Namma shale namma javabdari- ‘ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮ 2025-26
Namma shale namma javabdari-2025-2025- 26ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಮಕ್ಕಳ ದಾಖಲಾತಿ ಹೆಚ್ಚಿಸಲು ‘ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮ ಏರ್ಪಡಿಸಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕುರಿತು
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಶಾಲಾ ಶಿಕ್ಷಣವನ್ನು ಬಲವಡಿಸಲು, ರಾಜ್ಯದ ಎಲ್ಲಾ ಮಕ್ಕಳು ಸಾರ್ವತ್ರಿಕ ಶಿಕ್ಷಣಕ್ಕೆ ಒಳಪಡಿಸುವುದು ಅಗತ್ಯವಾಗಿದೆ ಸರ್ಕಾರಿ ಶಾಲೆಗಳಲ್ಲಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಮಕ್ಕಳ ದಾಖಲಾತಿ, ದಾಖಲಾದ ಮಕ್ಕಳು ಶಾಲೆಯಲ್ಲಿ ಪ್ರತಿನಿತ್ಯ ಹಾಜರಾಗಿ, ನಿರಂತರ ಕಲಿಕೆಯಲ್ಲಿ ಭಾಗವಹಿಸಿ, ಉಳಿಯಲು, ಹಲವಾರು ಶೈಕ್ಷಣಿಕ ಸೌಲಭ್ಯಗಳು ಹಾಗೂ ಪ್ರೋತ್ಸಾಹದಾಯಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರ್ಥಿಕ ಅನುದಾನದಡಿ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ. ಮಕ್ಕಳ ಕಲಿಕಾ ಗುಣಮಟ್ಟವನ್ನು ಉತ್ತಮಪಡಿಸಲು ಶಾಲಾ ಶಿಕ್ಷಣ ಇಲಾಖೆಯು ಹಲವಾರು ಯೋಜನೆಗಳನ್ನು ರೂಪಿಸಿದೆ.
ಆದಾಗ್ಯೂ ಸಹ, ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಬೇಕಿದೆ. ಈ ಹಿನ್ನೆಲೆಯಲ್ಲಿ ದಾಖಲಾತಿ ಹೆಚ್ಚಿಸುವ ಸಂಬಂಧ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಎಂಬ ಕಾರ್ಯಕ್ರಮವು ಶೈಕ್ಷಣಿಕ ಸಂವಾದ ಮತ್ತು ಜಾಗೃತಿಯನ್ನು ಪೋಷಕರಲ್ಲಿ ಮೂಡಿಸಲು ತಾಲ್ಲೂಕು/ವಲಯ ಹಂತದಲ್ಲಿ ಒಂದು ಹಾಗೂ ಹೋಬಳಿ ಮಟ್ಟದಲ್ಲಿ ಒಂದು ದಿನದ ಪ್ರೇರಣಾತ್ಮಕ ಶಾಲಾ ಕಾರ್ಯಕ್ರಮವನ್ನು ಏರ್ಪಡಿಸಲು ಯೋಜಿಸಲಾಗಿದೆ.
ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸುವಂತೆ ಪೋಷಕರನ್ನು ಸಮುದಾಯವನ್ನು ಪ್ರೇರೇಪಿಸಿ. ಉತ್ತೇಜಿಸಲು ಶಾಲಾ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ವಿವಿಧ ಸ್ತರಗಳ ಮೇಲ್ವಿಚಾರಕ ಅಧಿಕಾರಿಗಳಿಂದ, ಕ್ಷೇತ್ರ ಸಂಪನ್ಮೂಲ ಸಿಬ್ಬಂದಿಗಳಿಂದ, ಅಜೀಂ ಪ್ರೇಮ್‌ಜಿ ಫೌಂಡೇಶನ್ ಫಾರ್ ಡೆವೆಲಪ್‌ಮೆಂಟ್ (APF) ಸಂಸ್ಥೆಯ ಶೈಕ್ಷಣಿಕ ಸಂಪನ್ಮೂಲ ತಂಡದ ವ್ಯಕ್ತಿಗಳ ಸಹಭಾಗಿತ್ವದಲ್ಲಿ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಕುರಿತು ಕಾರ್ಯಕ್ರಮದ ಅನುಷ್ಠಾನದ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದ್ದು, ದಿನಾಂಕ: 29.04.2025 ರಂದು ರಾಜ್ಯ ಮಟ್ಟದ ಶಾಲಾ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಎಲ್ಲಾ ಸ್ತರದ ಅಧಿಕಾರಿಗಳಿಗೆ ಆನ್‌ಲೈನ್ ತರಬೇತಿಯನ್ನು ನೀಡಲಾಗುತ್ತದೆ.
