Allen Scholarship Admission Test-2025: ವಿದ್ಯಾರ್ಥಿಗಳಿಗೆ ಶೇ.90 ವಿದ್ಯಾರ್ಥಿವೇತನ.
ALLEN scholarship :ಆಲೆನ್ ಕರಿಯರ್ ಸಂಸ್ಥೆಯು ಏ. 2ರಿಂದ ಆರಂಭವಾಗಿ , JEE, NEET, UG ಪ್ರವೇಶ ಪರೀಕ್ಷೆಗಳನ್ನು ಆಯೋಜಿಸಲು ಆರಂಭಿಸಲಿದೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಉತ್ತೇಜಿಸಲು ಆಲೆನ್ ಸ್ಕಾಲರ್‌ಶಿಪ್ ಅಡ್ಮಿಷನ್ ಟೆಸ್ಟ್ ಗೆ [ASAT] ಮಹಾ ಅವಸರ್ [ಮಹಾ ಸಂದರ್ಭ ಎಂಬ ಹೆಸರು ನೀಡಿ ಪ್ರವೇಶ ಸೌಲಭ್ಯವನ್ನೂ ಆರಂಭಿಸಿದೆ.
ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರುವ ವಿದ್ಯಾರ್ಥಿಗಳಿಗೆ ಶೇ.90 ವಿದ್ಯಾರ್ಥಿವೇತನ ದೊರೆಯಲಿದೆ. ಎಎಸ್‌ಎಟಿಯನ್ನು ಕೋಟದ ಆಲೆನ್ ಕೇಂದ್ರದಲ್ಲಿ ಏ. 2ರವರೆಗೆ ಪ್ರತಿದಿನ ಮಧ್ಯಾಹ್ನ 1ರಿಂದ 3 ಗಂಟೆಗೆ ಏರ್ಪಡಿಸಲಾಗುತ್ತದೆ ಎಂದು ಆಲೆನ್ ಸಂಸ್ಥೆ ತಿಳಿಸಿದೆ. ಕೋಟದಲ್ಲಿ ಅಷ್ಟೇ ಅಲ್ಲದೆ, ರಾಷ್ಟ್ರಾದ್ಯಂತದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಷ್ಟ್ರದೆಲ್ಲೆಡೆ ಇರುವ ತನ್ನ ಕೇಂದ್ರಗಳಲ್ಲಿ ಕೂಡ ಮಾ. 30, ಏ. 6 ಮತ್ತು 13ನೇ ಎಎಸ್ಎಟಿ ಅನ್ನು ಆಯೋಜಿಸಲಾಗುವುದು ಎಂದು ಹೇಳಿದೆ. ಈ ಕುರಿತ ಹೆಚ್ಚಿನ ಮಾಹಿತಿಯು www.allen.in ಜಾಲತಾಣದಲ್ಲಿ ಲಭ್ಯವಿದೆ.
10-12ನೇ ತರಗತಿ ವಿದ್ಯಾರ್ಥಿಗಳಿಗೂ ತರಬೇತಿ
10ರಿಂದ 11ನೇ ತರಗತಿಗೆ ದಾಖಲಾತಿ ಪಡೆದುಕೊಳ್ಳಲಿರುವ ವಿದ್ಯಾರ್ಥಿಗಳಿಗಾಗಿ ಜೆಇಇ ಮೇನ್ ಮತ್ತು ಅಡ್ವಾನ್ಸಡ್ ನರ್ಚರ್ ಬ್ಯಾಚ್ ಆರಂಭಿಸಲಾಗುವುದು. ಈ ತರಗತಿಗಳು 4ನೇ ಏಪ್ರಿಲ್‌ನಿಂದ ಆರಂಭವಾಗಲಿವೆ. 11ನೇ ತರಗತಿ ತೇರ್ಗಡೆಯಾಗಿ 12ನೇ ತರಗತಿಗೆ ದಾಖಲಾಗಲಿರುವ ವಿದ್ಯಾರ್ಥಿಗಳಿಗಾಗಿ ಏ. 3 ಮತ್ತು 12ನೇ ತರಗತಿಯಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ಏ. 16ರಿಂದ ತರಗತಿಗಳು ಆರಂಭವಾಗಲಿವೆ. 12ನೇ ತರಗತಿಗೆ ದಾಖಲಾಗಲಿರುವ ವಿದ್ಯಾರ್ಥಿಗಳಿಗೆ ಏ. 2 ಮತ್ತು 16ರಿಂದ ನೀಟ್-ಯುಜಿ ನರ್ಚರ್ ಬ್ಯಾಚ್ ಆರಂಭವಾಗಲಿವೆ.
12ನೇ ತರಗತಿಗೆ ದಾಖಲಾಗಲಿರುವ ವಿದ್ಯಾರ್ಥಿಗಳಿಗೆ ಏ. 3 ಮತ್ತು 23ರಿಂದ ನರ್ಚರ್ ಬ್ಯಾಚ್ ಆರಂಭವಾಗಲಿದ್ದರೆ, 12ನೇ ತರಗತಿಯಲ್ಲಿ ತೇರ್ಗಡೆಯಾದವರಿಗೆ ಏ. 8ರಿಂದ ನರ್ಚರ್ ಬ್ಯಾಚ್ ಹಾಗೂ 10ರಿಂದ ಅಚೀವರ್ ಬ್ಯಾಚ್ ತರಬೇತಿಗಳು ಆರಂಭವಾಗಲಿವೆ.
