PM-YUVA 3.0: ರಾಷ್ಟ್ರಮಟ್ಟದ ಸ್ಪರ್ಧೆ ಆಯೋಜನೆ
PM-YUVA 3.0: ಯುವ ಬರಹಗಾರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ ಹಾಗೂ ಉನ್ನತ ಶಿಕ್ಷಣ ಇಲಾಖೆ ‘ಪಿಎಂ ಯುವ’ ಕಾರ್ಯಕ್ರಮದ ಮೂರನೇ ಆವೃತ್ತಿಗೆ ಚಾಲನೆ ನೀಡಲಾಗಿದೆ. ಪ್ರೈಮ್ ಮಿನಿಸ್ಟರ್ಸ್ ಸ್ಟೀಂ ಫಾರ್ ಮೆಂಟರಿಂಗ್ ಯಂಗ್ ಆಥರ್ಸ್- ‘ಪಿಎಂ ಯುವ’ ಕಾರ್ಯಕ್ರಮವು 30 ವರ್ಷದೊಳಗಿರುವ ಯುವ ಬರಹಗಾರರಿಗೆ ಉತ್ತೇಜನ,ಮಾರ್ಗದರ್ಶನ ನೀಡಲಿದೆ. ಈ ಮೂಲಕ ಓದುವ, ಬರೆಯುವ ಹಾಗೂ ಪುಸ್ತಕ ಸಂಸ್ಕೃತಿಯನ್ನು ಪಸರಿಸುವ ಉದ್ದೇಶ ಹೊಂದಿದೆ. ಮೊದಲೆರಡು ಆವೃತ್ತಿಗಳಲ್ಲಿ ಬರಹಗಾರರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಭಾರತದ 22 ಭಾಷೆಗಳಲ್ಲಿ ಹಾಗೂ ಇಂಗ್ಲಿಷ್‌ನಲ್ಲಿ ಈ ಯೋಜನೆ ಆರಂಭಿಸಲಾಗಿದೆ.
ಏನಿದು ಪಿಎಂ ಯುವ ಯೋಜನೆ?:
ಯಂಗ್, ಅಪ್‌ಕಮಿಂಗ್ ವರ್ಸಟೈಲ್ ಆಥರ್ಸ್- ಯುವ ಕಾರ್ಯಕ್ರಮವು ದೇಶದ ಅಭಿವೃದ್ಧಿ ಹಾಗೂ ಪ್ರಗತಿಯಲ್ಲಿ ಸಮೃದ್ಧ ಸಂಸ್ಕೃತಿ, ಪರಂಪರೆ ಹಾಗೂ ದಾರ್ಶನಿಕರ ಕೊಡುಗೆಗಳನ್ನು ಯುವಪೀಳಿಗೆ ಅರ್ಥ ಮಾಡಿಕೊಳ್ಳಬೇಕೆಂಬುದನ್ನು ಉತ್ತೇಜಿಸಲು ಪ್ರಧಾನಮಂತ್ರಿಗಳ ಆಶಯಕ್ಕೆ ಪೂರಕವಾಗಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.
▪️ಏಪ್ರಿಲ್ 10ರವರೆಗೆ ಸ್ಪರ್ಧೆ
▪️ಆಯೋಜನೆ ಭಾರತದ 22 ಭಾಷೆಗಳಲ್ಲಿ ಅನುವಾದ
NTB ಉಸ್ತುವಾರಿ:
ಪಿಎಂ ಯುವ ಕಾರ್ಯಕ್ರಮಕ್ಕೆ ನ್ಯಾಷನಲ್ ಬುಕ್ ಟ್ರಸ್ಟ್ (ಎನ್‌ಬಿಟಿ) ನಿರ್ವಹಣಾ ಸಂಸ್ಥೆಯಾಗಿದೆ. ಸ್ಪರ್ಧೆಯ ಎಲ್ಲ ಹಂತಗಳನ್ನು ಕ್ರಮಬದ್ಧವಾಗಿ ನೆರವೇರಿಸುತ್ತದೆ. ಈ ಯೋಜನೆಯಡಿ ಆಯ್ಕೆ ಆಗುವ ಪುಸ್ತಕಗಳನ್ನು ಎನ್‌ಬಿಟಿ ಮೂಲಕವೇ ಪ್ರಕಟಿಸಲಾಗುತ್ತದೆ. ಜತೆಗೆ, ಇತರ ಭಾರತೀಯ ಭಾಷೆಗಳಿಗೂ ಅನುವಾದ ಮಾಡಲಾಗುತ್ತದೆ. ಇದರಿಂದ ಸಾಹಿತ್ಯಕ, ಸಾಂಸ್ಕೃತಿಕ ವಿನಿಮಯವೂ ಸಾಧ್ಯವಾಗಲಿದೆ. ಜತೆಗೆ ‘ಏಕ್ ಭಾರತ್, ಶ್ರೇಷ್ಠ ಭಾರತ್’ ಧೈಯವನ್ನು ಉತ್ತೇಜಿಸಲಿದೆ. ಆಯ್ಕೆಯಾದ ಬರಹಗಾರರನ್ನು ಹಿರಿಯ ಬರಹಗಾರರೊಂದಿಗೆ ಚರ್ಚೆಗೆ ಅವಕಾಶ ಕಲ್ಪಿಸಲಾಗುತ್ತದೆ. ಮಾತ್ರವಲ್ಲದೆ, ಸಾಹಿತ್ಯ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ಕಾರ್ಯಾಗಾರ ಆಯೋಜನೆ
ಬರವಣಿಗೆಯು ಹೊಸತನದಿಂದ ಕೂಡಿರಬೇಕು. ಭಾರತೀಯ ಪರಂಪರೆ, ಸಂಸ್ಕೃತಿ ಹಾಗೂ ಜ್ಞಾನ ಪದ್ಧತಿ ಸೇರಿದಂತೆ ವೈವಿಧ್ಯಮಯ ವಿಷಯಗಳ ಕುರಿತು ಬರೆಯುವ ಸಾಮರ್ಥ್ಯ ಹೊಂದಿರಬೇಕು. ಈ ಸ್ಪರ್ಧೆಯು ಈಗಾಗಲೇ ಆರಂಭವಾಗಿದ್ದು, ಮಾ.11ರಿಂದ ಏಪ್ರಿಲ್ 10ರ ಅವಧಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ನಡೆಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಬರಹಗಾರರಿಗೆ ನವದೆಹಲಿಯಲ್ಲಿ ನಡೆಸಲಾಗುವ ರಾಷ್ಟ್ರೀಯ ಪುಸ್ತಕ ಮೇಳ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಕ್ಯಾಂಪ್ ಏರ್ಪಡಿಸಲಾಗುತ್ತದೆ ಎಂದು ತಿಳಿಸಲಾಗಿದೆ.
50 ಲೇಖಕರ ಆಯ್ಕೆ:
ಈ ಯೋಜನೆಯಡಿಯಲ್ಲಿ ಒಟ್ಟು 50 ಲೇಖಕರನ್ನು ಆಯ್ಕೆ ಮಾಡಲಾಗುತ್ತದೆ. ಭಾರತ ನಿರ್ಮಾಣದಲ್ಲಿ ಅನಿವಾಸಿಯರ ಕೊಡುಗೆ ವಿಷಯದಲ್ಲಿ 10, ಭಾರತೀಯ ಜ್ಞಾನ ಪದ್ಧತಿಯಲ್ಲಿ 20 ಹಾಗೂ ಆಧುನಿಕ ಭಾರತದ ನಿರ್ಮಾತೃರು ವಿಷಯದಲ್ಲಿ 20 ಲೇಖಕರು ಸೇರಿದಂತೆ ಒಟ್ಟು 50 ಜನರನ್ನು ಪುಸ್ತಕ ಪ್ರಕಟಣೆಗೆ ಪರಿಗಣಿಸಲಾಗುತ್ತದೆ.
ಸ್ಪರ್ಧೆಯ ವೇಳಾಪಟ್ಟಿ:
▪️ಸ್ವೀಕೃತವಾದ ಬರಹಗಳ ಮೌಲ್ಯಮಾಪನ: ಏಪ್ರಿಲ್ 2025
▪️ಆಯ್ಕೆಯಾದ ಲೇಖಕರ ಪಟ್ಟಿ ಬಿಡುಗಡೆ: ಮೇ 2025
▪️ಯುವ ಬರಹಗಾರರಿಗೆ ಹಿರಿಯರಿಂದ ತರಬೇತಿ:ಜೂನ್ 30 ರಿಂದ ಡಿಸೆಂಬರ್,30
ಮಾಹಿತಿ ಹಾಗೂ ಸ್ಪರ್ಧೆಯ ವಿವರಗಳಿಗೆ https://innovateindia.mygov.in/yuva-2025/ ಸಂಪರ್ಕಿಸಿ.