Good thoughts-01 : ನಿದ್ದೆಯಲ್ಲಿ ಕಾಣುವಂತಹದು ಕನಸಲ್ಲ, ನಿದ್ದೆಗೆಡುವಂತೆ ಮಾಡುವುದಿದೆಯಲ್ಲಾ ಅದು ನಿಜವಾದ ಕನಸು !

Good thoughts : ನಿದ್ದೆಯಲ್ಲಿ ಕಾಣುವಂತಹದು ಕನಸಲ್ಲ, ನಿದ್ದೆಗೆಡುವಂತೆ ಮಾಡುವುದಿದೆಯಲ್ಲಾ ಅದು ನಿಜವಾದ ಕನಸು ! ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಮಾಜಿ ರಾಷ್ಟ್ರಪತಿಗಳು

Good thoughts :ನೆನಪಿನಲ್ಲಿದೆ. ಆದರೆ ಒಂದು ತಿಂಗಳ ಹಿಂದೆ ನೀನು ತಿಂದ ತಿಂಡಿ ಏನು? ಎಂದರೆ ನೆನಪಿಲ್ಲ, ಏಕೆ ಹೀಗೆ?

ಹಿಂದಿನ ತರಗತಿಯಲ್ಲಿ ಉತ್ತರಿಸಿದ ಪ್ರಶ್ನೆಗೆ ಈಗ ಉತ್ತರಿಸಬಲ್ಲಿರಾ? ಇಲ್ಲವಾದರೆ ಮಗ್ಗಿ ಹೇಗೆ ನೆನಪಿನಲ್ಲಿ ಉಳಿಯುತ್ತದೆ. ಅದಕ್ಕೆ ಕಾರಣ ನಿಮ್ಮ ಮೆದುಳಿನ ಕಾರ್ಯವೈಖರಿ, ಯಾವ ವಿಷಯವು ಪದೇ ಪದೇ ರಿಪೀಟ್ ಆಗುವುದೋ ಅದು ದೀರ್ಘಕಾಲೀನ ನೆನಪಿನಲ್ಲಿ ಉಳಿಯುತ್ತದೆ.

ನೆನಪಿನ ಶಕ್ತಿಯನ್ನು ಹೆಚ್ಚಿಸುವ ತಂತ್ರಗಳು

ತಂತ್ರ 1: ಅರ್ಥೈಸಿಕೊಳ್ಳಿ;

ಯಾವುದೇ ಪಾಠವನ್ನು ಓದುವಾಗ ಹೆಚ್ಚಿನ ವಿದ್ಯಾರ್ಥಿಗಳು ಕಂಠಪಾಠ ಮಾಡುತ್ತಾರೆ. ಆದರೆ ಪರೀಕ್ಷೆಯಲ್ಲಿ ಬರೆಯುವಾಗ ಮಧ್ಯದಲ್ಲಿ ಉತ್ತರ ಮರೆತು ಹೋಗುತ್ತದೆ. ಕಾರಣ ಕಂಠಪಾಠ ಮಾಡಿರುವುದು. ಆದ್ದರಿಂದ ಯಾವುದೇ ವಿಷಯವನ್ನು ಓದುವಾಗ ಸಾರಾಂಶವನ್ನು ನಿಮ್ಮ ಮಾತೃಭಾಷೆಯಲ್ಲಿ ತಿಳಿದುಕೊಳ್ಳಿ. ಆಗ ಉತ್ತರ ಮಧ್ಯದಲ್ಲಿ ಮರೆತರೆ ನೀವು ಸಾರಾಂಶದ ಅರ್ಥದಿಂದ
ನಿಮ್ಮ ಸ್ವಂತ ವಾಕ್ಯಗಳಲ್ಲಿ ಉತ್ತರ ಬರೆಯಬಹುದು.

ತಂತ್ರ 2: ಓದಿ – ಜ್ಞಾಪಿಸಿಕೊಳ್ಳಿ – ಬರೆಯಿರಿ.

ಮೊದಲು ಓದಿ. ನಂತರ ಕಣ್ಣುಮುಚ್ಚಿ ಜ್ಞಾಪಿಸಿಕೊಳ್ಳಿ-ಬರೆಯಿರಿ. ಈ ರೀತಿ ಕನಿಷ್ಠ ಮೂರು ಬಾರಿ ಮಾಡಿ,

ತಂತ್ರ 3: ಸಮಯಾಂತರ ನೆನಪು:

ದೀರ್ಘಕಾಲ ಏನನ್ನಾದರೂ ನೆನಪಿನಲ್ಲಿ ಇಟ್ಟುಕೊಳ್ಳಲು ಇದು ಉತ್ತಮ ಮಾರ್ಗ. ಈ ತಂತ್ರದಲ್ಲಿ ಓದಿದ್ದನ್ನು ಕಾಲಾನುಕ್ರಮದಲ್ಲಿ ಮತ್ತೆಮತ್ತೆ ಓದುವುದು.

