UGCET Kannada Exam – 2025 ಕನ್ನಡ ಪರೀಕ್ಷೆಯ ದಿನಾಂಕ ಬದಲಾವಣೆ ಇಲ್ಲಿದೆ ನೂತನ ಮಾಹಿತಿ.

UGCET Kannada Exam – 2025 ಕನ್ನಡ ಪರೀಕ್ಷೆಯ ದಿನಾಂಕ ಬದಲಾವಣೆ

UGCET Kannada Exam-2025: ಕನ್ನಡ ಭಾಷೆ ಪರೀಕ್ಷೆಯ ದಿನಾಂಕವನ್ನು ಬದಲಾಯಿಸಿದೆ.

ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ದಿನಾಂಕ 18-04-2025 ರಂದು ಕನ್ನಡ ಭಾಷೆ ಪರೀಕ್ಷೆಯನ್ನು ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಸದರಿ ದಿನಾಂಕ ಗುಡ್ ಪ್ರೈಡೆಯಾಗಿರುವುದರಿಂದ ಕೆಲವು ಅಭ್ಯರ್ಥಿಗಳು ದಿನಾಂಕವನ್ನು ಬದಲಾಯಿಸಿಲು ಕೋರಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಕನ್ನಡ ಭಾಷೆ ಪರೀಕ್ಷೆಯನ್ನು ಈಗ ದಿನಾಂಕ 18-04-2025 ರ ಬದಲಾಗಿ 15-04-2025 (ಮಂಗಳವಾರ) ರಂದು ನಡೆಸಲಾಗುವುದು ಎಂದು  ಕರ್ನಾಟಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ತಿಳಿಸಿದೆ.

ಮುಂದುವರಿದು, ಈಗಾಗಲೆ ನಿಗದಿಪಡಿಸಿ ಪ್ರಕಟಿಸಿರುವಂತೆ ಸಿಇಟಿ 2025 ರ ಪರೀಕ್ಷೆಗಳು 16-04-2025 ಮತ್ತು 17-04-2025 ರಂದು ನಡೆಸಲಾಗುವುದು, ಪ್ರಕಟಿಸಿದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ (ಬೆಂಗಳೂರು, ಬೆಳಗಾವಿ, ವಿಜಯಪುರ ಮತ್ತು ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ)

15-04-2025, ಮಂಗಳವಾರ, ಬೆಳಿಗ್ಗೆ 10.30 ರಿಂದ 11.30ರ ವರೆಗೆ, 4ನೇ ತರಗತಿಯ ಮಟ್ಟದ 50 ಅಂಕಗಳಿಗೆ ನಿಗದಿ.

ಗಮನಿಸಬೇಕಾದ ಮುಖ್ಯ ಅಂಶ:

ಸಿಇಟಿ-2025ಕ್ಕೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಸದ್ಯದಲ್ಲಿಯೇ ಡೌನ್‌ ಲೋಡ್ ಮಾಡಿಕೊಳ್ಳಲು ಪ್ರಾಧಿಕಾರದ ವೆಬ್‌ ಸೈಟಿನಲ್ಲಿ ಲಿಂಕ್ ಅನ್ನು ನೀಡಲಾಗುವುದು ಎಂದು  ಕರ್ನಾಟಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ತಿಳಿಸಿದೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

1 thought on “UGCET Kannada Exam – 2025 ಕನ್ನಡ ಪರೀಕ್ಷೆಯ ದಿನಾಂಕ ಬದಲಾವಣೆ ಇಲ್ಲಿದೆ ನೂತನ ಮಾಹಿತಿ.”

Leave a Comment

error: Content is protected !!