Foreign Education: ವಿದೇಶಿ ಅಧ್ಯಯನ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗಿರಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ-2025
Foreign Education: ವಿದೇಶದಲ್ಲಿ ವ್ಯಾಸಂಗ ಮಾಡಬೇಕು ಎನ್ನುವ ಹಂಬಲ ಅನೇಕ ವಿದ್ಯಾರ್ಥಿಗಳಿಗೆ ಇದೆ. ಹಲವರು ತಮ್ಮ ಕನಸನ್ನು ನನಸಾಗಿಸಿಕೊಂಡರೆ ಇನ್ನೂ ಕೆಲವರು ಅಗತ್ಯ ಮಾಹಿತಿ, ಸೂಕ್ತ ಮಾರ್ಗದರ್ಶನ, ಸಲಹೆಗಳು ಸಿಗದೆ ತಮ್ಮ ಗುರಿ ಸಾಧನೆಯಲ್ಲಿ ವಿಫಲರಾಗುತ್ತಾರೆ. ವಿದೇಶಿ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎಂಬ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಪ್ರವೇಶ ಪ್ರಕ್ರಿಯೆ:
ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಒಮ್ಮೆ ಮಾತ್ರ ಪ್ರವೇಶ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ. ಆದರೆ ವಿದೇಶಿ ವಿಶ್ವವಿದ್ಯಾಲಯಗಳು ಶೈಕ್ಷಣಿಕ ವರ್ಷದಲ್ಲಿ ಹಲವು ಬಾರಿ ಪ್ರವೇಶ ಪ್ರಕ್ರಿಯೆಗಳನ್ನು ನಡೆಸುತ್ತವೆ. ರಷ್ಯಾ, ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾದ ಹೆಚ್ಚಿನ ಕಾಲೇಜುಗಳು ವರ್ಷಕ್ಕೆ 2 ಬಾರಿ ಪ್ರವೇಶ ಪ್ರಕ್ರಿಯೆಗಳನ್ನು ನಡೆಸುತ್ತವೆ.
ಕಳೆದ ವರ್ಷ 1.3 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯ ವಿ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಿದ್ದಾರೆ ಎಂದು ಇತ್ತೀಚೆಗಷ್ಟೆ ರಾಜ್ಯಸಭೆಯಲ್ಲಿ ಕೇಂದ್ರ ಸರಕಾರ ಮಾಹಿತಿ,ಹಂಚಿಕೊಂಡಿದೆ. ಕಳೆದ ದಶಕಗಳಿಂದೀಚೆಗೆ ಪದವಿಪೂರ್ವ, ಪದವಿ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವುದು ಸರ್ವೇಸಾಮಾನ್ಯವಾದ ಸಂಗತಿ. ಅಂದಹಾಗೆ, ವಿದೇಶಿ ಅಧ್ಯಯನ ಎಂಬುದು ಕೂಡಲೇ ನಿರ್ಧರಿಸಿ ಮುಂದುವರಿಯುವಂಥದ್ದಲ್ಲ. ಯಾವ ದೇಶದಲ್ಲಿ, ಯಾವ ಸಂಸ್ಥೆಯಲ್ಲಿ ಅಧ್ಯಯನ ನಡೆಸಬೇಕು ಎಂಬುದನ್ನು ಮೊದಲೇ ನಿರ್ಧರಿಸಬೇಕಿರುತ್ತದೆ. ಏಕೆಂದರೆ ಪ್ರತಿಯೊಂದು ದೇಶವೂ ವಿದೇಶಿ ವಿದ್ಯಾರ್ಥಿಗಳ ಪ್ರವೇಶಕ್ಕೆ ತಮ್ಮದೇ ಆದ ನಿಯಮಗಳನ್ನು ರೂಢಿಸಿಕೊಂಡಿರುತ್ತವೆ. ಅದಕ್ಕನುಗುಣವಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಸಮಯದಲ್ಲಿಯೂ ಬದಲಾವಣೆಯಿರುತ್ತದೆ. ವಿದೇಶಿ ವ್ಯಾಸಂಗವು ಯಾವ ದೇಶದಲ್ಲಿ ಯಾವ ತೆರನಾಗಿದೆ, ಯಾವೆಲ್ಲ ರೀತಿಯಲ್ಲಿ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ? ಎಂಬ ಮಾಹಿತಿ ಇಲ್ಲಿದೆ.
