KARTET EXAM-2025: ಶಿಕ್ಷಕರ ಅರ್ಹತಾ ಪರೀಕ್ಷೆ ಅಧ್ಯಯನ ಸಂಪನ್ಮೂಲ- ಶೈಕ್ಷಣಿಕ ಮನೋವಿಜ್ಞಾನ

KARTET EXAM-2025: ಶಿಕ್ಷಕರ ಅರ್ಹತಾ ಪರೀಕ್ಷೆ

KARTET EXAM-2025:

ಬೆಳವಣಿಗೆ ಮತ್ತು ವಿಕಾಸ

• ವ್ಯಕ್ತಿಯ ಜೀವನದಲ್ಲಿ ನಡೆಯುವ ಸುಸಂಘಟಿತವಾದ ಹಾಗೂ ಸಂಕೀರ್ಣವಾದ ಬದಲಾವಣೆಯನ್ನೇ ಬೆಳವಣಿಗೆ ಮತ್ತು ವಿಕಾಸ ಎನ್ನುವರು.

▪️ವ್ಯಕ್ತಿಯ ಬಾಹ್ಯವಾಗಿ ಆಗುವ ಪರಿಮಾಣಾತ್ಮಕವಾದ ಬದಲಾವಣೆಯನ್ನು ಬೆಳವಣಿಗೆ ಎನ್ನುವರು.

ಉದಾ: ಎತ್ತರ, ಗಾತ್ರ, ತೂಕ, ಬಣ್ಣ

▪️ವ್ಯಕ್ತಿಯ ಆಂತರಿಕವಾಗಿ ಆಗುವ ಗುಣಾತ್ಮಕವಾದ ಬದಲಾವಣೆಯನ್ನು ವಿಕಾಸ ಎನ್ನುವರು. ಉದಾ: ಬೌದ್ಧಿಕ, ಮಾನಸಿಕ, ಭಾವನಾತ್ಮಕ, ನೈತಿಕ ಮುಂತಾದವು ಬದಲಾವಣೆಗಳು.

ತತ್ವಗಳು :

• ಇವೆರಡೂ ಒಂದಕ್ಕೊಂದು ಅಂತರ್‌ಸಂಬಂಧವನ್ನು ಹೊಂದಿವೆ.

• ಬೆಳವಣಿಗೆ ಶಿರಪಾದನ್ಮುಖ ತತ್ವವನ್ನು (ಸೆಫೆಲೊಕವಡಲ್‌ ತತ್ವ)

• ಬೆಳವಣಿಗೆ ಮತ್ತು ವಿಕಾಸಗಳೆರಡು ಆನುವಂಶೀಯತೆ ಮತ್ತು ಪರಿಸರೆರಡಗಳಿಂದ ಪ್ರಭಾವಿಸಲ್ಪಡುತ್ತವೆ.

• ವಿಕಾಸವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

• ಇದು ಕೇಂದ್ರ ಪರಿಧಿ ಅಭಿಮುಖ ತತ್ವವನ್ನು ಹೊಂದಿರುತ್ತದೆ.

• ವಿಕಾಸವು ಸಾಮಾನ್ಯತೆಯಿಂದ ನಿರ್ದಿಷ್ಟತೆಯೆಡೆಗೆ ಸಾಗುತ್ತದೆ.

• ಇದು ದ್ವಿಪಾರ್ಶ್ವತೆಯಿಂದ ಏಕಪಾರ್ಶ್ವತೆಯೆಡೆಗೆ ಸಾಗುತ್ತದೆ.

• ಇದು ಒಂದು ವಿನ್ಯಾಸವನ್ನು ಅನುಸರಿಸುತ್ತದೆ.

• ವಿಕಾಸವು ಅನೇಕ ಕಾರಕಾಂಶ ಪ್ರಭಾವಗಳಿಗೆ ಒಳಗಾಗುತ್ತದೆ.

• ವಿಕಾಸವು ನಿರಂತರವಾದುದು.

• ಬೆಳವಣಿಗೆಯ ಒಂದು ಹಂತಕ್ಕೆ ನಿಲ್ಲುತ್ತದೆ.