ಮೊದಲ ಪುನರಾವರ್ತನೆ:

ಓದಿದ 3 ನಿಮಿಷಗಳ ನಂತರ,ಎರಡನೆಯ ಪುನರಾವರ್ತನೆ: ಓದಿದ ಮೂರು ದಿನಗಳ ನಂತರ.

ಮೂರನೇ ಪುನರಾವರ್ತನೆ:

ಓದಿದ ಒಂದು ವಾರದ ನಂತರ,ನಾಲ್ಕನೇ ಪುನರಾವರ್ತನೆ: ಓದಿದ ತಿಂಗಳ ನಂತರ. ಓದಿದ ಎರಡು ಮೂರು ತಿಂಗಳ ನಂತರ.

ಐದನೇ ಪುನರಾವರ್ತನೆ:

ಈಗ ಅರ್ಥವಾಯಿತೇ? ನೀವು ಚಿಕ್ಕವರಿದ್ದಾಗ ಪದೇಪದೇ ಮಗ್ಗಿ ವರ್ಣಮಾಲೆಯನ್ನು ಕಲಿಯುತ್ತಿದ್ದರಿಂದ ನಿಮಗೆ ಈಗಲೂ ಅದು ನೆನಪಿನಲ್ಲಿದೆ.

ತಂತ್ರ 4: ಮಿಂಚುಪಟ್ಟಿ (Flash Card)

ನೀವು ಓದುವಾಗ ಮುಖ್ಯಾಂಶಗಳನ್ನು ಮಿಂಚುಪಟ್ಟಿಯಲ್ಲಿ ಬರೆದಿಡಿ. ಇದರಿಂದ ಸಮಯ ಸಿಕ್ಕಾಗ ಅದನ್ನು ನೋಡುವುದರಿಂದ ಪುನರ್ಮನನ ಮಾಡಲು ಸಹಾಯವಾಗುತ್ತದೆ.

ತಂತ್ರ 5: ಮತ್ತೊಬ್ಬರಿಗೆ ಬೋಧಿಸಿ

ಇದು ಪ್ರಪಂಚದಾದ್ಯಂತ ಹೆಚ್ಚು ಯಶಸ್ವಿಯಾಗಿರುವ ತಂತ್ರವಾಗಿದೆ. ನಾವು ಓದಿದ್ದು 10% ನೆನಪಿನಲ್ಲಿರುತ್ತದೆ. ನಾವು ಓದಿ ಬರೆದಿದ್ದು 30% ನೆನಪಿನಲ್ಲಿರುತ್ತದೆ. ನಾವು ಓದಿ ಬರೆದು ನೋಡಿದ್ದು 50% ನೆನಪಿನಲ್ಲಿರುತ್ತದೆ. ಆದ್ದರಿಂದ ನೀವು ಓದಿದ್ದನ್ನು ಮತ್ತೊಬ್ಬ ರಿಗೆ ಬೋಧಿಸಿ, ಯಾರೂ ಇರದಿದ್ದರೆ ಗೋಡೆಗೆ ಬೋಧಿಸಿ, ಮತ್ತೊಮ್ಮೆ ಹೇಳುತ್ತೇನೆ ಇದು ಪ್ರಪಂಚದಾದ್ಯಂತ ಯಶಸ್ವಿಯಾಗಿರುವ ತಂತ್ರವಾಗಿದೆ.

