UPSC RECURITMENT-2025: IES, ISS ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.
UPSC RECURITMENT-2025: ಕೇಂದ್ರ ಲೋಕ ಸೇವಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಪರಿಚ್ಛೇದ 320ರ ಅಡಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಾಗರಿಕ ಸೇವೆ, ಭಾರತೀಯ ರಕ್ಷಣಾ ಪಡೆಗಳಿಗೆ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಹೊತ್ತಿದೆ. ಪ್ರಸ್ತುತ ಈ ಆಯೋಗವು ಇಂಡಿಯನ್ ಎಕಾನಮಿ ಸರ್ವೀಸ್ (ಐಇಎಸ್) ಮತ್ತು ಸ್ಟ್ರಾಟಿಸ್ಟಿಕಲ್ ಸರ್ವೀಸ್ (ಐಎಸ್‌ಎಸ್)ನಲ್ಲಿ 47 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನ ಮಾಡಿದೆ.
ಒಟ್ಟು 47 ಹುದ್ದೆಗಳಿಗೆ ನೇಮಕಾತಿ:
ಅರ್ಜಿ ಸಲ್ಲಿಸಲು ಮಾ.4ರ ಗಡುವು:
ಹುದ್ದೆಗಳ ವಿವರ:
ಭಾರತೀಯ ಆರ್ಥಿಕ ಸೇವೆ(ಐಇಎಸ್) 12
ಭಾರತೀಯ ಸಂಖ್ಯಾಶಾಸ್ತ್ರೀಯ ಸೇವೆ(ಐಎಸ್‌ಎಸ್) 35
ವಯೋಮಿತಿ :
ಅರ್ಜಿ ಸಲ್ಲಿಸಲು 2025ರ, ಆ.1ಕ್ಕೆ ಅನ್ವಯವಾಗುವಂತೆ ಕನಿಷ್ಠ 21 ರಿಂದ ಗರಿಷ್ಠ 30 ವರ್ಷದೊಳಗಿರಬೇಕು. ಒಬಿಸಿ ವರ್ಗಕ್ಕೆ-3 ವರ್ಷ, ಅಂಗ ವಿಕಲರಿಗೆ -10 ವರ್ಷ, ಎಸ್ಸಿ/ಎಸ್ಟಿಗಳಿಗೆ-5 ವರ್ಷ ವಯೋಸಡಿಲಿಕೆ ಅನ್ವಯವಾಗಲಿದೆ.
ವೇತನ ವಿವರ:
ಸಂಸ್ಥೆಯ ನಿಯಮಾನುಸಾರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನವನ್ನು ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ, ವ್ಯಕ್ತಿತ್ವ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಶೈಕ್ಷಣಿಕ ಅರ್ಹತೆ:
ಭಾರತೀಯ ಆರ್ಥಿಕ ಸೇವೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಥಶಾಸ್ತ್ರ/ಅನ್ವಯಿಕ ಅರ್ಥಶಾಸ್ತ್ರ/ವ್ಯವಹಾರ ಅರ್ಥಶಾಸ್ತ್ರ/ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಭಾರತೀಯ ಸಂಖ್ಯಾಶಾಸ್ತ್ರ ಸೇವೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ, ಸಂಖ್ಯಾಶಾಸ್ತ್ರ/ಗಣಿತ ಸಂಖ್ಯಾಶಾಸ್ತ್ರ/ಅನ್ವಯಿಕ ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ಪರೀಕ್ಷೆ ಹೇಗಿರುತ್ತದೆ?
ಈ ನೇಮಕಾತಿಗೆ ಸಂಬಂಧಿಸಿದಂತೆ ಯುಪಿಎಸ್ ಸಿಯು ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಲಿದೆ. ಮೊದಲ ಹಂತದಲ್ಲಿ 1000 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಎರಡನೇ ಹಂತದಲ್ಲಿ 200 ಅಂಕಗಳಿಗೆ ಮೌಖಿಕ ಪರೀಕ್ಷೆ ನಡೆಸಲಾಗುತ್ತದೆ. ಐಇಎಸ್ ತೆಗೆದುಕೊಂಡವರು ಜನರಲ್ ಇಂಗ್ಲಿಷ್-100, ಜನರಲ್ ಸ್ಟಡೀಸ್-100, ಜನರಲ್ ಎಕನಾಮಿಕ್ಸ್ 3 ಪತ್ರಿಕೆಗಳು-600 ಮತ್ತು ಇಂಡಿಯನ್ ಎಕನಾಮಿಕ್ಸ್ -200 ಅಂಕಗಳ ಪರೀಕ್ಷೆ ಬರೆಯಬೇಕಾಗುತ್ತದೆ. ಐಎಎಸ್ ಪರೀಕ್ಷೆ ತೆಗೆದುಕೊಂಡವರು ಜನರಲ್ ಇಂಗ್ಲಿಷ್-100, ಜನರಲ್ ಸ್ಟಡೀಸ್-100, ಸ್ಟ್ಯಾಟಿಸ್ಟಿಕ್ಸ್ 4 ಪತ್ರಿಕೆಗಳು-800 ಅಂಕಗಳ ಪರೀಕ್ಷೆ ಬರೆಯ ಬೇಕಾಗುತ್ತದೆ. ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ.