ಬೆಳವಣಿಗೆ ಮತ್ತು ವಿಕಾಸದ ಮೇಲೆ ಆನುವಂಶಿಯತೆ ಮತ್ತು ಪರಿಸರಗಳ ಪ್ರಭಾವ :

• ನಮ್ಮ ಪೂರ್ವಜರಿಂದ ಪಡೆದುಕೊಂಡು ಬಂದ ಎಲ್ಲಾ ಲಕ್ಷಣಗಳನ್ನು ಆನುವಂಶೀಯತೆ ಎನ್ನುವರು. ಉದಾ: ಬಣ್ಣ, ಕಣ್ಣಿನ ಆಕಾರ, ಗಾತ್ರ ಮುಂತಾದವು.

ಕ್ರೋಮೋಜೋಮ್ ಅಥವಾ ವರ್ಣತಂತುಗಳು :

• ಜೀವಕೋಶದೊಳಗೆ ಇರುವ ಇವು ಒಟ್ಟು 23 ಜೊತೆ ಇರುತ್ತವೆ. 22 ಜೊತೆ ವರ್ಣತಂತುಗಳು ಲಿಂಗೇತರ ವರ್ಣತಂತುಗಳಾದರೆ ಉಳಿದ 1 ಜೊತೆ ಲಿಂಗವರ್ಣ ತಂತುಗಳಾಗಿವೆ.

ಗುಣಾಣುಗುಣಗಳು (ಜೀನ್ಸ್) :

ವರ್ಣತಂತುಗಳ ಮೇಲೆ ಹೊದಿಕೆಯಾಕಾರದಲ್ಲಿ ಇವು ಕಂಡು ಬರುತ್ತವೆ. ಇವುಗಳ ಕಾರ್ಯವೆಂದರೆ ಒಂದು ತಲೆಮಾರಿನಿಂದ ಇನ್ನೊಂದು ತಲೆ ಮಾರಿಗೆ ಆನುವಂಶಿಯ ಗುಣಗಳನ್ನು ವರ್ಗಾವಣೆ ಮಾಡುತ್ತವೆ.

ಸಹೋದರ ಅವಳಿಗಳು :

ಫಲಿತಗೊಂಡ ತಂದೆಯ ಎರಡು ವೀರ್ಯಾಣುಗಳ ಜೊತೆ ಫಲಿತಗೊಂಡ ತಾಯಿಯ ಎರಡು ಅಂಡಾಣುಗಳನ್ನು ಪ್ರತ್ಯೇಕವಾಗಿ ಸೇರಿ ಯುಸ್ಮ ಧರಿಸಿ ಮಕ್ಕಳಾದರೆ ಇವುಗಳನ್ನು ಸಹೋದರ ಅವಳಿಗಳೆನ್ನುವರು.

ಸಮರೂಪಿ ಅವಳಿಗಳು ಅಥವಾ ಅನನ್ಯ ಅವಳಿಗಳು :

ತಾಯಿಯ ಗರ್ಭದಲ್ಲಿ ಉತ್ಪತ್ತಿಗೊಂಡ ಜೈಗೋಟ್ (ಯುಗು ಕಾರಣಾಂತರಗಳಿಂದ ಒಡೆದು ಪ್ರತ್ಯೇಕಗೊಂಡು ಮಕ್ಕಳಾದರೆ ಅವುಗಳನ್ನು ಅನನ್ಯ ಅವಳಿಗಳೆನ್ನುವರು. ಇವು ಹೋಲಿಕೆ ಯಲ್ಲಿ ಸಹೋದರ ಅವಳಿಗಳಿಗಿಂತ ಹೆಚ್ಚಾಗಿರುತ್ತವೆ.