1. “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮದ ಉದ್ದೇಶಗಳು :
1.1 ಸಮುದಾಯದಲ್ಲಿ ಶಿಕ್ಷಣದ ಮಹತ್ವ, ಸರ್ಕಾರಿ ಶಾಲೆಗಳಲ್ಲಿ, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಬಗ್ಗೆ, ಹಾಗೂ ಇಲಾಖೆಯ ಶೈಕ್ಷಣಿಕ ಕಾರ್ಯಕ್ರಮಗಳ ಪ್ರೋತ್ಸಾಹದಾಯಕ ಯೋಜನೆಗಳ ಕುರಿತು ಪೋಷಕರಲ್ಲಿ ಜಾಗೃತಿ ಮೂಡಿಸುವುದು.
12 ಮಕ್ಕಳಲ್ಲಿರುವ ಅಪೌಷ್ಠಿಕತೆ ಮತ್ತು ರಕ್ತಹೀನತೆ ನಿವಾರಿಸಲು ಮಧ್ಯಾಹ್ನ ಉಪಾಹಾರ ಯೋಜನೆ, ಕ್ಷೀರಭಾಗ್ಯ ಯೋಜನೆ (ಬಿಸಿ ಹಾಲು) ಮತ್ತು ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆ/ಬಾಳೆ ಹಣ್ಣು ರಾಗಿ ಮಾಲ್ಟ್ ವಿತರಣೆಯ ಕಾರ್ಯಕ್ರಮಗಳ ಮೂಲಕ ಮಕ್ಕಳ ನಿರಂತರ ಕಲಿಕೆಗಾಗಿ ಸರ್ಕಾರಿ ಶಾಲೆಗಳಲ್ಲಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ನೀಡುತ್ತಿರುವ ಪೌಷ್ಠಿಕ ಬೆಂಬಲದ ಬಗ್ಗೆ, ಪೋಷಕರಲ್ಲಿ ಅರಿವು ಮೂಡಿಸುವುದು.
1.3 ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳಲ್ಲಿ ದಾಖಲಿಸುವಂತೆ ಪ್ರೇರೆಪಿಸುವುದು.
2. “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮದ ಅನುಷ್ಠಾನದ ಹರಿವು ಮತ್ತು ಜವಾಬ್ದಾರಿ ನಿರ್ವಹಣೆ:
2.1 ರಾಜ್ಯ ಮಟ್ಟದ ಅನುಷ್ಠಾನ ಮತ್ತು ಮೇಲ್ವಿಚಾರಣೆಯ ತಂಡದಲ್ಲಿ ಭಾಗಿದಾರರು:
- ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು.
- ನಿರ್ದೇಶಕರು ಮಧ್ಯಾಹ್ನ ಉಪಾಹಾರ ಯೋಜನ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು.
- ಅಪರ ಆಯುಕ್ತರು, ಕಲಬುರಗಿ ವಿಭಾಗ, ಶಾಲಾ ಶಿಕ್ಷಣ ಇಲಾಖೆ, ಕಲಬುರಗಿ,
- ಅಪರ ಆಯುಕ್ತರು, ಧಾರವಾಡ ವಿಭಾಗ, ಶಾಲಾ ಶಿಕ್ಷಣ ಇಲಾಖೆ, ಧಾರವಾಡ,
- ನಿರ್ದೇಶಕರು (ಪ್ರೌಢ ಶಿಕ್ಷಣ) ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು.
- ನಿರ್ದೇಶಕರು (ಪ್ರಾಥಮಿಕ ಶಿಕ್ಷಣ) ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು.
- ನಿರ್ದೇಶಕರು (ಡಿ ಎಸ್ ಇ ಆರ್ ಟಿ) ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು.
- ನಿರ್ದೇಶಕರು (ಕ ಎಸ್ ಇ ಇ ಬಿ) ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು.
- ವ್ಯವಸ್ಥಾಪಕ ನಿರ್ದೇಶಕರು (ಪಠ್ಯ ಪುಸ್ತಕ) ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು.
- ನಿರ್ದೇಶಕರು (ಆರ್ ಐ ಇ) ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು.
- ನಿರ್ದೇಶಕರು (ಅಲ್ಪಸಂಖ್ಯಾತ ಶಾಲೆಗಳು) ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು.
