NSP SCHOLARSHIP: 2024-25 ನೇ ಸಾಲಿನಲ್ಲಿ NSP ಮೂಲಕ ಅರ್ಜಿ ಸಲ್ಲಿಸದೇ ಇರುವ ವಿದ್ಯಾರ್ಥಿಗಳು, ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿರುವ ಬಗ್ಗೆ ದೃಢೀಕರಿಸಿ ಸಲ್ಲಿಸುವ ಬಗ್ಗೆ ಮುಖ್ಯ ಮಾಹಿತಿ.
NSP SCHOLARSHIP:
ವಿಷಯ ಹಾಗೂ ಉಖಿತ ಪತ್ರಕ್ಕೆ ಸಂಬಂಧಿಸಿದಂತೆ, 2024-25 ನೇ ಸಾಲಿನಲ್ಲಿ 10, 11 ಹಾಗೂ 12 ನೇ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿದ್ದು, National Scholrship Portal ಮೂಲಕ ಅರ್ಜಿ ಸಲ್ಲಿಸದೇ ಇರುವ ಹಾಗೂ INO ಮತ್ತು DNO ಅಡಿಯಲ್ಲಿ ಪರಿಶೀಲನೆಯಲ್ಲಿ ಬಾಕಿ ಇರುವ ಅರ್ಹ Renewal ವಿದ್ಯಾರ್ಥಿಗಳಿಗೆ MOE ರವರ ನಿರ್ದೇಶನದಂತೆ, Offline Mode ನಲ್ಲಿ ವಿದ್ಯಾರ್ಥಿ ವೇತನ ಮುಂದುವರಿಕೆಗೆ ಸಂಬಂಧಿಸಿದಂತೆ, ಜಿಲ್ಲಾವಾರು ಮಾಹಿತಿ ಪಡೆದು, ಮಾಹಿತಿಯನ್ನು ದಿನಾಂಕ:06.04.2025ರೊಳಗೆ MoE ಗೆ ಸಲ್ಲಿಸಬೇಕಾಗಿರುತ್ತದೆ.
ಸದರಿ ಫಲಾನುಭವಿಗಳಿಗೆ ವಿದ್ಯಾರ್ಥಿ ವೇತನ ಮುಂದುವರೆಸುವ ಸಂಬಂಧ NMMS ಸ್ಕಿಮ್ ನಿಬಂಧನೆಗಳಿಗನುಸಾರವಾಗಿ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿರುವ ಬಗ್ಗೆ ಮಾಹಿತಿ ಸಲ್ಲಿಸಲು ಉಲ್ಲೇಖಿತ ಪತ್ರದಲ್ಲಿ ತಿಳಿಸಿರುತ್ತಾರೆ.
ಈ ಸಂಬಂಧ ದಿನಾಂಕ: 02-04-2025 ರಂದು MoE ರವರಿಂದ ಕಳುಹಿಸಲಾದ ವಿದ್ಯಾರ್ಥಿಗಳ Student Data (Excel sheet) ವನ್ನು DIET ಮೇಲ್ ಹಾಗೂ District Nodal Officers Whatsapp group ನಲ್ಲಿಯೂ ಕೂಡ ಕಳುಹಿಸಲಾಗಿದೆ. ಪಟ್ಟಿಯಲ್ಲಿನ ಫಲಾನುಭವಿಗಳ eligibility ಯನ್ನು ಜಿಲ್ಲಾವಾರು NMMS Scheme ನಿಬಂಧನೆಗಳಿಗೆ ಅನುಗುಣವಾಗಿ ನಿಖರವಾಗಿ ಪರಿಶೀಲಿಸಿ Eliglible, Not Eligible ಎಂದು ನೀಡಿರುವ ಪಟ್ಟಿಯಲ್ಲಿ ಭರ್ತಿಮಾಡುವುದು. ಪಟ್ಟಿಯಲ್ಲಿನ ಫಲಾನುಭವಿಗಳು Not eligible ಆಗಿದ್ದಲ್ಲಿ ಕಾರಣವನ್ನು ನಮೂದಿಸುವುದು.
ಪಟ್ಟಿಯಲ್ಲಿರುವ ಯಾವುದೇ ಫಲಾನುಭವಿಗಳ ಮಾಹಿತಿ ಬಿಟ್ಟುಹೋಗದಂತೆ, ವ್ಯತ್ಯಾಸವಾಗದಂತೆ ಕ್ರಮವಹಿಸಿ ದೃಢೀಕೃತ ಹಾಗೂ ಸಾಫ್ಟ್ ಪ್ರತಿಯನ್ನು ದಿನಾಂಕ: 09-4-2025 ಸಾಯಂಕಾಲ 4:30 ರೊಳಗಾಗಿ 4.30 4.30 ntsenmms.dsertkar@gmail.com ಗೆ Soft Copy ಹಾಗೂ ಡಯಟ್ ಪ್ರಿನ್ಸಿಪಾಲರಿಂದ ದೃಡೀಕರಿಸಿದ ಪಟ್ಟಿಯ PDF ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು. ಹೊಸದಾಗಿ DNO ರವರು ನೇಮಕಗೊಂಡಿರುವ ಜಿಲ್ಲೆಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸಿದ DNO ರವರು ಸಹಕರಿಸಲು ತಿಳಿಸಿದೆ.
ಅರ್ಹ ವಿದ್ಯಾರ್ಥಿಗಳು ಪ್ರಸ್ತುತ ವರ್ಷ ಪದವಿ ಪೂರ್ವ ಕಾಲೇಜುಗಳ 11 & 12 ನೇ ತರಗತಿಗಳಲ್ಲಿ ಓದುತ್ತಿರುವುದರಿಂದ ತಮ್ಮ ಜಿಲ್ಲೆಗಳ ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರನ್ನು ಸಂಪರ್ಕಿಸಿ ಮಾಹಿತಿಗಳನ್ನು ಪಡೆಯಲು ಕ್ರಮವಹಿಸಲು ತಿಳಿಸಲಾಗಿದೆ.