ಸಂಯಾಮಿ ಮಕ್ಕಳು :

ತಾಯಿಯ ಗರ್ಭದಲ್ಲಿ ಉತ್ಪತ್ತಿಗೊಂಡ ಜೈಗೋಟ್ ಸಂಪೂರ್ಣವಾಗಿ ಒಡೆಯದೇ ಟಿಸಿಲಿನ ಆಕಾರದಲ್ಲಿ ಬೇರ್ಪಟ್ಟು ಜನಿಸಿದರೆ ಅಂದರೆ ಒಂದು ಸೊಂಟ ಎರಡು ತಲೆಗಳು ಹೀಗೆ ಇವುಗಳನ್ನು ಸಂಯಾಮಿಗಳೆನ್ನುವರು.

ಅನುವಂಶಿಯತೆ ತತ್ವಗಳು :

• ಒಂದು ರೂಪಕ್ಕೆ ಪ್ರತಿರೂಪ

• ಭಿನ್ನತೆಯ ತತ್ವ

• ಸಮಶ್ರಯಾಣ ತತ್ವ

* ಒಂದು ಮಗುವಿನ ಲಿಂಗ ನಿರ್ಧಾರ ಮಾಡುವಲ್ಲಿ ತಂದೆಯ ಪಾತ್ರ ಮುಖ್ಯವಾಗಿದೆ.

* ಆನುವಂಶೀಯ ತಂತ್ರವೆಂದರೆ ಮುಂದಿನ ಸಂತಾನಕ್ಕೆ ಲಕ್ಷಣಗಳನ್ನು ಜೈವಿಕ ರೀತಿಯಲ್ಲಿ ವರ್ಗಾಯಿಸುವುದಾಗಿದೆ.

* ಸಾಮಾನ್ಯವಾಗಿ ತಂದೆ ತಾಯಿಗಳಿಂದ ಅವರ ಸಂತತಿಗೆ ವರ್ಗಾವಣೆವಾಗುವ ವಂಶವಾಹಿಗಳು ಕೇವಲ ವರ್ಗಾವಣೆಗೊಂಡಂತವುಗಳು.

ಹಂತಗಳು :

• ನೈತಿಕ ವಿಕಾಸದ ಹಂತಗಳು

• ಜೀನ್ ಪೀಯಾಜೆಯವರ ನೈತಿಕ ವಿಕಾಸದ ಹಂತಗಳಲ್ಲಿ ಎರಡು ಪ್ರಕಾರಗಳಲ್ಲಿ ವರ್ಗೀಕರಿಸಿದ್ದಾರೆ.

• ನೈತಿಕ ಸದಾಚಾರದ ಹಂತ (ಹುಟ್ಟಿನಿಂದ 10 ವರ್ಷಗಳು)

• ಸ್ವಯಂ ಆಧಿಪತ್ಯದ ಹಂತ (10 ವರ್ಷಗಳ ನಂತರ)ಕೋಹಲ್‌ಬರ್ಗ್‌ರವರ ನೈತಿಕ ವಿಕಾಸದ ಹಂತಗಳು :

• ಇವರು ನೈತಿಕ ವಿಕಾಸದ ಬಗ್ಗೆ ಹೆಚ್ಚು ಒತ್ತುಕೊಟ್ಟು ವಿಸ್ತರಿತ ರೂಪದಲ್ಲಿ ಹೇಳಿದ ಮನೋವಿಜ್ಞಾನಿ.

• ಸಾಂಪ್ರದಾಯಿಕಪೂರ್ವ: (4 ರಿಂದ 10 ವರ್ಷ)


1) : ದಂಡನೆ ಮತ್ತು ವಿಧೇಯತೆ,
2) ಕ್ರಿಯಾ ಸೌಜನ್ಯ ಹಂತ

ಸಾಂಪ್ರದಾಯಿಕ (10 ರಿಂದ 13 ವರ್ಷ)

3) ಒಳ್ಳೆಯ ಹುಡುಗ/ಒಳ್ಳೆಯ ಹುಡುಗಿ

4) ಪ್ರಭುಶಕ್ತಿ ಪೋಷಿತ ಹಂತ

ಸಾಂಪ್ರದಾಯೋತ್ತರ (13 ವರ್ಷದ ನಂತರ)

