Education: ಶಿಕ್ಷಕರ/ಉಪನ್ಯಾಸಕರ ಮಕ್ಕಳಿಗೆ ಧನಸಹಾಯವನ್ನು ಮಂಜೂರು ಮಾಡಲು ಅರ್ಜಿ ಆಹ್ವಾನ-2024-25

ಶಿಕ್ಷಕರ/ಉಪನ್ಯಾಸಕರ ಮಕ್ಕಳಿಗೆ ಧನಸಹಾಯವನ್ನು ಮಂಜೂರು ಮಾಡಲು ಅರ್ಜಿ.

2024-2025ನೇ ಸಾಲಿನಲ್ಲಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ವೃತ್ತಿಪರ ಶಿಕ್ಷಣ ಕೋರ್ಸ್(ಸ್ನಾತಕೋತ್ತರ ಪದವಿ ಒಳಗೊಂಡಂತೆ) ವ್ಯಾಸಂಗ ಪೂರ್ಣಗೊಳಿಸಿದ್ದು, ರಾಷ್ಟ್ರೀಕೃತ ಬ್ಯಾಂಕ್‌ನಿಂದ ಶೈಕ್ಷಣಿಕ ಸಾಲಪಡೆದ ಶಿಕ್ಷಕರ/ಉಪನ್ಯಾಸಕರ ಮಕ್ಕಳಿಗೆ ಧನಸಹಾಯವನ್ನು ಮಂಜೂರು ಮಾಡಲು ಅರ್ಜಿ ಆಹ್ವಾನಿಸುವ ಬಗ್ಗೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ದಿನಾಂಕ 01.02.2018ರಂದು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಮಿತಿ ಸಭೆಯ ನಡಾವಳಿಯಲ್ಲಿನ ಕ್ರ.ಸಂ. 15ರಲ್ಲಿ ತೀರ್ಮಾನಿಸಿದಂತೆ ನಿಧಿಗಳ ವತಿಯಿಂದ ಆಜೀವ ಸದಸ್ಯತ್ವ ಹೊಂದಿರುವ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢ, ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ/ಉಪನ್ಯಾಸಕರ ಮಕ್ಕಳಿಗೆ (1 ರಿಂದ 10ನೇ ತರಗತಿಯವರೆಗೆ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ಮಕ್ಕಳಿಗೆ ಮಾತ್ರ) ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಸಂಬಂಧಿಸಿದ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ (ಸ್ನಾತಕೋತ್ತರ ಪದವಿ ಒಳಗೊಂಡಂತೆ) ಉನ್ನತ ವ್ಯಾಸಂಗಕ್ಕೆ ಶಿಕ್ಷಕರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೈಕ್ಷಣಿಕ ಸಾಲ ಪಡೆದಿದ್ದಲ್ಲಿ ಮಾತ್ರ ಅಂತಹ ಶಿಕ್ಷಕರ ಮಕ್ಕಳಿಗೆ ಪ್ರೋತ್ಸಾಹ ನೀಡುವ ಮತ್ತು ವ್ಯಾಸಂಗಕ್ಕೆ ತಗಲುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೂ ಶಿಕ್ಷಕರ ಮಕ್ಕಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಸಲುವಾಗಿ ನಿಧಿಗಳ ವತಿಯಿಂದ ಧನಸಹಾಯ ನೀಡಲು ತೀರ್ಮಾನಿಸಲಾಗಿರುತ್ತದೆ.

ಈ ಧನಸಹಾಯ ಪಡೆಯಲು ಅರ್ಜಿ ಸಲ್ಲಿಸುವವರು ಕೆಳಕಂಡ ಷರತ್ತುಗಳನ್ನು ಕಡ್ಡಾಯವಾಗಿ  ಪೂರೈಸಿರಬೇಕು.

 

1) ನಿಧಿಗಳ ಕಛೇರಿಯಿಂದ ಆಜೀವ ಸದಸ್ಯತ್ವ ಹೊಂದಿರುವ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ,ಪ್ರೌಢ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕ/ಉಪನ್ಯಾಸಕರ/ಪ್ರಾದ್ಯಾಪಕರ/ಪ್ರಾಚಾರ್ಯರ/ರೀಡರ್‌ಗಳ ಮಕ್ಕಳಿಗೆ ಮಾತ್ರ ಧನಸಹಾಯ ನೀಡಲಾಗುವುದು. (ನಿವೃತ್ತ ಶಿಕ್ಷಕರಿಗೆ ಈ ಧನಸಹಾಯ ಅನ್ವಯಿಸುವುದಿಲ್ಲ) ಆಜೀವ ಸದಸ್ಯತ್ವ ಕಾರ್ಡ್  (LMS) card ದೃಢೀಕರಿಸಿ ಲಗತ್ತಿಸುವುದು.