ಇದಕ್ಕಾಗಿ ತಲಾ 3 ಗಂಟೆ ಕಾಲಾವಕಾಶ ನೀಡಲಾಗುತ್ತದೆ. ಸ್ಟಾಟಿಸ್ಟಿಕ್ಸ್ ನಲ್ಲಿ ಪತ್ರಿಕೆ 1 ಮತ್ತು 2 ಆಬ್ಜೆಕ್ಟಿವ್ ಮಾದರಿಯ 80 ಪ್ರಶ್ನೆಗಳನ್ನೊಳಗೊಂಡಿದ್ದು, 200 ಅಂಕಗಳನ್ನು (2 ಗಂಟೆ ಅವಧಿ) ನಿಗದಿಪಡಿಸಲಾಗಿದೆ.
ಸ್ಟ್ಯಾಟಿಸ್ಟಿಕ್ ನಲ್ಲಿ ಪತ್ರಿಕೆ 3 ಮತ್ತು 4ಕ್ಕೆ ವಿವರಣಾತ್ಮಕವಾಗಿ ಉತ್ತರ ಬರೆಯಬೇಕಾಗಿದ್ದು, ಶಾರ್ಟ್ ಆನ್ಸರ್/ಸ್ಮಾಲ್ ಪ್ರಾಬ್ಲೆಮ್ಸ್ (ಶೇ.50) ಮತ್ತು ಲಾಂಗ್ ಆನ್ಸರ್/ ಕಾಂಪ್ರಹೆನ್ಸನ್ ಪ್ರಶ್ನೆಗಳನ್ನು (ಶೇ.50) ಹೊಂದಿರುತ್ತದೆ. ನೇಮಕದ ಸಮಗ್ರ ವಿವರಗಳನ್ನು ಯುಪಿಎಸ್‌ಸಿ ನೀಡಿರುವ ಅಧಿಸೂಚನೆಯಲ್ಲಿ ನೋಡಬಹುದು.
ಅರ್ಜಿ ಸಲ್ಲಿಕೆಯಲ್ಲಿ ಬದಲಾವಣೆ ಅಭ್ಯರ್ಥಿಗಳ ದೂರು ಪರಿಗಣಿಸಿ ಅಧಿಕೃತ ಪ್ರಕಟಣೆ.
ನಾಗರೀಕ ಸೇವಾ ಪೂರ್ವಭಾವಿ ಪರೀಕ್ಷೆಯ ಅರ್ಜಿ ಸಲ್ಲಿಕೆಗೆ ತಾಂತ್ರಿಕ ತೊಡಕುಗಳು ಎದುರಾಗು ತ್ತಿರುವ ಕಾರಣ ಲೋಕಸೇವಾ ಆಯೋಗವು ಕೆಲವೊಂದು ಬದಲಾವಣೆಗಳನ್ನು ತಂದಿದೆ.
ಈ ಕುರಿತು ಬುಧವಾರ ಪ್ರಕಟಣೆ ಹೊರಡಿಸಿರುವ ಆಯೋಗವು “ಅರ್ಜಿ ಸಲ್ಲಿಕೆಯ ವೇಳೆ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಆಕಾಂಕ್ಷಿಗಳು ನೀಡಿರುವ ದೂರನ್ನು ಪರಿಗಣಿಸಿ, ಒಂದೇ ಬಾರಿಗೆ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆಯಲ್ಲಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ” ಎಂದು ತಿಳಿಸಿದೆ.
ಹೆಸರು, ಜನ್ಮ ದಿನಾಂಕ, ತಂದೆಯ ಹೆಸರು, ತಾಯಿಯ ಹೆಸರು, ಮೊಬೈಲ್ ನಂಬರ್ ಮತ್ತು ಇ-ಮೇಲ್ ಅನ್ನು ತಿದ್ದುಪಡಿ ಮಾಡಲು ಅವಕಾಶಗಳಿಲ್ಲ, ಅಭ್ಯರ್ಥಿಯ ಮೊಬೈಲ್ ಸಂಖ್ಯೆ ಯಾವುದಾದರೂ ಕಾರಣದಿಂದ ಬದಲಾದಲ್ಲಿ ಮೂಲಕ ಇ-ಮೇಲ್ ಅದನ್ನು ಬದಲಿಸಬಹುದಾಗಿದೆ.