- ನಿರ್ದೇಶಕರು (ಎಸ್.ಐ.ಎಸ್.ಎಲ್.ಇ.ಪಿ) ಶಾಲಾ ಶಿಕ್ಷಣ ಇಲಾಖೆ, ಧಾರವಾಡ.
- ಸಹ ನಿರ್ದೇಶಕರು, ಬೆಂಗಳೂರು, ಮೈಸೂರು ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳು
2.2 ಜಿಲ್ಲಾ ಮಟ್ಟದಲ್ಲಿ ಅನುಷ್ಠಾನದ ಮತ್ತು ಮೇಲಿ ಚಾರಣೆಯ ತಂಡದ ಭಾಗಿದಾರರು:
- ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ಉ
- ಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ.
- ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ.
- ಉಪನಿರ್ದೇಶಕರು (ಅಭಿವೃದ್ಧಿ). ಡಯಟ್, ಶಾಲಾ ಶಿಕ್ಷಣ ಇಲಾಖೆ.
- ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ.
- ಡಿ.ವೈ.ಪಿ.ಸಿ. (ಸಮಗ್ರ ಶಿಕ್ಷಣ ಕರ್ನಾಟಕ) ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ.
- ಹಿರಿಯ ಉಪನ್ಯಾಸಕರು ಮತ್ತು ಉಪನ್ಯಾಸಕರು, ಡಯಟ್ಶಿ
- ಕ್ಷಣಾಧಿಕಾರಿಗಳು, ಮಧ್ಯಾಹ್ನ ಉಪಾಹಾರ ಯೋಜನೆ, ಜಿಲ್ಲಾ ಪಂಚಾಯತ್ಜಿ
- ಲ್ಲೆಯ ಎಲ್ಲಾ ತಾಲ್ಲೂಕು/ವಲಯಗಳ ಕ್ಷೇತ್ರಶಿಕ್ಷಣಾಧಿಕಾರಿಗಳು.
2.3 ತಾಲೂಕು / ವಲಯ ಮಟ್ಟದಲ್ಲಿ ಅನುಷ್ಠಾನದ ಮತ್ತು ಮೇಲಿ ಚಾರಣೆಯ ತಂಡದ ಭಾಗಿದಾರರು.:
- ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತ್.
- ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ.
- ಪ್ರಾಂಶುಪಾಲರು, ಪದವಿ ಪೂರ್ವ ಶಿಕ್ಷಣ ಇಲಾಖೆ,
- ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆ.
- ಸಹಾಯಕ ನಿರ್ದೇಶಕರು, ಮಧ್ಯಾಹ್ನ ಉಪಾಹಾರ ಯೋಜನೆ, ತಾಲ್ಲೂಕು ಪಂಚಾಯತ್.
- ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಗಳು.
- ತಾಲ್ಲೂಕಿನ ಎಲ್ಲ ECO, BRP, CRP ಗಳು
- ತಾಲ್ಲೂಕು/ಹೋಬಳಿ ಮಟ್ಟದ ಆಯ್ದ ಐದು ಜನ ಅಡುಗೆ ಸಿಬ್ಬಂದಿಗಳು.
3. “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮವನ್ನು ಏರ್ಪಡಿಸುವ ಸ್ಥಳ ಮತ್ತು ಅನುಷ್ಠಾನ :
ರಾಜ್ಯದ ಎಲ್ಲಾ 35 ಶೈಕ್ಷಣಿಕ ಜಿಲ್ಲೆಗಳ ಒಟ್ಟು 204 ತಾಲ್ಲೂಕು / ವಲಯಗಳಲ್ಲಿ ಪ್ರತಿ ತಾಲ್ಲೂಕು/
ವಲಯಗಳಲ್ಲಿ ತಲಾ ಎರಡು ಕಾರ್ಯಕ್ರಮಗಳಂತೆ ಒಟ್ಟು 408 ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ/ಪ್ರೌಢ ಶಾಲೆಯಲ್ಲಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಕೆಳಕಂಡಂತೆ ಏರ್ಪಡಿಸುವುದು.
3.1 ತಾಲ್ಲೂಕು /ವಲಯ ಕೇಂದ್ರ ಸ್ಥಳ –
ಒಂದು ಆಯ್ಕೆ ಸರ್ಕಾರಿ ಪ್ರೌಢಶಾಲೆಯಲ್ಲಿ / ಹಿರಿಯ ಪ್ರಾಥಮಿಕ ಶಾಲೆಯಲ್ಲಿ / ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ಕಾರ್ಯಕ್ರಮ.
