Today News Highlights: Dated:04-04-2025,FRIDAY
Today News Highlights:
2025-26 ನೇ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ
ರಾಜ್ಯ ಪಠ್ಯಕ್ರಮದ ಪ್ರಾಥಮಿಕ, ಪ್ರೌಢಶಾಲೆಗಳಿಗೆ 2025-26ನೇ ಶೈಕ್ಷಣಿಕ ವರ್ಷದ ಅವಧಿ ಮತ್ತು ರಜಾದಿನಗಳ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಪ್ರತಿ ವರ್ಷದಂತೆ ಮೇ 29ರಿಂದ ಶಾಲೆಗಳು ಆರಂಭವಾಗಲಿದ್ದು, 2026ರ ಏ.10ರವರೆಗೆ ಒಟ್ಟು 242 ದಿನ ಶಾಲೆಗಳು ಕಾರನಿರ್ವಹಿಸಲಿವೆ. 365 ದಿನಗಳ ಪೈಕಿ 123 ದಿನ ರಜೆ ದಿನಗಳಾಗಿರುತ್ತವೆ.
ಶೈಕ್ಷಣಿಕ ವರ್ಷದಿಂದ ಪ್ರತೀ ಪಾಠಕ್ಕೂ ಕಿರುಪರೀಕ್ಷೆ
ಶಾಲಾ ಮಕ್ಕಳ ಕಲಿಕಾ ಫಲಿತಾಂಶ ಸುಧಾರಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮುಂಬರುವ ಶೈಕ್ಷಣಿಕ ವರ್ಷದಿಂದ ‘ಪಾಠ ಆಧಾರಿತ ಮೌಲ್ಯಮಾಪನ’ (ಎಲ್‌ಬಿಎ) ಪರಿಚಯಿಸಲು ನಿರ್ಧರಿಸಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಗ್ರಾಪಂ ಅಧಿಕಾರಿಗಳ ವರ್ಗ ನಿಯಮ ತಿದ್ದುಪಡಿ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಸಹಾಯಕರು ಸತತ 7 ವರ್ಷ ಸೇವೆಯ ನಂತರ ತಾಲೂಕು, ಜಿಲ್ಲೆ ತೊರೆ ಯುವ ನಿಯಮವನ್ನು ವರ್ಗಾವಣೆ ಪ್ರಕ್ರಿಯೆಯಿಂದ ಸರ್ಕಾರ ಕೈಬಿಟ್ಟಿದೆ.
ಶಾಲೆ ಮುಚ್ಚಿಸುವ ಹುನ್ನಾರ ಶಿಕ್ಷಕಿಯರ ಅಮಾನತು
ಕರ್ತವ್ಯ ನಿರ್ಲಕ್ಷ್ಯದ ಮೂಲಕ ಸರ್ಕಾರಿ ಶಾಲೆಯನ್ನೇ ಮುಚ್ಚಿಸುವ ದುರುದ್ದೇಶ ಆರೋಪದ ಮೇರೆಗೆ ಮೂವರು ಶಿಕ್ಷಕಿಯರನ್ನು ಅಮಾನತುಗೊಳಿಸಿ ವಿಜಯಪುರ ನಗರ ಬಿಇಒ ಬಸವರಾಜ ತಳವಾರ ಆದೇಶಿಸಿದ್ದಾರೆ.
ಮಮತಾಗೆ ಮುಖಭಂಗ: 25000 ಶಿಕ್ಷಕರ ನೇಮಕ ರದ್ದು
ಪಶ್ಚಿಮ ಬಂಗಾಳದಲ್ಲಿ ನಡೆಸಲಾಗಿದ್ದ 25,753 ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿ ನೇಮಕಾತಿ ಯನ್ನು ರದ್ದುಗೊಳಿಸಿದ್ದ ಕಲ್ಕತ್ತಾ ಹೈ ಕೋಲ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ಶಾಲೆಗೆ ಹೋಗುವಾಗ ವಿದ್ಯುತ್ ತಂತಿ ಬಿದ್ದು ಶಿಕ್ಷಕಿ ಸಾವು
ವಿದ್ಯುತ್ ತಂತಿ ಏಕಾಏಕಿ ತುಂಡಾಗಿ ಬಿದ್ದು ಸ್ಕೂಟಿ ಮೇಲೆ ತೆರಳುತ್ತಿದ್ದ ಖಾಸಗಿ ಶಾಲೆ ಶಿಕ್ಷಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ಹೊಕ್ಕೇರಾ ಕ್ರಾಸ್ ಬಳಿ ಬುಧವಾರ ಸಂಭವಿಸಿದೆ.