ನಿರ್ದಿಷ್ಟ ಮಾಹಿತಿ ತಿಳಿದಿದ್ದರೆ ಒಳಿತು:
ಅಮೆರಿಕ, ಇಂಗ್ಲೆಂಡ್,ಕೆನಡಾ, ಆಸ್ಟ್ರೇಲಿಯಾ, ಐರ್ಲೆಂಡ್ ಹಾಗೂ ನ್ಯೂಜಿಲೆಂಡ್‌ನಂತಹ ದೇಶಗಳು ಭಾರತೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಇರುವ ಜನಪ್ರಿಯ ತಾಣಗಳಾಗಿವೆ. ಮೆಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ), ಇಂಪೀರಿಯಲ್ ಕಾಲೇಜ್ ಲಂಡನ್, ಹಾರ್ವಡ್್ರ ವಿಶ್ವವಿದ್ಯಾಲಯ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಂತಹ ಹೆಚ್ಚು ಮೆಚ್ಚುಗೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಸಮಯ, ಪರಿಶ್ರಮ ಹಾಗೂ ದೀರ್ಘಕಾಲದ ತಯಾರಿ ಬೇಕಾಗಿರುತ್ತದೆ. ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವು ದೇಶ, ವಿಶ್ವವಿದ್ಯಾಲಯಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ನಿರ್ದಿಷ್ಟ ಮಾಹಿತಿಗಳನ್ನು ತಿಳಿದುಕೊಂಡಿರುವುದು ಮುಖ್ಯ.
ಅಮೆರಿಕ ದೇಶ:
ಅಮೆರಿಕದಲ್ಲಿ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಒಂದು ವರ್ಷ ತೆಗೆದುಕೊಳ್ಳುತ್ತದೆ. ಪಿಯುಸಿ/12ನೇ ತರಗತಿಗೂ ಮುನ್ನ ವಿಶ್ವವಿದ್ಯಾಲಯಗಳು ನಡೆಸುವ SAT/ACT/, IELTS ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು. ಬಳಿಕ ವಿಶ್ವವಿದ್ಯಾಲಯದ ಆಯ್ಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅರ್ಜಿ ಪೋರ್ಟಲ್‌ಗಳು ಸಾಮಾನ್ಯವಾಗಿ ಆಗಸ್ಟ್ 1ರಿಂದ ಪ್ರಾರಂಭಗೊಂಡು, ನವೆಂಬರ್‌ನಲ್ಲಿ ಅಂತ್ಯಗೊಳ್ಳುತ್ತವೆ. ಪ್ರವೇಶ ಪ್ರಕ್ರಿಯೆಯು ಡಿಸೆಂಬರ್‌ನಿಂದ ಆರಂಭಗೊಳ್ಳುತ್ತದೆ. ಆದ್ದರಿಂದ
ಸಂಬಂಧಿತ ದಾಖಲೆಗಳನ್ನು ಮೊದಲೇ ಸಿದ್ದಪಡಿಸಿಕೊಳ್ಳುವುದು ಸೂಕ್ತ.
ಬ್ರಿಟನ್:
ಬ್ರಿಟನ್ ಶೈಕ್ಷಣಿಕ ಶ್ರೇಷ್ಠತೆಗೆ ಹೆಸರುವಾಸಿಯಾಗಿದ್ದು ಇಂಪೀರಿಯಲ್ ಕಾಲೇಜ್ ಲಂಡನ್, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಕೇಂಬ್ರಿಜ್ ವಿಶ್ವವಿದ್ಯಾಲಯ, ಯುಸಿಎಲ್ ೨ ನಂತಹ ಕೆಲವು ಉನ್ನತ ವಿಶ್ವವಿದ್ಯಾಲಯಗಳು ಬ್ರಿಟನ್‌ನಲ್ಲಿಯೇ – ಇವೆ. ಪದವಿಪೂರ್ವ ಕೋರ್ಸ್‌ಗಳಿಗೆ ಪ್ರಾಥಮಿಕ ಪ್ರವೇಶ 5 ಸೆಪ್ಟೆಂಬರ್‌ನಲ್ಲಿ ನಡೆಯುತ್ತದೆ. ಆ ಸಮಯದಲ್ಲಿ ಎಲ್ಲಾ , ಕಾಲೇಜುಗಳೂ ತೆರೆದಿರುತ್ತವೆ. ಆದರೆ, ಜನವರಿ ಸಮಯದಲ್ಲಿ ಮತ್ತೊಮ್ಮೆ ಪ್ರವೇಶ ಪ್ರಕ್ರಿಯೆ ನಡೆಯುತ್ತದೆ. ಆ ವೇಳೆ ಶೇ. 50ರಷ್ಟು : ವಿಶ್ವವಿದ್ಯಾಲಯಗಳು ತೆರೆದಿರುತ್ತವೆ. ಬ್ರಿಟನ್ ತನ್ನ ಪದವಿಪೂರ್ವ – ಪ್ರವೇಶ ಅರ್ಜಿಗಳನ್ನು ಯುಸಿಎಎಸ್ ವ್ಯವಸ್ಥೆಯ ಮೂಲಕ 5 ನಡೆಸುತ್ತದೆ. ಕೆಲವು ಸಂದರ್ಭಗಳಲ್ಲಿ ವಿದ್ಯಾರ್ಥಿಗಳು – ವಿಶ್ವವಿದ್ಯಾಲಯಗಳಿಗೆ ನೇರವಾಗಿ ಅರ್ಜಿಗಳನ್ನು ಸಲ್ಲಿಸುವುದು ಇರುತ್ತದೆ.