ಅನುದಾನಿತ ಶಿಕ್ಷಕರು/ಉಪನ್ಯಾಸಕರಾಗಿದ್ದಲ್ಲಿ, HRMS ಪ್ರತಿ ಅಥವಾ ನೇಮಕಾತಿ ಅನುಮೋದನೆ ಪ್ರತಿಯನ್ನು ಸಂಬಂಧಿಸಿದ ಶಾಲಾ ಕಾಲೇಜು ಮುಖ್ಯಸ್ಥರಿಂದ ದೃಢೀಕರಿಸಿ ಸಲ್ಲಿಸುವುದು..

2) ವೃತ್ತಿಪರ ಶಿಕ್ಷಣದಲ್ಲಿ ಪ್ರತಿ ವರ್ಷ/ಪ್ರತಿ ಸೆಮಿಸ್ಟ‌ರ್ನನಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿರುವುದು ಕಡ್ಡಾಯವಾಗಿರುತ್ತದೆ.

3.ಅಂಕಪಟ್ಟಿಗಳನ್ನು ಸಂಬಂಧಿಸಿದ ಸಂಸ್ಥೆಗಳ ಮುಖ್ಯಸ್ಥರಿಂದ ದೃಢೀಕರಿಸಿ ಸಲ್ಲಿಸಬೇಕು.

4.ವಿದ್ಯಾರ್ಥಿಗಳ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಸಂಬಂಧಿಸಿದಂತೆ, ಭಾರತದ ಯಾವುದೇ ರಾಜ್ಯದಲ್ಲಿ ವ್ಯಾಸಂಗ ಮಾಡಲು ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೈಕ್ಷಣಿಕ ಸಾಲ ಪಡೆದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಧನಸಹಾಯಕ್ಕೆ ಅರ್ಹರೆಂದು ಪರಿಗಣಿಸಲಾಗುವುದು.

5.ಬ್ಯಾಂಕ್‌ಗಳಲ್ಲಿ ಎಷ್ಟೇ ಮೊತ್ತದ ಶೈಕ್ಷಣಿಕ ಸಾಲ ಪಡೆದಿದ್ದರೂ ನಿಧಿಗಳ ಕಛೇರಿಯಿಂದ ಬ್ಯಾಂಕ್ ವಿಧಿಸಿದ ಬಡ್ಡಿ ಹಣಕ್ಕೆ ಮಾತ್ರ ಗರಿಷ್ಠ ರೂ. 50,000/-ಗಳ ಧನಸಹಾಯವನ್ನು ಒಂದು ಬಾರಿಗೆ ಮಾತ್ರ ನೀಡಲಾಗುವುದು. (ಈಗಾಗಲೇ ಭಾಗಶಃ ಬಡ್ಡಿ ಪಾವತಿಸಿದ್ದರೂ ಸಹ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.)

6) ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿರತಕ್ಕದ್ದು, (ವ್ಯಾಸಂಗ ಮಾಡಿರುವ ಬಗ್ಗೆ ಪ್ರಮಾಣ ಪತ್ರವನ್ನು ಶಾಲಾ ಮುಖ್ಯಸ್ಥರಿಂದ ದೃಢೀಕರಿಸಿ ಸಂಬಂಧಿಸಿದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲು ಸಹಿ ಪಡೆದು ಸಲ್ಲಿಸುವುದು)

7.ವಿದ್ಯಾರ್ಥಿಗಳು ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ 01 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ದೃಢೀಕರಣವನ್ನು ಸುತ್ತೋಲೆಯೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ ನೀಡುವುದು.

8.ವಿದ್ಯಾರ್ಥಿಯು ಸಂಬಂಧಿಸಿದ ಕೋರ್ಸ್‌ಗೆ ಸೇರ್ಪಡೆಯಾದ ನಂತರ ಧನಸಹಾಯಕ್ಕಾಗಿ ನಿಧಿಗಳ ಕಛೇರಿಗೆ ನಿಗಧಿತ ನಮೂನೆಯಲ್ಲಿ ಶಿಕ್ಷಕ/ವಿದ್ಯಾರ್ಥಿ ಮಾಹಿತಿ, ಶುಲ್ಕ ಪಾವತಿಸಿದ ರಸೀದಿ, ವ್ಯಾಸಂಗ ಮಾಡುತ್ತಿರುವ ಕೋರ್ಸ್‌ನ ವಿವರ, ಸಾಲ ಪಡೆದ ಬ್ಯಾಂಕಿನ ಖಾತೆ ಸಂಖ್ಯೆ ವಿವರ ಹಾಗೂ ಶೈಕ್ಷಣಿಕ ಸಾಲದ ಬಡ್ಡಿಯ ವಿವರಗಳು ಹಾಗೂ ಮುಂಗಡವಾಗಿ ಬ್ಯಾಂಕ್‌ಗೆ ಪಾವತಿಸಿದ ಮೊತ್ತದ ವಿವರಗಳೊಂದಿಗೆ ಸಂಬಂಧಿಸಿದ ಬ್ಯಾಂಕಿನ ವ್ಯವಸ್ಥಾಪಕರ ದೃಢೀಕರಣದೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸುವುದು.