3.2 ತಾಲ್ಲೂಕು/ವಲಯದ ಯಾವುದಾದರೂ ಒಂದು ಹೋಬಳಿ ಕೇಂದ್ರ ಸ್ಥಳ –
ಒಂದು ಆಯ್ಕೆ ಸರ್ಕಾರಿ ಪ್ರೌಢಶಾಲೆ/ ಹಿರಿಯ ಪ್ರಾಥಮಿಕ ಶಾಲೆ / ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ಕಾರ್ಯಕ್ರಮ.
4. “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ವಿಧಾನ ಮತ್ತು ಪೂರ್ವ ತಯಾರಿಗಾಗಿ ತರಬೇತಿ ಮಾರ್ಗಸೂಚಿ :
ರಾಜ್ಯದ ಎಲ್ಲಾ ನಾಲ್ಕು ವಿಭಾಗದ ಅನುಷ್ಠಾನಾಧಿಕಾರಿಗಳಿಗೆ ತರಬೇತಿಯನ್ನು ಮತ್ತು ಮಾರ್ಗದರ್ಶನವನ್ನು ದಿನಾಂಕ: 29.04.2025 ರಂದು ಆನ್‌ಲೈನ್ ಮೂಲಕ ನೀಡಲಾಗುವುದು. ಈ ತರಬೇತಿಯ ಲಿಂಕ್ ಅನ್ನು ಬಳಸಿಕೊಂಡು ಎಲ್ಲಾ ಸ್ತರಗಳ ಅಧಿಕಾರಿಗಳು ಭಾಗವಹಿಸಿ ತರಬೇತಿ ಪಡೆಯುವುದು.
ರಾಜ್ಯ ಮಟ್ಟದ ತರಬೇತಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಯ ಸಂಪನ್ಮೂಲ ಅಧಿಕಾರಿಗಳು ಹಾಗೂ APF ಸಂಸ್ಥೆಯ ಸಂಪನ್ಮೂಲ ಅಧಿಕಾರಿಗಳು ಜೊತೆಗೂಡಿ ನೀಡುವರು.
ರಾಜ್ಯ ಮಟ್ಟದ ತರಬೇತಿ ಸಂದರ್ಭದಲ್ಲಿ ಪ್ರತಿ ಜಿಲ್ಲೆಯ ಪ್ರತಿ ತಾಲ್ಲೂಕಿನ / ವಲಯ ಹಂತದಲ್ಲಿ ಯೋಜಿಸಿರುವಂತೆ ಒಟ್ಟು ಎರಡು ಶಾಲಾ ಕಾರ್ಯಕ್ರಮಗಳ ಆಯ್ಕೆ ಮಾಡಿದ ಸ್ಥಳ, ಶಾಲೆಗಳ ಹೆಸರು.
ಆಹ್ವಾನಿಸುವ ಭಾಗೀದಾರರ ಒಟ್ಟು ಸಂಖ್ಯೆ ಇತ್ಯಾದಿ ವಿವರಗಳನ್ನು ನೀಡಿರುವ ನಮೂನೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳು, ಹಿರಿಯ ಪ್ರಾಂಶುಪಲಾರು, ಕ್ಷೇತ್ರಸಮನ್ವಯಾಧಿಕಾರಿ ಜಿಲ್ಲಾ ಪಂಚಾಯತ್ ಸಹಾಯಕ ನಿರ್ದೇಶಕರು ಮಧ್ಯಾಹ್ನ ಉಪಾಹಾರ ಯೋಜನೆ ಇವರು ನಿರ್ಧರಿಸಿ ಮುಂಚಿತವಾಗಿ ಪಡೆದು ತಾಲ್ಲೂಕುವಾರು ಕ್ರೋಢೀಕರಿಸಿದ ಮಾಹಿತಿಯನ್ನು ಶಿಕ್ಷಣಾಧಿಕಾರಿಗಳು ಮಧ್ಯಾಹ್ನ ಉಪಾಹಾರ ಯೋಜನ ರವರು ರಾಜ್ಯ ಕಛೇರಿಗೆ ದಿನಾಂಕ: 02.05.2025 ರಂದು ಸಂಜೆ 5.00 ಗಂಟೆಯೊಳಗಾಗಿ ತಪ್ಪದೇ ಸಲ್ಲಿಸುವುದು.
