Alva’s Free Education Admissions 2025- 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ 2025-26 ನೇ ಸಾಲಿನ ಉಚಿತ ಶಿಕ್ಷಣ ಯೋಜನೆ.

Alva’s- 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ 2025-26 ನೇ ಸಾಲಿನ ಉಚಿತ ಶಿಕ್ಷಣ ಯೋಜನೆ.

Alva’s

 

Alva’s: ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಇರುವಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಆಳ್ವಾಸ್‌ [alva’s] ನಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ಉಚಿತ ಶಿಕ್ಷಣ ಪಡೆಯಲು ಅರ್ಹತಾ ಪರೀಕ್ಷೆ ತೆಗೆದುಕೊಳ್ಳಬೇಕು. ಈ ಕುರಿತು ಮಾಹಿತಿ ತಿಳಿದು ಅರ್ಜಿ ಸಲ್ಲಿಸಿ.ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

 

ಅರ್ಜಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಅನುಸರಿಸಬೇಕಾದ ಸೂಚನೆಗಳನ್ನು ಇಲ್ಲಿ ನೀಡಲಾಗಿದೆ.

 

1.ಪ್ರಸ್ತುತ 6, 7, 8, ಮತ್ತು 9ನೇ ತರಗತಿಗಳಿಗೆ ವಿದ್ಯಾರ್ಥಿ ಪ್ರವೇಶಾತಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿಯನ್ನು ಕಡ್ಡಾಯವಾಗಿ ಮತ್ತು ಪೂರ್ಣವಾಗಿ ಭರ್ತಿ ಮಾಡುವುದು. ಅರ್ಜಿ ಇಲ್ಲದೆ ನೇರವಾಗಿ ಪರೀಕ್ಷೆ ಬರೆಯಲು ಯಾರಿಗೂ ಅವಕಾಶ ನೀಡಲಾಗುವುದಿಲ್ಲ. ಪರೀಕ್ಷೆಯು ದಿನಾಂಕ 02 ಮಾರ್ಚ್ 2025 ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿ ಮತ್ತು ಪುತ್ತಿಗೆ ಕ್ಯಾಂಪಸ್‌ನ ವಿವಿಧ ಬ್ಲಾಕ್‌ಗಳಲ್ಲಿ ನಡೆಯಲಿದೆ.

2.ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿಯ ಎಸ್.ಎ.ಟಿ.ಎಸ್ (ಶಾಲಾ ಮುಖ್ಯಸ್ಥರಿಂದ ಖಚಿತಪಡಿಸಿಕೊಂಡು) ಹಾಗೂ ಆಧಾ‌ರ್ ಸಂಖ್ಯೆಯನ್ನು ನಮೂದಿಸುವುದು. ಅರ್ಜಿಯೊಂದಿಗೆ ವಿದ್ಯಾರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ (3:4) ಅಳತೆಯ ಭಾವಚಿತ್ರವನ್ನು ನಿಗದಿತ ಸ್ಥಳದಲ್ಲಿ JPE] (256kb) ಮಾದರಿಯಲ್ಲಿ ಲಗತ್ತಿಸುವುದು. ಆಧಾ‌ರ್ ಹಾಗೂ ಇನ್ನಿತರ ಶಾಲೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಅರ್ಜಿಯೊಂದಿಗೆ ಕಳುಹಿಸಬೇಕಿಲ್ಲ..

3.ಒಂದೇ ವಿದ್ಯಾರ್ಥಿಯು ಪದೇ ಪದೇ ಅರ್ಜಿ ಹಾಕಲು ಅರ್ಜಿಯಲ್ಲಿ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.

4.ಕ್ರೀಡಾ / ಸಾಂಸ್ಕೃತಿಕ ವಿಭಾಗದಲ್ಲಿ ಆಯ್ಕೆ ಬಯಸುವ ವಿದ್ಯಾರ್ಥಿಗಳು ಜಿಲ್ಲಾ/ ರಾಜ್ಯ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿರಬೇಕು, ಸಂಬಂಧಪಟ್ಟ ಪ್ರಮಾಣ ಪತ್ರಗಳ ನಕಲು ಪ್ರತಿಯನ್ನು ಪ್ರತ್ಯೇಕ ಪತ್ರಿಕೆ ಪ್ರಕಟಣೆ ನೀಡಿದ ಬಳಿಕ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವುದು.

5.ಪ್ರಸ್ತುತ ವಿದ್ಯಾರ್ಥಿಗಳು ಯಾವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೋ, ಅದರ ಮುಂದಿನ ತರಗತಿಗೆ ಆಯ್ಕೆ ಬಯಸುವುದರಿಂದ ಪ್ರಸ್ತುತ ಓದುತ್ತಿರುವ ಎಲ್ಲಾ ವಿಷಯಗಳಲ್ಲಿ ಹಾಗೂ ಮಾನಸಿಕ ಸಾಮರ್ಥ್ಯ ವಿಷಯಗಳನ್ನು ಅಧ್ಯಯನ ಮಾಡಬೇಕು.

