KPCL-ಕಡ್ಡಾಯ ಕನ್ನಡ ಮರುಪರೀಕ್ಷೆ ವೇಳಾಪಟ್ಟಿ
Kpcl : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) ವಿವಿಧ ವೃಂದದ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷಾ ಮರುಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಅದರನ್ವಯ ಫೆ.4ರಂದು 100 ಅಂಕಗಳಿಗೆ ಮ.2.30ರಿಂದ 5.30ರವರೆಗೆ ಪರೀಕ್ಷೆ ನಡೆಯುತ್ತದೆ. ಸಹಾಯಕ ಜೂನಿಯರ್ ಇಂಜಿನಿಯರ್ (ಮೆಕಾನಿಕಲ್), ಸಹಾಯಕ ಇಂಜಿನಿಯರ್ (ಮೆಕಾನಿಕಲ್) ವಿವಿಧ ಹುದ್ದೆಗಳ ನೇಮಕಾತಿಯ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಪಾರದರ್ಶಕತೆ, ಅಂಕಗಳು ಮತ್ತು ಅರ್ಹತಾ ಮಾನದಂಡಗಳಲ್ಲಾದ ಗೊಂದಲಗಳನ್ನು ಪರಿಗಣಿಸಿ ಹೈಕೋರ್ಟ್ ಮರುಪರೀಕ್ಷೆ ನಡೆಸುವಂತೆ ಆದೇಶಿಸಿದೆ.
ಈ ಹಿನ್ನೆಲೆ 2024ರ ಫೆ.28ರಂದು ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳಿಗೆ ಮಾತ್ರ ಮರುಪರೀಕ್ಷೆ ಬರೆಯಲು ಅವಕಾಶವಿರಲಿದೆ. ಹೆಚ್ಚಿನ ಮಾಹಿತಿಗೆ https://cetonline.karnataka.gov.in/ ಗಮನಿಸಿ.
ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ W.P. No. 202497/2024 ರಲ್ಲಿನ ನಿರ್ದೇಶನದಂತೆ ಕರ್ನಾಟಕ ವಿದ್ಯತ್ ನಿಗಮ ನಿಯಮಿತದಲ್ಲಿನ ವಿವಿಧ ವೃಂದದ ಹುದ್ದೆಗಳಿಗೆ ಕಡ್ಡಾಯ ಕನ್ನಡ ಪರೀಕ್ಷೆಯನ್ನು ನಡೆಸುವ ಬಗ್ಗೆ.
ಕರ್ನಾಟಕ ವಿದ್ಯತ್ ನಿಗಮ ನಿಯಮಿತದ ಕೋರಿಕೆಯಂತೆ ದಿನಾಂಕ 19.02.2024 ರಂದು ಕೆಇಎ ವತಿಯಿಂದ ಕಡ್ಡಾಯ ಕನ್ನಡ ಪರೀಕ್ಷೆಯನ್ನು ನಡೆಸಿ ಮುಂದಿನ ಕ್ರಮಕ್ಕಾಗಿ ಇಲಾಖೆಗೆ ಸಲ್ಲಿಸಲಾಗಿರುತ್ತದೆ. ಆದರೆ ಮಾನ್ಯ ಉಚ್ಚ ನ್ಯಾಯಾಲಯವು W.P. No. 202497/2024 ರಲ್ಲಿ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಮರು ಪರೀಕ್ಷೆ ನಡೆಸುವಂತೆ ತಿಳಿಸಿದ್ದರಿಂದ ಕೆ.ಪಿ.ಸಿ.ಎಲ್ ಸಂಸ್ಥೆಯಿಂದ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲು ಕೋರಲಾಗಿರುತ್ತದೆ.
ಅದರಂತೆ ಕನ್ನಡ ಭಾಷಾ ಮರು-ಪರೀಕ್ಷೆಯ ವೇಳಾ ಪಟ್ಟಿಯು ಈ ಕೆಳಗಿನಂತಿದೆ.

ಸೂಚನೆ:
- ಕನ್ನಡ ಭಾಷಾ ಪರೀಕ್ಷೆಯು ಎಸ್.ಎಸ್.ಎಲ್.ಸಿ ಹಂತದ ಪರೀಕ್ಷೆಯಾಗಿರುತ್ತದೆ ಹಾಗೂ ವಿವರಣಾತ್ಮಕ ಪರೀಕ್ಷೆಯಾಗಿರುತ್ತದೆ.
- ದಿನಾಂಕ 18.02.2024 ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಮಾತ್ರ ಕಡ್ಡಾಯ ಕನ್ನಡ ಮರು-ಪರೀಕ್ಷೆಗೆ ಹಾಜರಾಗಲು ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ & ವೇಳಾಪಟ್ಟಿ ಡೌನ್ಲೋಡ್ ಮಾಡಲು –CLICK HERE