ಜಿಲ್ಲಾ ಮಟ್ಟದ ಆನ್‌ಲೈನ್ ತರಬೇತಿ :
ರಾಜ್ಯ ಮಟ್ಟದ ತರಬೇತಿ ಪಡೆದ ಜಿಲ್ಲಾ ಮಟ್ಟದ ಸಂಪನ್ಮೂಲ ತಂಡವು (Master Trainers) ತಮ್ಮ ತಮ್ಮ ಜಿಲ್ಲೆಗಳಲ್ಲಿ ಆನ್‌ಲೈನ್ ಮೂಲಕ (ವೀಡಿಯೋ ಸಂವಾದ) ತರಬೇತಿ ಆಯೋಜಿಸಿ, ತಾಲ್ಲೂಕು/ವಲಯ ಮಟ್ಟದ ಶಾಲಾ ಸಭಾ ಕಾರ್ಯಕ್ರಮದ ಅನುಷ್ಠಾನ ತಂಡದ ಸಂಪನ್ಮೂಲ ಸದಸ್ಯರಿಗೆ ತರಬೇತಿ ನೀಡುವುದು. ಪ್ರತಿ ತಾಲ್ಲೂಕು/ ವಲಯ ಹಂತದಲ್ಲಿ ಶಾಲಾ ಸಭೆ ನಡೆಸುವ ಆಯ್ತ ಕೇಂದ್ರದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಇವರೊಂದಿಗೆ ಅನುಷ್ಠಾನಾಧಿಕಾರಿಗಳ ಕಾರ್ಯತಂಡದವರು ಸದರಿ ಆನ್‌ಲೈನ್ ತರಬೇತಿಯಲ್ಲಿ ಭಾಗೀದಾರರಾಗಿ ತರಬೇತಿಯನ್ನು ತಪ್ಪದೇ ಪಡೆಯವುದು.
ತಾಲ್ಲೂಕು / ವಲಯ ಹಂತದಲ್ಲಿ ತರಬೇತಿಗೊಂಡ ಕಾರ್ಯತಂಡದಿಂದ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮ ಅನುಷ್ಠಾನ: ಪ್ರತಿ ತಾಲ್ಲೂಕು/ವಲಯ ಮಟ್ಟದ ನಗರ ಕೇಂದ್ರದಲ್ಲಿ ಒಂದು ಮತ್ತು ಹೋಬಳಿ ಕೇಂದ್ರದಲ್ಲಿ ಒಂದು, ಒಟ್ಟು ಎರಡು ಕಾರ್ಯಕ್ರಮಗಳನ್ನು ಪ್ರತ್ಯೇಕವಾಗಿ ಏರ್ಪಡಿಸಲು, ಆಯಾ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು ಮತ್ತು ಅನುಷ್ಠಾನಾಧಿಕಾರಿಗಳ ಕಾರ್ಯತಂಡಗಳು ಅಗತ್ಯ ಪೂರ್ವ ತಯಾರಿ ಮಾಡಿಕೊಂಡು ಅನುಷ್ಠಾನಗೊಳಿಸುವುದು.
ನಿಗದಿತ ದಿನಾಂಕದಂದು, ಸಮುದಾಯದ ಪೋಷಕ ವರ್ಗದ ಭಾಗೀದಾರರನ್ನು ನಿಗದಿತ ಸಂಖ್ಯೆಯಲ್ಲಿ ಆಹ್ವಾನಿಸಿ, ತರಬೇತಿ ಮಾರ್ಗಸೂಚಿಯಂತೆ ವೇಳಾಪಟ್ಟಿಯಲ್ಲಿರುವ ವಿಷಯಕ್ಕೆ ಪೂರಕವಾಗಿ “ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮವನ್ನು ಏರ್ಪಡಿಸುವುದು.
ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ, ಅಗತ್ಯ ಮಾಹಿತಿಯನ್ನು ನಿಗದಿತ ನಮೂನೆಗಳಲ್ಲಿ ತುಂಬಿ, ಫೋಟೋ ದಾಖಲೀಕರಣ ಪ್ರತಿಯೊಂದಿಗೆ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮದ ವರದಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳವರಿಗೆ ಸಲ್ಲಿಸುವುದು.
