ 2202-02-001-0-50-014 – ಇತರೆ ಭತ್ಯೆ ಅಡಿಯಲ್ಲಿ ಉಳಿತಾಯವಾಗುವ ಒಟ್ಟು ರೂ. 1421, ಲಕ್ಷಗಳನ್ನು ಪುನರ್ವಿನಿಯೋಗದ ಮೂಲಕ ಒದಗಿಸಲು ಮಂಜೂರಾತಿ ನೀಡಿದೆ.
ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಇಪಿ 11 ಯೋಯೋಕ 2026, ಬೆಂಗಳೂರು, ದಿನಾಂಕ:13.03.2026
2025-26 ನೇ ಸಾಲಿಗೆ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ಸಮಗ್ರ ಶಿಕ್ಷಣ ಕರ್ನಾಟಕ ರಡಿ ತಾಲ್ಲುಕು ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ ಶಿಕ್ಷಕರ ವೇತನ, ಹಬ್ಬದ ಮುಂಗಡ, ಗಳಿಕೆ ರಜೆ ನಗದೀಕರಣ ಹಾಗೂ ಬಡ್ತಿಯ ವ್ಯತ್ಯಾಸದ ಮೊತ್ತಕ್ಕಾಗಿ ಲೆಕ್ಕ ಶೀರ್ಷಿಕ 2202-01-197-1-02-401 -ಬೆಂಗಳೂರು ನಗರ ಅಡಿಯಲ್ಲಿ ರೂ.262.09 ಲಕ್ಷಗಳು, 414-ವಿಜಯಪುರ ಅಡಿಯಲ್ಲಿ ರೂ.339.63 ಲಕ್ಷಗಳು, 416-ಉತ್ತರ ಕನ್ನಡ ಅಡಿಯಲ್ಲಿ ರೂ.160.00 ಲಕ್ಷಗಳು,
420 ರಾಯಚೂರು ಅಡಿಯಲ್ಲಿ ರೂ.89.60 ಲಕ್ಷಗಳು, 451-ದಾವಣಗೆರೆ ಅಡಿಯಲ್ಲಿ ರೂ. 170.00 ಲಕ್ಷಗಳು, ರೂ.457-ಉಡುಪಿ ಅಡಿಯಲ್ಲಿ ರೂ.19.70 ಲಕ್ಷಗಳು, 463-ಹಾವೇರಿ ಅಡಿಯಲ್ಲಿ ರೂ. 333.00 ಲಕ್ಷಗಳು ಹಾಗೂ ಲೆಕ್ಕ ಶೀರ್ಷಿಕೆ 2202-02-196-1-03-403-22 ಚಿತ್ರದುರ್ಗ ಅಡಿಯಲ್ಲಿ ₹4.00 ಲಕ್ಷಗಳು, 405-ಶಿವಮೊಗ್ಗ, ಅಡಿಯಲ್ಲಿ ರೂ.5.26 ಲಕ್ಷಗಳು,
406-ತುಮಕೂರು ಅಡಿಯಲ್ಲಿ ರೂ.5.50 ಲಕ್ಷಗಳು, 451-ದಾವಣಗೆರೆ ಅಡಿಯಲ್ಲಿ ರೂ.2.95 ಲಕ್ಷಗಳು, 457-ಉಡುಪಿ ಅಡಿಯಲ್ಲಿ ರೂ.3.50 ಲಕ್ಷಗಳು,
461-ಬಾಗಲಕೋಟೆ ಅಡಿಯಲ್ಲಿ ರೂ.24.40 ಲಕ್ಷಗಳು ಹಾಗೂ 462-ಗದಗ ಅಡಿಯಲ್ಲಿ ರೂ.2.16 ಲಕ್ಷಗಳು ಸೇರಿ ಒಟ್ಟು ರೂ 1421.79 (Rupees One Thousand Four Hundred Twenty-One Lakh and Seventy-Nine Thousand Only) ಲಕ್ಷಗಳನ್ನು ಈ ಆದೇಶದೊಂದಿಗೆ ಲಗತ್ತಿಸಿರುವ ಅನುಬಂಧದ ರೀತ್ಯ ಪುನರ್ವಿನಿಯೋಗದ ಮೂಲಕ ಒದಗಿಸಿ ಅನುಮತಿ ನೀಡಿ ಆದೇಶಿಸಿದೆ.
(ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: FD /120/ EXP8/2026. ದಿನಾಂಕ: 07-03-2026 ರನ್ನಯ ಹೊರಡಿಸಿದ).
ಷರತ್ತು: ಸದರಿ ಆದೇಶಕ್ಕೆ ಸಂಬಂಧಿಸಿದ ಬಿಲ್ಲುಗಳನ್ನು ದಿನಾಂಕ:17.03.2026ರೊಳಗೆ ಖಜಾನೆಗೆ ಸಲ್ಲಿಸತಕ್ಕದ್ದು ಎಂದು ತಿಳಿಸಲಾಗಿದೆ.
