ADAHAR CARD Address Change good tricks
ADAHAR CARD:
ADAHAR CARD: ಆಧಾರ್ ಕಾರ್ಡ್ನಲ್ಲಿ ವಿಳಾಸ ಬದಲಾವಣೆ ಮಾಡುವದು ಈಗ ಇನ್ನಷ್ಟು ಸುಲಭ; ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಆಧಾರ್ ಕಾರ್ಡ್ನಲ್ಲಿ ತಮ್ಮ ಮನೆ ವಿಳಾಸದ ಬದಲಾವಣೆ ಮಾಡಬೇಕಾಗಿದೆಯಾ?
ಆನ್ಲೈನ್ ಮೂಲಕ ಸರಳವಾಗಿ ತಮ್ಮ ವಿಳಾಸ ಬದಲಾವಣೆ ಮಾಡುವ ವಿಧಾನ ಹೇಗೆ?
ಬಯೋಮೆಟ್ರಿಕ್ ಡೇಟಾ ನವೀಕರಣ ಮಾಡುವದು ತುಂಬಾ ಸುಲಭ; ಇಲ್ಲಿದೆ ಅತೀ ಉಪಯುಕ್ತ ಮಾಹಿತಿ!
ಹೊಸ ಮನೆ ಖರೀದಿ ಮಾಡಿದ್ದೀರಾ? ಅಥವಾ ಬೇರೆ ಊರಲ್ಲಿ ಮನೆ ನಿರ್ಮಾಣ ಮಾಡಿದ್ದೀರಾ? ತಮ್ಮ ಆಧಾರ್ ಕಾರ್ಡ್ನಲ್ಲಿರುವ ಹಳೆಯ ಮನೆಯ ವಿಳಾಸ ಬದಲಾವಣೆ ಮಾಡಬೇಕೆ? ಹಾಗಿದ್ದಲ್ಲಿ ಈ ಕೆಳಗೆ ನೀಡಿದ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ನೋಡಿ.
ಮೊದಲಿಗೆ ಆಧಾರ್ ಕಾರ್ಡ್ನಲ್ಲಿ ದಾಖಲಾಗಿರುವಂತಹ ಬಯೋಮೆಟ್ರಿಕ್ ಡೇಟಾವನ್ನು ನವೀಕರಣ ಮಾಡುವದು ತುಂಬಾ ಸರಳ. ಈ ಕೆಳಗೆ ಒದಗಿಸಿದ ಹಂತ ಹಂತದ ವಿಧಾನವನ್ನು ಅನುಸರಿಸುವ ಮುಖಾಂತರ ಡೇಟಾವನ್ನು ನವೀಕರಣ ಮಾಡಬಹುದಾಗಿದೆ.
ಮೊದಲನೆಯ ಹಂತ-
ಹಂತ 1: ನನ್ನ ಆಧಾರ್ ಪೋರ್ಟಲ್ ಆನ್ಲೈನ್ ಗೆ ಭೇಟಿ ನೀಡಿ ಮುಂದುವರಿಯಿರಿ – https://myaadhaar.uidai.gov.in/https://myaadhaar.uidai.gov.in/ ಅಧಿಕೃತ UIDAI ಪೋರ್ಟಲ್ ಮತ್ತು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿಕೊಳ್ಳಿ.
ಎರಡನೇಯ ಹಂತ 2: “ವಿಳಾಸ ನವೀಕರಣ” ಎನ್ನುವುದರ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.
ಮೂರನೇ ಹಂತ 3: ವಿಳಾಸ-ಅಪ್‌ಡೇಟ್ ಪ್ರಕ್ರಿಯೆಯೊಂದಿಗೆ ಮುಂದುವರಿಯಲು ‘ಆಧಾರ್ ಆನ್‌ಲೈನ್‌ನಲ್ಲಿ ನವೀಕರಿಸಿ’ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ. ಅದಕ್ಕಿಂತ ಪೂರ್ವದಲ್ಲಿ ಅಲ್ಲಿ ಒದಗಿಸಲಾದ ಸೂಚನೆ & ನಿಯಮಗಳನ್ನು ಸರಿಯಾಗಿ ಓದಿ ತಿಳಿದು. ತದನಂತರ ‘ಆಧಾರ್ ಅನ್ನು ನವೀಕರಿಸಲು ಮುಂದುವರಿಯಿರಿ” ಎನ್ನುವುದರ ಮೇಲೆ ಕ್ಲಿಕ್ ಮಾಡಿ ಮುಂದುವರಿಯಿರಿ.
ನಾಲ್ಕನೇಯ ಹಂತ 4: ನೂತನ ವಿಳಾಸದ ವಿವರಗಳನ್ನು ಬಹು ಎಚ್ಚರಿಕೆಯಿಂದ ನಮೂದಿಸಬೇಕು ಮತ್ತು ಅಗತ್ಯ ಆಧಾರ್ ಕಾರ್ಡ್ ವಿಳಾಸ ಬದಲಾವಣೆ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮುಂದುವರೆಯಿರಿ
ಐದನೇಯ ಹಂತ 5: ರೂಪಾಯಿ 50 ಶುಲ್ಕವನ್ನು ಪಾವತಿ ಮಾಡುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಿ.