ಓದುವಾಗ ನಿದ್ದೆ ಬರುವುದು:

ನಾನು ಸುಮಾರು ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದು, ಬಹಳಷ್ಟು ವಿದ್ಯಾರ್ಥಿಗಳಿಗೆ ಓದುವಾಗ ನಿದ್ದೆ ಬರುತ್ತದೆ ಎನ್ನುವ ಅಭಿಪ್ರಾಯ ಸಾಮಾನ್ಯ ಓದುವಾಗ ನಿದ್ದೆ ಬರದಂತೆ ಮಾಡಲು ಇರುವ ಪರಿಹಾರಗಳು:

ಪರಿಹಾರ 1: ಉತ್ತಮ ಬೆಳಕಿರುವ ಕಡೆ ಕುಳಿತುಕೊಳ್ಳಿ, ಮಂದ ಬೆಳಕಿನಲ್ಲಿ ಓದಬೇಡಿ,

ಪರಿಹಾರ 2: ಮೇಜಿನ ಮುಂದೆ ಕುಳಿತುಕೊಳ್ಳಿ- ಹಾಸಿಗೆಯ ಮೇಲೆ ಕುಳಿತು ಓದಬೇಡಿ ಹಾಗೂ ನೇರವಾಗಿ ಕುಳಿತುಕೊಳ್ಳಿ.

ಪರಿಹಾರ 3: ಕುಳಿತಿರುವ ಭಂಗಿ ಬದಲಿಸಿ

ಪರಿಹಾರ 4: ಓಡಾಡಿಕೊಂಡು ಓದಿ. ನಿಮ್ಮ ದೇಹ ಚಲನೆಯಲ್ಲಿದ್ದಾಗ ನಿದ್ದೆ ಮಾಡಲು ಸಾಧ್ಯವಿಲ್ಲ.

ಪರಿಹಾರ 5: ಹಿತಕರ ಸಂಗೀತ ಕೇಳಿ. ಇದು ನಿಮ್ಮ ಮೂಡ್ ಬದಲಾಯಿಸಲು ನೆರವಾಗುತ್ತದೆ.

ಪರಿಹಾರ 6: ಅತಿಯಾಗಿ ಊಟ ಮಾಡಬೇಡಿ. ಅದರಲ್ಲೂ ಕರಿದ ಪದಾರ್ಥಗಳನ್ನು ಸಾಧ್ಯವಾದಷ್ಟು ಕಡಿಮೆ ಬಳಸಿ.

ಪರಿಹಾರ 7: ಟೇಬಲ್ ಫ್ಯಾನ್ ಬಳಸಬೇಡಿ ನಿಮ್ಮ ಮುಖಕ್ಕೆ ನೇರವಾಗಿ ಗಾಳಿ ಬಂದರೆ ನಿದ್ದೆ ಬರುತ್ತದೆ.

ಪರಿಹಾರ 8: ಹೆಚ್ಚು ನೀರು ಕುಡಿಯಿರಿ.

ಪರಿಹಾರ 9: ಜೋರಾಗಿ ಓದಿ

ಪರಿಹಾರ 10: ರಾತ್ರಿ ಕನಿಷ್ಠ 6 ಗಂಟೆ ನಿದ್ದೆ ಮಾಡಿ.

ಆತ್ಮವಿಶ್ವಾಸದ ತೊಂದರೆ:

ಬಹಳಷ್ಟು ವಿದ್ಯಾರ್ಥಿಗಳಿಗೆ ಅತ್ಮವಿಶ್ವಾಸದ ಕೊರತೆ ಇರುತ್ತದೆ. ಆದ್ದರಿಂದ ಬಹಳಷ್ಟು ಪ್ರತಿಭೆಗಳು ಹೊರ ಬರುವುದಿಲ್ಲ. ಬಹಳಷ್ಟು ಮಂದಿ, ಸೋತ ವ್ಯಕ್ತಿಗೆ ಆತ್ಮವಿಶ್ವಾಸವಿಲ್ಲ ಎಂದು ಹೇಳುತ್ತಾರೆ. ಆದರೆ ಸೋತ ವ್ಯಕ್ತಿಗೂ ಆತ್ಮವಿಶ್ವಾಸವಿರುತ್ತದೆ. ಆದರೆ ಅದು ನಕಾರತ್ಮಕ ಆತ್ಮವಿಶ್ವಾಸ.

ಸಾಮಾನ್ಯ ಜನಜೀವನದಲ್ಲಿ ಹೆಚ್ಚಾಗಿ ಆಡುವ ಈ ಕೆಳಕಂಡಂತಹ ಮಾತುಗಳನ್ನು ನೀವು ಗಮನಿಸಿರಬಹುದು ಉದಾಹರಣೆಗೆ:

1. ಇದು ನನ್ನಿಂದ ಸಾಧ್ಯವಿಲ್ಲ.

2. ಇದು ನನ್ನ ಶಕ್ತಿಗೆ ಮೀರಿದ್ದು,

3. ನಾನು ದುರ್ಬಲ, ನಾನು ಪಾಪದವನು.