9.ಒಂದು ಕುಟುಂಬಕ್ಕೆ ಒಬ್ಬ ವಿದ್ಯಾರ್ಥಿಗೆ ಮಾತ್ರ ಧನಸಹಾಯ ನೀಡಲಾಗುವುದು. ವಿದ್ಯಾರ್ಥಿಯ ತಂದೆ/ತಾಯಿ ಇಬ್ಬರೂ ಶಿಕ್ಷಕರು/ ಉಪನ್ಯಾಸಕರಾಗಿದ್ದಲ್ಲಿ ಕುಟುಂಬಕ್ಕೆ ಒಬ್ಬರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

10.ಮಂಜೂರಾದ ಧನಸಹಾಯದ ಮೊತ್ತವನ್ನು ಶೈಕ್ಷಣಿಕ ಸಾಲ ಪಡೆದ ಬ್ಯಾಂಕ್‌ಗಳಿಗೆ ನೇರವಾಗಿ ಸಾಲ ಪಡೆದವರ ಖಾತೆಗೆ ವರ್ಗಾಯಿಸಲಾಗುವುದು.

11.2023-2024ನೇ ಸಾಲಿನಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮಾತ್ರ ಈ ಧನಸಹಾಯವನ್ನು ಪಡೆಯಲು ಅರ್ಹರಿರುತ್ತಾರೆ. ಕೋರ್ಸ್‌ನ ಎಲ್ಲಾ ವರ್ಷಗಳಲ್ಲಿ/ಸೆಮಿಸ್ಟರ್‌ಗಳಲ್ಲಿ ಉತ್ತೀರ್ಣ ಹೊಂದಿರವ ಎಲ್ಲಾ ಅಂಕಪಟ್ಟಿಗಳನ್ನು ಸಂಬಂಧಿಸಿದ ಸಂಸ್ಥೆಗಳ ಮುಖ್ಯಸ್ಥರಿಂದ ದೃಢೀಕರಿಸಿ ಅರ್ಜಿ ಸಲ್ಲಿಸುವುದು.

ಈ ಸುತ್ತೋಲೆಯೊಂದಿಗೆ ನಿಗಧಿತ ಅರ್ಜಿ ನಮೂನೆ ಹಾಗೂ ಮಾದರಿ ದೃಢೀಕರಣ ಪತ್ರಗಳ ನಮೂನೆಗಳನ್ನು ಲಗತ್ತಿಸಿ ಕಳುಹಿಸುತ್ತಾ ಅರ್ಹ ಶಿಕ್ಷಕರು ನಿಯಂತ್ರಣಾಧಿಕಾರಿಗಳ ಶಿಫಾರಸ್ಸಿನೊಂದಿಗೆ ದಿನಾಂಕ 20-01-2025 ರಿಂದ 05-02-2025 ರೊಳಗೆ Onlineನಲ್ಲಿ ಹಾಗೂ ಭೌತಿಕ ಅರ್ಜಿಯನ್ನು ಈ ಕಛೇರಿಗೆ ಸಲ್ಲಿಸಲು ತಿಳಿಸಿದೆ. ಅಲ್ಲದೆ ಇಲಾಖಾ ವೆಬ್ಸೈಟ್ ನಿಂದ (www.schooleducation.karnataka.gov.in) ಸುತ್ತೋಲೆ ಮತ್ತು ನಮೂನೆಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಅಂತಿಮ ದಿನಾಂಕದ ನಂತರ ಸ್ವೀಕೃತವಾಗುವ ಪ್ರಸ್ತಾವನೆಯನ್ನು ಪರಿಗಣಿಸಲಾಗುವುದಿಲ್ಲ.

ವಿ.ಸೂ:- ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ. ಬಿ.ಹೆಚ್. ಕುಸುಮ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಇವರನ್ನು ನೇರವಾಗಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ: 8800421889.

 

CLICK HERE TO DOWNLOAD CIRCULAR

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!