SSLC Result 2026: ಮಾರ್ಚ್/ಏಪ್ರಿಲ್ 2026 ಎಸ್ಎಸ್ಎಲ್ಸಿ ಪರೀಕ್ಷೆ-1 ಫಲಿತಾಂಶ ಪ್ರಕಟಣೆ: ಪರಿಶೀಲನೆ ವಿಧಾನ ಸಂಪೂರ್ಣ ಮಾಹಿತಿ
SSLC Result 2026: ಮಾರ್ಚ್/ಏಪ್ರಿಲ್ 2026ರ ಮಾಹೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಫಲಿತಾಂಶ ಪಟ್ಟಿಯನ್ನು ಮಂಡಲಿ ಜಾಲತಾಣದ ಶಾಲಾ ಲಾಗಿನ್ನಲ್ಲಿ ದಿನಾಂಕ: 23.04.2026ರ ಮಧ್ಯಾಹ್ನ 12.00 ಗಂಟೆಗೆ ಅಪ್ ಲೋಡ್ ಮಾಡಲಾಗುವುದು. ಪರೀಕ್ಷಾ ಪಲಿತಾಂಶವನ್ನು ಆಯಾ ಶಾಲೆಯ ಮುಖ್ಯ ಶಿಕ್ಷಕರು ಮಂಡಳಿಯ https://kseab.karnataka.gov.in ಜಾಲತಾಣದ ಶಾಲಾ ಲಾಗಿನ್ ಮೂಲಕ ಡೌನ್ಲೋಡ್ ಮಾಡಿಕೊಂಡು ತಮ್ಮ ಶಾಲೆಯಲ್ಲಿ ಸದರಿ ದಿನಾಂಕದಂದು ಮಧ್ಯಾಹ್ನ 12.00 ಗಂಟೆಗೆ ಪ್ರಕಟಿಸಲು ಸೂಚಿಸಿದೆ.
ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಫಲಿತಾಂಶವನ್ನು https://karresults.nic.in ನಲ್ಲಿ ಪಡೆಯಬಹುದಾಗಿದೆ. ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ಪ್ರತಿ, ಮರುಎಣಿಕೆ ಹಾಗೂ ಮರುಮೌಲ್ಯಮಾಪನ ಈ ಸೇವೆಗಳನ್ನು ಆನ್ಲೈನ್ ಮೂಲಕ ಈಗಾಗಲೇ ನೀಡಲಾಗುತ್ತಿದ್ದು, ಸದರಿ ಸೇವೆಗಳನ್ನು ರಾಜ್ಯ ಸರ್ಕಾರದ Karnataka One ಮೊಬೈಲ್ ಆಪ್ ಮೂಲಕವೂ ಸಹ ಸೇವೆಯನ್ನು ಒದಗಿಸಲಾಗುತ್ತಿದೆ.
ವಿದ್ಯಾರ್ಥಿಗಳು ತಮ್ಮ Android ಮೊಬೈಲ್ Playstore ಮೂಲಕ ಸದರಿ ಆಪ್ನ್ನು ಡೌನ್ಲೋಡ್ ಮಾಡಿಕೊಂಡು ಸದರಿ ಸೇವೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ಸದರಿ ಸೇವೆಯ ಸದುಪಯೋಗ ಪಡಿಸಿಕೊಳ್ಳಲು ಸೂಚಿಸಿದೆ.
ಮಾರ್ಚ್ / ಏಪ್ರಿಲ್ 2026ರ ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ, ಮರುಎಣಿಕೆ ಹಾಗೂ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ವೇಳಾಪಟ್ಟಿಯು ಈ ಕೆಳಕಂಡಂತಿದೆ.