ಈ ಮೇಲಿನ ಉದಾಹರಣೆಗಳನ್ನು ಕೇಂದ್ರೀಕರಿಸಿದಾಗ ಆ ವ್ಯಕ್ತಿಗೆ ತನ್ನ ಬಗ್ಗೆ ನಕಾರಾತ್ಮಕ ಆತ್ಮವಿಶ್ವಾಸ ಇರುವುದು ಎಂದು ತಿಳಿಯುತ್ತದೆ.

ಆದ್ದರಿಂದ ವ್ಯಕ್ತಿ ಯಶಸ್ವಿಯಾಗಲು ಈ ಕೆಳಕಂಡ ಮಾತುಗಳನ್ನು ಹೇಳಿ ಸಕಾರಾತ್ಮಕ ಆತ್ಮವಿಶ್ವಾಸವನ್ನು ಬೆಳೆಸಬಹುದಾಗಿದೆ.

ಪ್ರತಿಯೊಬ್ಬ ವ್ಯಕ್ತಿಯು ವಿಶೇಷ ಶಕ್ತಿ ಹೊಂದಿರುತ್ತಾನೆ. ನೀವು ಕೂಡ ವಿಶೇಷ ವ್ಯಕ್ತಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಕಾರ್ಯ ನಿಮಗಾಗಿ ಕಾಯುತ್ತಿದೆ. ನಿಮ್ಮನ್ನು ದೇವರು ಸೃಷ್ಟಿ ಮಾಡಿರುವುದು ವಿಶೇಷ ಸಾಧನೆಗಾಗಿ, ಕೇವಲ ಕಡಿಮೆ ಅಂಕ ಗಳಿಸಿದ ಮಾತ್ರಕ್ಕೆ ನೀವು ದಡ್ಡರಲ್ಲ.

ದೃಢೀಕರಣ ತಂತ್ರ (Affirmation technique):

ನೀವು ಪ್ರತಿದಿನ ಓದುವ ನುಡಿಮುತ್ತುಗಳನ್ನು ಬರೆದಿಡಿ. ನೀವು ಕುಳಿತಿಕೊಳ್ಳುವ ಸ್ಥಳದಲ್ಲಿ ಹಾಗೂ ಶಾಲೆಯ ಗೋಡೆಗಳ ಮೇಲೆ ಸಕಾರಾತ್ಮಕ ನುಡಿಮುತ್ತುಗಳನ್ನು ಅಂಟಿಸಿ.

ಸೃಜನಶೀಲ ದೃಷ್ಟಿಕರಣ(Creative visualization):

ನಮ್ಮ ಸಾಧನೆಯ ಬಗ್ಗೆ ಸದಾ ಯೋಚಿಸಿ, ಪದೇಪದೇ ಈ ರೀತಿಯ ಯೋಚನೆಗಳಿಂದ ನಮ್ಮ ಮೆದುಳಿನಲ್ಲಿ ಸಕಾರಾತ್ಮಕ ಶಕ್ತಿ ಜಾಗೃತವಾಗುತ್ತದೆ.

ಸಾಧಕರ ಜೀವನ ಚರಿತ್ರೆಗಳನ್ನು ಓದಿರಿ (Read biographies of great persons):

ಸಕಾರಾತ್ಮಕ ಚಿಂತನೆ (Positive Thinking):

ಎಂತಹದ್ದೇ ಸಂದರ್ಭದಲ್ಲೂ ಸಕಾರಾತ್ಮಕವಾಗಿ ಯೋಚಿಸಿ.

ಸೋಲಿನ ಭಯ:

ಬಹಳಷ್ಟು ವಿದ್ಯಾರ್ಥಿಗಳು ಸೋಲಿನ ಭಯದಿಂದ ಪರೀಕ್ಷೆಗೆ ಮೊದಲೇ ಸೋಲನ್ನು ಒಪ್ಪಿಕೊಂಡಿರುತ್ತಾರೆ. ಅದು ಕೇವಲ ಓದಿಗೆ ಮಾತ್ರ ಅಲ್ಲ, ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮ ಇತರೆ ಯಾವುದೇ ಆದರೂ ಎಷ್ಟು ಹೆದರುತ್ತೇವೋ ಅಷ್ಟೇ ಸೋಲು ಬರುತ್ತದೆ. ಆದ್ದರಿಂದ ಭಯ ಪಡಬೇಕಾಗಿಲ್ಲ. ಕಷ್ಟಗಳು ನಮ್ಮನ್ನು ಸೋಲಿಸಲು ಬರುವುದಿಲ್ಲ. ಅವು ನಮ್ಮ ತಾಕತ್ತನ್ನು ಜಗತ್ತಿನ ಮುಂದೆ ಸಾಬೀತುಪಡಿಸುವ ಅವಕಾಶವಾಗಿರುತ್ತದೆ. ಆದ್ದರಿಂದ ಧೈರ್ಯವಾಗಿ ಮುನ್ನುಗ್ಗಿ, ನಮ್ಮ ಮುಂದೆ ಸಮಸ್ಯೆ ಚಿಕ್ಕದು ಆದರೆ ನಾವು ಅದನ್ನು ದೊಡ್ಡದು ಮಾಡಿಕೊಳ್ಳುತ್ತೇವೆ.