ಈ ವೇಳೆ ಇ-ಮೇಲ್‌ಗೆ ಒಟಿಪಿ ಬರುತ್ತದೆ. ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ. ಅಭ್ಯರ್ಥಿಯ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಖಾತೆಗಳೆರಡೂ ಲಭ್ಯವಿಲ್ಲದಿದ್ದರೆ, ಅಂಕ ಪಟ್ಟಿ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಅಥವಾ ವಾಹನ ಚಾಲನಾ ಪರವಾನಗಿ, ಭಾವಚಿತ್ರದೊಂದಿಗೆ ನಿಗದಿತ ನಮೂನೆಯಲ್ಲಿ ಆಯೋಗಕ್ಕೆ ಮನವಿ ಸಲ್ಲಿಸಬಹುದು. ಮೇ 25ರಂದು ನಾಗರಿಕ ಸೇವಾ ಪರೀಕ್ಷೆ ನಡೆಯಲಿದ್ದು, ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಫೆ.18ರ ತನಕ ಅವಕಾಶ ನೀಡಲಾಗಿದೆ.
ಹುದ್ದೆಯ ಜವಾಬ್ದಾರಿಗಳೇನು?
ಐಇಎಸ್ ಪರೀಕ್ಷೆ ಮೂಲಕ ಆಯ್ಕೆಯಾದವರು ವಿವಿಧ ಸಚಿವಾಲಯ/ಇಲಾಖೆಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಬಹುದು. ವಿತ್ತೀಯ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸವನ್ನು ಈ ಅಧಿ ಕಾರಿಗಳು ಮಾಡಬೇಕಾಗುತ್ತದೆ. ಐಇಎಸ್‌ನಂತೆಯೇ ಐಎಸ್ಎಸ್ ಕೂಡ ಮಹತ್ವ ಪಡೆದಿದ್ದು, ಈ ಪರೀಕ್ಷೆ ಮೂಲಕ ಆಯ್ಕೆಯಾದವರು ಮುಖ್ಯವಾಗಿ ಯೋಜನಾ ಆಯೋಗ, ವಾಣಿಜ್ಯ ಇಲಾಖೆ, ಹಣಕಾಸು ಸಚಿವಾಲಯ ಮತ್ತು ನ್ಯಾಷನಲ್ ಸ್ಯಾಂಪಲ್ ಸರ್ವೇ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.
ಅರ್ಜಿ ಶುಲ್ಕ ಎಷ್ಟು?
ಈ ಪರೀಕ್ಷೆಗಳಿಗೆ 200 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಪ್ರತ್ಯೇಕವಾಗಿ ಶುಲ್ಕ ಪಾವತಿಸಬೇಕಾಗುತ್ತದೆ. ಎಸ್‌ಸಿ/ಎಸ್‌ಟಿ, ವಿಶೇಷಚೇತನ ಹಾಗೂ ಮಹಿಳಾ ಅಭ್ಯರ್ಥಿ ಗಳಿಗೆ ಶುಲ್ಕ ವಿನಾಯಿತಿ ಇದೆ. ಶುಲ್ಕವನ್ನು ಎಸ್‌ಬಿಐ ಬ್ಯಾಂಕ್‌ನಲ್ಲಿ ಚಲನ್ ಪಡೆದು ಪಾವತಿಸಬಹುದು ಅಥವಾ ವೀಸಾ/ಮಾಸ್ಟರ್/ರುಪೇ/ಕ್ರೆಡಿಟ್ / ಡೆಬಿಟ್ ಕಾರ್ಡ್ ಮೂಲಕವೂ ಎಸ್‌ಬಿಐ ಬ್ಯಾಂಕ್‌ನಲ್ಲಿ ಪಾವತಿಸಬಹುದು.
▪️ಅರ್ಜಿ ತಿದ್ದುಪಡಿ: ಮಾ.5-11
▪️ಜೂನ್ 20ರಂದು ಪರೀಕ್ಷೆ
▪️ರಾಜ್ಯದಲ್ಲಿ ಪರೀಕ್ಷಾ ಕೇಂದ್ರ ಬೆಂಗಳೂರು
▪️ವಿವರಗಳನ್ನು ಪಡೆಯಲು www.upsc.gov.in
ಇದನ್ನೂ ನೋಡಿ……ಪೊಲೀಸ್ ಪಬ್ಲಿಕ್ ಸ್ಕೂಲ್ ದಲ್ಲಿ ಶಿಕ್ಷಕರನ್ನೊಳಗೊಡಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