KSEAB :ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಲ್ಲಿ ಮನೋಸ್ಥೆರ್ಯ ಹೆಚ್ಚಿಸುವ ಸಂಬಂಧ ನುರಿತ ಮನೋವೈದ್ಯರಿಂದ ಮಾರ್ಗದರ್ಶನ ನೀಡುವ ಕುರಿತು.
KSEAB ವತಿಯಿಂದ SSLC ವಿದ್ಯಾರ್ಥಿಗಳಿಗೆ LIVE YOUTUBE PODCAST ಕಾರ್ಯಕ್ರಮ ಆಯೋಜನೆ, ತಪ್ಪದೇ ಎಲ್ಲ SSLC ವಿದ್ಯಾರ್ಥಿಗಳು ವೀಕ್ಷಿಸಿ.
KSEAB: SSLC ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಲ್ಲಿ ಮನೋಸೈರ್ಯ ಹೆಚ್ಚಿಸುವ ಸಂಬಂಧ ನುರಿತ ಮನೋವೈದ್ಯರಿಂದ ಮಾರ್ಗದರ್ಶನ ನೀಡುವ ಕುರಿತು.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, SSLC ಪರೀಕ್ಷೆಯನ್ನು ದಿನಾಂಕ:21-03-2025 ರಿಂದ 04-04-2025ರವರೆಗೆ ನಡೆಸಲಾಗುತ್ತಿದೆ. ಸದರಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಾವುದೇ ಆತಂಕ ಮತ್ತು ಭಯವಿಲ್ಲದೆ ಆತ್ಮ ಧೈರ್ಯದಿಂದ ಎದುರಿಸಬೇಕು ಎಂಬುದು ಮಂಡಲಿಯ ಆಶಯವಾಗಿದೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಪೂರ್ವ ಪರೀಕ್ಷಾ ಸಂದರ್ಭ ಮತ್ತು ಪರೀಕ್ಷಾ ನಂತರದಲ್ಲಿ ವಿದ್ಯಾರ್ಥಿಗಳಲ್ಲಿ ಉಂಟಾಗಬಹುದಾದ ಮಾನಸಿಕ ಸಂದಿಗ್ಧತೆಗಳನ್ನು ನಿವಾರಿಸಿ. ಆತ್ಮ ಸ್ಥೆರ್ಯವನ್ನು ಹೆಚ್ಚಿಸಿ ಪರೀಕ್ಷೆಯನ್ನು ಅತ್ಯಂತ ಲವಲವಿಕೆಯಿಂದ ಎದುರಿಸಲು ಅಗತ್ಯವಿರುವ ಮಾರ್ಗದರ್ಶನವನ್ನು National Institute of Mental Health and Neuro Sciences (NIMHANS),ಬೆಂಗಳೂರು ಸಂಸ್ಥೆಯ ನುರಿತ ಮನೋವೈದ್ಯರಿಂದ ದಿನಾಂಕ:15-03-2025 ರ ಸಾಯಂಕಾಲ 4.00 ರಿಂದ 5.00 ರವರಗೆ “LIVE YOUTUBE PODCAST” ಕಾರ್ಯಕ್ರಮವನ್ನು ಮಂಡಲಿ ವತಿಯಿಂದ ಆಯೋಜಿಸಲಾಗಿದೆ.
ಈ ಬಗ್ಗೆ ವಿದ್ಯಾರ್ಥಿಗಳು/ಪೋಷಕರು/ಶಿಕ್ಷಕರಿಗೆ ಮಾಹಿತಿಯನ್ನು ನೀಡಲು ಜಿಲ್ಲಾ / ತಾಲ್ಲೂಕು ಹಂತದಲ್ಲಿ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದೆ.
“LIVE YOUTUBE PODCAST” PROGRAMME -LINK
https://www.youtube.com/live/WGC5n2AOhgo?si=usXG7l4ObzT1319f

Anand