6.6, 7, 8ನೇ ಮತ್ತು 9ನೇ ತರಗತಿಗಳಿಗೆ 2.30 ನಿಮಿಷದ 150 ಅಂಕಗಳ ಓ.ಎಮ್.ಆರ್ ಆಧಾರಿತ ಪ್ರಶ್ನೆ ಪತ್ರಿಕೆ ಇರುತ್ತದೆ. ಪರೀಕ್ಷೆಯು ಪೂರ್ವಾಹ್ನ 10.00 ಗಂಟೆಗೆ ಪ್ರಾರಂಭವಾಗಲಿದ್ದು 12.30ಕ್ಕೆ ಮುಗಿಯಲಿದೆ. ಪರೀಕ್ಷಾ ಕೇಂದ್ರಕ್ಕೆ ಬೆಳಗ್ಗೆ 9.00ರ ಹೊತ್ತಿಗೆ ಹಾಜರಾಗುವುದು.

7.ಪರೀಕ್ಷಾ ಕೇಂದ್ರದ ಮಾಹಿತಿ ನಿಮ್ಮ ಪ್ರವೇಶಪತ್ರದಲ್ಲಿ ನಮೂದಾಗಿದ್ದು ಅದೇ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆಯುವುದು. ಪರೀಕ್ಷಾ ಕೇಂದ್ರದ ಬದಲಾವಣೆಗೆ ಅವಕಾಶವಿರುವುದಿಲ್ಲ. ಪರೀಕ್ಷೆ ಬರೆಯಲು ಪ್ರವೇಶಪತ್ರ ಕಡ್ಡಾಯವಾಗಿದೆ.

8.ಅರ್ಜಿಯನ್ನು ಪೂರ್ಣವಾಗಿ Onlineನಲ್ಲಿ ಭರ್ತಿ ಮಾಡಿ Submit ಆದ ಬಳಿಕ ಎರಡು ಪ್ರತಿಯನ್ನು ಪ್ರಿಂಟ್ ಮಾಡಿಕೊಳ್ಳುವುದು. ನಂತರದಲ್ಲಿ ಒಂದು ಪ್ರತಿ ಅರ್ಜಿಯನ್ನು ಸಂಸ್ಥೆಯ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುವುದು.

9.ಮೊದಲ ಹಂತದ ಆಯ್ಕೆ ಪ್ರಕ್ರಿಯೆಯು ಓ. ಎಮ್. ಆರ್ ಮಾದರಿಯಲ್ಲಿ ಇರಲಿದ್ದು, ಎರಡನೇ ಹಂತಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬರವಣಿಗೆ ಆಧಾರಿತ ಚಟುವಟಿಕೆಯನ್ನು ನಡೆಸಲಾಗಿ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ. ಮರುದಿನ ನೇರ ಸಂದರ್ಶನದಲ್ಲಿ ಭಾಗವಹಿಸಿ ದಾಖಲಾತಿ ಮಾಡಿಕೊಳ್ಳುವುದು.

ಆತ್ಮೀಯರೇ…01/02/2025 ರಂದು ಪ್ರವೇಶಪತ್ರ ನೀವು ಅರ್ಜಿ ಸಲ್ಲಿಸಿದ ಲಿಂಕ್ ನಲ್ಲಿಯೇ ಬಿಡುಗಡೆಯಾಗಿದ್ದು ಕಡೆಯ ದಿನಾಂಕದವರೆಗೆ ಕಾಯದೆ ತಕ್ಷಣವೇ ಪ್ರವೇಶಪತ್ರವನ್ನು ಮುದ್ರಿಸಿಕೊಳ್ಳುವುದು ಪರೀಕ್ಷೆಗೆ ಆ ಪತ್ರ ದೊಂದಿಗೆ 02/03/2025 ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್ ಗೆ ವಿದ್ಯಾರ್ಥಿಯೊಂದಿಗೆ ಹಾಜರಾಗುವುದು..
ಪ್ರವೇಶ ಪತ್ರದ ಲಿಂಕ್ ಈ ಕೆಳಗೆ ನೀಡಲಾಗಿದೆ.

CLICK HERE TO DOWNLOAD ADMIT CARD

CLICK HERE APPLICATION DIRECT LINK

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

3 thoughts on “Alva’s Free Education Admissions 2025- 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ 2025-26 ನೇ ಸಾಲಿನ ಉಚಿತ ಶಿಕ್ಷಣ ಯೋಜನೆ.”

Leave a Comment

error: Content is protected !!