ICT: ರಾಜ್ಯದ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿ ICT integrated Digital Skills ಕಾರ್ಯಕ್ರಮ ಅನುಷ್ಠಾನ
ICT: ರಾಜ್ಯದ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿ ICT integrated Digital Skills ಕಾರ್ಯಕ್ರಮ ಅನುಷ್ಠಾನದ ಬಗ್ಗೆ...
ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ ಶಿಕ್ಷಣ ಫೌಂಡೇಷನ್, ಬೆಂಗಳೂರು ಇವರೊಂದಿಗಿನ ದಿ: 24-07- 2023 ರ ಒಡಂಬಡಿಕೆಯನ್ವಯ ಸಂ; IN-ΚΑ 35733696646054V) 2024-25 ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿನ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ICT integrated Digital Skills ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ,
2025-26 ನೇ ಸಾಲಿನಲ್ಲಿ ICT integrated Digital Skills ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಸಂಬಂಧ Generative Artificial Intelligence (Ai) ಕುರಿತು ದಿನಾಂಕ:03.04.2025 ರಿಂದ 09.04.2025 ರ ವರೆಗೆ ಆಯೋಜಿಸಲಾಗಿದೆ. ಡಯಟ್ ನೋಡಲ್ ಅಧಿಕಾರಿಗಳು, ಸರ್ಕಾರಿ ಪ್ರೌಢಶಾಲಾ ಶಿಕ್ಷಕರು ಹಾಗೂ 2024-25 ನೇ ಸಾಲಿನಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಲು ಡಯಟ್ ಪ್ರಾಂಶುಪಾಲರಿಗೆ ತಿಳಿಸಿದೆ. ಸದರಿ ಕಾರ್ಯಕ್ರಮವನ್ನು ಶಿಕ್ಷಣ ಫೌಂಡೇಶನ್ ಯೂಟ್ಯೂಬ್ ಚಾನೆಲ್ (@sikshanafoundation3561) ಮೂಲಕ ಲೈವ್ ಸ್ಟ್ರೀಮಿಂಗ್ ಮಾಡಲಾಗುವುದು. ಕಾರ್ಯಕ್ರಮದ ಲಿಂಕ್ ಅನ್ನು ಸಂಬಂಧಿಸಿದವರಿಗೆ ತಲುಪಿಸುವ ಜವಾಬ್ದಾರಿ ಡಯಟ್ ಪ್ರಾಂಶುಪಾಲರದ್ದಾಗಿರುತ್ತದೆ. ಯು ಟ್ಯೂಬ್ ಲೈವ್ ಕಾರ್ಯಕ್ರಮದ ವೇಳಾಪಟ್ಟಿ ಈ ಕೆಳಗಿನಂತಿದೆ.