ಕಾರ್ಯಕ್ರಮದ ಕ್ರೋಢೀಕೃತ ವರದಿ: ಕಾರ್ಯಕ್ರಮಗಳ ತಾಲ್ಲೂಕು/ವಲಯ ಹಂತದ ವರದಿಗಳನ್ನು ಪಡೆದು ಜಿಲ್ಲಾ ಹಂತದಲ್ಲಿ ಕ್ರೋಢೀಕರಿಸಿ, ಒಟ್ಟು 408 ಕಾರ್ಯಕ್ರಮಗಳ ವರದಿಗಳನ್ನು ಪ್ರತಿ ಶಾಲಾ ಕಾರ್ಯಕ್ರಮದ ಫೋಟೋ ದಾಖಲೆಗಳೊಂದಿಗೆ, ಆಯಾ ಜಿಲ್ಲೆಯ ಶಿಕ್ಷಣಾಧಿಕಾರಿ, ಮಧ್ಯಾಹ್ನ ಉಪಾಹಾರ ಯೋಜನೆ ಇವರು ಜಿಲ್ಲಾವಾರು ಕ್ರೋಢಿಕರಿಸಿದ ವರದಿಯನ್ನು ರಾಜ್ಯ ಕಛೇರಿಗೆ ತಪ್ಪದೇ ದಿನಾಂಕ: 19.05.2025 ರೊಳಗೆ ಸಲ್ಲಿಸುವುದು.
ರಾಜ್ಯಮಟ್ಟದಲ್ಲಿ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮದ ಅಂತಿಮ ವರದಿ ಕ್ರೋಢೀಕರಣ:
ರಾಜ್ಯದ ಎಲ್ಲಾ 408 “ನಮ್ಮ ಶಾಲೆ ನಮ್ಮ ಜವಾಬ್ದಾರಿ* ಕಾರ್ಯಕ್ರಮಗಳ ಕುರಿತಂತೆ ಶಾಲಾವಾರು. ಸಂಕ್ಷಿಪ್ತ ವರದಿ, ಸಮೀಕ್ಷಾ ಹಾಳೆಯಲ್ಲಿ ಪಡೆದ ಅಭಿಪ್ರಾಯ, ಸಲಹೆಗಳು, ಮಾಹಿತಿಯನ್ನು ಭರ್ತಿ ಮಾಡಿರುವ ನಮೂನೆಗಳ ವಿಶ್ಲೇಷಣೆಯೊಂದಿಗೆ, ಕಾರ್ಯಕ್ರಮಗಳ ಪೋಟೋ ದಾಖಲೆಗಳ ಸಹಿತ ಕಾರ್ಯಕ್ರಮದ ಅಂತಿಮ ಫಲಿತಾಂಶಗಳ ಬಗ್ಗೆ ವಿವರವಾಗಿ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮದ ಕ್ರೋಢೀಕೃತ ವರದಿಯನ್ನು ಅಜೀಂ ಪ್ರೇಮ್‌ಜಿ ಫೌಂಡೇಷನ್ ಫಾರ್ ಡೆವೆಲಪ್‌ಮೆಂಟ್ (APF) ಸಂಸ್ಥೆಯು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಸುವುದು.
5. “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಾಗಿರುವ ಹಾಗೂ ಭಾಗವಹಿಸುವ
- ಭಾಗೀದಾರರು – 66.
- ಪೋಷಕರು- 30
- ಎಸ್.ಡಿ.ಎಂ.ಸಿ. ಸದಸ್ಯರು-10
- ಬಿಸಿಯೂಟದ ಅಡುಗೆ ಸಿಬ್ಬಂದಿಗಳು ಮತ್ತು ಸಹಾಯಕರು -5
- ಗ್ರಾಮ ಪಂಚಾಯತ್/ವಾರ್ಡ್ ಸದಸ್ಯರು- ಕನಿಷ್ಠ 04
- ಹಳೆಯ ವಿದ್ಯಾರ್ಥಿಗಳು-10
- ಹತ್ತಿರದ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು / ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು / ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆ / ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಂದ)-07
ಇವರನ್ನು ಆಹ್ವಾನಿಸಲು ಆಹ್ವಾನ ಪತ್ರಿಕೆಯನ್ನು ತಲುಪಿಸಿ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳುವುದು.
6. “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಗೀದಾರರೊಂದಿಗೆ ಚರ್ಚಿಸುವ, ಮತ್ತು ಪರಿಚಯಿಸುವ ವಿಷಯ ವಸ್ತು (Content)
6.1 ಶಾಲಾ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಮಕ್ಕಳ ಕಲಿಕೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒದಗಿಸಿರುವ ಶೈಕ್ಷಣಿಕ ಸೌಲಭ್ಯಗಳು. ಪ್ರೋತ್ಸಾಹಕ ಯೋಜನೆಗಳು ಮತ್ತು ಕಲಿಕಾ ಬಲವರ್ಧನೆಯ ವಿವಿಧ ಕಾರ್ಯಕ್ರಮಗಳ ಬಗೆ, ಶಾಲೆಗಳ ಅಭಿವೃದ್ಧಿಗೆ ಪೂರಕವಾಗಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ “ನಮ್ಮ ಶಾಲೆ – ನಮ್ಮ ಜವಾಬ್ದಾರಿ ಸಮುದಾಯದ ಸಹಕಾರವನ್ನು ಪಡೆಯುವ ಬಗ್ಗೆ ಪರಿಚಯ ಮಾಡಿಕೊಡುವುದು.
