Health Tips: ಸೌತೆಕಾಯಿ ತಿನ್ನುವದರಿಂದಾಗುವ ಪ್ರಯೋಜನಗಳೇನು?ಇಲ್ಲಿದೆ ಅರೋಗ್ಯದ ಗುಟ್ಟು….
Health Tips: ಈಗಾಗಲೇ ಬೇಸಿಗೆಯ ಉರಿಬಿಸಿಲು ಹೆಚ್ಚಾಗಿದೆ. ಬೇಸಿಗೆಯಲ್ಲಿ ನಿರ್ಜಲೀಕರಣ, ಅತಿಯಾದ ಬೆವರು, ಹಸಿವಾಗದಿರುವುದು, ಕೆಂಪು ಬಣ್ಣದ ಉಕ್ಕಿದಂತಹ ತ್ವಚೆಯ ಸಮಸ್ಯೆ ಅಥವಾ ಹೀಟ್ ರಾಷಸ್ ಹಾಗೂ ಆಯಾಸ ಮುಂತಾದ ಸಮಸ್ಯೆಗಳು ಕಾಡಬಹುದು. ಬೇಸಿಗೆಯ ಈ ಕಾಲದಲ್ಲಿ ಸೌತೆಕಾಯಿಯ ಪ್ರಯೋಜನಗಳನ್ನು ಹೆಚ್ಚು ಬಳಸಿಕೊಳ್ಳಲು ಇದು ಸರಿಯಾದ ಸಮಯ. ಸೌತೆಕಾಯಿ ನೆನೆಸಿಟ್ಟ ನೀರು ಕುಡಿದರೆ ಆರೋಗ್ಯಕ್ಕೆ ದುಪ್ಪಟ್ಟು ಲಾಭಗಳಿವೆ.
ಸೌತೆಕಾಯಿ ನಿಮ್ಮ ದೇಹಕ್ಕೆ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುತ್ತದೆ. ಸೌತೆಕಾಯಿಯಲ್ಲಿ ಶೇ. 95 ರಷ್ಟು ನೀರಿನ ಅಂಶ ಹೊಂದಿದ್ದು, ಇದು ನಿಮ್ಮ ದೇಹದಲ್ಲಿ ಹೆಚ್ಚು ನೀರಿನಂಶ ಇರುವಂತೆ ಹಾಗೂ ನೀರಿನ ಅಂಶ ಕಡಿಮೆಯಾದರೂ ಹೆಚ್ಚು ತುಂಬಿಸುವಂತೆ ನೋಡಿಕೊಳ್ಳುತ್ತದೆ.
ಸೌತೆಕಾಯಿಯಲ್ಲಿ ಪೌಷ್ಟಿಕಾಂಶಗಳು ದಟ್ಟವಾಗಿರುತ್ತವೆ. ಅಲ್ಲದೆ ಫೈಬರ್, ಪೊಟ್ಯಾಷಿಯಂ ಹಾಗೂ ಮೆಗ್ನಿಷಿಯಂ ಕೂಡ ಹೆಚ್ಚಾಗಿರುತ್ತದೆ. ಈ ಎಲ್ಲ ಪೌಷ್ಠಿಕಾಂಶಗಳು ರಕ್ತದೊತ್ತಡ ಕಡಿಮೆ ಮಾಡಲಷ್ಟೇ ಅಲ್ಲ ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿದೆ. ಜತೆಗೆ, ಪೊಟ್ಯಾಷಿಯಂ ಹಾಗೂ ನೀರಿನಂಶ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ಸೌತೆಕಾಯಿ ನೈಸರ್ಗಿಕವಾಗಿ ನಿಮ್ಮ ಚರ್ಮವನ್ನು ತಕ್ಷಣ ಪುನಶ್ವೇತನಗೊಳಿಸುತ್ತದೆ. ಸೌತೆಕಾಯಿಯಿಂದ ಚರ್ಮಕ್ಕೆ ಹೆಚ್ಚು ಫ್ರೆಶ್ ನೆಸ್ ಬರುತ್ತದೆ. ಹೀಗಾಗಿ, ಒಣಗಿದ ಚರ್ಮವಾಗಿದ್ದರೆ ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚಿಕೊಂಡರೆ ಸಾಕು ಫ್ರೆಶ್ ಆಗಿ ಕಾಣುತ್ತೀರಿ.
ಕಣ್ಣುಗಳ ಸುತ್ತಲಿನ ಡಾರ್ಕ್ ಸರ್ಕಲ್ಸ್ ಹಾಗೂ ಪಪ್ಪಿನೆಸ್ ನಿವಾರಣೆಗೆ ಪರಿಹಾರ. ಕಪ್ಪು ಕಲೆ ನಿವಾರಿಸಲು ಹಾಗೂ ಕಣ್ಣುಗಳ ಬಳಿಯ ಪಪ್ಪಿನೆಸ್ ಕಡಿಮೆ ಮಾಡಲು ಸೌತೆಕಾಯಿಯ ರಸವನ್ನು ಕಣ್ಣು ಸುತ್ತ ಹಚ್ಚಿಕೊಳ್ಳಿ. ಇನ್ನು, ಪರಿಪೂರ್ಣ ನೈಸರ್ಗಿಕ ಸೌಂದರ್ಯ ಚಿಕಿತ್ಸೆಗಾಗಿ ಸೌತೆಕಾಯಿ ಉತ್ತಮ.
ಸೌತೆಕಾಯಿ ಟ್ಯಾನಿಂಗ್‌ನ ಪರಿಣಾಮಗಳನ್ನು ಉಲ್ಟಾ ಮಾಡುತ್ತದೆ ಹಾಗೂ ಸನ್‌ಬರ್ನ್ ಅನ್ನು ಶಮನಗೊಳಿಸುತ್ತದೆ. ಸೌತೆಕಾಯಿಯಲ್ಲಿ ನೈಸರ್ಗಿಕ ಉರಿಯೂತ ಸಮಸ್ಯೆ ನಿವಾರಿಸುವ ಗುಣಗಳಿವೆ. ಅಲ್ಲದೆ, ಟ್ಯಾನಿಂಗ್‌ನ ಪರಿಣಾಮಗಳನ್ನು ಸೌತೆಕಾಯಿ ಶಮನಗೊಳಿಸುತ್ತದೆ. ಜತೆಗೆ, ಸೌತೆಕಾಯಿಯ ರಸವನ್ನು ಸನ್‌ಬರ್ನ್ (ಚಿಕ್ಕ ಸಮಸ್ಯೆಗೆ ಮಾತ್ರ) ಆದ ಜಾಗದಲ್ಲಿ ಹಚ್ಚಿದರೆ ಕಲೆ ಮಾಯವಾಗುತ್ತದೆ. ಜತೆಗೆ, ನಿಮ್ಮ ಚರ್ಮದ ಮೈ ಬಣ್ಣವನ್ನು ತಿಳಿಯಾಗಿಸಲು ಸಹಾಯ ಮಾಡುತ್ತದೆ.