SUPRIME COURT JOBS: ಸುಪ್ರೀಂ ಕೋರ್ಟ್ ನಲ್ಲಿ ಜಾಬ್ಸ್: ಕಾನೂನು ಪದವೀಧರರಿಗೆ ಕ್ಲರ್ಕ್ ಹುದ್ದೆಗಳು, ಫೆಬ್ರವರಿ 7ರೊಳಗೆ ಅರ್ಜಿ ಸಲ್ಲಿಸಿ.

Suprime Court Judicial clerk Jobs

ಸರ್ವೋಚ್ಚ ನ್ಯಾಯಾಲಯ (Suprime Court) ಲಾ ಕ್ಲರ್ಕ್ ಕಮ್ ರಿಸರ್ಚ್ ಅಸೋಸಿಯೇಟ್ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಅವ್ಹಾನಿಸಿದೆ. ಒಟ್ಟು 90 ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಪ್ರಕಟಣೆಯಲ್ಲಿ ತಿಳಿಸಿದೆ. ಫೆ.7ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಅರ್ಹತೆಗಳೇನು?:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕಾನೂನು ಪದವೀಧರರಾಗಿರಬೇಕು. ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ನಿಗದಿತ ವಿದ್ಯಾರ್ಹತೆ ಹೊಂದಿರಬೇಕು. ಒಂದು ವೇಳೆ ಅಭ್ಯರ್ಥಿಗಳು ಇಂಟಿಗ್ರೇಟೆಡ್ ಲಾ ಕೋರ್ಸ್‌ನ ಐದನೇ ವರ್ಷದಲ್ಲಿದ್ದರೆ ಅಥವಾ ಕಾನೂನು ಪದವಿಯ ಮೂರನೇ ವರ್ಷದಲ್ಲಿದ್ದರೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ, ನೇಮಕಾತಿಗೆ ಮೊದಲು ಇದಕ್ಕೆ ಸಂಬಂಧಿಸಿದ ನಿಗದಿತ ವಿದ್ಯಾರ್ಹತೆಯ ಪ್ರಮಾಣ ಪತ್ರ ಸಲ್ಲಿಸಿರಬೇಕು. ಅಭ್ಯರ್ಥಿಗಳು ರಿಸರ್ಚ್, ಅನಾಲಿಟಿಕಲ್ ಸ್ಕಿಲ್, ಕಂಪ್ಯೂಟರ್ ಜ್ಞಾನ ಸೇರಿದಂತೆ ತಮ್ಮ ಹುದ್ದೆಗೆ ಅಗತ್ಯವಾದ ಕೌಶಲಗಳನ್ನು ಹೊಂದಿರಬೇಕು. ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಹಾಗೂ ಗರಿಷ್ಠ 32 ವರ್ಷ. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ: ಅಭ್ಯರ್ಥಿಗಳು 500 ರೂ.

ಶುಲ್ಕ ಜತೆಗೆ ಬ್ಯಾಂಕ್ ಶುಲ್ಕ ಕೂಡ ಪಾವತಿಸಬೇಕು. ಆನ್‌ಲೈನ್‌ನಲ್ಲಿ ನೀಡಲಾಗಿರುವ ಯುಕೋ ಬ್ಯಾಂಕ್ ಲಿಂಕ್ ಮೂಲಕ ಶುಲ್ಕ ಪಾವತಿಸಲು ಸೂಚಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಲಿಖಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಮಾರ್ಚ್ 9ರಂದು ಪರೀಕ್ಷೆ ನಿಗದಿಯಾಗಿದೆ. ಮೊದಲನೆ ಹಂತದ ಪರೀಕ್ಷೆಯು ಆನ್‌ಲೈನ್ ಮಾದರಿಯಲ್ಲಿ ನಡೆಯಲಿದ್ದು, ಬಹು ಆಯ್ಕೆ ಮಾದರಿ ಪ್ರಶ್ನೆಗಳಿರುತ್ತವೆ. ಎರಡನೇ ಹಂತದ ಪರೀಕ್ಷೆಯು ಆಫ್‌ಲೈನ್ (ಪೆನ್- ಪೇಪರ್ ಮಾದರಿ) ನಡೆಯಲಿದ್ದು, ವಿಷಯವಾರು ಅಭ್ಯರ್ಥಿಗಳು ಉತ್ತರಿಸಬೇಕಾಗುತ್ತದೆ.

ಇದರಲ್ಲಿ ಅರ್ಹತೆ ಪಡೆದವರಿಗೆ ಸಂದರ್ಶನ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಗಳ ಕೀ ಉತ್ತರಗಳನ್ನು ಮಾರ್ಚ್ 10ರಂದು ಪ್ರಕಟಿಸಿ, ಆಕ್ಷೇಪಣೆಗೆ ಒಂದು ದಿನ ಸಮಯ ನೀಡಲಾಗುತ್ತದೆ. ಅಭ್ಯರ್ಥಿಗಳು ಪ್ರತಿ ಆಕ್ಷೇಪಣೆಗೆ 100 ರೂ. ಶುಲ್ಕ ಪಾವತಿಸಿ ಮಾರ್ಚ್ 11ರ ರಾತ್ರಿ 11.59ರೊಳಗೆ ಆನ್‌ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 07-02-2025

ಪರೀಕ್ಷೆ ದಿನಾಂಕ: 09-03-2025

ಪರೀಕ್ಷಾ ಕೇಂದ್ರ: ಬೆಂಗಳೂರು

ಕೀ ಉತ್ತರಗಳಿಗೆ ಆಕ್ಷೇಪಣೆ: ಮಾರ್ಚ್ 10,11-2025

ಹೆಚ್ಚಿನ ವಿವರಗಳಿಗಾಗಿ – CLICK HERE

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!