| ವಿವರ (ಅರ್ಜಿ ಸಲ್ಲಿಸಲು) | ನಿಗದಿಪಡಿಸಿದ ದಿನಾಂಕ |
|---|---|
| ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕ | 23.04.2026 ರಿಂದ 26.04.2026 |
| ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಲು (ದಂಡ ಶುಲ್ಕ ರೂ.100/- ಪ್ರತಿ ದಿನ) | 27.04.2026 ರಿಂದ 28.04.2026 |
| ಆನ್ಲೈನ್ ಸೌಲಭ್ಯವಿಲ್ಲದವರು Offline ಚಲನ್ ಮೂಲಕ ಪಾವತಿ (ಸ್ಕ್ಯಾನ್ ಪ್ರತಿಗೆ) | 27.04.2026 ರಿಂದ 28.04.2026 |
| Offline ಚಲನ್ ಮೂಲಕ ಪಾವತಿ (ವಿಸ್ತರಿತ ದಿನಾಂಕ) | 27.04.2026 ರಿಂದ 29.04.2026 |
| ಮರುಎಣಿಕೆ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು | 28.04.2026 ರಿಂದ 04.05.2026 |
| ಮರುಮೌಲ್ಯಮಾಪನಕ್ಕೆ Offline ಚಲನ್ ಮೂಲಕ ಪಾವತಿ | 28.04.2026 ರಿಂದ 05.05.2026 |
ನೇರವಾಗಿ ಮರು ಎಣಿಕೆಗಾಗಿ ಭೌತಿಕವಾಗಿ ಅರ್ಜಿ ಸಲ್ಲಿಸುವಂತಿಲ್ಲ. ಮರುಎಣಿಕೆ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಂಬಂಧಪಟ್ಟ ವಿಷಯದ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಯನ್ನು ಪಡೆಯಬೇಕಾಗಿರುತ್ತದೆ. ಸ್ಕ್ಯಾನ್ ಪ್ರತಿಯನ್ನು ಪಡೆದ ನಂತರ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಿದ್ದಲ್ಲಿ ಖಚಿತಪಡಿಸಿಕೊಂಡ ನಂತರವೇ ಮರುಎಣಿಕೆಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಮರುಎಣಿಕೆಗಾಗಿ ಭೌತಿಕವಾಗಿ ಅರ್ಜಿಗಳನ್ನು ಸ್ವೀಕರಿಸುವುದನ್ನು ರದ್ದುಗೊಳಿಸಲಾಗಿದೆ. ಮರುಎಣಿಕೆ ಬಯಸುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಮರುಎಣಿಕೆಯು ಉಚಿತವಾಗಿದ್ದು ಪ್ರತ್ಯೇಕ ಶುಲ್ಕವಿರುವುದಿಲ್ಲ. ಮರುಎಣಿಕೆ ಅಂಕಗಳ ಎಣಿಕೆಯಲ್ಲಿ ವ್ಯತ್ಯಾಸವಿದ್ದಲ್ಲಿ ಪರಿಶೀಲಿಸಿ ಪರಿಷ್ಕೃತ ಫಲಿತಾಂಶ ಪಟ್ಟಿಯನ್ನು ಸಂಬಂಧಿಸಿದ ಶಾಲೆಗೆ ಹಾಗೂ ಎಸ್ಎಂಎಸ್ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ರವಾನಿಸಲಾಗುವುದು.
ಸ್ಕ್ಯಾನ್ ಪ್ರತಿ ಹಾಗೂ ಮರುಮೌಲ್ಯಮಾಪನಕ್ಕಾಗಿ ಭೌತಿಕವಾಗಿ ಅರ್ಜಿಗಳನ್ನು ಸ್ವೀಕರಿಸುವುದನ್ನು ರದ್ದುಪಡಿಸಲಾಗಿದೆ. ಮರುಎಣಿಕೆ ಅಥವಾ ಮರುಮೌಲ್ಯಮಾಪನ ಸೇವೆಯನ್ನು ಪಡೆಯಬೇಕಾದಲ್ಲಿ ಸ್ಕ್ಯಾನ್ ಪ್ರತಿಯನ್ನು ಕಡ್ಡಾಯವಾಗಿ ಪಡೆಯಬೇಕಾಗಿರುತ್ತದೆ. ಸ್ಕ್ಯಾನ್ ಪ್ರತಿ ಮತ್ತು ಮರುಮೌಲ್ಯಮಾಪನಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಮಂಡಳಿಯ ಜಾಲತಾಣದ ವಿಳಾಸ website address):- https://kseab.karnataka.gov.in ರಲ್ಲಿ ಮಾಹಿತಿ ಲಭ್ಯವಿದ್ದು,ಸದರಿ ಜಾಲತಾಣದಲ್ಲಿ ಆನ್ಲೈನ್ನಲ್ಲಿ ನಿಗದಿತ ಶುಲ್ಕವನ್ನು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ /ಆನ್ಲೈನ್ ಬ್ಯಾಂಕಿಂಗ್ (ಕರ್ನಾಟಕ-ಒನ್ ಪೋರ್ಟಲ್) ಮೂಲಕ ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ಆನ್ಲೈನ್ ಬ್ಯಾಂಕಿಂಗ್ ಸೌಲಭ್ಯವಿಲ್ಲದವರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ನಂತರ ಚಲನ್ ಡೌನ್ಲೋಡ್ ಮಾಡಿಕೊಂಡು ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ/ಬೆಂಗಳೂರು-ಒನ್/ಕರ್ನಾಟಕ-ಒನ್ ಕೇಂದ್ರದಲ್ಲಿ ಶುಲ್ಕವನ್ನು ಪಾವತಿಸಬಹುದಾಗಿದೆ. ಸ್ಕ್ಯಾನ್ ಪ್ರತಿ / ಮರುಮೌಲ್ಯಮಾಪನಕ್ಕಾಗಿ ಮೇಲ್ಕಂಡಂತೆ ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸ್ವೀಕಾರವಾದ ಬಗ್ಗೆ ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮುಖಾಂತರ ಮಾಹಿತಿ ರವಾನೆಯಾಗುತ್ತದೆ.
