Government Empolyee: ಸರಕಾರಿ ನೌಕರರಿಗೆ ಆಕರ್ಷಕ ವೇತನ ಪ್ಯಾಕೇಜ್, ವೇತನ ವಿಳಂಬವಾದರೆ ಓವರ್ ಡ್ರಾಫ್ಟ್
Government Empolyees:
ಸರಕಾರಿ ನೌಕರರು ಯಾವುದೇ ಕಂತು ಪಾವತಿಸದಿದ್ದರೂ ಇನ್ನು ಮುಂದೆ ಒಂದು ಕೋಟಿ ರೂ.ವರೆಗೆ ಅಪಘಾತ ವಿಮಾ ಪರಿಹಾರ, ವೇತನ ವಿಳಂಬವಾದರೆ ಓವರ್ ಡ್ರಾಫ್ಟ್ ಸೌಲಭ್ಯ ಪಡೆಯಲಿದ್ದಾರೆ.
ವೇತನ ಖಾತೆ ಹೊಂದಿರುವ ಸರಕಾರಿ ನೌಕರರಿಗೆ ರಾಷ್ಟ್ರೀಕೃತ ಹಾಗೂ ರಾಷ್ಟ್ರಮಟ್ಟದ ಖಾಸಗಿ ಬ್ಯಾಂಕ್‌ಗಳು ವೇತನ ಸೌಲಭ್ಯ ಪ್ಯಾಕೇಜ್‌ಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಸಲ್ಲಿಸಿದ್ದ ಪ್ರಸ್ತಾವಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ನೌಕರರು ಮತ್ತು ಅವರ ಅವಲಂಬಿತ ಸದಸ್ಯರ ಹಿತಾಸಕ್ತಿ ರಕ್ಷಣೆ ಕುರಿತು ಆರ್ಥಿಕ ಇಲಾಖೆ ಆದೇಶ ಹೊರಡಿಸಿತ್ತು. ಆದೇಶ ಹೊರಬಿದ್ದ ಬೆನ್ನಲ್ಲೇ ಹಲವು ಬ್ಯಾಂಕ್‌ಗಳು ಆಕರ್ಷಕ ವೇತನ ಪ್ಯಾಕೇಜ್ ಸೌಲಭ್ಯಗಳನ್ನು ಘೋಷಿಸಿವೆ. ನೌಕರರು ತಾವು ಪ್ರತಿ ತಿಂಗಳು ವೇತನ ಪಡೆಯುವ ಬ್ಯಾಂಕ್‌ಗಳ ಮೂಲಕ ಅಪಘಾತ ವಿಮಾ ಸೌಲಭ್ಯ ಸೇರಿದಂತೆ ವಿವಿಧ ವೇತನ ಪ್ಯಾಕೇಜ್ ಸೌಲಭ್ಯ ಪಡೆಯಬಹುದು.
ಈಗ ವೇತನ ಖಾತೆ ಹೊಂದಿರುವ ಬ್ಯಾಂಕ್‌ಗಳಲ್ಲಿ ಇರುವ ಸೌಲಭ್ಯಗಳು ತೃಪ್ತಿಕರವಾಗಿರದಿದ್ದರೆ ಯಾವ ಬ್ಯಾಂಕ್‌ಗಳು ಹೆಚ್ಚಿನ ಆಕರ್ಷಕ ಪ್ಯಾಕೇಜ್ ಗಳನ್ನು ನೀಡುತ್ತವೆಯೋ ಅಂತಹ ಬ್ಯಾಂಕ್‌ಗಳಿಗೆ ತಮ್ಮ ವೇತನ ಖಾತೆಗಳನ್ನು ವರ್ಗಾವಣೆ ಮಾಡಿಕೊಳ್ಳಬಹುದು.