Correction of caste: ಶಾಲಾ ದಾಖಲಾತಿಯಲ್ಲಿ ವಿದ್ಯಾರ್ಥಿಗಳ ಜಾತಿಯನ್ನು ತಿದ್ದುಪಡಿ ಮಾಡುವ ಬಗ್ಗೆ,ದಿನಾಂಕ:20.04.2020

Correction of caste: ಶಾಲಾ ದಾಖಲಾತಿಯಲ್ಲಿ ವಿದ್ಯಾರ್ಥಿಗಳ ಜಾತಿಯನ್ನು ತಿದ್ದುಪಡಿ ಮಾಡುವ ಬಗ್ಗೆ.

Correction of caste:

ಶಾಲಾ ದಾಖಲಾತಿಯಲ್ಲಿ ವಿದ್ಯಾರ್ಥಿಗಳ ಜಾತಿಯನ್ನು ತಿದ್ದುಪಡಿ ಮಾಡುವ ಉಪನಿರ್ದೇಶಕರು(ಆಡಳಿತ), ಸಾರ್ವಜನಿಕ ಶಿಕ್ಷಣ ಇಲಾಖೆ, ಚಿತ್ರದುರ್ಗ ಇವರು ಉಲ್ಲೇಖ-1ರ ಪತ್ರದಲ್ಲಿ ಮನವಿಯನ್ನು ಸಲ್ಲಿಸಿ, ಉಲ್ಲೇಖ-2ರ ಸರ್ಕಾರದ ಸುತ್ತೋಲೆ ಸಂಖ್ಯೆ: ಸಕಇ 93 ಎಸ್ಎಡಿ 2017 ದಿನಾಂಕ:06.09.2017ರ ಸುತ್ತೋಲೆಯಂತೆ ಮಕ್ಕಳನ್ನು ದಾಖಲಾತಿ ಮಾಡುವಾಗ ನೈಜ ಜಾತಿಯ ಬದಲಾಗಿ ಬೇರೆ ಬೇರೆ ಜಾತಿಗಳನ್ನು ಶಾಲೆಗಳಿಗೆ ಸೇರಿಸಿದ್ದು, ಮೂಲ ಜಾತಿಯನ್ನು ಸರಿಯಾಗಿ ನಮೂದಿಸದೇ ಇರುವುದರಿಂದ ಈಗ ಜಾತಿಗಳನ್ನು ದಾಖಲಾತಿ ವಹಿಯಲ್ಲಿ ಸಂಬಂಧಿಸಿದ ತಹಶೀಲ್ದಾರ್ ರವರುಗಳು ನೀಡಿರುವ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ತಿದ್ದುಪಡಿ ಮಾಡಿಕೊಡಬೇಕಾಗಿ ಮನವಿ ಸಲ್ಲಿಸಿದಂತೆ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ಜಿಲ್ಲೆ ಇವರಿಗೆ ಪ್ರಸ್ತಾವನೆಗಳನ್ನು ದಿನಾಂಕ:19.06.2019ರಲ್ಲಿ ಸಲ್ಲಿಸಲಾಗಿರುತ್ತದೆ ಎಂದು ತಿಳಿಸಿರುತ್ತಾರೆ. ಸಂಬಂಧ

ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ ಇವರು ಸರ್ಕಾರದ ಸುತ್ತೋಲೆ ಸಂಖ್ಯೆ: ಸಕಇ 40 ಎಸ್ಎಡಿ 2010 ದಿನಾಂಕ:21.03.2018ರ ಪ್ರಕಾರ ಕ್ರಮವಹಿಸಲು ತಿಳಿಸಿ ಎಲ್ಲಾ ಪ್ರಸ್ತಾವನೆಗಳನ್ನು ಹಿಂತಿರುಗಿಸಿರುತ್ತಾರೆ ಎಂದು ಉಪನಿರ್ದೇಶಕರು(ಆಡಳಿತ), ಸಾರ್ವಜನಿಕ ಶಿಕ್ಷಣ ಇಲಾಖೆ, ಚಿತ್ರದುರ್ಗ ಇವರು ಉಲ್ಲೇಖ-1ರ ಪತ್ರದಲ್ಲಿ ತಿಳಿಸಿರುತ್ತಾರೆ ಹಾಗೂ ಸದರಿ ಪ್ರಕರಣಗಳನ್ನು ಈ ಕಛೇರಿ ಹಂತದಲ್ಲಿ ಇತ್ಯರ್ಥಪಡಿಸುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಕೋರಿರುತ್ತಾರೆ.