ಕೆನಡಾ:
ಕೆನಡಾದ ವಿಶ್ವವಿದ್ಯಾನಿಲಯಗಳು ನಿರೀಕ್ಷಿತ ಅಂಕಗಳ ೨ ಆಧಾರದ ಮೇಲೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅವಕಾಶ ರ ನೀಡುತ್ತವೆ. ಸೆಪ್ಟೆಂಬರ್ ತಿಂಗಳಲ್ಲಿ ಕಾಲೇಜು ಪ್ರವೇಶಾತಿ ಆರಂಭವಾಗಲಿದೆ. ಹಾಗಾಗಿ, ಅರ್ಜಿ ಸಲ್ಲಿಕೆಗೆ ಜನವರಿ ಅಥವಾ ಫೆಬ್ರವರಿಯಲ್ಲಿ ಕಾಲಾವಕಾಶ ಇರಲಿದೆ. ಹೆಚ್ಚಿನ ವಿಶ್ವ ವಿದ್ಯಾನಿಲಯಗಳು ಇಂಗ್ಲಿಷ್ ಭಾಷಾಧರಿತ ಪರೀಕ್ಷೆ ನಡೆಸಲಿವೆ. ಹಾಗಾಗಿ, ಅಭ್ಯರ್ಥಿಗಳು ಇಂಗ್ಲಿಷ್ ಪಾಂಡಿತ್ಯ ಹೊಂದಿರಬೇಕಿದೆ. ಕೆನಡಾದ ಕಾಲೇಜುಗಳು 12ನೇ ತರಗತಿಯ ನಂತರ ಎರಡು ವರ್ಷಗಳವೆರೆಗೆ ಅಧ್ಯಯನದಿಂದ ಹೊರಗುಳಿದ ವಿದ್ಯಾರ್ಥಿಗಳಿಗೂ ಅವಕಾಶವನ್ನು ಕಲ್ಪಿಸುತ್ತವೆ. ಸೆಪ್ಟೆಂಬರ್, ಜನವರಿ ಮತ್ತು ಮೇ ಈ ತಿಂಗಳಲ್ಲಿ ಪ್ರವೇಶ ಪ್ರಕ್ರಿಯೆಗಳು ನಡೆಯುತ್ತವೆ.
ಆಸ್ಟ್ರೇಲಿಯಾ:
ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳು ಜುಲೈ ಮತ್ತು ಫೆಬ್ರವರಿ ಸಮಯದಲ್ಲಿ ಎರಡು ಆರಂಭಿಕ ಪ್ರವೇಶಗಳನ್ನು ನಡೆಸಲಿವೆ. ಇಲ್ಲಿ ವ್ಯಾಸಂಗ ನಡೆಸಲು ಇಚ್ಛಿಸುವ ವಿದ್ಯಾರ್ಥಿಗಳು ಕನಿಷ್ಠ 8-9 ತಿಂಗಳುಗಳ ಮೊದಲು ಸಿದ್ಧತೆಗಳನ್ನು ಪ್ರಾರಂಭಿಸುವುದು ಸೂಕ್ತ. ವಿದ್ಯಾರ್ಥಿಗಳು 12ನೇ ತರಗತಿಯ ಆರಂಭದಲ್ಲಿ ಯುಜಿ ಕೋರ್ಸ್‌ಗಾಗಿ ಅಥವಾ ಕಾಲೇಜಿನ ಅಂತಿಮ ಸೆಮಿಸ್ಟರ್ ಆರಂಭದಲ್ಲಿ ಪಿಜಿ ಕೋರ್ಸ್‌ಗಾಗಿ ಶೈಕ್ಷಣಿಕ ಸಲಹೆಗಾರರನ್ನು ಸಂಪರ್ಕಿಸಬಹುದು.
