PM-vidyalakshmi yojana: ಪಿಎಂ ವಿದ್ಯಾಲಕ್ಷ್ಮೀ ಯೋಜನೆ|ಶಿಕ್ಷಣ ಸಾಲಕ್ಕೆ ಬಡ್ಡಿ ವಿನಾಯ್ತಿ,ಎಲ್ಲ ಕೋರ್ಸ್ ಗಳ ವಿದ್ಯಾರ್ಥಿಗಳಿಗೂ ಅನ್ವಯ-2025
PM-vidyalakshmi yojana: ದೇಶದ ಪ್ರತಿಷ್ಠಿತ ಹಾಗೂ ನ್ಯಾಷನಲ್ ಇನ್ ಸ್ಟಿಟ್ಯೂಷನಲ್ ಬ್ಯಾಂಕಿಂಗ್ ಪ್ರೇಮ್ವರ್ಕ್- ಎನ್ ಐಆರ್ಎಫ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಸಂಸ್ಥೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಬಡ್ಡಿ ವಿನಾಯ್ತಿ ಸಾಲ ಸೌಲಭ್ಯ ಒದಗಿಸುವ ಪಿಎಂ ವಿದ್ಯಾಲಕ್ಷ್ಮೀ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಕುರಿತು ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ಒದಗಿಸುವಂತೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು (ಎಐಸಿಟಿಯು) ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಈ ಮೂಲಕ ವಿದ್ಯಾರ್ಥಿಗಳು 10 ಲಕ್ಷ ರೂ.ವರೆಗಿನ ಸಾಲಕ್ಕೆ ಶೇ.3 ಬಡ್ಡಿ ವಿನಾಯ್ತಿ ಪಡೆಯಬಹುದು. ದೇಶದ ಒಟ್ಟು 860 ಗಣ ಸಂಸ್ಥೆಗಳ ಒಂದು ಲಕ್ಷ ವಿದ್ಯಾರ್ಥಿಗಳು ಇದರ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ. ಇದರಲ್ಲಿ ರಾಜ್ಯದ ಒಟ್ಟು 27 ಶಿಕ್ಷಣ ಸಂಸ್ಥೆಗಳನ್ನು ಗುರುತಿಸಲಾಗಿದೆ.
ಏನಿದು ಪ್ರಧಾನ ಮಂತ್ರಿ-ವಿದ್ಯಾಲಕ್ಷ್ಮೀ ಯೋಜನೆ?
ದೇಶದ ಯುವ ಪೀಳಿಗೆಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ಪಡೆಯುವುದಕ್ಕೆ ಆರ್ಥಿಕ ನಿರ್ಬಂಧಗಳು ಅಡ್ಡಿಯಾಗದಂತೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ-ವಿದ್ಯಾಲಕ್ಷ್ಮೀ ಯೋಜನೆಯನ್ನು ಆರಂಭಿಸಿದೆ. ದೇಶದ ಅಗ್ರ 860 ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಪ್ರತಿಭಾನ್ವಿತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು.
ಮೇಲಾಧಾರ ರಹಿತ, ಖಾತರಿದಾರರು ಬೇಕಿಲ್ಲದ ಶಿಕ್ಷಣ ಸಾಲಗಳನ್ನು ಇದರಲ್ಲಿ ಪಡೆಯಬಹುದು. ಸರಳ, ಪಾರದರ್ಶಕ, ವಿದ್ಯಾರ್ಥಿಸ್ನೇಹಿ ಮತ್ತು ಸಂಪೂರ್ಣವಾಗಿ ಡಿಜಿಟಲ್ ಅರ್ಜಿ ಪ್ರಕ್ರಿಯೆಯ ಮೂಲಕ ಇದನ್ನು ನಿರ್ವಹಿಸಲಾಗುತ್ತದೆ.
ರಾಜ್ಯದ ಶಿಕ್ಷಣ ಸಂಸ್ಥೆಗಳು:
ರಾಜ್ಯದಲ್ಲಿರುವ ಕೇಂದ್ರ ಪ್ರಾಯೋಜಿತ ಬಹುತೇಕ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು.