6.2 ಶಾಲಾ ಮಕ್ಕಳ ಪೌಷ್ಠಿಕ ಬೆಂಬಲಕ್ಕಾಗಿ ಮಧ್ಯಾಹ್ನ ಉಪಾಹಾರ ಕಾರ್ಯಕ್ರಮ, ಕ್ಷೀರ ಭಾಗ್ಯ ಯೋಜನೆಯಡಿ ಬಿಸಿಹಾಲು ವಿತರಣೆ, ರಾಗಿ ಮಾಲ್ಟ್ ವಿತರಣೆ, ಪೂರಕ ಪೌಷ್ಠಿಕ ಆಹಾರವಾಗಿ (Supplementary Nutrition Food – SNF) ಮೊಟ್ಟೆ ಬಾಳೆಹಣ್ಣು ವಿತರಣೆ, ಶಾಲಾ ಪೌಷ್ಠಿಕ ವನ, ವಿಶೇಷ ಭೋಜನ ಹಾಗೂ ವಾರದಲ್ಲಿ ಒಂದು ಬಾರಿ ವಿತರಿಸುವ ಪೌಷ್ಟಿಕ ಮಾತ್ರೆಗಳು (Weekly Iron & Folic Acid Supplementation WIFS) ಮತ್ತು NDD ಕಾರ್ಯಕ್ರಮದಡಿ ವಾರ್ಷಿಕ ಎರಡು ಬಾರಿ ಜಂತುಹುಳ, ನಿವಾರಣೆಗಾಗಿ De-Worming ಮಾತ್ರೆಗಳ ಉಚಿತ ವಿತರಣೆ ಬಗ್ಗೆ ಮಾಹಿತಿ ನೀಡುವುದು.
7. “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮದಲ್ಲಿ ಬಳಸುವ ನಮೂನೆಗಳು:
7.1 ಸಮೀಕ್ಷಾ ಹಾಳೆಗಳು (Survey Sheet) ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಪೋಷಕರು ಮತ್ತು ಎಸ್.ಡಿ.ಎಂ.ಸಿ ಸದಸ್ಯರಿಗೆ ಸಮೀಕ್ಷಾ ಹಾಳೆಗಳನ್ನು ನೀಡಿ, ಶಾಲೆಗಳಲ್ಲಿ ಗಮನಿಸಿರುವ ಮೂಲಸೌಕರ್ಯ, ಮಕ್ಕಳಿಗೆ ನೀಡುತ್ತಿರುವ ಶೈಕ್ಷಣಿಕ ಸೌಲಭ್ಯಗಳು ಮತ್ತು ಪ್ರೋತ್ಸಾಹಕಗಳು, ಶಾಲೆಯಲ್ಲಿ ದೊರೆಯುತ್ತಿರುವ ಶಿಕ್ಷಣ ಮತ್ತು ಕಲಿಕೆಯ ಗುಣಮಟ್ಟ, ಕಲಿಕೆಯ ವಾತಾವರಣ, ಇದರೊಂದಿಗೆ ಮಧ್ಯಾಹ್ನದ ಬಿಸಿಯೂಟ, ಶುದ್ಧ ಕುಡಿಯವ ನೀರಿನ ಸೌಲಭ್ಯ ಕುರಿತಂತೆ ಮಾಹಿತಿ ಸಂಗ್ರಹಿಸುವುದು.
7.2 ಪ್ರಶೋತ್ತರ / ನೇರ ಸಂವಾದ /ಪರಸ್ಪರ ಚರ್ಚೆಯ ಮೂಲಕ ಭಾಗೀದಾರರೊಂದಿಗೆ ಸಂವಾದ ನಡೆಸುವುದು. ವಿಷಯಾಂತರವಾಗದಂತೆ ಎಚ್ಚರಿಕೆ ವಹಿಸಿ ಪ್ರಮುಖ ವಿಷಯಗಳನ್ನು ಕೇಂದ್ರೀಕರಿಸಿ ಅಭಿಪ್ರಾಯ, ಸಲಹೆಗಳನ್ನು ಸ್ವೀಕರಿಸುವುದು. ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಪ್ರೇರೇಪಣೆ ನೀಡುವುದು.
