Central Bank Recruitment-2025: Applications invited for the posts of Assistant Manager
Central Bank Jobs-2025: ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದೇಶಾದ್ಯಂತ 4,500ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಪ್ರಸ್ತುತ ಕ್ರೆಡಿಟ್ ಆಫೀಸರ್ (ಅಸಿಸ್ಟೆಂಟ್ ಮ್ಯಾನೇಜರ್) ಹುದ್ದೆಗಳಿಗೆ ಅರ್ಹ, ಪ್ರತಿಭಾವಂತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.
ಹುದ್ದೆ:
ಕ್ರೆಡಿಟ್ ಆಫೀಸರ್ ಇನ್ ಮೇನ್ ಸ್ಟ್ರೀಮ್ (ಅಸಿಸ್ಟೆಂಟ್ ಮ್ಯಾನೇಜರ್) (ಜನರಲ್ ಬ್ಯಾಂಕಿಂಗ್)
ಹುದ್ದೆಗಳ ಹಂಚಿಕೆ:
▪️ಎಸ್ಸಿ ಅಭ್ಯರ್ಥಿಗಳಿಗೆ 150 ಸ್ಥಾನ,
▪️ಎಸ್ಟಿ ಅಭ್ಯರ್ಥಿಗಳಿಗೆ 75 ಸ್ಥಾನ,
▪️ಇತರ ವರ್ಗದ ಅಭ್ಯರ್ಥಿಗಳಿಗೆ 270 ಸ್ಥಾನ,
▪️ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 100,
▪️ಸಾಮಾನ್ಯ ಅಭ್ಯರ್ಥಿಗಳಿಗೆ 405 ಸ್ಥಾನಗಳನ್ನು ಮೀಸಲಿರಿಸಲಾಗಿದೆ.
▪️ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದ್ದು, ಅಗತ್ಯಕ್ಕೆ ಅನುಗುಣವಾಗಿ ಬದಲಾಗಬಹುದು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಲು ಆಶಿಸುವ ಮುಖ್ಯವಾಹಿನಿಯ ಕ್ರೆಡಿಟ್ ಆಫೀಸರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ಮತ್ತು ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಒದಗಿಸಲು ಬ್ಯಾಂಕ್ ಸಂಸ್ಥೆಗಳು/ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ 1 ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಅನ್ನು ಬ್ಯಾಂಕಿಂಗ್ ಆ್ಯಂಡ್ ಫೈನಾನ್ಸ್ ವಿಷಯದಲ್ಲಿ ಪೂರ್ಣಗೊಳಿಸಬೇಕು.
9 ತಿಂಗಳು ಕ್ಲಾಸ್ ರೂಮ್ ಟ್ರೇನಿಂಗ್ ಮತ್ತು 3 ತಿಂಗಳು ಜಾಬ್ ಟ್ರೇನಿಂಗ್ ನೀಡಲಾಗುತ್ತದೆ. ತರಬೇತಿ ಪಡೆಯವ ವೇಳೆ ಅಭ್ಯರ್ಥಿಗಳಿಗೆ ಶಿಕ್ಷಣ ಸಾಲ ನೀಡಲಾಗುತ್ತದೆ. ಅಲ್ಲದೇ 2,500ರೂ. ಕ್ಲಾಸ್ ರೂಮ್ ಟ್ರೇನಿಂಗ್ ವೇಳೆ, ಜಾಬ್ ಟ್ರೇನಿಂಗ್ ವೇಳೆ 10,000ರೂ. ಸ್ಟೆಪೆಂಡ್ ನಿಗದಿಪಡಿಸಲಾಗಿದೆ.
ವಿದ್ಯಾರ್ಹತೆ:
ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಷಯದಲ್ಲಿ ಪದವಿಯನ್ನು ಕನಿಷ್ಠ 60 ಅಂಕ (ಎಸ್ಸಿ/ಎಸ್ಟಿ/ಒಬಿಸಿ/ಅಂಗವಿಕಲ ಅಂಕ)ದೊಂದಿಗೆ ಅಭ್ಯರ್ಥಿಗಳು ಶೇ.55 ಪೂರ್ಣಗೊಳಿಸಿರಬೇಕು. ಅಭ್ಯರ್ಥಿಯು ಹುದ್ದೆಗೆ ನೋಂದಾಯಿಸಿಕೊಳ್ಳುವ ದಿನದಂದು ತಾನು ಪದವೀಧರನಾಗಿದ್ದೇನೆ ಎಂದು ದೃಢೀಕರಿಸುವ ಮಾನ್ಯ ಅಂಕಪಟ್ಟಿ / ಪದವಿ ಪ್ರಮಾಣಪತ್ರವನ್ನು ಹೊಂದಿರಬೇಕು ಮತ್ತು ಆನ್‌ಲೈನ್‌ನಲ್ಲಿ ನೋಂದಾಯಿಸುವಾಗ ಪದವಿಯಲ್ಲಿ ಪಡೆದ ಅಂಕಗಳ ಶೇಕಡಾವಾರು ಪ್ರಮಾಣವನ್ನು ಸೂಚಿಸಬೇಕು.