ತಿರಸ್ಕಾರದ ಭಯ:

ಸಾಮಾನ್ಯವಾಗಿ ವಿದ್ಯಾರ್ಥಿಗಳಲ್ಲಿ ಕಂಡುಬರುವ ಭಾವನೆಯೆಂದರೆ ತಿರಸ್ಕಾರದ ಭಯ. ಪಾಠ ಕೇಳುವಾಗ ಅನುಮಾನ ಬರುತ್ತದೆ. ಆದರೆ ಎಲ್ಲರೂ ತನ್ನನ್ನು ಆಡಿಕೊಳ್ಳುತ್ತಾರೆ ಎಂದು ಪ್ರಶ್ನೆ ಕೇಳುವುದಿಲ್ಲ. ಅದರಿಂದ ನಷ್ಟ ನಮಗೇ ಹೊರತು ಬೇರೆಯವರಿಗಲ್ಲ, ಭಾಷಣ ಮಾಡಲು, ಹಾಡು ಹೇಳಲು, ಅಭಿಪ್ರಾಯ ತಿಳಿಸಲು ಮಕ್ಕಳು ಮುಂದೆ ಬರುವುದಿಲ್ಲ. ಅದಕ್ಕೆ ಕಾರಣ ತಿರಸ್ಕಾರದ ಭಯ, ವಿವೇಕಾನಂದರು ಹೇಳಿದ್ದಾರೆ. ಏಳಿ, ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ ಎಂದು. ಪ್ರತಿಯೊಬ್ಬ ಸಾಧಕನೂ ಅವಮಾನಗಳನ್ನು ಎದುರಿಸಿಯೇ ಸಾಧಕನಾಗಿರುವುದು.

ಸೋಮಾರಿತನ(ಆಲಸ್ಯ): ಪರಿಹಾರಗಳು:

1. ವ್ಯಾಯಾಮ ಮಾಡಿ

2. ಆಕ್ಯೂಪ್ರೆಷರ್

3. ನೀರನ್ನು ಚೆನ್ನಾಗಿ ಕುಡಿಯಿರಿ

4. ಬೆಳಿಗ್ಗೆ ಎದ್ದಾಗ ಕಾಫಿ,ಟೀ ಬದಲು ಹಣ್ಣನ್ನು ತಿನ್ನಿರಿ.

5. ಸ್ವಚ್ಛತೆಗೆ ಗಮನ ಕೊಡಿ ಏನು ಕೆಲಸವಿಲ್ಲವೆಂದು ಸುಮ್ಮನೆ ಕೂರುವ ಬದಲು ನಿಮ್ಮ ಮನೆ, ಪುಸ್ತಕಗಳನ್ನು ಸ್ವಚ್ಛವಾಗಿಡಿ,

6. ಗುರಿಗಳನ್ನು ಇಟ್ಟುಕೊಂಡು ಸರಿಯಾದ ಸಮಯದಲ್ಲಿ ಗುರಿ ತಲುಪಿ

7. ಯೋಜನೆ ಮಾಡಿಕೊಳ್ಳಿ – ಟೈಮ್ ಟೇಬಲ್ ಮಾಡಿ.

8. ಜಾಗೃತರಾಗಿರಿ

ಆರಂಭ ಶೂರತ್ವ:

ವಿದ್ಯಾರ್ಥಿಗಳು ಶಾಲೆ ಆರಂಭವಾದಾಗ ವೇಳಾಪಟ್ಟಿ ತಯಾರಿಸುತ್ತಾರೆ. ಆದರೆ ಯಾರೂ ಅದನ್ನು ಪಾಲಿಸುವುದಿಲ್ಲ. ಬಹಳಷ್ಟು ಜನ ಜಾಗಿಂಗ್, ವ್ಯಾಯಾಮ ಮಾಡುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಎಲ್ಲವನ್ನೂ ಬಿಟ್ಟುಬಿಡುತ್ತಾರೆ. ಅದ್ದರಿಂದ ಜೀವನದಲ್ಲಿ ಆರಂಭಶೂರರಾಗಬೇಡಿ. ಯಶಸ್ವಿಯಾಗಿರಿ.

