Education-2026:ಶೈಕ್ಷಣಿಕ ವರ್ಷದಿಂದ ಪ್ರತೀ ಪಾಠಕ್ಕೂ ಕಿರುಪರೀಕ್ಷೆ, ಹೇಗಿರಲಿದೆ ಹೊಸ ನಿಯಮ? ಇಲ್ಲಿದೆ ನೂತನ ಮಾಹಿತಿ

Education-2026: ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ಅಧ್ಯಾಯ ಪೂರ್ಣಗೊಂಡ ನಂತರ ಕಿರು ಪರೀಕ್ಷೆ.

Education :ಶೈಕ್ಷಣಿಕ ವರ್ಷದಿಂದ ಪ್ರತೀ ಪಾಠಕ್ಕೂ ಕಿರುಪರೀಕ್ಷೆ, ಹೇಗಿರಲಿದೆ ಹೊಸ ನಿಯಮ? ಇಲ್ಲಿದೆ ನೂತನ ಮಾಹಿತಿ.

ಶಾಲಾ ಮಕ್ಕಳ ಕಲಿಕಾ ಫಲಿತಾಂಶ ಸುಧಾರಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮುಂಬರುವ ಶೈಕ್ಷಣಿಕ ವರ್ಷದಿಂದ ‘ಪಾಠ ಆಧಾರಿತ ಮೌಲ್ಯಮಾಪನ’ (ಎಲ್‌ಬಿಎ) ಪರಿಚಯಿಸಲು ನಿರ್ಧರಿಸಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಕಳೆದ ವರ್ಷದಿಂದ SSLC ಮತ್ತು ಈ ವರ್ಷದಿಂದ ದ್ವಿತೀಯ PUC ವಾರ್ಷಿಕ ಪರೀಕ್ಷೆಗಳಿಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಜಾರಿ ಮಾಡಿದೆ. ಪರೀಕ್ಷಾ ಸುಧಾರಣೆಗಳ ಕ್ರಮದ ಹಿನ್ನೆಲೆಯಲ್ಲಿ SSLC Result ಬಹಳ ಕುಸಿಯಲಾಗಿತ್ತು

ಶಾಲಾ ಮಕ್ಕಳ ಕಲಿಕೆಯ ಕುರಿತಾಗಿ ನಡೆಸಲಾಗಿರುವ  ಅನೇಕ ಸಮೀಕ್ಷೆಗಳೂ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿ ರುವುದನ್ನು  ತೋರಿಸಿವೆ. ಈ ಎಲ್ಲ ಕಾರಣಗಳಿಂದ ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣ ಮತ್ತು ಕಲಿಕಾ ಫಲಿತಾಂಶ ಸುಧಾರಿಸಲು ಶಾಲಾ ಶಿಕ್ಷಣ ಇಲಾಖೆ, 2025-26ರ ಶೈಕ್ಷಣಿಕ ವರ್ಷದಿಂದ 1 ರಿಂದ 10ನೇ ತರಗತಿ ಮಕ್ಕಳಿಗೆ LBA ನಡೆಸಲು ನಿರ್ಧಾರ ಮಾಡಿದೆ.

ಪ್ರಸ್ತುತ ಡಿಜಿಟಲ್ ತಂತ್ರಜ್ಞಾನದ ಮುಖೆನ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲಾಗುತ್ತದೆ. ಇದಕ್ಕಾಗಿ ಕೇಂದ್ರ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಡಿಜಿಟಲ್ ಶಿಕ್ಷಣ ಅಭಿವೃದ್ಧಿಪಡಿಸಿರುವ ವಿದ್ಯಾ ಸಮೀಕ್ಷಾ ಕೇಂದ್ರ ಮೊಬೈಲ್ ತಂತ್ರಾಂಶ ಬಳಸಲು ನಿರ್ಧಾರ ಮಾಡಿದೆ.

ಪ್ರಸ್ತುತವಾಗಿ ಶಾಲಾ ಹಂತದಲ್ಲಿಯೇ ಶಾಲಾ ಮಕ್ಕಳಿಗೆ ವಾರ್ಷಿಕವಾಗಿ ನಾಲ್ಕು ರಚನಾತ್ಮಕ ಮೌಲ್ಯಮಾಪನ (ಕಿರು ಪರೀಕ್ಷೆ) ಮತ್ತು ಎರಡು ಸಂಕಲನಾತ್ಮಕ ಮೌಲ್ಯಮಾಪನ (ಅರ್ಧವಾರ್ಷಿಕ, ವಾರ್ಷಿಕ) ನಡೆಸಲಾಗುತ್ತಿದೆ. ಆದರೂ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಮಕ್ಕಳ ಕಲಿಕಾ ನ್ಯೂನತೆ ಗುರುತಿಸುವಲ್ಲಿ ಸಫಲತೆ  ಕಡಿಮೆ.

 

ಹೇಗಿರಲಿದೆ ಹೊಸ ನಿಯಮ?:

ಪರೀಕ್ಷೆಯಲ್ಲಿ ಸಣ್ಣ ಪ್ರಶ್ನೆಗಳು, ಬಿಟ್ಟಸ್ಥಳ ತುಂಬಿ, ಒಂದು ಮತ್ತು ಎರಡು ಅಂಕಗಳ ಪ್ರಶ್ನೆಗಳು ಹಾಗೂ ಬಹು ಆಯ್ಕೆಯ ಪ್ರಶ್ನೆಗಳ (ಎಂಸಿಕ್ಯು) ಆಧಾರದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಉಚಿತವಾಗಿ ಉತ್ತರ ಪತ್ರಿಕೆಗಳನ್ನು ನೀಡಲಾಗುತ್ತದೆ. ಮೊಬೈಲ್ ತಂತ್ರಾಂಶದ ಮೂಲಕ ಉತ್ತರ ಪತ್ರಿಕೆ ಸ್ಕ್ಯಾನ್ ಮಾಡಿದರೆ, ತಕ್ಷಣವೇ ಮೌಲ್ಯಮಾಪನ ಮಾಡಿ ಅಂಕಗಳನ್ನು ಪ್ರದರ್ಶಿಸುತ್ತದೆ.

ಸಂಬಂಧಪಟ್ಟ ಪಾಠದಲ್ಲಿ ವಿಷಯವನ್ನು ಎಷ್ಟು ಚೆನ್ನಾಗಿ ಗ್ರಹಿಸಿದ್ದಾರೆ ಮತ್ತು ಪಾಠದ ಉದ್ದೇಶಗಳನ್ನು ಸಾಧಿಸಲಾಗಿದೆಯೇ ಎಂದು ನಿರ್ಧರಿಸಲು ಇದು ಸಹಾಯ ಮಾಡುತ್ತದೆ. ಮಕ್ಕಳು ಪಾಠಗಳನ್ನು ಅರ್ಥಮಾಡಿಕೊಳ್ಳದಿದ್ದರೆ, ತಪ್ಪುಗ್ರಹಿಕೆಯನ್ನು ಪರಿಹರಿಸಲು ಮತ್ತು ವಿಷಯಗಳನ್ನು ಗಮನಿಸಲು ಸಹಾಯ ಮಾಡುತ್ತದೆ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!