ಆರನೇಯ ಹಂತ 6: ಈ ಹಂತದಲ್ಲಿ ಹಣ ಪಾವತಿ ಮಾಡಿದ ನಂತರ, ಸೇವಾ ವಿನಂತಿ ಸಂಖ್ಯೆ (SRN)ತಮಗೆ ಒದಗಿಸಲಾಗುತ್ತದೆ. ಭವಿಷ್ಯದಲ್ಲಿ ನಿಮ್ಮ ಆಧಾರ್ ವಿಳಾಸ ನವೀಕರಣ ಸ್ಥಿತಿಯನ್ನು ಪರಿಶೀಲನೆ ಮಾಡಲು ಇದು ಅತ್ಯವಶ್ಯಕವಾಗಿದೆ.
ಏಳನೇಯ ಹಂತ 7: ಪರಿಶೀಲನೆ ಪೂರ್ಣಗೊಂಡ ಮೇಲೆ , ತಾವು SMS ಅನ್ನು ಪಡೆದುಕೊಳ್ಳುತ್ತಿರಿ.
ಆನ್ಲೈನ್ ನಲ್ಲಿ ಆಧಾರ್ಕಾರ್ಡ್ ವಿಳಾಸ ಬದಲಾವನೇ ಮಾಡಿದ ತಕ್ಷಣಕ್ಕೆ ಅದು ಬದಲಾಗುವುದಿಲ್ಲ. UIDAI ಪ್ರಕ್ರಿಯೆಗೊಳಿಸಿದ ಬಳಿಕ ದಾಖಲೆಗಳನ್ನು ಪರಿಶೀಲಿಸಿ ವಿಳಾಸವನ್ನು ಬದಲಾಯಿಸುತ್ತದೆ. ಇದಕ್ಕಾಗಿ ಸುಮಾರು 10-15 ದಿನಗಳ ಕಾಲ ಸಮಯ ಬೇಕಾಗುತ್ತದೆ. ಮತ್ತೊಂದು ಮುಖ್ಯ ವಿಷಯ ಏನೆಂದರೆ ಸೇವಾ ವಿನಂತಿ ಸಂಖ್ಯೆ ನೆನಪಿನಲ್ಲಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಇದು UIDAI ವೆಬ್ಸೈಟ್ನಲ್ಲಿ ಆಧಾರ್ ವಿಳಾಸ ಬದಲಾಗಿದೆಯೇ ಎಂದು ಪರಿಶೀಲಿಸಲು ಉಪಯುಕ್ತವಾಗಿದೆ.
ತಮ್ಮ ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಮಾಡಲು ಅವಶ್ಯಕವಾದ ದಾಖಲೆಗಳು ಯಾವವು?
ಪಾಸ್ಪೋರ್ಟ್:
ನಿಮ್ಮದು, ನಿಮ್ಮ ಸಂಗಾತಿಯ, ಅಥವಾ ಅಪ್ರಾಪ್ತ ವಯಸ್ಕರಿಗೆ, ಅವರ ಪೋಷಕರದ್ದು ಬೇಕು.
ಬ್ಯಾಂಕ್ ಸ್ಟೇಟ್‌ಮೆಂಟ್/ಪಾಸ್‌ಬುಕ್ :
ಸರ್ಕಾರದಿಂದ ಮಾನ್ಯತೆ ಪಡೆದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಿಂದ ಬೇಕು
ಪಡಿತರ ಚೀಟಿ
ಮತದಾರರ ಗುರುತಿನ ಚೀಟಿ
ಚಾಲನಾ ಪರವಾನಿಗೆ
ಪಿಂಚಣಿದಾರರ ಕಾರ್ಡ್ ಅಥವಾ ಅಂಗವಿಕಲರ ಕಾರ್ಡ್
CGHS/ECHS/ESIC/ಮೆಡಿ-ಕ್ಲೈಮ್ ಕಾರ್ಡ್
ಯುಟಿಲಿಟಿ ಬಿಲ್‌ಗಳು :
ವಿದ್ಯುತ್ ಬಿಲ್‌ಗಳು, ವಾಟರ್ ಬಿಲ್‌ಗಳು ಮತ್ತು ಟೆಲಿಫೋನ್ ಲ್ಯಾಂಡ್‌ಲೈನ್ ಬಿಲ್‌ಗಳು (ಕಳೆದ ಮೂರು ತಿಂಗಳೊಳಗೆ) ಸೇರಿದಂತೆ ಇರಬೇಕು.
ವಿಮಾ ಪಾಲಿಸಿ :
ಜೀವನ ಮತ್ತು ವೈದ್ಯಕೀಯ ಪ್ರಕಾರಗಳು ಮಾತ್ರ.
ಆಸ್ತಿ ತೆರಿಗೆ ರಶೀದಿ:
ಒಂದು ವರ್ಷಕ್ಕಿಂತ ಒಳಗಿನದ್ದು ಆಗಿರಬೇಕು.
ಇದನ್ನೂ ನೋಡಿ 𝗞𝗩𝗦 𝗡𝗢𝗧𝗜𝗙𝗜𝗖𝗔𝗧𝗜𝗢𝗡- 2025-26