ಶಾಲೆಗೆ ಬೋರೆಲ್ ಕೊರೆಸಿದ ಶಿಕ್ಷಕಿಯರು
ನೀರಿನ ಸಮಸ್ಯೆ ಬಗ್ಗೆ ಮನವಿ ಮಾಡಿದರೂ ಗ್ರಾಪಂ ಸದಸ್ಯರು, ಅಧಿಕಾರಿಗಳು ಸ್ಪಂದಿಸದ್ದರಿಂದ ಚಿಕ್ಕಮಗಳೂರು ಜಿಲ್ಲೆ ಆಲ್ಲೂರು ಸಮೀಪದ ಮಾಚಗೊಂಡನಹಳ್ಳಿಯ ಸರ್ಕಾರಿ ಶಾಲೆಯ ಇಬ್ಬರು ಮುಸ್ಲಿಂ ಶಿಕ್ಷಕಿಯರು ಸ್ವಂತ ಹಣದಲ್ಲಿ ಬೋರ್‌ವೆಲ್ ಕೊರೆಸಿಕೊಟ್ಟಿದ್ದಾರೆ.
ಮೇ 29ಕ್ಕೆ ಶಾಲೆಗಳು ಪುನರಾರಂಭ:
ಶೈಕ್ಷಣಿಕ ವರ್ಷದ ವೇಳಾಪಟ್ಟಿ ಪ್ರಕಟ ಏಪ್ರಿಲ್ 8 ರಂದು ಪ್ರಾಥಮಿಕ ಶಾಲೆ, 9ರಂದು ಪ್ರೌಢಶಾಲೆಗಳ ಫಲಿತಾಂಶ ಘೋಷಣೆ.
ಡಾ|ಬಿ. ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಪುಸ್ತಕಗಳಿಗೆ ಶೇ.50 ರಿಯಾಯ್ತಿ
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಏ.1 ರಿಂದ ಏ.30 ರವರೆಗೆ ತಮ್ಮ ಎಲ್ಲ ಪ್ರಕಟಣೆಯ ಪುಸ್ತಕಗಳನ್ನು ಶೇ.50 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಉಪನ್ಯಾಸಕರ ಅನ್ಯ ಕಾರ್ಯ ನಿಮಿತ್ತ ರಜೆಗೆ ಬ್ರೇಕ್!
ಪ್ರಾಂಶುಪಾಲರಿಗೆ ಅರ್ಜಿ ಸಲ್ಲಿಸುವುದನ್ನು ಸ್ಥಗಿತಗೊಳಿಸಿದ ಶಿಕ್ಷಣ ಇಲಾಖೆ 1ಸೆಮಿಸ್ಟರ್‌ಗೆ 4 ರಜೆಗಷ್ಟೇ ಅವಕಾಶ
ನೇಪಾಳದಲ್ಲಿ ಮತ್ತೆ ಹಿಂದೂ ರಾಷ್ಟ್ರಕೂಗು!
ಪ್ರಜಾಪ್ರಭುತ್ವದ ಆಡಳಿತದಿಂದ ರೋಸಿದ ಜನ, ತೀವ್ರ ವಿರೋಧ ರಾಜಪ್ರಭುತ್ತ ಮತ್ತೆ ಬರಲಿ ಎಂದು ನೇಪಾಳಿ ಜನತೆ ಹಕ್ಕೊತ್ತಾಯ.
ಸುಪ್ರೀಂ ಜಸ್ಟೀಸ್‌ಗಳಿಂದ ಆಸ್ತಿ ವಿವರ ಬಹಿರಂಗ
30 ನ್ಯಾಯಮೂರ್ತಿಗಳ ಐತಿಹಾಸಿಕ ನಿರ್ಧಾರ |ನ್ಯಾಯಾಂಗದ ಪಾರದರ್ಶಕತೆಗಾಗಿ ನಡೆ.
ಪಿಎಫ್ ನಿಯಮ ಸರಳೀಕರಣ 8 ಕೋಟಿ ಚಂದಾದಾರರಿಗೆ ವರದಾನ
ಭವಿಷ್ಯ ನಿಧಿ ಹಣ ಹಿಂಪಡೆಯುವ ವೇಳೆ ಚಂದಾದಾರರು ಇನ್ನು ಮುಂದೆ ಆನ್‌ಲೈನ್ ನಲ್ಲಿ ರದ್ದು ಮಾಡಲಾದ ಚೆಕ್ ಅನ್ನು ಅಪ್ ಲೋಡ್ ಮಾಡುವ ಅಗತ್ಯವಿಲ್ಲ. ಇದಲ್ಲದೆ ಬ್ಯಾಂಕ್ ಖಾತೆಯನ್ನು ಉದ್ಯೋಗದಾತ ಸಂಸ್ಥೆಯು ದೃಢೀಕರಿಸುವ ಅಗತ್ಯವಿಲ್ಲ ಎಂದು ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಗುರುವಾರ ತಿಳಿಸಿದೆ.
