ASRB: Application Invitation for Recruitment of 582 Posts.
ASRB: ಕೃಷಿ ವಿಜ್ಞಾನಿಗಳ ನೇಮಕಾತಿ-2025
ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯು (ಎಎಸ್ ಆರ್‌ಬಿ) ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ (ನೆಟ್)-2025, ಅಗ್ರಿಕಲ್ಬರಲ್ ರಿಸರ್ಚ್ ಸರ್ವಿಸ್ (ಎಆರ್‌ಎಸ್), ಸಪ್ಟೆಕ್ಟ್ ಮ್ಯಾಟರ್ ಸ್ಪೆಷಲಿಸ್ಟ್ (ಎಸ್‌ಎಂಎಸ್) (ಟಿ-6) ಮತ್ತು ಸೀನಿಯರ್ ಟೆಕ್ನಿಕಲ್ ಆಫೀಸರ್ (ಎಸ್‌ಟಿ) (ಟಿ-6) ಕಂಬೈನ್ಸ್ ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಿದೆ. ಈ ಪರೀಕ್ಷೆ ಮೂಲಕ 582 ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಕೃಷಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಮೇ 21ರೊಳಗೆ ಅರ್ಜಿ ಸಲ್ಲಿಸತಕ್ಕದ್ದು.
ಒಟ್ಟು ಹುದ್ದೆಗಳ ಸಂಖ್ಯೆ: 582
ಹುದ್ದೆಯ ವಿವರ :
ಅಗ್ರಿಕಲ್ಬರಲ್ ರಿಸರ್ಚ್ ಸರ್ವಿಸ್ (ಎಆರ್ ಎಸ್) ಪರೀಕ್ಷೆಯ ಮೂಲಕ 458 ಹುದ್ದೆಗಳನ್ನು, ಸಪ್ಟೆಕ್ಟ್ ಮ್ಯಾಟರ್ ಸ್ಪೆಷಲಿಸ್ಟ್ (ಎಸ್‌ಎಂಎಸ್) (ಟಿ-6) ಪರೀಕ್ಷೆ ಮೂಲಕ 41 ಹುದ್ದೆಗಳನ್ನು, ಸೀನಿಯರ್ ಟೆಕ್ನಿಕಲ್ ಆಫೀಸರ್ (ಎಸ್ ಟಿಒ) (ಟಿ-6) ಪರೀಕ್ಷೆ ಮೂಲಕ 83 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ವಿಶೇಷ ಸೂಚನೆ:
ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್) ರಾಜ್ಯ ಕೃಷಿ ವಿಶ್ವವಿದ್ಯಾಲಯಗಳಲ್ಲಿ (ಎಸ್‌ಎಯುಎಸ್) ಮತ್ತು ಇತರ ಕೃಷಿ ವಿಶ್ವವಿದ್ಯಾಲಯಗಳಲ್ಲಿ (ಎಯುಎಸ್) ಉಪನ್ಯಾಸಕ/ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆಯನ್ನು ನಿರ್ಧರಿಸುವ ಅರ್ಹತಾ ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳು ಆನ್ಲೈನ್ (ಸಿಬಿಟಿ) ನೆಟ್-2025 ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.
ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಎಸ್ ಎಯುಎಸ್/ಎಯುಎಸ್‌ಗಳಲ್ಲಿ ಉಪನ್ಯಾಸಕರು ಅಥವಾ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಎಎಸ್‌ಆರ್‌ಬಿ ಎಆರ್ ಎಸ್, ಎಎಸ್‌ಆರ್‌ಬಿ ಎಸ್‌ಎಂಎಸ್ ಮತ್ತು ಎಎಸ್ ಆರ್‌ಬಿ ಎಸ್‌ಟಿಒ ಹುದ್ದೆಗಳ ನೇಮಕಾತಿಗಾಗಿ ಸಂಸ್ಥೆ ಅಥವಾ ಪ್ರಾಂತ್ಯವಾರು ಖಾಲಿಯಿರುವ ವಿವರಗಳಿಗಾಗಿ ಅಧಿಸೂಚನೆ ಪರಿಶೀಲಿಸಿ.
ವಿದ್ಯಾರ್ಹತೆ:
ಅಭ್ಯರ್ಥಿಯು ಹುದ್ದೆಗೆ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯೋಮಿತಿ, ವೇತನ:
ಅಗ್ರಿಕಲ್ಬರಲ್ ರಿಸರ್ಚ್ ಸರ್ವೀಸ್ ಹುದ್ದೆಗೆ ಕನಿಷ್ಠ 21 ರಿಂದ ಗರಿಷ್ಠ 32, ಉಳಿದ ಹುದ್ದೆಗೆ ಕನಿಷ್ಠ 21 ರಿಂದ ಗರಿಷ್ಠ 35 ವರ್ಷದೊಳಗಿರಬೇಕು. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ.
ಅಗ್ರಿಕಲ್ಬರಲ್ ರಿಸರ್ಚ್ ಸರ್ವಿಸ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 57,700-1,82,400. ಉಳಿದ ಹುದ್ದೆಗೆ 56,100-1,77,500 ರೂ. ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕದ ವಿವರ:
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎಎಸ್ ಆರ್‌ಬಿ ವೆಬ್‌ಸೈಟ್ asrb.org.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ವಯಸ್ಸು, ಶೈಕ್ಷಣಿಕ ಅರ್ಹತೆ ಸೇರಿ ಅಗತ್ಯ ದಾಖಲೆಗಳ ಜತೆಗೆ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ ಅಪಲೋಡ್ ಮಾಡಬೇಕು. ಸಂವಹನ ಉದ್ದೇಶಕ್ಕಾಗಿ ಸರಿಯಾದ ಇ-ಮೇಲ್ ಐಡಿ ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: 22-4-2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 21-5-2025
ಆನ್ಲೈನ್ ಪರೀಕ್ಷೆ ದಿನಾಂಕ: 2, 4-9-2025
ಮುಖ್ಯ ಪರೀಕ್ಷೆಯ ದಿನಾಂಕ: 7-12-2025
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ (ಪ್ರಾಥಮಿಕ) ಆಧಾರಿತ ಪರೀಕ್ಷೆ, ಕಂಬೈನ್ ಮೇನ್ಸ್ (ಡಿಸ್ಕ್ರಿಪ್ಟಿವ್) ಪರೀಕ್ಷೆ, ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಪರೀಕ್ಷಾ ಕೇಂದ್ರ:
ಬೆಂಗಳೂರು, ಧಾರವಾಡ, ಮಂಗಳೂರಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗುತ್ತದೆ.
CLICK HERE TO DOWNLOAD NOTIFICATION
CLICK HERE TO ONLINE APPLICATION