5) ಸಾಮಾಜಿಕ ಒಪ್ಪಂದದ ಹಂತ

6) ಸಾರ್ವತ್ರಿಕ, ನೈತಿಕ ಹಂತ


ಜೀನ್ ಪಿಯಾಜೆಯವರ ಜ್ಞಾನಾತ್ಮಕ ವಿಕಾಸದ ಹಂತಗಳು :

1) ಸಂವೇದನಾ ಗತಿ ಹಂತ (ಹುಟ್ಟಿನಿಂದ 2 ವರ್ಷ)

2) ಕಾರ್ಯಪೂರ್ವ ಹಂತ (2 ರಿಂದ 7 ವರ್ಷ)

3) ಮೂರ್ತ ಕಾರ್ಯಗಳು ಹಂತ (7 ರಿಂದ 11ವರ್ಷ)

4) ಔಪಚಾರಿಕ ಹಂತಗಳು (11 ವರ್ಷಗಳ ನಂತರ)


ಎಲೆಜೆಬೆತ್ ಹರಿಲ್ಯಾಕ್ಸ್‌ರವರ ಪ್ರಕಾರ ಮಗುವಿನ ಬೆಳವಣಿಗೆ ಮತ್ತು ವಿಕಾಸದ ಹಂತಗಳು (ಇವರು ಬೆಳವಣಿಗೆ ಹಂತಗಳನ್ನು 10 ಪ್ರಕಾರಗಳಲ್ಲಿ ಗುರುತಿಸಿದ್ದಾರೆ)

1) ಪ್ರಸವಪೂರ್ವ (ಗರ್ಭಧಾರಣೆಯಿಂದ ಜನನದವರೆಗೆ)

2)ಶೈಶವ ಹಂತ (ಜನನದಿಂದ 2 ವಾರ)

3) ಹಸುಳೆತನ (2 ವಾರದಿಂದ 2 ವರ್ಷ)

4) ಪೂರ್ವಬಾಲ್ಯ (2 -6)

5) ಉತ್ತರ ಬಾಲ್ಯ (6-12)

6) ಲೈಂಗಿಕ ಪಕ್ವತೆಯ ಕಾಲ (12-14)

7) ತಾರುಣ್ಯ (14-18)

8) ವಯಸ್ಕ (18-40)

9) ಮಧ್ಯವಯಸ್ಕ (40-60)

10) ವೃದ್ಧಾಪ್ಯ (60-ಸಾವಿನವರೆಗೆ)

ಭ್ರೂಣರವರ ಪರಿಕಲ್ಪನಾತ್ಮಕ ವಿಕಾಸದ ಹಂತಗಳು :

1) ಕ್ರಿಯೆ ಅಥವಾ ಅಭಿನಯ

2) ಬಿಂಬ ಅಥವಾ ಕಲ್ಪನೆ ಅಥವಾ ಚಿತ್ರರೂಪ

3) ಪದ ಅಥವಾ ಸಂಕೇತ

ಸಿಗ್ಮಂಡ್  ಪ್ರಾಯ್ಡ್ ರವರ ಮನೋಲೈಂಗಿಕ ವಿಕಾಸದ ಹಂತಗಳು:

▪️ಮುಖ ಅಥವಾ ಬಾಯಿ ಹಂತ (ಹುಟ್ಟಿನಿಂದ 1 ವರ್ಷ)
▪️ಗುದ ಹಂತ (2-3)
▪️ಶಿಶ್ನ ಹಂತ (4-5)
▪️ ಅಂತರ್ಗತ ಹಂತ (6-12)
▪️ ಲಿಂಗ ಹಂತ (13-21)

ವಿಕಾಸಾತ್ಮಕ ಕಾರ್ಯಗಳು :

• ವ್ಯಕ್ತಿಯೂ ತಾನು ಬೆಳವಣಿಗೆ ಹೊಂದಿದಂತೆ ಅವನ ಪರಿಸರವೂ ಅಥವಾ ಸಮಾಜವು ಅವನಿಂದ ನಿರೀಕ್ಷಿಸುವ ಕಾರ್ಯವನ್ನು ವಿಕಾಸಾತ್ಮಕ ಕಾರ್ಯವೆನ್ನುವರು. ಈಪರಿಕಲ್ಪನೆ ಯನ್ನು ಮೊದಲಿಗೆ ಕೊಟ್ಟವರು ಹ್ಯಾವಿಂಗ್ ಹರ್ಡ್ಸ್ರವರು.