ಜಾಗತಿಕ ತೆರಿಗೆ ದಾಳಿಯಿಂದ ಭಾರತಕ್ಕೆ ಲಾಭ?
ಬಾಂಗ್ಲಾ, ಚೀನಾ, ವಿಯೆಟ್ನಾಂ ಮೇಲೆ ಹೆಚ್ಚಿನ ತೆರಿಗೆ | ಇದರಿಂದ ಹೂಡಿಕೆದಾರರನ್ನು ಸೆಳೆಯಲು ಭಾರತಕ್ಕೆ ಅವಕಾಶ.
165 ರೈತರಿಗೆ 10 ಕೋಟಿ ಪಂಗನಾಮ!
ಅನ್‌ಫಿಕ್ಸ್ ದರದಲ್ಲಿ ಕಡಲೆ ಖರೀದಿಸಿ ಕೈ ಎತ್ತಿದ ಬೀಜ ಕಂಪನಿ.
ಒಳಮೀಸಲಿಗೂ ಮೊದಲೇ ‘ಅಕ್ರಮ ನೇಮಕಾತಿ?
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ 71 ಹುದ್ದೆಗಳಿಗೆ ಮುಂಬಡ್ತಿ, ನೇರ ನೇಮಕ ಒಳಮೀಸಲು ಜಾರಿವರೆಗೆ ಹೊಸ ನೇಮಕ ಇಲ್ಲ ಎಂಬ ಸರ್ಕಾರಿ ಆದೇಶ ಉಲ್ಲಂಘನೆ
ಸರ್ಕಾರಿ ಕಟ್ಟಡಗಳಿಂದ ಬಾಕಿ 65 ಕೋಟಿ ತೆರಿಗೆ ವಸೂಲಿ
2 ದಿನದಲ್ಲಿ ಪಾಲಿಕೆ ದಾಖಲೆ ಆಸ್ತಿ ತೆರಿಗೆ ಸಂಗ್ರಹ
‘ಆರೋಗ್ಯ ಸಂಜೀವಿನಿ’ ಅಡಿ ಮೊದಲ ಹಂತದಲ್ಲಿ ಒಳರೋಗಿಗಳಿಗೆ ಅವಕಾಶ
ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನೀಡುವ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಯೋಜನೆಯಾದ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (ಕೆಎಎಸ್‌ಎಸ್) ಅಡಿ ಆರಂಭಿಕ ಹಂತದಲ್ಲಿ ಒಳರೋಗಿ ವಿಭಾಗಕ್ಕೆ ಮಾತ್ರ ಸೇವಾ ಸೌಲಭ್ಯ ಒದಗಿಸಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿದೆ.
ಸೂಕ್ಷ್ಮ ನೀರಾವರಿ ಪರಿಕರ: ಮರು ಸಹಾಯಧನಕ್ಕೆ ಎಲ್ಲ ವರ್ಗದ ರೈತರು ಅರ್ಹರು
ಹನಿ ನೀರಾವರಿ, ತುಂತುರು ನೀರಾವರಿ ಸೇರಿ ಸೂಕ್ಷ್ಮ ನೀರಾವರಿ ಪರಿಕರಗಳಿಗೆ ಎಲ್ಲ ವರ್ಗದ ರೈತ ಫಲಾನುಭವಿಗಳು 7 ವರ್ಷಗಳ ನಂತರ ಮತ್ತೆ ಅದೇ ಜಮೀನಿಗೆ ಮರು ಸಹಾಯಧನ ಪಡೆಯಲು ಅವಕಾಶ ಕಲ್ಪಿಸಿ ಕೃಷಿ ಇಲಾಖೆ ಮಹತ್ವದ ಆದೇಶ ಮಾಡಿದೆ.
ಟ್ರಂಪ್ ತೆರಿಗೆ ಎಫೆಕ್ಟ್ ಭಾರತದ ಮೇಲೆ ಅಲ್ಲ
ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಅಮೆರಿಕಕ್ಕೆ ಭಾರತದ ರಫ್ತು ಅಲ್ಪ ಪರಿಣಾಮವೂ ಕಡಿಮೆ.
