KCSR- ಸರ್ಕಾರಿ ನೌಕರ ಎರಡನೇ ಮದುವೆ ಆಗಬಹುದಾ?ನಿಯಮ ಏನು ಹೇಳುತ್ತೆ?
ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಗಳು 2021ರ ನಿಯಮ 30ರಂತೆ ಸರ್ಕಾರಿ ನೌಕರನಿಗೆ ತತ್ಕಾಲದಲ್ಲಿ ಅನ್ವಯವಾಗತಕ್ಕ ವೈಯಕ್ತಿಕ ಕಾನೂನಿನಡಿಯಲ್ಲಿ ಅನುಮತಿಸಿರುವುದು ಏನೇ ಇದ್ದರೂ ಸರ್ಕಾರದ ಪೂರ್ವಾನುಮತಿಯನ್ನು ಪಡೆಯದೆ ಇನ್ನೊಂದು ವಿವಾಹ ಮಾಡಿಕೊಳ್ಳತಕ್ಕದ್ದಲ್ಲವೆಂದು ಸೂಚಿಸಿದೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯವು Liyakat Ali Khan V/s State of Rajastan, SLP© 21566/2008 ಪ್ರಕರಣದಲ್ಲಿ ಇದೇ ರೀತಿಯ ಆದೇಶವನ್ನು ಮಾಡಿದೆ. ಆದುದ್ದರಿಂದ ಜೀವಂತ ಪತ್ನಿ ಇರುವಾಗ ಸರ್ಕಾರದ ಪೂರ್ವಾನುಮತಿ ಪಡೆಯದೇ ಎರಡನೇ ಮದುವೆಯಾಗುವುದು ದುರ್ನಡತೆಯಾಗುತ್ತದೆ. ಅಲ್ಲದೆ ಶಿಸ್ತುಕ್ರಮ ಕೈಗೊಳ್ಳಲು ಸಾಕಷ್ಟು ಸಮಂಜಸ ಕಾರಣವಾಗುತ್ತದೆ.
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.