ವಯೋಮಿತಿ:
ಅಭ್ಯರ್ಥಿಗಳು 20248, 2.30 ಅನ್ವಯವಾಗುವಂತೆ ಕನಿಷ್ಠ 20 ವರ್ಷದಿಂದ ಗರಿಷ್ಠ 30 ವರ್ಷದೊಳಗಿರಬೇಕು. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ.
ವೇತನ ಶ್ರೇಣಿ:
₹48,480 – ₹85,920 ವೇತನ ಇರಲಿದೆ.
ಆಯ್ಕೆ ವಿಧಾನ:
ಆನ್‌ಲೈನ್ ಮೂಲಕ 150 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಿ, ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ವಯಕ್ತಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಲಿಖಿತ ಪರೀಕ್ಷೆಯ ಪ್ರಶ್ನೆಗಳು ಇಂಗ್ಲಿಷ್ ಭಾಷೆ, ಆ್ಯಪ್ಟಿಟ್ಯೂಡ್, ರೀಸನಿಂಗ್ ಎಬಿಲಿಟಿ, ಜನರಲ್ ಅವೇರ್‌ನೆಸ್, ಇಂಗ್ಲಿಷ್ ಭಾಷೆ(ಪತ್ರ ಬರಹ ಹಾಗೂ ಪ್ರಬಂಧ) ಅನ್ನು ಆಧರಿಸಿರುತ್ತದೆ. ಋಣಾತ್ಮಕ ಅಂಕಗಳಿರುವುದಿಲ್ಲ.
ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ವೈಯಕ್ತಿಕ ಸಂದರ್ಶನವನ್ನು 50 ಅಂಕಗಳಿಗೆ ನಡೆಸಲಾಗುತ್ತದೆ. ನಂತರ ವೈದ್ಯಕೀಯ ಪರೀಕ್ಷೆ, ದಾಖಲೆ ಪರಿಶೀಲನೆ ಇರಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳನ್ನು ಭಾರತದ ಯಾವುದೇ ಶಾಖೆ ಅಥವಾ ಆಡಳಿತ ಕಚೇರಿಗೆ ನಿಯೋಜಿಸಲಾಗುವುದು.
ಬ್ಯಾಂಕಿನ ಅವಶ್ಯಕತೆಗೆ ಅನುಗುಣವಾಗಿ ಸ್ಥಳ ಬದಲಾಯಿಸಬಹುದು.
ಪರೀಕ್ಷಾ ಕೇಂದ್ರ:
ಬೆಂಗಳೂರು, ಧಾರವಾಡ, ಹುಬ್ಬಳ್ಳಿ, ಮಂಗಳೂರಿನಲ್ಲಿ ಪರೀಕ್ಷಾ ಕೇಂದ್ರವಿರಲಿದೆ.
ಪ್ರಮುಖ ಸೂಚನೆಗಳು:
ಪರೀಕ್ಷೆಗೆ ನಿಗದಿಪಡಿಸಿದ ದಿನಾಂಕ ಮತ್ತು ಕೇಂದ್ರದ ಹೆಸರನ್ನು ಕಾಲ್ ಲೆಟರ್ ಮೂಲಕ ತಿಳಿಸಲಾಗುವುದು. ಅಭ್ಯರ್ಥಿಗಳು ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು. ಇಬ್ಬರು ಅಭ್ಯರ್ಥಿಗಳು ಒಂದೇ ರೀತಿಯ ಅಂಕ ಗಳಿಸಿದರೆ ಹಿರಿತನದ ಆಧಾರದ ಮೇಲೆ ಒಬ್ಬರನ್ನು ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು centralbankofindia.co.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಛಾಯಾಚಿತ್ರ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ. ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ.
ಅರ್ಜಿ ಶುಲ್ಕ:
ಮಹಿಳೆ/ಎಸ್ಸಿ/ಎಸ್ಟಿ/ಅಂಗವಿಕಲ ವರ್ಗದ ಅಭ್ಯರ್ಥಿಗಳು 150ರೂ., ಇತರ ಎಲ್ಲ ವರ್ಗದ ಅಭ್ಯರ್ಥಿಗಳು 750ರೂ. ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬೇಕು.
ಅರ್ಜಿ ಸಲ್ಲಿಸಲು ಕೊನೆ ದಿನ: 20.2.2025
ಅಧಿಸೂಚನೆಗಾಗಿ – CLICK HERE
ಹೆಚ್ಚಿನ ಮಾಹಿತಿಗೆ : centralbankofindia.co.in ಗೆ ಭೇಟಿ ನೀಡಿ