ತಾರುಣ್ಯಾವಸ್ಥೆ ಇದರ ವಿಶೇಷತೆಗಳು :

• ಇದನ್ನು ಸಂಕ್ರಮಣ ಹಾಗೂ ವಸಂತ ಕಾಲವೆಂದು ಕರೆಯುತ್ತಾರೆ.

• ಇದು ಭಾವೋದ್ವೇಗಳ ಕಾಲವಾಗಿದೆ.

• ಇದು ಒತ್ತಡ ಮತ್ತು ಪ್ರಯಾಸದ ಕಾಲವಾಗಿದೆ.

ಇಲ್ಲಿ ವಿರುದ್ಧ ಲಿಂಗಗಳ ಕಡೆ ಆಕರ್ಷಣೆಗೆ ಒಳಗಾಗು ವರು. ಇದಕ್ಕೆ ಕಾರಣ ಅವರಲ್ಲಿರುವ ಲೈಂಗಿಕ ಪಕ್ವತೆ

• ಇಲ್ಲಿ ತೀವ್ರತಮವಾದ ದೈಹಿಕ ಬದಲಾವಣೆಗಳಿಂದ ಭಾವನಾತ್ಮಕ ಹೊಂದಾಣಿಕೆ ಕಷ್ಟವಾಗುತ್ತದೆ. ಇಲ್ಲಿ ಪ್ರೀತಿ ಪ್ರೇಮಗಳ ಸಂಕೋಲೆಗಳಿಗೆ ಒಳಗಾಗುವರು.

• ಇಲ್ಲಿ ಸಮೂಹ ವಿಧೇಯತೆ ಬಲಿಷ್ಠ ಭಾವನೆ ಹೆಚ್ಚಾಗಿರುತ್ತದೆ.

• ಇದರ ಅವಧಿ 13-19 ವರ್ಷ ಇದನ್ನು ಟೀನ್ ಏಜ್ ಎಂತಲೂ ಕರೆಯುತ್ತಾರೆ.

• ಇವರು ತಮ್ಮ ರಾಗಭಾವನೆಗಳನ್ನು ಹಗಲುಗನಸುಗಳ ಮುಖಾಂತರ ಅಭಿವ್ಯಕ್ತ ಪಡಿಸಿಕೊಳ್ಳುತ್ತಾರೆ.

• ಇಲ್ಲಿ ಹುಡುಗರ ಸ್ವರ ಗಡುಸಾದರೆ, ಹುಡುಗಿಯರ ಸ್ವರ ಮೃದುವಾಗುತ್ತದೆ.

• ಇದಕ್ಕೆ ಆಂಗ್ಲಭಾಷೆಯಲ್ಲಿ ಆ್ಯಡೋಲೇಸೆನ್ಸ್ ಎನ್ನುವರು. ಇದರರ್ಥ ಪರಿಪಕ್ವತೆಯಡೆಗೆ ಸಾಗುವದು.

ಬೆಳವಣಿಗೆ ವಿಕಾಸದ ಪರೀಕ್ಷಾ ವಿಶೇಷ ಅಂಶಗಳು :

• ಮಗುವಿನ ಬೆಳವಣಿಗೆ ನಿರ್ಧರಿಸುವುದು ಅವನ ಆನುವಂಶೀಯತೆ ಪರಿಸರ ಸಂಬಂಧಿಗಳ ಒತ್ತಡಗಳ ಸಂಕೀರ್ಣತೆಯಿಂದ

• ಮಗುವಿನ ಲಿಂಗ ನಿರ್ಧಾರವಾಗುವುದು ಅವನ ತಂದೆಯ ವರ್ಣತಂತುಗಳಿಂದ

• ಮಗುವಿನ ಬುದ್ಧಿಶಕ್ತಿ ಬೆಳವಣಿಗೆಯು ಬಾಲ್ಯಾವಸ್ಥೆಯಲ್ಲಿ ವೇಗವಾಗಿ ಆಗುತ್ತದೆ.