ಐರ್ಲೆಂಡ್:
ಐರ್ಲೆಂಡ್‌ನಲ್ಲಿ ಶೈಕ್ಷಣಿಕ ವರ್ಷವನ್ನು ಎರಡು ಪ್ರವೇಶಗಳಾಗಿ ವಿಂಗಡಿಸಲಾಗಿದೆ. ಸೆಪ್ಟೆಂಬರ್ ಹಾಗೂ ಫೆಬ್ರವರಿಯಲ್ಲಿ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು 9, 10, 11ನೇ ತರಗತಿಯ ಫಲಿತಾಂಶ ಮತ್ತು 12ನೇ ತರಗತಿಯ ಶ್ರೇಣಿಯ ಆಧಾರದ ಮೇಲೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ವಿದೇಶಗಳಲ್ಲಿ ಪ್ರವೇಶ ಪ್ರಕ್ರಿಯೆ:
ಸೆಪ್ಟೆಂಬರ್‌ನಿಂದ ಡಿಸೆಂಬರ್:
ಸಾಮಾನ್ಯವಾಗಿ ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಪ್ರಾರಂಭವಾಗಿ ಡಿಸೆಂಬರ್ ಅಂತ್ಯದವರೆಗೆರೆಗೆ ಈ ಪ್ರವೇಶ ಪ್ರವೆಶ ಪ್ರಕ್ರಿಯೆ ನಡೆಯುತ್ತದೆ. ಇದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಮೊದಲ ಸೆಮಿಸ್ಟರ್ ಅಥವಾ ತೈಮಾಸಿಕದಲ್ಲಿ ಅಧ್ಯಯನವನ್ನು ಪ್ರಾರಂಭಿಸಲು ಅವಕಾಶವನ್ನು ನೀಡುತ್ತದೆ. ಹೊಸ ಪರಿಸರಕ್ಕೆ, ಶೈಕ್ಷಣಿಕ ವ್ಯವಸ್ಥೆಗೆ ಹೊಂದಿಕೊಳ್ಳಲು ಮತ್ತು ಇತರ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಲು ಇದು ಸಾಕಷ್ಟು ಸಮಯವನ್ನು ನೀಡುವುದರಿಂದ ಇದು ಹೆಚ್ಚಿನ ವಿದ್ಯಾರ್ಥಿಗಳಿಗೆ ಹೆಚ್ಚು ಬೇಡಿಕೆಯ ಪ್ರವೇಶವಾಗಿದೆ.
ಜನವರಿಯಿಂದ ಮೇ ಆರಂಭ:
ಸಾಮಾನ್ಯವಾಗಿ ಜನವರಿಯಿಂದ ಮೇ ಆರಂಭದವರೆಗೆ ವಿದೇಶಗಳಲ್ಲಿ 2ನೇ ಪ್ರವೇಶ ಪರೀಕ್ಷೆ ನಡೆಯುತ್ತದೆ: ಶೈಕ್ಷಣಿಕ ವರ್ಷದ 2ನೇ ಸೆಮಿಸ್ಟರ್ ಅಥವಾ ಮೂರನೇ ಸೆಮಿಸ್ಟರ್ ಅಧ್ಯಯನವನ್ನು ಪ್ರಾರಂಭಿಸಲು ಆದ್ಯತೆ ನೀಡುವ ವಿದ್ಯಾರ್ಥಿಗಳಿಗೆ ಈ ಅವಧಿ ಸೂಕ್ತ.
ಮೇ ನಿಂದ ಜುಲೈ:
ಸಾಮಾನ್ಯವಾಗಿ ಮೇ ತಿಂಗಳಿನಿಂದ ಜುಲೈ/ಆಗಸ್ಟ್‌ವರೆಗೆ ಬೇಸಿಗೆ ಕೋರ್ಸ್ ಅಥವಾ ಸಣ್ಣದಾದ ಕೋರ್ಸ್ ಹುಡುಕುತ್ತಿರುವವರಿಗೆ ಇದು ನೆರವಾಗುತ್ತದೆ. ಭಾಷಾ ತರಬೇತಿ, ಸಂಶೋಧನಾ ಇಂಟರ್ನ್‌ಷಿಪ್‌ಗಳಿಗಾಗಿ ಈ ಅವಧಿಯಲ್ಲಿ ಪ್ರವೇಶ ಪ್ರಕ್ರಿಯೆಗಳು ನಡೆಯುತ್ತವೆ.