CBSE: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಪಠ್ಯ ಪರಿಷ್ಕರಣೆ,4,5,7, 8ನೇ ತರಗತಿ ಪುಸ್ತಕ ಬದಲು,ಸೇತು ಬಂಧ ಕಾರ್ಯಕ್ರಮ

CBSE: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಪಠ್ಯ ಪರಿಷ್ಕರಣೆ,4,5,7, 8ನೇ ತರಗತಿ ಪುಸ್ತಕ ಬದಲು,ಸೇತು ಬಂಧ ಕಾರ್ಯಕ್ರಮ

CBSE: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 2025-26ನೇ ಸಾಲಿಗೆ ನಾಲ್ಕು ತರಗತಿಗಳ ಪಠ್ಯಕ್ರಮ ಪರಿಷ್ಕರಣೆ ಮಾಡಲಿದ್ದು, ಇದಕ್ಕಾಗಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) ಸಾಮರ್ಥ್ಯಾಧಾರಿತ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಲಿದೆ.

ಕಳೆದ ವರ್ಷ ಮೂರು ಮತ್ತು ಆರನೇ ತರಗತಿ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿತ್ತು. ಮುಂಬರುವ ಶೈಕ್ಷಣಿಕ ಸಾಲಿಗೆ 4, 5, 7 ಹಾಗೂ 8ನೇ ತರಗತಿಯ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಈ ಕಾರ್ಯ ನಡೆಸಲಾಗುತ್ತಿದೆ ಎಂದು ಸಿಬಿಎಸ್‌ಇ ಹೇಳಿದೆ.

ಸೇತು ಬಂಧ ಕಾರ್ಯಕ್ರಮ:

ಪಠ್ಯ ಪರಿಷ್ಕರಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಎನ್‌ಸಿಇಆರ್‌ಟಿ ‘ಸೇತು ಬಂಧ’ (ಬ್ರಿಜ್ ಪ್ರೋಗ್ರಾಮ್) ಕಾರ್ಯಕ್ರಮ ರೂಪಿಸಿದೆ. ನೂತನ ಪಠ್ಯಕ್ರಮಕ್ಕೆ ಹೊಂದಿಕೊಳ್ಳಲು ಇದು ನೆರವಾಗಲಿದೆ. ಇದನ್ನು ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಮಾಡಲಾಗುವುದು ಎಂದು ತಿಳಿಸಿದೆ.

ಪುಸ್ತಕಗಳ ಲಭ್ಯತೆ:

▪️ನೂತನ ಪುಸ್ತಕಗಳು ಹಾಗೂ ಸೇತು ಬಂಧ ಕಾರ್ಯಕ್ರಮದ ಪಠ್ಯಗಳ ಲಭ್ಯತೆಯ ವೇಳಾಪಟ್ಟಿಯನ್ನು ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದೆ. ಅದರಂತೆ 4ನೇ ತರಗತಿಯ ಪಠ್ಯಗಳು మా.28రింద పప్రిలో 10 ರೊಳಗೆ ಲಭ್ಯವಾಗಲಿವೆ.

▪️5ನೇ ತರಗತಿಗೆ ಜೂ.15ರೊಳಗೆ ಹಿಂದಿ, ಇಂಗ್ಲಿಷ್, ಉರ್ದು, ಗಣಿತ ಸೇರಿ ಇತರ ಪುಸ್ತಕಗಳು ದೊರೆಯಲಿವೆ.

▪️5ನೇ ತರಗತಿಗೆ ಜೂ.15ರೊಳಗೆ ಹಿಂದಿ, ಇಂಗ್ಲಿಷ್, ಉರ್ದು, ಗಣಿತ ಸೇರಿ ಇತರ ಪುಸ್ತಕಗಳು ದೊರೆಯಲಿವೆ.

▪️ಏಳನೇ ತರಗತಿಯ ಪುಸ್ತಕಗಳು ಮಾ.28ರಿಂದ ದೊರೆಯಲಿದ್ದು, ಏಪ್ರಿಲ್ 20ರೊಳಗೆ ಇತರ ಪುಸ್ತಕಗಳು ಲಭ್ಯವಾಗಲಿವೆ ಎಂದು ತಿಳಿಸಲಾಗಿದೆ.

▪️8ನೇ ತರಗತಿ ಪುಸ್ತಕಗಳು ಜೂ.20ರೊಳಗಾಗಿ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಮಂಡಳಿ ಹೇಳಿದೆ.

▪️ಇದಲ್ಲದೆ, ಸೇತುಬಂಧ ಕಾರ್ಯಕ್ರಮದ ಎಲ್ಲ ವಿಷಯಗಳ ಪಠ್ಯಗಳು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.

▪️ಶಾಲೆಗಳಿಗೆ ಸೂಚನೆ:

ಹೊಸ ಪಠ್ಯಕ್ರಮಗಳಿಗೆ ಮಕ್ಕಳು ಹೊಂದಿಕೊಳ್ಳುವಂತಾಗಲು ಬ್ರಿಜ್ ಪ್ರೋಗ್ರಾಮ್ ಗಳನ್ನು ನಡೆಸುವುದು ಅಗತ್ಯವಾಗಿದೆ. ಹೀಗಾಗಿ NCERT ಬಿಡುಗಡೆ ಮಾಡಿರುವ ಕೈಪಿಡಿಗಳನ್ನು ಆಧರಿಸಿ 2025-26 ನೇ ಸಾಲಿಗೆ ಮಕ್ಕಳನ್ನು ತಯಾರು ಮಾಡುವಂತೆ ಶಾಲೆಗಳಿಗೆ ಸಿಬಿಎಸ್‌ಇ ನಿರ್ದೇಶನ ನೀಡಿದೆ.

▪️ಸಾಮರ್ಥ್ಯಾಭಿವೃದ್ಧಿ ಎಂದರೇನು?

ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ರೂಪಿಸಲಾಗಿದ್ದು, ಇದರನ್ವಯ ಸಾಮರ್ಥ್ಯಾಧಾರಿತ ಕಲಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಪಠ್ಯಪುಸ್ತಕಗಳ ವಿಷಯಗಳ ಕಂಠಪಾಠ, ಸ್ಮರಣೆಯನ್ನು ಉತ್ತೇಜಿಸುವ ಬದಲು ಕೌಶಲ ಹಾಗೂ ಸಾಮರ್ಥ್ಯಾಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ 21ನೇ ಶತಮಾನಕ್ಕೆ ಅಗತ್ಯವಾಗಿರುವ ವಿಚಾರಗಳನ್ನು ಬೋಧಿಸಲಾಗುತ್ತದೆ. ಯೋಚನಾಶಕ್ತಿ, ಸಮಸ್ಯೆಗೆ ಪರಿಹಾರ ಹಾಗೂ ಸಂವಹನ ಶಕ್ತಿಯನ್ನು ವೃದ್ಧಿಸಲಾಗುತ್ತದೆ. ಜತೆಗೆ ನಿಗದಿತ ಕಲಿಕಾ ಫಲಗಳನ್ನು ಸಾಧಿಸುವ ಗುರಿ ಹೊಂದಲಾಗಿದೆ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!