• ಶಾಲಾಪೂರ್ವದಲ್ಲಿ ಭಾಷಾ ಬೆಳವಣಿಗೆ ಸಾಮಾಜಿಕ ಅನುಕ್ರಿಯೆಯಿಂದ ಹೆಚ್ಚಾಗುತ್ತದೆ.

• ಸಾಮಾನ್ಯವಾಗಿ ಒಂದು ಮಗು ತನ್ನ ಸ್ವಯಂ ಆದರ್ಶಕ್ಕೆ ಸಮೀಪವಿರುವ ವ್ಯಕ್ತಿಯನ್ನು ಮಾದರಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾನೆ.

ಸೌಜ್ಞಾನಾತ್ಮಕ ವಿಕಾಸದ ಸಿದ್ಧಾಂತಕ್ಕೆ ಪ್ರಸಿದ್ಧನಾದ ಮನೋವಿಜ್ಞಾನಿ ಜಿನ್ ಪಿಯಾಜೆ

• ಶಬ್ದಭಂಡಾರದಲ್ಲಿನ ಬದಲಾವಣೆ ಇದು ವಿಕಾಸವಾಗಿದೆ.

• ಮಗುವಿನ ಸಂವೇಗಗಳು ತಮ್ಮ ಪ್ರಬಲತೆಯಲ್ಲಿ ಬೇಗನೆ ಬದಲಾವಣೆಯನ್ನು ಹೊಂದುತ್ತವೆ.

• ವ್ಯಕ್ತಿಯ ವಿಕಾಸದ ಹಂತಗಳಲ್ಲಿ ಅತ್ಯಂತ ಕಡಿಮೆ ಅವಧಿಯ ಹಂತ ಶೈಶವ ಹಂತವಾಗಿದೆ.

• ಕಿಶೋರಾವಸ್ಥೆಯ ಮಕ್ಕಳಲ್ಲಿ ಅತ್ಯಂತ ಹೆಚ್ಚು ಪ್ರಭಾವ ಬೀರುವದು ಅವನ ಸಮವಯಸ್ಕರ ಗುಂಪು.

• ಬಾಲ್ಯಾವಸ್ಥೆಯನ್ನು ಕೂಟ ಕಾಲವೆಂದು ಕರೆಯುತ್ತಾರೆ,

• ಪಿಯಾಜೆಯವರ ಪ್ರಕಾರ ವಿದ್ಯಾರ್ಥಿಯೋರ್ವನಲ್ಲಿ ತರ್ಕ ಬದ್ಧ ಚಿಂತನೆ ಹಾಗೂ ವಿಮರ್ಶಾತ್ಮಕ ಶಕ್ತಿ ಕಂಡು ಬರುವ ಹಂತ ಔಪಚಾರಿಕ ಹಂತ

• ಶಾರೀರಿಕ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಮಗು ಮೊದಲ ನಿಯಂತ್ರಣ ಪಡೆಯುವುದು ಶಿರದ ಮೇಲೆ.

• ಮಗು ಬೆಳವಣಿಗೆ ವರ್ಷಗಳಲ್ಲಿ ಬದಲಾವಣೆಗಳನ್ನು ಹೊಂದುತ್ತಾ ವ್ಯಕ್ತಿಯಾಗಿ ಬದಲಾಗುತ್ತಾನೆ ವಯಸ್ಸಿನೊಡನೆ ನೊಡನೆ ಶಾರೀರಿಕ ಬದಲಾವಣೆ ಇದು ಸಾಮಾನ್ಯ ಅಭಿವೃದ್ಧಿಯಾಗಿದೆ.

ಕೃಪೆ: ಶ್ರೀಶೈಲ್ ಹಳಕಟ್ಟಿ, ಶಿಕ್ಷಕರು.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!