ಈ ಯೋಜನೆಗೆ ಅರ್ಹ ದೇಶದ ಒಟ್ಟು ಶಿಕ್ಷಣ ಸಂಸ್ಥೆಗಳು- 860
ರಾಜ್ಯದಲ್ಲಿರುವ ಅರ್ಹ ಶಿಕ್ಷಣ ಸಂಸ್ಥೆಗಳು-27

IIT, IIIT, IIM, ಕಲಬುರಗಿಯ ಕೇಂದ್ರೀಯ ವಿದ್ಯಾಲಯ, ಬೆಂಗಳೂರಿನ `ನಿಮ್ಹಾನ್ಸ್, ಸುರತ್ಕಲ್ನ NITK, ಮೈಸೂರಿನ ವಾಕ್ ಶ್ರವಣ ಸಂಸ್ಥೆ, ESIC ವೈದ್ಯಕೀಯ ಕಾಲೇಜು ಮೊದಲಾದವುಗಳು ಈ ಪಟ್ಟಿಯಲ್ಲಿವೆ.
ಇನ್ನು ರಾಜ್ಯದ ಸರ್ಕಾರದ ಸಂಸ್ಥೆಗಳನ್ನು ಪಟ್ಟಿ ಮಾಡುವುದಾದಲ್ಲಿ; ಬೆಂಗಳೂರು ವಿಶ್ವವಿದ್ಯಾಲಯ, ದಾವಣಗೆರೆ ವಿಶ್ವವಿದ್ಯಾಲಯ, ಬೆಂಗಳೂರು ದಂತ ವೈದ್ಯಕೀಯ ಕಾಲೇಜು, ಕರ್ನಾಟಕ, ಕುವೆಂಪು, ಮಂಗಳೂರು, ಮೈಸೂರು, ತುಮಕೂರು, ವಿಶ್ವವಿದ್ಯಾಲಯ, ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ, ಬೆಂಗಳೂರಿನ ಕೃಷಿ ವಿಜ್ಞಾನ ವಿವಿ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸೇರಿ ಒಟ್ಟು 12 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಬಡ್ಡಿ ಸಹಾಯಧನಕ್ಕೆ ಅರ್ಹರಾಗಿದ್ದಾರೆ.
ಆದಾಯ ಮಿತಿ ಎಸ್ಟಿರಬೇಕು:
ವಾರ್ಷಿಕ 4.5 ಲಕ್ಷ ರೂ.ಗಳ ಆದಾಯ ಹೊಂದಿರುವ ಕುಟುಂಬದ ವಿದ್ಯಾರ್ಥಿಗಳು ತಾಂತ್ರಿಕ ಹಾಗೂ ವೃತ್ತಿಪರ ಕೋರ್ಸ್ಗಳಿಗೆ ದಾಖಲಾಗಿದ್ದರೆ, ಪಿಎಂ ಯುಎಸ್ಪಿ -ಸಿಎಸ್ಐಎಸ್ ಯೋಜನೆಯಡಿಯಲ್ಲಿ ಶೇ.100ರಷ್ಟು ಬಡ್ಡಿ ಸಹಾಯಧನವನ್ನು ನೀಡಲಾಗುತ್ತದೆ.ಆದರೆ ಪಿಎಂ ವಿದ್ಯಾಲಕ್ಷ್ಮೀ ಯೋಜನೆಯಡಿಯಲ್ಲಿ ಇತರ ಯಾವುದೇ ಕೋರ್ಸ್ಗಳಿಗೆ ದಾಖಲಾಗಿದ್ದು, ವಿದ್ಯಾರ್ಥಿಗಳ ಕುಟುಂಬದ ಆದಾಯವು ವಾರ್ಷಿಕ 8 ಲಕ್ಷ ರೂ.ಗಳ ಮಿತಿಯಲ್ಲಿದ್ದರೆ, ಈ ಯೋಜನೆಯನ್ವಯ 10 ಲಕ್ಷ ರೂ.ಗಳವರೆಗಿನ ಸಾಲದ ಮೇಲೆ ಶೇ.3 ಬಡ್ಡಿ ವಿನಾಯಿತಿಯನ್ನು ನೀಡಲಾಗುತ್ತದೆ.
ಮತ್ತೇಕೆ ತಡ ಬೇಗನೆ ಅರ್ಜಿ ಸಲ್ಲಿಸಿ

CLICK HERE HIGHER INSTITUTIONS LIST
ಇದನ್ನೂ ನೋಡಿ…..2025-26ನೇ ಸಾಲಿನ INSPIRE Award Scheme ಅಡಿಯಲ್ಲಿ ಅನ್ ಲೈನ್ ನಾಮಿನೇಷನ್ ಮಾಡುವ ಬಗ್ಗೆ