8. “ನಮ್ಮ ಶಾಲಾ ನಮ್ಮ ಜವಾಬ್ದಾರಿ” ಕಾರ್ಯಕ್ರಮದ ಅನುಷ್ಟಾನದಲ್ಲಿ ವಿಭಾಗೀಯ ಅಪರ ಆಯುಕ್ತರ ಪಾತ್ರ ಮತ್ತು ಮೇಲ್ವಿಚಾರಣೆಯ ಜವಾಬ್ದಾರಿ:
ಧಾರವಾಡ ಮತ್ತು ಕಲಬುರಗಿ ವಿಭಾಗಗಳ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರು, ಸದರಿ ಜಿಲ್ಲೆಗಳ ಉಪನಿರ್ದೇಶಕರು ಪದವಿ ಪೂರ್ವ ಕಾಲೇಜು, ಸದರಿ ವಿನೂತನ ಕಾರ್ಯಕ್ರಮದ ಬಗ್ಗೆ, ವಿಶೇಷ ಗಮನ ಹರಿಸಿ, ತಮ್ಮ ವಿಭಾಗೀಯ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕಾರ್ಯಕ್ರಮ ಪೂರ್ವ ತಯಾರಿಗಾಗಿ ಕೈಗೊಳ್ಳುವ ಅಧಿಕಾರಿಗಳ ಸಂಪನ್ಮೂಲ ತರಬೇತಿ ಹಾಗೂ ತಾಲ್ಲೂಕು ಹಂತದ ಶಾಲಾ ಕೇಂದ್ರಗಳಲ್ಲಿ ಏರ್ಪಡಿಸುವ ಕಾರ್ಯಕ್ರಮ ಸಂಘಟನೆಯ ಮೇಲ್ವಿಚಾರಣೆ ಕೈಗೊಳ್ಳುವಂತೆ, ಭಾಗವಹಿಸಿ ಸೂಕ್ತ ಮಾರ್ಗದರ್ಶನ ನೀಡಿ ಯಶಸ್ವಿಯಾಗಿ ನಿರ್ವಹಿಸಿ ವರದಿ ಮಾಡುವಂತೆ ಅಗತ್ಯ ಕ್ರಮಕ್ಕಾಗಿ ಸೂಚಿಸಿದೆ.
9. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಪಾತ್ರ, ಬೆಂಬಲ ಮತ್ತು ಜವಾಬ್ದಾರಿ: ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಕೈಗೊಳ್ಳುವ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮಗಳನ್ನು ಸೂಕ್ತವಾಗಿ ಸಂಘಟಿಸಿ, ನಡೆಸುವ ಅಗತ್ಯ ಕ್ರಮವನ್ನು ನಿರ್ವಹಿಸಿ, ಅಧಿಕಾರಿಗಳಿಗೆ ಸೂಕ್ತ ಮಾರ್ಗಶ್ರನ ನೀಡಿ ತಾಲ್ಲೂಕು ಹಂತದ ಕಾರ್ಯಕ್ರಮದ ಸಭೆಗಳಲ್ಲಿ ಖುದ್ದಾಗಿ ಪಾಲ್ಗೊಳ್ಳುವಂತೆ ಸೂಚಿಸಿದೆ.
ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು, ಗುಣಮಟ್ಟದ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಉಚಿತವಾಗಿ ಪಡೆಯಲು ಸರ್ಕಾರಿ ಶಾಲೆಗಳತ್ತ ಆತ್ಮವಿಶ್ವಾಸದಿಂದ ಹೆಜ್ಜೆಯಿಡುವಂತೆ ಪ್ರೇರಣೆ ನೀಡುವಲ್ಲಿ ತಾವೆಲ್ಲರೂ ಕಾರ್ಯಸಮನ್ವಯತೆಯಿಂದ ಮತ್ತು ಕಾಳಜಿಯಿಂದ ಇಲಾಖೆಯ ಆಶಯಗಳನ್ನು ಅನುಷ್ಠಾನಗೊಳಿಸುವಲ್ಲಿ “ನಮ್ಮ ಶಾಲೆ ನಮ್ಮ ಜವಾಬ್ದಾರಿ” ಕಾರ್ಯಕ್ರಮದ ಉದ್ದೇಶವನ್ನು ಯಶಸ್ವಿಗೊಳಿಸುವಲ್ಲಿ ಅಗತ್ಯ ಕ್ರಮವಹಿಸುವಂತೆ ಸೂಚಿಸಿದೆ.




CLICK HERE TO DOWNLOAD CIRCULAR
CLICK HERE WATCH VIDEO -01
CLICK HERE TO WATCH VIDEO-02