Google Meet- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಗೂಗಲ್ ಮೀಟ್ ಸಭೆ, ಮಹತ್ವದ ವಿಷಯಗಳ ಕುರಿತು ಚರ್ಚೆ
Google Meet-
-: ಸಭಾ ಸೂಚನೆ :-
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು, ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರು ಹಾಗೂ ತಾಲ್ಲೂಕು ಅಧ್ಯಕ್ಷರೊಂದಿಗೆ ದಿನಾಂಕ: 04-04-2025 ರಂದು ನಾಳೆ ಸಂಜೆ 7.00 ಗಂಟೆಗೆ “ಗೂಗಲ್ ಮೀಟ್ ಸಭೆ” ನಡೆಸಲಾಗುತ್ತಿದೆ.
ಸದರಿ ಸಭೆಯಲ್ಲಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.
ಈ ಕೆಳಕಂಡ ವಿಷಯಗಳ ಕುರಿತು ಚರ್ಚಿಸಲು ದಿನಾಂಕ: 04-04-2025 ರಂದು ಶುಕ್ರವಾರ ಸಂಜೆ 7.00 ಗಂಟೆಗೆ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾಧ್ಯಕ್ಷರು, ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರು ಹಾಗೂ ತಾಲ್ಲೂಕು ಅಧ್ಯಕ್ಷರ “ಗೂಗಲ್ ಮೀಟ್ ಸಭೆ” ಯನ್ನು ಆಯೋಜಿಸಲಾಗಿದೆ.
• ದಿನಾಂಕ: 21-04-2025 ರಂದು ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಆಚರಣೆ ಬಗ್ಗೆ.
• 2024 ಮತ್ತು 2025ನೇ ಸಾಲಿನ ಜಿಲ್ಲಾ ಮತ್ತು ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಕೆ ಮತ್ತು ಆಯ್ಕೆ ಪ್ರಕ್ರಿಯೆಗಳ ಬಗ್ಗೆ.
• ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ ಬಗ್ಗೆ.
• ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಅನುಷ್ಠಾನದ ಬಗ್ಗೆ.
“ಗೂಗಲ್ ಮೀಟ್ ಸಭೆ” ಯಲ್ಲಿ ಜಿಲ್ಲಾಧ್ಯಕ್ಷರುಗಳು, ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರುಗಳು ಹಾಗೂ ತಾಲ್ಲೂಕು ಅಧ್ಯಕ್ಷರುಗಳು ತಪ್ಪದೇ ಭಾಗವಹಿಸಲು ಕೋರಿದೆ.
ಗೂಗಲ್ ಮೀಟ್ ಲಿಂಕ್ ವಿಳಾಸ:
https://meet.google.com/ysg-ssyv-srq (ತಮ್ಮ ಮೊಬೈಲ್‌ನಲ್ಲಿ Google Meet ಅಪ್ಲಿಕೇಶನ್ ಡೌನ್‌ಲೋಡ್ ಆಗಿರಬೇಕು)