ಉಲ್ಲೇಖ-4ರ ಪತ್ರದಲ್ಲಿ, ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಇವರು ವಿದ್ಯಾರ್ಥಿಗಳ ಶಾಲಾ ದಾಖಲಾತಿಗಳಲ್ಲಿ ಜಾತಿ ತಿದ್ದುಪಡಿ ಮಾಡುವ ಸಂಬಂಧ ಸ್ವೀಕೃತವಾದ ಅರ್ಜಿಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಸುತ್ತೋಲೆ ಸಂಖ್ಯೆ: ಸಕಇ 93 ಎಸ್ಎಡಿ 2017 ದಿನಾಂಕ:06.09.2017 ರಂತೆ ಕ್ರಮವಹಿಸಲು ಸಂಬಂಧಿಸಿದವರಿಗೆ ನಿರ್ದೇಶನ ನೀಡಲು ಕೋರಿರುತ್ತಾರೆ.

ಮುಂದುವರೆದು ಸರ್ಕಾರದ ಅಧೀನ ಕಾರ್ಯದರ್ಶಿ, ಶಿಕ್ಷಣ ಇಲಾಖೆ (ಆಡಳಿತ) ಇವರ ಸುತ್ತೋಲೆ ಸಂಖ್ಯೆ: ಇಡಿ ಡಿಬಿಟಿ 2017, ದಿನಾಂಕ:17.02.2018 ರಲ್ಲಿಯೂ ಸಹಿತ ಸಮಾಜ ಕಲ್ಯಾಣ ಇಲಾಖೆಯ ಸುತ್ತೋಲೆ ಸಂಖ್ಯೆ ಸಕಇ 93 ಎಸ್ಎಡಿ 2017 ದಿನಾಂಕ:06.09.2017 ರಲ್ಲಿನ ಸೂಚನೆಗಳಂತೆ ಅಗತ್ಯ ಕ್ರಮವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಾ ಉಪನಿರ್ದೇಶಕರು(ಆಡಳಿತ) ಹಾಗು ಕ್ಷೇತ್ರ ಶಿಕ್ಷಣಾಧಿಕಾರಿಗಳು ರವರಿಗೆ ಸೂಚಿಸಲಾಗಿದೆ.

ಸುತ್ತೋಲೆ ಸಂಖ್ಯೆ ಸಕಇ 93 ಎಸ್ಎಡಿ 2017 ದಿನಾಂಕ:06.09.2017 ರ ಕಂಡಿಕೆ (3) ರಲ್ಲಿ ಈ ಕೆಳಗಿನಂತೆ ಇರುತ್ತದೆ.

“ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳಂತೆ ಸಿವಿಲ್ ನ್ಯಾಯಾಲಯಗಳಿಗೆ ಜಾತಿಗಳ ಬಗ್ಗೆ ನಿರ್ಧರಿಸುವ ಅಧಿಕಾರ ಇಲ್ಲದೇ ಇರುವುದರಿಂದ, ಸಿವಿಲ್ ನ್ಯಾಯಾಲಯಗಳು ಶಾಲಾ ದಾಖಲಾತಿಗಳಲ್ಲಿ ಜಾತಿ ಬದಲಾವಣೆ ಬಗ್ಗೆ ನೀಡಿದ ಆದೇಶಗಳನ್ನು ಶಿಕ್ಷಣ ಇಲಾಖೆಯು ಉನ್ನತ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿ, ಸೂಕ್ತ ಆದೇಶಗಳನ್ನು ಪಡೆಯಬಹುದು.