ಮೇಲೆ ತಿಳಿಸಿರುವಂತೆ ಎಲ್ಲಾ ವಿಷಯಗಳ ಅಥವಾ ಅಪೇಕ್ಷಿತ ವಿಷಯದ ಸ್ಕ್ಯಾನ್ ಪ್ರತಿ ಪಡೆದ ಅಭ್ಯರ್ಥಿಗಳು ಉತ್ತರ ಪತ್ರಿಕೆಯ ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕೆಳಗೆ ನಿಗಧಿಪಡಿಸಿರುವ ನಿಗಧಿತ ಶುಲ್ಕದೊಡನೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನಿಗಧಿತ ದಿನಾಂಕದ ನಂತರ ಸ್ಕ್ಯಾನ್ ಪ್ರತಿ /ಮರುಮೌಲ್ಯಮಾಪನಕ್ಕಾಗಿ ಬರುವ ಅರ್ಜಿಗಳು ಆನ್ಲೈನ್ನಲ್ಲಿ ಸ್ವೀಕೃತವಾಗುವುದಿಲ್ಲ.

ಸ್ಕ್ಯಾನ್ ಪ್ರತಿಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಮಂಡಳಿಯ ಜಾಲತಾಣದಲ್ಲಿ ಅಪ್ ಲೋಡ್ ಮಾಡಲಾಗುವುದು. ಉತ್ತರ ಪತ್ರಿಕೆಗಳನ್ನು ಅಪ್ ಲೋಡ್ ಮಾಡಿದ ಮಾಹಿತಿಯನ್ನು ವಿದ್ಯಾರ್ಥಿಗಳು ಅರ್ಜಿಯಲ್ಲಿ ನೀಡಿರುವ ಮೊಬೈಲ್ ಸಂಖ್ಯೆಗೆ ರವಾನಿಸಲಾಗುವುದು. ಸದರಿ ಮಾಹಿತಿ ಸ್ವೀಕೃತವಾದ ನಂತರ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯನ್ನು ಮಂಡಳಿಯ ಜಾಲತಾಣದಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ.
ಮಾರ್ಚ್/ಏಪ್ರಿಲ್ 2026ರ ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಶಾಲಾವಾರು ಫಲಿತಾಂಶ ಪಟ್ಟಿಯನ್ನು ಮಂಡಳಿಯ https://kseab.karnataka.gov.in ಜಾಲತಾಣದ ಶಾಲಾ ಲಾಗಿನ್ ಮೂಲಕ ಡೌನ್ಲೋಡ್ ಮಾಡಿಕೊಂಡು ಈ ಕೆಳಕಂಡ ಅಂಶಗಳ ಆಧಾರದ ಮೇಲೆ ಶಾಲೆಯ ಎಲ್ಲಾ ಅಭ್ಯರ್ಥಿಗಳ ಫಲಿತಾಂಶವನ್ನು ಮತ್ತು ಇತರೆ ಅಂಶಗಳನ್ನು ಕಡ್ಡಾಯವಾಗಿ ಪರಿಶೀಲಿಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದೆ.
1. ಶಾಲೆಗೆ ಸಂಬಂಧಿಸಿದ ಎಲ್ಲಾ ವಿಧದ ಅಭ್ಯರ್ಥಿಗಳ ಫಲಿತಾಂಶ ಬಂದಿದೆಯೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು.
2. ಒಂದು ವೇಳೆ ಯಾವುದಾದರೂ ಅಭ್ಯರ್ಥಿಯ ಫಲಿತಾಂಶ ಪ್ರಕಟವಾಗದಿದ್ದಲ್ಲಿ ಅಥವಾ ಫಲಿತಾಂಶ ತಡೆಹಿಡಿದಿದ್ದಲ್ಲಿ ಫಲಿತಾಂಶ ಪ್ರಕಟಿಸಿದ 10 ದಿನಗಳೊಳಗಾಗಿ ಸಕಾರಣಗಳೊಂದಿಗೆ ಮಂಡಳಿಯ ಪರಿಶೀಲನಾಧಿಕಾರಿಗಳಿಗೆ ಪತ್ರ ಬರೆದು ಅಥವಾ ದೂರವಾಣಿ ಮೂಲಕ ಸಂಪರ್ಕಿಸಿದಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು.
