LIC: How to become a LIC Urban Career Agent? Here is the complete information-2025
LIC- ಭಾರತೀಯ ಜೀವ ವಿಮಾ ನಿಗಮ ದಕ್ಷಿಣ ಮಧ್ಯ ವಲಯ ಕಚೇರಿ: ಹೈದರಾಬಾದ್
ಎಲ್‌ಐಸಿ, ಉಜ್ವಲ ಭವಿಷ್ಯದೊಂದಿಗೆ ಸ್ವತಂತ್ರ ವೃತ್ತಿಜೀವನ ಒದಗಿಸುತ್ತದೆ.
ನೀವು ಮಹತ್ವಾಕಾಂಕ್ಷೆಯುಳ್ಳವರಾ, ಪ್ರಾಮಾಣಿಕರಾ, ಕಷ್ಟಪಟ್ಟು ಕೆಲಸ ಮಾಡಲು ಸಿದ್ದರಿದ್ದೀರಾ ಮತ್ತು ನೀವು ಸ್ವಯಂ ಗುರುವಾಗಲು ಬಯಸುವಿರಾ? ಹಾಗಿದ್ದರೆ, ನೀವು ಅರ್ಬನ್ ಕೆರಿಯರ್ ಏಜೆಂಟ್ ಆಗಿ “ಆಯ್ಕೆಯಾಗಲು ಸೂಕ್ತ ವ್ಯಕ್ತಿಯಾಗಿರಬಹುದು.
ಸ್ಟೆಪೆಂಡ್:
ಮಾಸಿಕ ರೂ .12,000/- [1 ನೇ ವರ್ಷ], ಮಾಸಿಕ ರೂಪಾಯಿ 11,000 [ಎರಡನೇ ವರ್ಷ]
ಮಾಸಿಕ ರೂಪಾಯಿ 10,000 [3ನೇ ವರ್ಷ]
ತಿಂಗಳ ಕೊನೆಯಲ್ಲಿ ಶೇ.75ರಷ್ಟು ಸ್ಟೆಪೆಂಡ್ ಪಾವತಿಸಲಾಗುತ್ತದೆ.
ಶೇ.25ರಷ್ಟು ಮಾಸಿಕ ಸ್ಪೆಪೆಂಡ್ ಅನ್ನು ಹನ್ನೆರಡು ತಿಂಗಳವರೆಗೆ ಒಟ್ಟು ಮೊತ್ತವಾಗಿ, ಸ್ಪೆಪೆಂಡರಿ ವರ್ಷದ ಕೊನೆಯಲ್ಲಿ ಪಾವತಿಸಲಾಗುತ್ತದೆ.
ಹೆಚ್ಚುವರಿಯಾಗಿ, ಸಂಗ್ರಹಿತ ವ್ಯವಹಾರದ ಮೇಲೆ ಆಕರ್ಷಕ ಕಮಿಶನ್ ಗಳಿಸಿ.
ಉತ್ಪಾದಕತೆ ಆಧಾರಿತ ಹೆಚ್ಚುವರಿ ಪ್ರೋತ್ಸಾಹಧನ ಗಳಿಸಿ.
ದ್ವಿಚಕ್ರ ವಾಹನದ ಮುಂಗಡಕ್ಕೆ ಅರ್ಹರಾಗಬಹುದು.
ಷರತ್ತಿನ ಪ್ರಕಾರ ಮೂರು ವರ್ಷಗಳ ನಂತರ CLIAಶಿಪ್ ಗೆ ಅರ್ಹರು.
ಅರ್ಹತಾ ಷರತ್ತುಗಳು:
ವಯಸ್ಸು:
ಕಳೆದ ಜನ್ಮದಿನದ ಆಧಾರದ ಮೇಲೆ 21-35 ವರ್ಷಗಳು. (02.01.1989ಕ್ಕೂ ಮೊದಲು ಮತ್ತು 01.01.2004ರ ನಂತರ ಜನಿಸಿರಬಾರದು)
ಎಸ್‌ಸಿ/ಎಸ್‌ಟಿ ಮತ್ತು ಮಾಜಿ ಸೈನಿಕರು ಹಾಗೂ ಮಾರಾಟ ಮತ್ತು ಮಾರುಕಟ್ಟೆ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿಯನ್ನು 40 ವರ್ಷಗಳವರೆಗೆ ಸಡಿಲಿಸಬಹುದು.