1-10ನೇ ತರಗತಿ ಮಕ್ಕಳಿಗೆ ಪ್ರತಿ ಅಧ್ಯಾಯ ಮುಗಿದ ಬಳಿಕ ಕಿರು ಪರೀಕ್ಷೆ
ಶಾಲಾ ಮಕ್ಕಳ ಕಲಿಕಾ ಫಲಿತಾಂಶ ಸುಧಾರಿಸುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮುಂಬರುವ ಶೈಕ್ಷಣಿಕ ವರ್ಷದಿಂದ ‘ಪಾಠ ಆಧಾರಿತ ಮೌಲ್ಯಮಾಪನ’ (ಎಲ್‌ಬಿಎ) ಪರಿಚಯಿಸಲು ನಿರ್ಧರಿಸಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಟರ್ಕಿಯಲ್ಲಿ 200 ಭಾರತೀಯರಿಗೆ ತೊಂದರೆ
ಲಂಡನ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವರ್ಜಿನ್ ಅಟ್ಲಾಂಟಿಕ್‌ನ ವಿಮಾನ ವೈದ್ಯಕೀಯ ಕಾರಣಕ್ಕಾಗಿ ಟರ್ಕಿಯ ವಿಮಾನ ನಿಲ್ದಾಣವೊಂದರಲ್ಲಿ ಇಳಿದಿದ್ದು 200ಕ್ಕೂ ಹೆಚ್ಚು ಭಾರತೀಯ ಪ್ರಯಾಣಿಕರು ತೊಂದರೆಗೆ ಸಿಲುಕಿಕೊಂಡಿದ್ದಾರೆ. ತೀರಾ ಒಳನಾಡಿನಲ್ಲಿರುವ ದಿಯಾರ್ಬಿಕರ್ ಏರ್‌ಪೋಟ್‌ನಲ್ಲಿ ಇಂಥ ಪರಿಸ್ಥಿತಿಯನ್ನು ನಿಭಾಯಿಸುವ ಯಾವುದೇ ವ್ಯವಸ್ಥೆಗಳು ಇಲ್ಲ. ಪರ್ಯಾಯ ವಿಮಾನವನ್ನು ವ್ಯವಸ್ಥೆ ಮಾಡುವುದು ವಿಳಂಬವಾಗುವ ಸಾಧ್ಯತೆಯಿದೆ. ವಿಮಾನ ತುರ್ತಾಗಿ ಲ್ಯಾಂಡ್ ಮಾಡುವಾಗ ತಾಂತ್ರಿಕ ದೋಷ ಉಂಟಾಗಿರುವುದರಿಂದ ಮುಂದಿನ ಪ್ರಯಾಣ ಅನಿಶ್ಚಯವಾಗಿದೆ. ತಮಗೆ ವಸತಿ ವ್ಯವಸ್ಥೆ ಮಾಡಲಾಗಿಲ್ಲ. ಇದೊಂದು ವಾಯುನೆಲೆ ಆಗಿರುವುದರಿಂದ ನಿಲ್ದಾಣದಿಂದ ಹೊರಗೆ ಹೋಗಲೂ ಸಾಧ್ಯವಾಗುತ್ತಿಲ್ಲವೆಂದು ಪ್ರಯಾಣಿಕರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಜಡ್ಜ್‌ಗಳ ಆಸ್ತಿ ವಿವರ ಶೀಘ್ರ ಬಹಿರಂಗ
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶ್ವಂತ್ ವರ್ಮ ನಿವಾಸದಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿದೆ ಎಂಬ ಆರೋಪಗಳ ಬೆನ್ನಲ್ಲೇ, ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಸೇರಿ ಸುಪ್ರೀಂ ಕೋರ್ಟ್ 30 ನ್ಯಾಯ ಮೂರ್ತಿಗಳು ತಮ್ಮ ಆಸ್ತಿ ವಿವರಗಳನ್ನು ಸುಪ್ರೀಂ ಕೋರ್ಟ್ ಜಾಲತಾಣದಲ್ಲಿ ಪ್ರಕಟಿಸಲು ನಿರ್ಧರಿಸಿದ್ದಾರೆ.
80 ಸಾವಿರಕ್ಕೆ 1.59 ಲಕ್ಷ ರೂ. ಪಾವತಿಸಿದರೂ ತೀರದ ಸಾಲ!
ಕ್ಲಿಯರೆನ್ಸ್ ಪತ್ರ ಕೊಟ್ಟರೂ ಪಾವತಿಗೆ ಕಿರುಕುಳ: ಆರೋಪ










































