ಬೋನಸ್: ಬ್ರೈನ್ ಎಕ್ಸರ್‌ಸೈಸ್:

ಪ್ರತಿಯೊಬ್ಬರು ತಮ್ಮ ದೇಹ ಶಕ್ತಿಯುತವಾಗಿ, ಆರೋಗ್ಯಯುತವಾಗಿರಲು ದೇಹಕ್ಕೆ ವ್ಯಾಯಾಮ ಮಾಡುತ್ತಾರೆ. ಆದರೆ ಬಹಳ ಜನಕ್ಕೆ ಮೆದುಳಿಗೂ ಶಕ್ತಿ ಬೇಕಿರುತ್ತದೆ ಅದಕ್ಕೆ ವ್ಯಾಯಾಮ ಮಾಡಬೇಕೆಂದು ತಿಳಿದಿರುವುದಿಲ್ಲ. ಆದರೆ ದೇಹದಷ್ಟೆ ಮೆದುಳಿಗೂ ವ್ಯಾಯಾಮ ಅಗತ್ಯ.

ಮೆದುಳಿನ ವ್ಯಾಯಾಮಗಳು:

1.ಹೊಸ ಭಾಷೆಯನ್ನು ಕಲಿಯಿರಿ.

2. ನೀವು ನೋಡಿದ ಪದಾರ್ಥಗಳ ಪಟ್ಟಿ ಮಾಡಿ. ಸ್ವಲ್ಪ ಸಮಯದ ನಂತರ ನಿಮಗೆ ಎಷ್ಟು ಪದಾರ್ಥಗಳ ಹೆಸರು ನೆನಪಿನಲ್ಲಿ ಉಳಿಯುತ್ತದೆ ಎಂದು ಪರೀಕ್ಷಿಸಿಕೊಳ್ಳಿ,

3. ಪದಬಂಧ ಬಿಡಿಸಿ

4. ಚೆಸ್ ಅಡಿ

5. ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳಿ.

6. ಲೆಕ್ಕಗಳನ್ನು ನಿಮ್ಮ ಮನಸ್ಸಿನಲ್ಲೇ ಮಾಡಿ.

7. ಹೊಸ ಅಡುಗೆಯನ್ನು ಕಲಿಯಿರಿ.

8. ಹೊಸ ಪದವನ್ನು ಬಳಸಿದಾಗ ಅದೇ ರೀತಿಯ ಪದಗಳನ್ನು ಪಟ್ಟಿ ಮಾಡಿ.

9. ಮೈಂಡ್‌ ಮ್ಯಾಪ್ ತಯಾರಿಸಿ

10. ಹೊಸ ಆಟಗಳನ್ನು ಕಲಿಯಿರಿ.
ಉದಾ: ನಂಬರ್ ಗೇಮ್

1. ಬ್ರೈನ್ ಡಯಟ್:

ನಾವು ದೇಹಕ್ಕೆ ಡಯಟ್ ಮಾಡುತ್ತೇವೆ. ಅದಕ್ಕೆ ಕಾರಣ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು.

ಆದರೆ ಮೆದುಳಿನ ಡಯಟ್ ಎಂದರೇನು?;

ಸಕಾರಾತ್ಮಕವಾಗಿ ಯೋಚಿಸುವ ವ್ಯಕ್ತಿಗಳೊಂದಿಗಿರುವುದು.

▪️ದೃಢೀಕರಣ ತಂತ್ರ:

ಶಾಲೆಗಳ ಪ್ರತಿ ಗೋಡೆ ಮೇಲೆ ಮಹತ್ವಾಕಾಂಕ್ಷೆಯ ಉಲ್ಲೇಖಗಳನ್ನು ಬರೆಸುವುದು.

▪️ಸೃಜನಶೀಲ ದೃಶ್ಯೀಕರಣ

▪️ಸಾಧಕರ ಜೀವನ ಚರಿತ್ರೆಗಳನ್ನು ಓದುವುದು.

▪️ಸಕಾರಾತ್ಮಕವಾಗಿ ಯೋಚಿಸುವುದು…..

 →→→→

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!