ವಿದ್ಯಾರ್ಹತೆ:
ಪದವೀಧರ ಎಲ್‌ಐಸಿ ಆಫ್ ಇಂಡಿಯಾದ ಉದ್ಯೋಗಿಗಳು ಮತ್ತು ಏಜೆಂಟ್ ಗಳು, ಕೇಂದ್ರ ರಾಜ್ಯ ಸರ್ಕಾರ ಮತ್ತು ಸಾರ್ವಜನಿಕ ಉದ್ಯಮದಲ್ಲಿರುವ ಉದ್ಯೋಗಿಗಳ ಪತಿ/ಪತ್ನಿಯರು ಅರ್ಹರಲ್ಲ.
ಅಭಿವೃದ್ಧಿ ಅಧಿಕಾರಿ / ಏಜೆಂಟ್ಸ್ / ಉದ್ಯೋಗಿಗಳ ಸಂಬಂಧಿಕರು ಅರ್ಹರಲ್ಲ. ಮರುನೇಮಕಾತಿ ಬಯಸುವ ನಿವೃತ್ತ ಉದ್ಯೋಗಿಗಳು/ಮಾಜಿ ಏಜೆಂಟ್‌ಗಳನ್ನು ಯುಸಿಎ ಆಗಿ ನೇಮಕ ಮಾಡಿಕೊಳ್ಳಲು ಅನುಮತಿಸಲಾಗುವುದಿಲ್ಲ
ವಸತಿ ಷರತ್ತು:
01.01.2025ರಂತೆ ಕೆರಿಯರ್ ಏಜೆಂಟ್ ಬ್ರಾಂಚ್ ವ್ಯಾಪ್ತಿಯೊಳಗೆ ಕನಿಷ್ಟ ಒಂದು ವರ್ಷ ವಾಸವಿರಬೇಕು. ಅರ್ಬನ್ ಕೆರಿಯರ್ ಏಜೆಂಟ್ ಬ್ಯಾಂಚ್ ವ್ಯಾಪ್ತಿಯು ಸಾಮಾನ್ಯವಾಗಿ ಶಾಖೆಯಿರುವ ಸ್ಥಳದ ಪುರಸಭೆ ವ್ಯಾಪ್ತಿಗಳಿಗೆ ಸೀಮಿತವಾಗಿರುತ್ತದೆ.
ನಿವಾಸ ಪುರಾವೆ:
ಮತದಾರರ ಕಾರ್ಡ್/ರೇಷನ್ ಕಾರ್ಡ್/ಬ್ಯಾಂಕ್ ಖಾತೆ/ಆಧಾರ್ ಕಾರ್ಡ್.
ಆಸಕ್ತ ಅಭ್ಯರ್ಥಿಗಳು ಕೆಳಕಂಡ ಶಾಖಾ ಕಚೇರಿಯನ್ನು 31.01.2025ರಂದು ಅಥವಾ ಮೊದಲು ಸಂಪರ್ಕಿಸಬಹುದು.
ಸೀನಿಯರ್ ಬ್ರಾಂಚ್ ಮ್ಯಾನೇಜರ್, CA ಬ್ರಾಂಚ್ (6002), CBO-26, ಗೌಂಡ್ ಫ್ಲೋರ್, ಯುನೈಟೆಡ್ ಇಂಡಿಯಾ ಬಿಲ್ಡಿಂಗ್, ಜೆ.ಸಿ.ರೋಡ್ ಬೆಂಗಳೂರು-560002 ದೂ. ಸಂಖ್ಯೆ- 9443452158