INSPIRE Award Scheme- 2025-26ನೇ ಸಾಲಿನ INSPIRE Award Scheme ಅಡಿಯಲ್ಲಿ ಅನ್ ಲೈನ್ ನಾಮಿನೇಷನ್ ಗೆ ಇದೀಗ ಅವಕಾಶವನ್ನು ನೀಡಲಾಗಿದೆ.
INSPIRE Award Scheme- 2025-26
Inspire award Scheme 2025-26: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ INSPIRE Award Scheme ಕಾರ್ಯಕ್ರಮವನ್ನು INSPIRE Awards MANAK( Million Minds Augmenting National Aspiration and Knowledge) ಎಂದು ಮರು ನಾಮೀಕರಿಸಿ, ಮಾನ್ಯ ಪ್ರಧಾನ ಮಂತ್ರಿಗಳ “Startup India” ಉಪಕ್ರಮದಡಿಯಲ್ಲಿ ಮುಂದುವರೆಸಲಾಗುತ್ತಿದೆ.
2025-26 ನೇ ಸಾಲಿನಲ್ಲಿ E-Management of INSPIRE Award Scheme (E-MIAS) ಅಡಿಯಲ್ಲಿ ಆನ್ ಲೈನ್ ನಾಮ ನಿರ್ದೇಶನಗಳನ್ನು ದಿನಾಂಕ: 15.06.2025 ರಿಂದ 15.09.2025 ರವರೆಗೆ 6 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಯವ 10 ರಿಂದ 15 ನೇ ವಯಸಿನ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ / ನವೀನ ಚಿಂತನೆಯನ್ನು ಮೂಡಿಸುವ ಮೂಲ ಉದ್ದೇಶವನ್ನು ಹೊಂದಿರುವ ಇನ್ಸ*ಪೈರ್ ಪ್ರಶಸ್ತಿ MANAK ಕಾರ್ಯಕ್ರಮದಡಿಯಲ್ಲಿ ಅರ್ಹ ಪ್ರತೀ ಶಾಲೆಗಳಿಂದ ವಿದ್ಯಾರ್ಥಿಗಳ ಅತ್ಯುತ್ತಮ ಐದು ಯೋಜನೆಗಳನ್ನು ಅನ್‌ಲೈನ್ ಮೂಲಕ ನಾಮಿನೇಷನ್ ಮಾಡಬಹುದಾಗಿದೆ. ಈ ನಿಗದಿತ ಅವಧಿಯೊಳಗೆ ನಿಮ್ಮ ಡಯಟ್ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಉತ್ತಮ ಯೋಜನೆಗಳನ್ನು ನಾಮಿನೇಷನ್ ಮಾಡುವಂತೆ ಕ್ರಮ ವಹಿಸಲು ಸೂಚಿಸಿದೆ.
ಶಾಲೆಗಳು ತಮ್ಮ ಯೋಜನೆಗಳನ್ನು ಆನ್ ಲೈನ್ ಮೂಲಕ ಸಲ್ಲಿಸುವ ಪೂರ್ವದಲ್ಲಿ E-MIAS Portal ನಲ್ಲಿ (www.inspireawards-dst.gov.in) ನೋಂದಣಿಯಾಗುವುದು ಕಡ್ಡಾಯವಾಗಿದೆ. ಈಗಾಗಲೇ ನೋಂದಣಿ ಆಗಿರುವ ಶಾಲೆಗಳು ಮತ್ತೊಮ್ಮೆ ನೋಂದಣಿ ಆಗುವ ಅವಶ್ಯಕತೆ ಇರುವುದಿಲ್ಲ. ಡಯಟ್ ಪ್ರಾಂಶುಪಾಲರು ತಮ್ಮ ವ್ಯಾಪ್ತಿಯ 6-10ನೇ ತರಗತಿ ಇರುವ ಎಲ್ಲಾ ಶಾಲೆಗಳನ್ನು E-MIAS Portal ನಲ್ಲಿ ನೋಂದಣಿ ಆಗಿರುವುದನ್ನು ಖಾತ್ರಿ ಪಡಿಸಿಕೊಂಡು ವರದಿ ಮಾಡುವುದು.
ವಿದ್ಯಾರ್ಥಿಗಳ ನಾಮ ನಿರ್ದೇಶನ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿಯ ಪ್ರಾಜೆಕ್ (Synopsis in pdf format) ಅನ್ನು ಅಪ್‌ಲೋಡ್ ಮಾಡುವುದು. ತಮ್ಮ ಡಯಟ್ ವ್ಯಾಪ್ತಿಯ ಎಲ್ಲಾ ಶಾಲೆಗಳ ಅರ್ಹ ವಿದ್ಯಾರ್ಥಿಗಳನ್ನು ನಾಮಿನೇಷನ್ ಮಾಡುವುದು ಕಡ್ಡಾಯವಾಗಿದೆ. ಶಾಲಾ ಮುಖ್ಯಸ್ಥರಿಗೆ ಸವಿರವಾದ ಸುತ್ತೋಲೆಯನ್ನು ನೀಡಿ, online filling ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು.
ಈ ಹಿಂದೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರದರ್ಶನಗೊಂಡ ಯೋಜನೆಗಳ ರೀತಿಯಲ್ಲಿ ಸೃಜನಾತ್ಮಕ ಹಾಗೂ ಮಾನವ ಕಲ್ಯಾಣ/ನೆರವಿನ ಯೋಜನೆಗಳನ್ನು ಚಿಂತಿಸಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಶಾಲಾ ಹಂತದಲ್ಲಿನ ಅತ್ಯುತ್ತಮ 5 ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು.
ನಿಮ್ಮ ವ್ಯಾಪ್ತಿಯಲ್ಲಿ INSPIRE ಕಾರ್ಯಕ್ರಮದ ಯಶಸ್ವಿ ಅನುಷ್ಟಾನಕ್ಕೆ ಅಗತ್ಯ ಕ್ರಮ ವಹಿಸುವುದು. ಈ ಕುರಿತಂತೆ ಪ್ರಗತಿ ವರದಿಯನ್ನು dsert.sis2020@gmail.com ಗೆ ಇ-ಮೇಲ್ ಮಾಡಲು ತಿಳಿಸಿದೆ.

CLICK HERE TO DOWNLOAD
1 thought on “INSPIRE Award Scheme- 2025-26ನೇ ಸಾಲಿನ INSPIRE Award Scheme ಅಡಿಯಲ್ಲಿ ಅನ್ ಲೈನ್ ನಾಮಿನೇಷನ್”