3. ಫಲಿತಾಂಶ ಪಟ್ಟಿಯಲ್ಲಿ ಪುನರಾವರ್ತಿತ ಅಭ್ಯರ್ಥಿಗಳ ಪೈಕಿ ಯಾವುದಾದರೂ ಅಭ್ಯರ್ಥಿಯು ಹಿಂದೆ ಉತ್ತೀರ್ಣರಾದ ವಿಷಯದಲ್ಲಿ ಗೈರುಹಾಜರಿ ಎಂದು ನಮೂದಾಗಿದ್ದು ಫಲಿತಾಂಶ ಅನುತ್ತೀರ್ಣ ಅಥವಾ ತಡೆಹಿಡಿದಿದ್ದಲ್ಲಿ ಅಭ್ಯರ್ಥಿಯ ಹಿಂದಿನ ಪ್ರಯತ್ನಗಳಲ್ಲಿ (ಚುಕ್ಕೆ ಗುರುತಿಲ್ಲದ) ಉತ್ತೀರ್ಣರಾದ ಫಲಿತಾಂಶ ಪಟ್ಟಿಯ ಪ್ರತಿಯನ್ನು ದೃಢೀಕರಿಸಿ ಮುಖ್ಯ ಶಿಕ್ಷಕರು ಮಂಡಳಿಗೆ ಕಳುಹಿಸುವುದು. ಫಲಿತಾಂಶ ಪ್ರಕಟವಾದ ಹತ್ತು ದಿನಗಳೊಳಗಾಗಿ ಪರಿಷ್ಕರಣೆಗೆ ಪ್ರಸ್ತಾವನೆಯನ್ನು ಸಲ್ಲಿಸುವುದು.
4. ಪ್ರಕಟಿಸಿದ ಫಲಿತಾಂಶ ತಾತ್ಕಾಲಿಕವಾಗಿದ್ದು, ಅಭ್ಯರ್ಥಿಗೆ ಮಂಡಳಿಯಿಂದ ನೀಡುವ ಮೂಲ ಅಂಕಪಟ್ಟಿ ಪ್ರತಿಯೊಬ್ಬ ವಿದ್ಯಾರ್ಥಿಯ ನೈಜ ಫಲಿತಾಂಶವನ್ನು ತಿಳಿಸುತ್ತದೆ. ಅಂದರೆ ಅಂಕಪಟ್ಟಿಯಲ್ಲಿ ನೀಡಿದ ದತ್ತಾಂಶವೇ ಅಂತಿಮ. ಎಂದು ಭಾವಿಸತಕ್ಕದ್ದು,
5. ಶಾಲಾವಾರು ಕ್ರೂಡೀಕೃತ ಫಲಿತಾಂಶ ಪಟ್ಟಿಯಲ್ಲಿನ ವಿದ್ಯಾರ್ಥಿಗಳ ವೈಯಕ್ತಿಕ ಫಲಿತಾಂಶದ ಕಾಲಂನಲ್ಲಿ ಉತ್ತೀರ್ಣತೆಗೆ “P” ಎಂದು ಮತ್ತು ಅನುತ್ತೀರ್ಣರಾದ ವಿದ್ಯಾರ್ಥಿಗೆ “NC” ಎಂದು ನಮೂದಿಸಿ ಫಲಿತಾಂಶ ನೀಡಲಾಗಿದೆ.
6. ಪುನರಾವರ್ತಿತ ವಿದ್ಯಾರ್ಥಿಗಳ ಉತ್ತೀರ್ಣತೆಗೆ “P” ಮತ್ತು ಅನುತ್ತೀರ್ಣರಾದ ಪುನರಾವರ್ತಿತ ವಿದ್ಯಾರ್ಥಿಗಳಿಗೆ “F” ಎಂದು ನಮೂದಿಸಿ ಫಲಿತಾಂಶ ನೀಡಲಾಗಿದೆ.
ಫಲಿತಾಂಶದ, ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯುವ ಮತ್ತು ಮರು ಎಣಿಕೆ, ಮೌರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕುರಿತು ಯಾವುದೇ ಮಾಹಿತಿ ಪಡೆಯಲು ಕೆಳಕಂಡ ಸಹಾಯವಾಣಿ ಸಂಖ್ಯೆಗಳಿಗೆ ಕರೆಮಾಡಿ ಮಾಹಿತಿ ಪಡೆಯಬಹುದಾಗಿರುತ್ತದೆ. 080-23310075, 080-23310076.


CLICK HERE TO DOWNLOAD PRESS NOTE