KPCL-Compulsory Kannada Re-exam Provisional Score list Released
KPCL- ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ W.P. No. 202497/2024 ರಲ್ಲಿನ ನಿರ್ದೇಶನದಂತೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿನ ವಿವಿಧ ವೃಂದದ ಹುದ್ದೆಗಳಿಗೆ ನಡೆಸಲಾದ ಕಡ್ಡಾಯ ಕನ್ನಡ ಪರೀಕ್ಷೆಯ ತಾತ್ಕಾಲಿಕ ಅಂಕ ಪಟ್ಟಿಯನ್ನು ಪ್ರಕಟಿಸಿರುವ ಬಗ್ಗೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆ.ಪಿ.ಸಿ.ಎಲ್) ಕೋರಿಕೆಯಂತೆ, ದಿನಾಂಕ 19.02.2024 ರಂದು ಕೆಇಎ ವತಿಯಿಂದ ಕಡ್ಡಾಯ ಕನ್ನಡ ಪರೀಕ್ಷೆಯನ್ನು ನಡೆಸಿ ಮುಂದಿನ ಕ್ರಮಕ್ಕಾಗಿ ಇಲಾಖೆಗೆ ಸಲ್ಲಿಸಲಾಗಿರುತ್ತದೆ. ಆದರೆ ಮಾನ್ಯ ಉಚ್ಚ ನ್ಯಾಯಾಲಯವು W.P. No. 202497/2024 ರಲ್ಲಿ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಮರು ಪರೀಕ್ಷೆ ನಡೆಸುವಂತೆ ತಿಳಿಸಿದ್ದರಿಂದ ಕೆ.ಪಿ.ಸಿ.ಎಲ್ ಸಂಸ್ಥೆಯಿಂದ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲು ಪ್ರಾಧಿಕಾರಕ್ಕೆ ಕೋರಲಾಗಿರುತ್ತದೆ.
ಅದರಂತೆ ಕನ್ನಡ ಭಾಷಾ ಮರು-ಪರೀಕ್ಷೆಯನ್ನು ದಿನಾಂಕ 04.02.2025 ರಂದು ನಡೆಸಲಾಗಿದ್ದು, ಕಡ್ಡಾಯ ಕನ್ನಡ ಭಾಷಾ ಪತ್ರಿಕೆಯ ಮೌಲ್ಯಮಾಪನವು 1ನೇ ಮೌಲ್ಯಮಾಪನದ ಅಂಕಗಳು ಹಾಗೂ 2ನೇ ಮೌಲ್ಯಮಾಪನದಲ್ಲಿ 15 ಅಥವಾ 15 ಅಂಕಗಳಿಗಿಂತ ಹೆಚ್ಚು ಅಂಕಗಳ ವ್ಯತ್ಯಾಸವಿದ್ದ ಉತ್ತರ ಪತ್ರಿಕೆಗಳನ್ನು ಮಾತ್ರ 3ನೇ ಮೌಲ್ಯಮಾಪನ ಮಾಡಿಸಲಾಗಿರುತ್ತದೆ.
ಈ ಮಧ್ಯೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು SLP No. 3007/2025 ರಲ್ಲಿ ದಿನಾಂಕ 03.02.2025 ರಂದು ಆದೇಶ ಹೊರಡಿಸಿ, ರಿಟ್ ಅಪೀಲ್ ಸಂಖ್ಯೆ 200020/2025 ರಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ಅನುಮತಿ ಪಡೆಯದೆ ಪ್ರಕಟಿಸಬಾರದೆಂದು ಆದೇಶಿಸಲಾಗಿತ್ತು.
ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಅಪೀಲ್ ಸಂಖ್ಯೆ 200020/2025 ರಲ್ಲಿ ದಿನಾಂಕ 25.02.2025 ರಂದು ಆದೇಶ ಹೊರಡಿಸಿ ಪ್ರಾಧಿಕಾರದಿಂದ ನಡೆಸಲಾದ ಕನ್ನಡ ಮರು ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆಗೊಳಿಸುವಂತೆ ಸೂಚಿಸಿರುವುದರಿಂದ ಹಾಗೂ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಪತ್ರ ದಿನಾಂಕ 01.03.2025 ರಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ಆದೇಶಾನುಸಾರ ಕನ್ನಡ ಮರು ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆಗೊಳಿಸುವಂತೆ ಕೋರಿರುವುದರಿಂದ ದಿನಾಂಕ 04.02.2025 ರಂದು ನಡೆದ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯ ತಾತ್ಕಾಲಿಕ ಅಂಕ ಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಲಿಖಿತವಾಗಿ ದಿನಾಂಕ 04.03.2025 ಸಂಜೆ 4.00 ಗಂಟೆ ಒಳಗೆ ಕೆಇಎ ಕಛೇರಿಗೆ ಖುದ್ದು ಅಥವಾ ಇ-ಮೇಲ್ keauthority-ka@nic.in ಗೆ ಸಲ್ಲಿಸಬಹುದು.
(ಮರು ಮೌಲ್ಯಮಾಪನಕ್ಕೆ ಅವಕಾಶವಿರುವದಿಲ್ಲ)
9th std