Railway Recuritment-2025: 32,428 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ,ಅಸಿಸ್ಟೆಂಟ್, ಪಾಯಿಂಟ್ಸ್ ಮನ್, ಟ್ರಾಕ್ಸ್ ಮೆಂಟೇನರ್ ಸೇರಿದಂತೆ ಅನೇಕ ಹುದ್ದೆ.ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ.
Railway jobs: SSLC, ITI ವಿದ್ಯಾರ್ಹತೆಯುಳ್ಳವರಿಗೆ ರೈಲ್ವೆಯಲ್ಲಿ ಉತ್ತಮ ಅವಕಾಶ. ನಿರೀಕ್ಷೆ ಮಾಡಿದಂತೆ ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) GROU-D ವೃಂದದ 32,428 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಫೆ.22ರ ತನಕ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಕನ್ನಡ, ಕೊಂಕಣಿ ಸೇರಿದಂತೆ ವಿವಿಧ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಒದಗಿಸಿದೆ. ಒಟ್ಟು ಹುದ್ದೆಗಳಲ್ಲಿ 503 ಹುದ್ದೆಗಳನ್ನು ರಾಜ್ಯದ ನೈಋತ್ಯ ರೈಲ್ವೆಗೆ ಮೀಸಲಿಡಲಾಗಿದೆ.
ಒಟ್ಟು ಹುದ್ದೆಗಳು: 32,428
ಆರಂಭಿಕ ವೇತನ: ₹ 18,000
ಹುದ್ದೆ ಮತ್ತು ಅರ್ಹತೆ:
ವರ್ಕ್‌ಶಾಪ್, ಬ್ರಿಜ್,ಕ್ಯಾರಿಯೇಜ್, ಲೋಕೋ ಶೆಡ್, ಆಪರೇಷನ್ಸ್, ಟಿಎಲ್ ಆ್ಯಂಡ್ ಎಸಿ, ಮಷಿನ್, ಟಿಆರ್‌ಡಿ ವಿಭಾಗಗಳಲ್ಲಿ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹಾಗೆಯೇ ಪಾಯಿಂಟ್ಸ್ ಮನ್ ಮತ್ತು ಟ್ರಾಕ್ಸ್ ಮೆಂಟೇನರ್ ಹುದ್ದೆಗಳೂ ಖಾಲಿ ಇವೆ ಎಂದು RRB ತಿಳಿಸಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿರಬೇಕು ಅಥವಾ ಇದಕ್ಕೆ ಪೂರಕ ವಿದ್ಯಾರ್ಹತೆ ಹೊಂದಿರಬೇಕು.
ಎನ್‌ಸಿವಿಟಿ ನೀಡುವ ನ್ಯಾಷನಲ್ ಅಪ್ರೆಂಟಿಸ್‌ಷಿಪ್ ಟ್ರೇನಿಂಗ್ ಅಥವಾ ಐಟಿಐ ಪೂರ್ಣಗೊಳಿಸಿದವರೂ ಅರ್ಜಿ ಸಲ್ಲಿಸುವ ಅವಕಾಶವಿದೆ. ನಿಗದಿತ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಪರೀಕ್ಷೆ ಬರೆದು ಅಂತಿಮ ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅಥವಾ ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಫಲಿತಾಂಶದ ನಿರೀಕ್ಷೆಯಲ್ಲಿ ಇರುವವರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
18ರಿಂದ 36 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಶುಲ್ಕ ಎಷ್ಟು?:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಶೇಷಚೇತನರು, ಮಹಿಳೆಯರು, ತೃತೀಯ ಲಿಂಗಿಗಳು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 250 ರೂ. ಹಾಗೂ ಉಳಿದವರು 500 ರೂ. ಶುಲ್ಕ ಪಾವತಿಬೇಕು. ಇದರಲ್ಲಿ 250 ರೂ. ಶುಲ್ಕವನ್ನು ಸಂಪೂರ್ಣವಾಗಿ ಅಭ್ಯರ್ಥಿಗಳಿಗೆ ಹಿಂತಿರುಗಿಸಲಾಗುತ್ತದೆ. 500 ರೂ. ಶುಲ್ಕ ಪಾವತಿಸಿದ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ಪರೀಕ್ಷೆಯ ನಂತರ 400 ರೂ. ಅನ್ನು ರೀಫಂಡ್ ಮಾಡಲಾಗುತ್ತದೆ.
ಆಯ್ಕೆ ವಿಧಾನ ಹೇಗೆ?:
ಕಂಪ್ಯೂಟರ್ ಆಧರಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಜನರಲ್ ಸೈನ್ಸ್ ಮತ್ತು ಮ್ಯಾಥಮೆಟಿಕ್ಸ್ ಗೆ ತಲಾ 25 ಅಂಕಗಳ 25 ಪ್ರಶ್ನೆಗಳು, ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್ ಗೆ 30 ಅಂಕಗಳ 30 ಪ್ರಶ್ನೆಗಳು, ಜನರಲ್ ಅವೇರ್ನೆಸ್ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದಂತೆ 20 ಅಂಕಗಳ 20 ಪ್ರಶ್ನೆಗಳು ಸೇರಿ 100 ಅಂಕಗಳಿಗೆ ಪರೀಕ್ಷೆ ನಿಗದಿಯಾಗಿದೆ.
ಬರೆಯಲು 90 ನಿಮಿಷ ಸಮಯ ನೀಡಲಾಗುತ್ತದೆ. ತಪ್ಪು ಉತ್ತರಗಳಿಗೆ 1/3 ನೆಗೆಟಿವ್ ಅಂಕಗಳಿರುತ್ತವೆ. ಸಾಮಾನ್ಯ ಅಭ್ಯರ್ಥಿಗಳು ಶೇ.40ರಷ್ಟು, ಒಬಿಸಿ, ಎಸ್‌ಟಿ /ಎಸ್‌ಟಿ ಸೇರಿದಂತೆ ಮೀಸಲಾತಿ ವ್ಯಾಪ್ತಿಗೆ ಒಳಪಡುವ ಇತರ ಅಭ್ಯರ್ಥಿಗಳು ಕನಿಷ್ಠ ಶೇ.30ರಷ್ಟು ಅಂಕ ಪಡೆದರೆ ತೇರ್ಗಡೆ ಎಂದು ಪರಿಗಣಿಸಲಾಗುತ್ತದೆ.