ಶಾಲಾ ದಾಖಲೆಗಳಲ್ಲಿ ತಪ್ಪು ಜಾತಿ ನಮೂದಾಗಿದ್ದರೆ ಶಿಕ್ಷಣ ಇಲಾಖೆಯು ಅದನ್ನು ಸರಿಪಡಿಸಬೇಕಾದಲ್ಲಿ ಸಂಬಂಧಪಟ್ಟ ಅರ್ಜಿದಾರರು ಮೊದಲು ಜಾತಿ ಪ್ರಮಾಣ ಪತ್ರ ಪಡೆಯಬೇಕಾಗಿದೆ ಮತ್ತು ಅದರ ಆಧಾರದ ಮೇಲೆ ಮುಂದಿನ ಕ್ರಮ ಜರುಗಿಸಬಹುದು.

ತಹಶೀಲ್ದಾರರು ನೀಡಿದ ಜಾತಿ ಪ್ರಮಾಣ ಪತ್ರದಲ್ಲಿ ಸಂಶೆಯಗಳಿದ್ದರೆ ಅಥವಾ ಅದರಿಂದ ಬಾಧಿತರಾದವರು ಮೀಸಲಾತಿ ಕಾಯ್ದೆ 1990 ಕಲಂ (4) ಬಿ ರಡಿಯಲ್ಲಿ ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು. ಶಾಲಾ ದಾಖಲಾತಿಗಳಲ್ಲಿ ಮುಖ್ಯೋಪಾಧ್ಯಾಯರು ಯಾವುದೇ ವಿಚಾರಣೆ ಇಲ್ಲದೆ ಪೋಷಕರು ನೀಡಿದ ಮಾಹಿತಿ ಮೇಲೆ ಜಾತಿಗಳನ್ನು ನಮೂದಿಸಿರುತ್ತಾರೆ. ಆದ್ದರಿಂದ ಶಾಲಾ ದಾಖಲಾತಿಗಳಲ್ಲಿ ನಮೂದಿಸಿರುವ ಜಾತಿಯೇ ನೈಜ ಜಾತಿ ಎಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ.”

ಆದ್ದರಿಂದ ಶಾಲಾ ದಾಖಲಾತಿಗಳಲ್ಲಿ ತಪ್ಪು ಜಾತಿ ನಮೂದಾಗಿದ್ದಲ್ಲಿ ಸಂಬಂಧಪಟ್ಟ ಅರ್ಜಿದಾರರು ಮೊದಲು ಜಾತಿ ಪ್ರಮಾಣ ಪತ್ರ ಪಡೆದು ಸಂಬಂಧಿಸಿದ ಶಾಲಾ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಲು ತಿಳಿಸುವುದು. ಹಾಗೂ ಸದರಿ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಶಾಲಾ ದಾಖಲಾತಿಗಳಲ್ಲಿ ಜಾತಿ ತಿದ್ದಪಡಿ ಮಾಡಲು ಮುಖ್ಯಶಿಕ್ಷಕರು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಸಂಬಂಧಿಸಿದ ಉಪನಿರ್ದೇಶಕರು(ಆಡಳಿತ) ಇವರುಗಳಿಗೆ ಪ್ರಸ್ತಾವನೆ ಸಲ್ಲಿಸುವುದು.

ಉಪನಿರ್ದೇಶಕರು(ಆಡಳಿತ) ರವರು ಪ್ರಸ್ತಾವನೆಯನ್ನು ಸುತ್ತೋಲೆಯಂತೆ ಪರಿಶೀಲಿಸಿ, ದಾಖಲೆಗಳು ಸರಿ ಇದ್ದರೆ ಜಾತಿ ತಿದ್ದುಪಡಿ ಮಾಡಲು ಆದೇಶ ನೀಡುವುದು. ಸದರಿ ಆದೇಶದಂತೆ ತಿದ್ದುಪಡಿಯಾದ ನಂತರ ಶಾಲೆಯ ದಾಖಲಾತಿ ವಹಿಗಳಲ್ಲಿ ಉಪನಿರ್ದೇಶಕರು(ಆಡಳಿತ) ಇವರು ದೃಢೀಕರಿಸುವುದು. ಈ ಸೂಚನೆಗಳಂತೆ ಕ್ರಮವಹಿಸಲು ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರು (ಆಡಳಿತ), ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ರಾಜ್ಯದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ಇವರಿಗೆ ತಿಳಿಸಿದೆ.

 

CLICK HERE TO DOWNLOAD CIRCULAR

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!